ಟಾಲಿವುಡ್ ನಟಿ ಸಮಂತಾ ಸದ್ಯ, ವೈಯುಕ್ತಿಕ ಬದುಕಿನಲ್ಲಿ ಎದ್ದ ಬಿರುಗಾಳಿಯಿಂದ ಚೇತರಿಸಿಕೊಂಡು ಹೊಸ ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಮತ್ತೆ ಸಿನಿಮಾರಂಗದಲ್ಲಿ ಆ್ಯಕ್ಟೀವ್ ಆಗುತ್ತಿದ್ದಾರೆ. ಇದೇ ವೇಳೆ ಸಮಂತಾ ಮತ್ತು ನಾಗಚೈತನ್ಯ ಮತ್ತೆ ಒಂದಾಗುತ್ತಾರೆ ಎಂಬ ಮಾತು ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ಕೇಳಲಾರಂಭಿಸಿತ್ತು. ಈ ಮಾತಿಗೆ ಇದೀಗ ಸಮಂತಾ ತಮ್ಮ ಬೋಲ್ಡ್ ಫೋಟೋಶೂಟ್ ಮೂಲಕ ಉತ್ತರ ನೀಡಿದ್ದಾರೆ.ಇದೀಗ ಈ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.


ಇತ್ತೀಚೆಗೆ ನಟಿ ಸಮಂತಾ ಪಿಂಕ್ ಬಣ್ಣದ ಸೀರೆಯಲ್ಲಿ ಕಲರ್ಫುಲ್ ಫೋಟೋಶೂಟ್ ಮಾಡಿಸಿದ್ದರು. ಈಗೀನ ಫೋಟೋದಲ್ಲಿ ಸ್ಯಾಮ್ ಮೈಮೇಲಿದ್ದ ನಾಗಚೈತನ್ಯ ಹೆಸರು ಮಾಯವಾಗಿದೆ. ಈ ಮೂಲಕ ಮಾಜಿ ಪತಿ ಜೊತೆ ಮತ್ತೆ ಪ್ಯಾಚ್ ಅಪ್ ಸುದ್ದಿಗೆ ನಟಿ ಉತ್ತರ ಕೊಟ್ಟಿದ್ದಾರೆ. ಸಂಬಂಧವೇ ಬ್ರೇಕ್ ಆದ ಮೇಲೆ ಮತ್ತೆ ಜೊತೆಯಾಗಲ್ಲ ಎಂಬ ಉತ್ತರ ನಟಿ ನೀಡಿದ್ರಾ ಎಂದು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಚರ್ಚೆ ನಡೆಸುತ್ತಿದ್ದಾರೆ.
ಸಮಂತಾ- ನಾಗಚೈತನ್ಯ ಪ್ಯಾಚ್ ಸುದ್ದಿಗೆ ಪುಷ್ಟಿ ನೀಡಿದ ಪೋಸ್ಟ್ ಅಂದರೆ, ನಾಗಚೈತನ್ಯ ಇತ್ತೀಚೆಗೆ ‘ಹ್ಯಾಶ್’ ಫ್ರೆಂಚ್ ಡಾಗ್ ಫೋಟೋ ಹಂಚಿಕೊಂಡಿದ್ದರು. ಡಿವೋರ್ಸ್ ನಂತರವೂ ಆಗಾಗ ‘ಹ್ಯಾಶ್’ ಫೋಟೋವನ್ನ ನಟಿ ಶೇರ್ ಮಾಡಿದ್ದರು. ಈ ಪೋಸ್ಟ್ನಿಂದ ಇಬ್ಬರು ಮತ್ತೆ ಒಂದಾಗುತ್ತಾರೆ ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಅವೆಲ್ಲವೂಗಳಿಗೂ ಸಮಂತಾ ತಮ್ಮ ಫೋಟೋಶೂಟ್ ಮೂಲಕ ಖಡಕ್ ಉತ್ತರ ನೀಡಿದ್ದಾರೆ.