ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ನಟನೆ ಶುರು ಮಾಡಿದವರು ನಟಿ ರಶ್ಮಿಕಾ ಮಂದಣ್ಣ. ಇಂದು ಇವರು ಟಾಲಿವುಡ್, ಬಾಲಿವುಡ್ ಎಂದು ಪ್ಯಾನ್ ಇಂಡಿಯಾ ನಟಿಯಾಗಿ ಹೆಸರು ಮಾಡುತ್ತಿದ್ದಾರೆ. ನಾಳೆ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ2 ಸಿನಿಮಾ ತೆರೆ ಕಾಣುತ್ತಿದೆ. ಈ ಸಿನಿಮಾ ನೋಡೋದಕ್ಕೆ ಫ್ಯಾನ್ಸ್ ಕಾಯುತ್ತಿದ್ದಾರೆ. ಇನ್ನು ರಶ್ಮಿಕಾ ಅವರಿಗೆ ಒಳ್ಳೆಯ ಫ್ಯಾನ್ ಬೇಸ್ ಕೂಡ ಇದೆ. ರಶ್ಮಿಕಾ ಅವರು ನಾಯಕಿಯಾಗಿ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿಲ್ಲ, ಆದರೆ ಇವರಿಗೆ ಇರುವ ಬೇಡಿಕೆ ಅಂತೂ ಕಡಿಮೆ ಇಲ್ಲ. ಕನ್ನಡ ಆಯ್ತು, ತೆಲುಗು, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಹೀರೋಯಿನ್ ಆಗಿ ಮಿಂಚಿದ್ದು ಆಯ್ತು. ಇದೀಗ ರಶ್ಮಿಕಾ ಮಂದಣ್ಣ ಐಟಂ ಸಾಂಗ್ ಗೆ ಹೆಜ್ಜೆ ಹಾಕಲು ರೆಡಿ ಆಗಿದ್ದಾರಂತೆ. ಅದು ಯಾವ ಸಿನಿಮಾದಲ್ಲಿ ಗೊತ್ತಾ? ಇಲ್ಲಿದೆ ಪೂರ್ತಿ ಅಪ್ಡೇಟ್ಸ್.. ರಶ್ಮಿಕಾ ಫ್ಯಾನ್ಸ್ ಪೂರ್ತಿ ಓದಿ…

ನಟಿ ರಶ್ಮಿಕಾ ಮಂದಣ್ಣ ಅವರು ಕಿರಿಕ್ ಪಾರ್ಟಿ ಸಿನಿಮಾದ ಸಾನ್ವಿ ಪಾತ್ರದ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡರು. ಈ ಪಾತ್ರ ಅವರಿಗೆ ಕರ್ನಾಟಕ ಕ್ರಶ್ ಎಂದು ಹೆಸರನ್ನು ಕೂಡ ತಂದುಕೊಟ್ಟಿತು. ಕಿರಿಕ್ ಪಾರ್ಟಿ ನಂತರ ರಶ್ಮಿಕಾ ಎಂಟ್ರಿ ಕೊಟ್ಟಿದ್ದು ತೆಲುಗಿಗೆ. ಚಲೋ ಸಿನಿಮಾ ಮೂಲಕ ತೆಲುಗಿನಲ್ಲಿ ಪ್ರಯಾಣ ಶುರು ಮಾಡಿದ ರಶ್ಮಿಕಾ ಅವರಿಗೆ ಮೊದಲ ಸಿನಿಮಾದಲ್ಲೇ ಸೂಪರ್ ಸಕ್ಸಸ್ ಸಿಕ್ಕಿತ್ತು. ಚಲೋ ನಂತರ ಗೀತಾ ಗೋವಿಂದಮ್ ನಲ್ಲಿ ಅಭಿನಯಿಸಿದರು. ಆ ಸಿನಿಮಾ ಸಹ ಸೂಪರ್ ಹಿಟ್ ಆಯಿತು. ಬಳಿಕ ರಶ್ಮಿಕಾ ಅವರು ತೆಲುಗು ಸಿನಿಮಾಗಳಲ್ಲಿ ಬ್ಯಾಕ್ ಟು ಬ್ಯಾಕ್ ನಟಿಸಿದರು. ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ , ನಟ ದರ್ಶನ್ ಇವರೊಡನೆ ನಟಿಸಿದರು. ನಂತರ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು, ಹಾಗೆಯೇ ಬಾಲಿವುಡ್ ಗೆ ಕೂಡ ಎಂಟ್ರಿ ಕೊಟ್ಟರು.
ಕಳೆದ ವರ್ಷ ತೆರೆಕಂಡ ಅನಿಮಲ್ ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿತು ಎಂದು ನಮಗೆಲ್ಲಾ ಗೊತ್ತೇ ಇದೆ. ಹೀಗೆ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ರಶ್ಮಿಕಾ ಅವರು ಹೆಸರು ಮಾಡಿದ್ದಾರೆ ಜೊತೆಗೆ ಜನಪ್ರಿಯತೆಯನ್ನು ಕೂಡ ಗಳಿಸಿಕೊಂಡಿದ್ದಾರೆ. ಇನ್ನು ಇವರ ಪುಷ್ಪ2 ಮೇಲೆ ಭಾರಿ ನಿರೀಕ್ಷೆ ಇದೆ, ರಶ್ಮಿಕಾ ಅವರನ್ನು ಶ್ರೀವಲ್ಲಿ ಯಾಗಿ ಮತ್ತೆ ನೋಡುವುದಕ್ಕೆ ಫ್ಯಾನ್ಸ್ ಕಾಯುತ್ತಿದ್ದಾರೆ. ಈ ವೇಳೆ ರಶ್ಮಿಕಾ ಅವರು ಪರ್ಸನಲ್ ವಿಚಾರದಿಂದ ಹೆಚ್ಚು ಸುದ್ದಿ ಸಹ ಆಗುತ್ತಾರೆ. ವಿಜಯ್ ದೇವರಕೊಂಡ ಅವರೊಡನೆ ರಿಲೇಶನ್ಷಿಪ್ ನಲ್ಲಿರುವ ವಿಚಾರ ಗೊತ್ತೇ ಇದೆ. ಇತ್ತೀಚೆಗೆ ಪುಷ್ಪ2 ಸಿನಿಮಾದ ಪ್ರೀರಿಲೀಸ್ ಈವೆಂಟ್ ನಲ್ಲಿ ರಶ್ಮಿಕಾ ಅವರು ತಾವು ರಿಲೇಶನ್ಷಿಪ್ ನಲ್ಲಿ ಇರುವ ವಿಷಯವನ್ನು ಒಪ್ಪಿಕೊಂಡರು.

ಹಾಗೆಯೇ ವಿಜಯ್ ದೇವರಕೊಂಡ ಅವರು ಸಹ ತಾವು ರಿಲೇಶನ್ಷಿಪ್ ನಲ್ಲಿರುವ ವಿಷಯವನ್ನು ಒಪ್ಪಿದರು, ಅಷ್ಟೇ ಅಲ್ಲದೇ ರೀಸೆಂಟ್ ಆಗಿ ವಿಜಯ್ ರಶ್ಮಿಕಾ ಲಂಚ್ ಡೇಟ್ ನಲ್ಲಿ ಜೊತೆಯಾಗಿ ಕಾಣಿಸಿಕೊಂಡ ಫೋಟೋ ಸಹ ವೈರಲ್ ಆಗಿತ್ತು. ಈ ಮೂಲಕ ಇವರು ವಿಜಯ್ ದೇವಡಕೊಂಡ ಅವರೊಡನೆ ಪ್ರೀತಿಯಲ್ಲಿ ಇರುವುದು ಕನ್ಫರ್ಮ್ ಆಗಿದ್ದು, ಮದುವೆ ಯಾವಾಗ ಎಂದು ಅಭಿಮಾನಿಗಳು ಸಹ ಕಾಯುತ್ತಿದ್ದಾರೆ. ಹಲವು ಕಡೆಗಳಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದು ಇದೆ. ಹಾಗಾಗಿ ಇವರಿಬ್ಬರು ಲವ್ ಮಾಡುತ್ತಿದ್ದಾರೆ, ಮದುವೆ ಆಗೇ ಆಗುತ್ತಾರೆ ಎನ್ನುವ ಗಾಸಿಪ್ ಗಳು ಕೇಳಿಬಂದರು ಸಹ, ರಶ್ಮಿಕಾ ಅವರು ಇನ್ನು ಪೂರ್ತಿ ಸ್ಪಷ್ಟನೆ ಕೊಟ್ಟಿಲ್ಲ. ಪ್ರಸ್ತುತ ರಶ್ಮಿಕಾ ಅವರ ಫೋಕಸ್ ಪೂರ್ತಿಯಾಗಿ ಅವರ ಕೆರಿಯರ್ ಮೇಲೆ ಇದೆ. ಬ್ಯಾಕ್ ಟು ಬ್ಯಾಕ್ ಬಿಗ್ ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿ ಆಗಿದ್ದಾರೆ..
ಇತ್ತೀಚೆಗೆ ಇವರು ಸಲ್ಮಾನ್ ಖಾನ್ ಅವರೊಡನೆ ನಟಿಸಿದ ಸಿಕಂದರ್ ಸಿನಿಮಾ ತೆರೆಕಂಡಿತು, ಆದರೆ ನಿರೀಕ್ಷೆಗೆ ತಕ್ಕ ಯಶಸ್ಸು ಗಳಿಸಲಿಲ್ಲ. ಇನ್ನು ಛಾವಾ ಸಿನಿಮಾ ರಶ್ಮಿಕಾ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು. ಇನ್ನೂ ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳಲ್ಲಿ ರಶ್ಮಿಕಾ ಬ್ಯುಸಿ ಆಗಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಇದರ ಜೊತೆಗೆ ಹೊಸದೊಂದು ಸುದ್ದಿ ಕೇಳಿ ಬರುತ್ತಿದ್ದು, ನಟಿ ರಶ್ಮಿಕಾ ಬಿಗ್ ಸಿನಿಮಾ ಒಂದರಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎಂದು. ಹೌದು, ಈ ಸುದ್ದಿ ಕೇಳಿಬರುತ್ತಿರುವುದು ನಿಜವೇ. ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿರುವ, ಜ್ಯುನಿಯರ್ ಎನ್.ಟಿ.ಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ಸಿನಿಮಾದಲ್ಲಿ ರಶ್ಮಿಕಾ ಐಟಂ ಸಾಂಗ್ ಗೆ ಹೆಜ್ಜೆ ಹಾಕುತ್ತಾರೆ ಎನ್ನುವ ಮಾತು ಕೇಳಿಬರುತ್ತಿದೆ. ಚಿತ್ರತಂಡ ಈ ಬಗ್ಗೆ ಅಧಿಕೃತ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಇದುವರೆಗೂ ರಶ್ಮಿಕಾ ಮಂದಣ್ಣ ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡಿಲ್ಲ. ಮೊದಲ ಬಾರಿಗೆ ಐಟಂ ಸಾಂಗ್ ಗೆ ಒಬ್ಬ ಖ್ಯಾತ ನಟಿ ಹೆಜ್ಜೆ ಹಾಕಿದರೆ, ಹೈಪ್ ಜಾಸ್ತಿ ಇರುತ್ತದೆ, ದೊಡ್ಡ ರೇಂಜ್ ನಲ್ಲಿ ರೀಚ್ ಆಗುತ್ತದೆ ಎನ್ನುವುದು ಚಿತ್ರತಂಡದ ಪ್ಲಾನ್ ಆಗಿದೆ. ಪುಷ್ಪ ಸಿನಿಮಾದಲ್ಲಿ ಸಮಂತಾ ಅವರು ಐಟಂ ಸಾಂಗ್ ನಲ್ಲಿ ಹೆಜ್ಜೆ ಹಾಕಿದಾಗ ಅದು ಎಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತ್ತು ಎಂದು ನಮಗೆಲ್ಲ ಗೊತ್ತೇ ಇದೆ. ಇದೇ ನಿಟ್ಟಿನಲ್ಲಿ ಜ್ಯೂನಿಯರ್ ಎನ್.ಟಿ.ಆರ್ ಮತ್ತು ಪ್ರಶಾಂತ್ ನೀಲ್ ಅವರ ತಂಡ ಕೂಡ ಪ್ಲಾನ್ ಮಾಡಿದೆ ಎನ್ನಲಾಗಿದೆ. ಆದರೆ ರಶ್ಮಿಕಾ ಅವರ ಜೊತೆ ಈ ಬಗ್ಗೆ ಮಾತುಕತೆ ನಡೆಸಲಾಗಿದೆಯಾ, ಒಪ್ಪಿಗೆ ಸಿಕ್ಕಿದೆಯಾ ಎನ್ನುವ ಬಗ್ಗೆ ಇನ್ನೂ ಕೂಡ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದರೆ ಈ ಒಂದು ಸುದ್ದಿ ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿರುವುದಂತು ನಿಜ. ಒಟ್ಟಿನಲ್ಲಿ ರಶ್ಮಿಕಾ ಕೂಡ ಐಟಂ ಸಾಂಗ್ ಗೆ ಹೆಜ್ಜೆ ಹಾಕೋದಕ್ಕೆ ರೆಡಿ ಆಗಿದ್ದಾರೆ ಎಂದ ಹಾಗಾಯ್ತು..

ಇನ್ನು ಕೆಜಿಎಫ್1 ಮತ್ತು ಕೆಜಿಎಫ್2 ಸಿನಿಮಾದ ಯಶಸ್ಸಿನ ನಂತರ ಪ್ರಶಾಂತ್ ನೀಲ್ ಪ್ರಭಾಸ್ ಅವರಿಗಾಗಿ ಸಲಾರ್ ಸಿನಿಮಾ ಮಾಡಿದರು, ಈಗ ಜ್ಯೂನಿಯರ್ ಎನ್.ಟಿ.ಆರ್ ಅವರೊಡನೆ ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾದ ಟೈಟಲ್ ಕೂಡ ಇನ್ನೂ ರಿವೀಲ್ ಆಗಿಲ್ಲ, ಆದರೆ ಈಗಾಗಲೇ ಈ ಸಿನಿಮಾ ಬಗ್ಗೆ ಬೇಡಿಕೆ ಜಾಸ್ತಿ ಇದೆ. ಬಲ್ಲ ಮೂಲಗಳ ಪ್ರಕಾರ ಈ ಸಿನಿಮಾಗೆ ಡ್ರ್ಯಾಗನ್ ಎಂದು ಹೆಸರಿಡಲಾಗಿದೆ ಎಂದು ಮಾಹಿತಿ ಸಿಕ್ಕಿದ್ದು, ಚಿತ್ರತಂಡದ ಕಡೆಯಿಂದ ಅಧಿಕೃತ ಮಾಹಿತಿಗಾಗಿ ಕಾದು ನೋಡಬೇಕಿದೆ. ಒಟ್ಟಿನಲ್ಲಿ ಪ್ರಶಾಂತ್ ನೀಲ್ ಕನ್ನಡಕ್ಕೆ ವಾಪಸ್ ಬರೋದು ಯಾವಾಗ ಎಂದು ಕನ್ನಡ ಫ್ಯಾನ್ಸ್ ಕಾಯುತ್ತಿದ್ದಾರೆ.



