ಬಾಲಿವುಡ್ ನಲ್ಲಿ ಕಿಂಗ್ ಖಾನ್ ಎಂದೇ ಖ್ಯಾತಿ ಪಡೆದಿರುವವರು ನಟ ಶಾರುಖ್ ಖಾನ್. ಇಂದು ನಮ್ಮ ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿ ಕೂಡ ಶಾರುಖ್ ಖಾನ್ ಅವರಿಗೆ ಭಾರಿ ಬೇಡಿಕೆ ಇದೆ, ಜೊತೆಗೆ ಅತಿದೊಡ್ಡ ಅಭಿಮಾನಿ ಬಳಗ ಕೂಡ ಇದೆ. ಸೆಲ್ಫ್ ಮೇಡ್ ಸ್ಟಾರ್ ಆಗಿರುವ ಶಾರುಖ್ ಖಾನ್ ಅವರಿಗೆ ಕರ್ನಾಟಕದ ಜೊತೆಗೆ ಅದರಲ್ಲೂ ಮಂಗಳೂರಿನ ಜೊತೆಗೆ ನಂಟಿದೆ ಎನ್ನುವ ವಿಷಯ ಅನೇಕರಿಗೆ ಗೊತ್ತಿಲ್ಲ. ಹೌದು, ಶಾರುಖ್ ಖಾನ್ ಅವರು ಹುಟ್ಟಿದ್ದು ಮಂಗಳೂರಿನಲ್ಲಿ, 5 ವರ್ಷಗಳ ಕಾಲ ಮಂಗಳೂರಿನಲ್ಲೇ ಇದ್ದರು, ಶಾರುಖ್ ಖಾನ್ ಅವರು ಆಗ ಕನ್ನಡವನ್ನು ಮಾತನಾಡುತ್ತಿದರಂತೆ. ಆ ಬಗ್ಗೆ ಸ್ವತಃ ಕಿಂಗ್ ಖಾನ್ ಹೇಳಿದ್ದರು.

ಶಾರುಖ್ ಖಾನ್ ಹಾಗೂ ಕನ್ನಡದ ಹುಡುಗಿ ದೀಪಿಕಾ ಪಡುಕೋಣೆ ಇವರಿಬ್ಬರದ್ದು ಸೂಪರ್ ಹಿಟ್ ಪೇರ್. ನಾಲ್ಕೈದು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ, ಆ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿದೆ ಎನ್ನುವ ವಿಷಯ ಎಲ್ಲರಿಗೂ ಗೊತ್ತೇ ಇದೆ. ದೀಪಿಕಾ ಪಡುಕೋಣೆ ಅವರನ್ನು ಬಾಲಿವುಡ್ ಗೆ ಪರಿಚಯಿಸಿದ್ದು ಕೂಡ ಶಾರುಖ್ ಖಾನ್ ಅವರೇ, ಓಂ ಶಾಂತಿ ಓಂ ಸಿನಿಮಾ ಮೂಲಕ ದೀಪಿಕಾ ಪಡುಕೋಣೆ ಬಾಲಿವುಡ್ ಗೆ ಎಂಟ್ರಿ ಕೊಟ್ಟರು, ಮೊದಲ ಸಿನಿಮಾದಲ್ಲೇ ಸ್ಟಾರ್ ಆದರು. ಹಾಗೆಯೇ ಶಾರುಖ್ ಖಾನ್ ಅವರ ಜೊತೆಗೆ ಒಳ್ಳೆಯ ಒಡನಾಟ ಕೂಡ ಬೆಳೆಯಿತು.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಇವರಿಬ್ಬರು ನಂತರ ಜೊತೆಯಾಗಿ ನಟಿಸಿದ್ದು ಚೆನ್ನೈ ಎಕ್ಸ್ಪ್ರೆಸ್ ಸಿನಿಮಾದಲ್ಲಿ. ಇದು ಸೌತ್ ಇಂಡಿಯಾಗೆ ಸೇರಿದ ಕಥೆ ಇದ್ದ ಸಿನಿಮಾ, ಚೆನ್ನೈ ಎಕ್ಸ್ಪ್ರೆಸ್ ಸೂಪರ್ ಹಿಟ್ ಆಗಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಸಿನಿಮಾ ಎನ್ನುವುದು ನಮಗೆಲ್ಲಾ ಗೊತ್ತೇ ಇದೆ. ಈ ಸಿನಿಮಾ ಪ್ರೊಮೋಷನ್ ಗಾಗಿ ಶಾರುಖ್ ಖಾನ್ ಅವರು ಬೆಂಗಳೂರಿಗೆ ಬಂದಿದ್ದರು, ಆಗ ದೀಪಿಕಾ ಪಡುಕೋಣೆ ಅವರು ಶಾರುಖ್ ಖಾನ್ ಅವರಿಗೆ ಕನ್ನಡವನ್ನು ಕಲಿಸಿದ್ದರು. ಇದೆಲ್ಲವೂ ನಮಗೆ ಗೊತ್ತಿದೆ, ಆದರೆ ಶಾರುಖ್ ಖಾನ್ ಅವರಿಗೆ ಕರ್ನಾಟಕದ ಜೊತೆಗೆ ಇರುವ ನಂಟಿನ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಹೌದು, ವಿಶೇಷವಾದ ನಂಟು ನಮ್ಮ ರಾಜ್ಯದ ಜೊತೆಗಿದೆ.

ಶಾರುಖ್ ಖಾನ್ ಅವರು ಹುಟ್ಟಿದ್ದು ಮಂಗಳೂರಿನಲ್ಲಿ, ಶಾರುಖ್ ಅವರನ್ನು ಅವರ ಅಜ್ಜಿ ದತ್ತು ಪಡೆದುಕೊಂಡಿದ್ದರು, ಮಗ ಇಲ್ಲದ ಕಾರಣಕ್ಕೆ ದತ್ತು ಪಡೆದಿದ್ದರಂತೆ. 5 ವರ್ಷಗಳ ಕಾಲ ಅಜ್ಜಿಯ ಜೊತೆ ಮಂಗಳೂರಿನಲ್ಲೇ ಇದ್ದರಂತೆ ಶಾರುಖ್ ಖಾನ್. ಬಾಲ್ಯದ ಬಹಳಷ್ಟು ಸಮಯವನ್ನು ಮಂಗಳೂರಿನಲ್ಲೇ ಕಳೆದಿದ್ದಾರೆ. ಆ ವೇಳೆ ಅಜ್ಜಿ ಜೊತೆಗೆ ಕನ್ನಡದಲ್ಲಿ ಮಾತಾನಾಡುತ್ತಿದ್ದರಂತೆ. ಹಾಗೆಯೇ ಬಾಲ್ಯದ ಫೋಟೋಗಳು ಕೂಡ ಮಂಗಳೂರಿನಲ್ಲೇ ತೆಗೆದಿರೋದಂತೆ, ಅವರ ತಾತ ಮಂಗಳೂರಿನ ಪೋರ್ಟ್ ನಲ್ಲಿ ಚೀಫ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರಂತೆ. 5 ವರ್ಷಗಳಾದ ಮೇಲೆ ಅವರ ತಾಯಿಗೆ ಮಗನನ್ನು ಬಿಟ್ಟಿರಲು ಸಾಧ್ಯ ಆಗದ ಕಾರಣ ಬಂದು ಅಜ್ಜಿಯಿಂದ ಮಗನನ್ನು ಕರೆದುಕೊಂಡು ಹೋದರಂತೆ.
ಇದು ನಮ್ಮ ರಾಜ್ಯದ ಜೊತೆಗೆ ಶಾರುಖ್ ಖಾನ್ ಅವರಿಗೆ ಇರುವ ನಂಟು. ಮಂಗಳೂರಿನ ಜೊತೆಗೆ ನನಗೆ ಇರುವ ನೆನಪುಗಳು ಇವು ಎಂದು ಆ ಸಮಯದ ಇಂಟರ್ವ್ಯೂನಲ್ಲಿ ಹೇಳಿಕೊಂಡಿದ್ದಾರೆ ಶಾರುಖ್ ಖಾನ್. ಈ ವಿಷಯದ ಬಗ್ಗೆ ಹೆಚ್ಬಿನ ಜನರಿಗೆ ಗೊತ್ತಿಲ್ಲ. ಇನ್ನು ಶಾರುಖ್ ಖಾನ್ ಅವರ ಸಿನಿಮಾಗಳ ಬಗ್ಗೆ ಜನರಿಗೆ ಎಷ್ಟು ಕ್ರೇಜ್ ಇದೆ ಎನ್ನುವ ವಿಷಯ ಗೊತ್ತೇ ಇದೆ. ಕಳೆದ ವರ್ಷ ಅವರು ಅಭಿನಯಿಸಿರುವ ಎರಡು ಸಿನಿಮಾಗಳು ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ. ಆದರೆ ಈ ವರ್ಷ ಮುಂದಿನ ಸಿನಿಮಾ ಬಗ್ಗೆ ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ಅಭಿಮಾನಿಗಳು ಇದಕ್ಕಾಗಿ ಕಾಯುತ್ತಿದ್ದಾರೆ.



