ಖ್ಯಾತ ಕಿರುತೆರೆ ನಟಿ ರೂಹಿ ಚತುರ್ವೇದಿ ತಾಯಿಯಾಗಿದ್ದಾರೆ. ‘ಕುಂಡಲಿ ಭಾಗ್ಯ’ ಖ್ಯಾತಿಯ ರೂಹಿ ಚತುರ್ವೇದಿ ಮದುವೆಯಾಗಿ ಐದು ವರ್ಷಗಳ ನಂತರ ಅಂದರೆ ಇಂದು ಜನವರಿ 11 ರಂದು ಮೊದಲ ಮಗುವನ್ನು ಅದ್ಧೂರಿಯಾಗಿ ಬರ ಮಾಡಿಕೊಂಡಿದ್ದಾರೆ. ರೂಹಿ ಚತುರ್ವೇದಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಪ್ರೀತಾ ಅರೋರಾ ಮತ್ತು ಸನಾ ಸೈಯದ್ ನಂತರ, ಇದೀಗ ರೂಹಿ ಚತುರ್ವೇದಿ ಸುಂದರವಾದ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಈ ಶುಭ ಸುದ್ದಿ ನೀಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಶಕ್ತಿ ಅರೋರಾದಿಂದ ಹಿಡಿದು ಶ್ರದ್ಧಾ ಆರ್ಯವರೆಗೂ ಮಗುವಿಗೆ ಶುಭ ಹಾರೈಸಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ‘ಕುಂಡಲಿ ಭಾಗ್ಯ’ದ ಶೆರ್ಲಿನ್ ಮುದ್ದಾದ ಬೇಬಿ ಬಂಪ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಮೊದಲ ಗರ್ಭಧಾರಣೆಯ ಸುದ್ದಿಯನ್ನು ತಿಳಿಸಿದ್ದರು.
ಹೆಣ್ಣು ಮಗುವಿಗೆ ಜನ್ಮ ನೀಡಿದ ರೂಹಿ
ಇಂದು ಶನಿವಾರ ರೂಹಿ ಚತುರ್ವೇದಿ ಮಗಳು ಹುಟ್ಟಿದ ನಂತರ ತಮ್ಮ Instagram ಪೇಜ್ನಲ್ಲಿ ಈ ಸುದ್ದಿಯನ್ನು ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಸುಂದರವಾದ ಟೆಡ್ಡಿ ಬೇರ್ ಹೊಂದಿರುವ ಫೋಟೋ ಅಪ್ಲೋಡ್ ಮಾಡಿರುವ , ರೂಹಿ, ವೆಲ್ಕಂ ಟು ದಿ ವರ್ಲ್ಡ್ ಬೇಬಿ ಗರ್ಲ್ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಜೊತೆಗೆ ತಮ್ಮ ಹಾಗೂ ಪತಿಯ ಹೆಸರನ್ನು ಬರೆದು ಹಾರ್ಟ್ ಇಮೋಜಿಯನ್ನು ಹಾಕಿದ್ದಾರೆ. ಈ ಮೂಲಕ 2025 ರ ಆರಂಭದಲ್ಲಿ, ನಟಿಯೊಬ್ಬರು ತಾಯಿಯಾಗುತ್ತಿರುವ ಶುಭ ಸುದ್ದಿಯನ್ನು ನೀಡಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ರೂಹಿ ಬೇಬಿ ಶವರ್ ಕೂಡ ನಡೆಯಿತು, ಅದರ ಲುಕ್ ಅನ್ನು ಸಹ ನಟಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ ನಟಿ ಇನ್ನೂ ಮಗಳ ಮುಖವನ್ನು ತೋರಿಸಿಲ್ಲ.
ರೂಹಿ ಚತುರ್ವೇದಿ ಯಾರು?
ರೂಹಿ ಚತುರ್ವೇದಿ ಬಗ್ಗೆ ಹೇಳುವುದಾದರೆ ಇವರು 2019 ರಲ್ಲಿ ಡಿಸೆಂಬರ್ 2 ರಂದು ಶಿವೇಂದ್ರ ಅವರನ್ನು ವಿವಾಹವಾದರು. ‘ಕುಂಡಲಿ ಭಾಗ್ಯ’ ಯಶಸ್ಸಿನ ನಂತರ ರೂಹಿ ‘ಖತ್ರೋನ್ ಕೆ ಕಿಲಾಡಿ 13’ ನಲ್ಲಿಯೂ ಭಾಗವಹಿಸಿದರು. ಇವರ ಪತಿ ನಿಮೃತ್ ಕೌರ್ ಅಹ್ಲುವಾಲಿಯಾ ಅವರೊಂದಿಗೆ ‘ಛೋಟಿ ಸರ್ದಾರ್ನಿ’ಯಲ್ಲಿಯೂ ಕೆಲಸ ಮಾಡಿದ್ದಾರೆ. ನವೆಂಬರ್ 2024 ರಲ್ಲಿ ತಮ್ಮ ಗಂಡನ ಜನ್ಮದಿನದಂದು ರೂಹಿ ಗರ್ಭಧಾರಣೆಯನ್ನು ಘೋಷಿಸಿದರು. ಈ ಸುದ್ದಿ ಹೊರಬೀಳುತ್ತಿದ್ದಂತೆ ಇಂಡಸ್ಟ್ರಿಯ ಮಂದಿ ಹಾಗೂ ಅವರ ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಅಭಿನಂದಿಸುತ್ತಿದ್ದಾರೆ. ರೂಹಿ ಚತುರ್ವೇದಿ 6 ವರ್ಷಗಳಿಂದ ಟಿವಿ ಇಂಡಸ್ಟ್ರಿಯಲ್ಲಿದ್ದಾರೆ.



