ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬಂದಿರುವವರು ರಜತ್ ಬುಜ್ಜಿ. ಇವರು ಕನ್ನಡದ ಕೆಲವು ಶೋಗಳಲ್ಲಿ ಸ್ಪರ್ಧಿಸಿದ್ದ ಅಕ್ಷತಾ ಅವರ ಗಂಡ. ಬರುವಾಗಲೇ ಖಡಕ್ ಮಾತುಗಳನ್ನು ಆಡಿ ಮನೆಯೊಳಗೆ ಬಂದಿದ್ದ ರಜತ್ ಒಳಗೆ ಕೂಡ ಅದೇ ರೀತಿ ಇದ್ದಾರೆ. ಮೊದಲ ವಾರವೇ ಜಗಳಗಳಲ್ಲಿ ಹೆಚ್ಚು ಪಾಲ್ಗೊಂಡು ಕಳಪೆ ಪಡೆದಿದ್ದರು. ವೀಕೆಂಡ್ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ಅವರಿಂದಲೂ ಪಾಠ ಹೇಳಿಸಿಕೊಂಡರು. ಹಾಗೆಯೇ ತಮ್ಮ ತಪ್ಪುಗಳನ್ನು ಸಹ ತಿದ್ದಿಕೊಂಡಿರುವುದಾಗಿ ಹೇಳಿದರು. ರಜತ್ ನೇರ ನಡೆ, ನೇರ ನುಡಿಯ ಮನುಷ್ಯ. ಇದೇ ಕಾರಣಕ್ಕೆ ಒಳಗಡೆ ಇರುವವರ ಸಿಟ್ಟಿಗೆ ಗುರಿಯಾಗುತ್ತಿದ್ದಾರೆ. ಜೊತೆಗೆ ಜನರು ಕೂಡ ಅದೇ ರೀತಿ ಅಂದುಕೊಳ್ಳುತ್ತಿದ್ದಾರೆ..

ಈ ಬಗ್ಗೆ ಕಿರುತೆರೆ ನಟಿ ಹಾಗೂ ಬಾಡಿ ಬಿಲ್ಡಿಂಗ್ ನಲ್ಲಿ ಹೆಸರು ಮಾಡಿರುವ ಚಿತ್ರಲ್ ರಂಗಸ್ವಾಮಿ ಅವರು ಒಂದು ಸಂದರ್ಶನದಲ್ಲಿ ಮಾತನಾಡಿದ್ದಾರೆ. ರಜತ್ ಇರೋದೇ ಹಾಗೆ, ಹೊರಗಡೆ ಇರೋ ರೀತಿಯಲ್ಲೇ ಮನೆಯಲ್ಲಿ ಕೂಡ ಇದ್ದಾನೆ, ಒಬ್ಬ ಮನುಷ್ಯ ನೇರವಾಗಿ ಇದ್ದಾನೆ ಅಂದ್ರೆ ಆತನನ್ನ ನೆಗಟಿವ್ ಆಗಿ ತೋರಿಸ್ತಾರೆ, ಜನರು ಕೂಡ ಅದನ್ನ ನೋಡಿ ನೆಗಟಿವ್ ಆಗಿಯೇ ತೆಗೆದುಕೊಳ್ಳುತ್ತಾರೆ. ಆತ ಮಾತನಾಡೋದು ಜೋರು, ಕಠಿಣ ಅಂದ್ರೆ ನೆಗಟಿವ್ ಅಂತ ಅಲ್ಲ, ಹೊರಗಡೆ ಇರೋ ಹಾಗೆ ಅಲ್ಲು ಇದ್ದಾನೆ ಅನ್ನೋದಕ್ಕೆ ಜನ ಮೆಚ್ಚುಗೆ ಕೊಡಬೇಕು. ರಜತ್ ನಯ ವಿನಯದ ಮುಖವಾಡ ಹಾಕಿಕೊಂಡ್ರೆ ಆಗ ಜನಕ್ಕೆ ಇಷ್ಟ ಆಗಬಹುದೇನೋ..
ಆದರೆ ಅವನು ಆ ರೀತಿ ಇಲ್ಲ, ರಿಯಾಲಿಟಿ ಶೋ ಅಂದ್ರೆ ರಿಯಲ್ ಆಗಿ ಇರೋದು, ರಜತ್ ಅದೇ ರೀತಿ ಇದ್ದಾನೆ. ಚಾನೆಲ್ ನವರು ನೆಗಟಿವ್ ಆಗಿ ತೋರಿಸಿದಾಗ ಜನರು ಎಷ್ಟರ ಮಟ್ಟಿಗೆ ಅದನ್ನ ನಂಬಿಕೊಳ್ಳುತ್ತಾರೆ ಅಂದ್ರೆ, ಫೇಕ್ ಆಗಿ ಇರೋರಿಗೆ ವೋಟ್ ಹಾಕಿ ಗೆಲ್ಲಿಸ್ತಾರೆ. ಈ ರೀತಿ ಆದರೆ ರಿಯಾಲಿಟಿ ಶೋ ಅಂತ ಹೇಳೋಕೆ ಹೇಗೆ ಸಾಧ್ಯ ಎಂದು ರಜತ್ ಪರವಾಗಿ ಚಿತ್ರಲ್ ಅವರು ಬ್ಯಾಟಿಂಗ್ ಮಾಡಿದ್ದಾರೆ. ಚಿತ್ರಲ್ ಅವರು ಬಿಗ್ ಬಾಸ್ ಹಾಗೂ ಇನ್ನು ಅನೇಕ ವಿಚಾರಗಳಿಂದ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ರಜತ್ ಅವರ ಬಗ್ಗೆ ಮಾತ್ರವಲ್ಲದೇ ಕಳೆದ ಸೀಸನ್ ನಲ್ಲಿ ಬಂದಿದ್ದ ವಿನಯ್ ಅವರ ಬಗ್ಗೆ ಕೂಡ ಅದೇ ರೀತಿ ಮಾತನಾಡಿದ್ದಾರೆ.

ಕಳೆದ ಸಾರಿ ವಿನಯ್ ಅವರ ವಿಷಯದಲ್ಲಿ ಕೂಡ ಇದೇ ರೀತಿ ಆಯ್ತು, ಅವರನ್ನು ಎಷ್ಟು ನೆಗಟಿವ್ ಆಗಿ ತೋರಿಸಿದ್ರು ಅಂದ್ರೆ ಜನರು ಅವರನ್ನ ಹೇಟ್ ಮಾಡೋದಕ್ಕೆ ಶುರು ಮಾಡಿದ್ರು ಅಷ್ಟರ ಮಟ್ಟಿಗೆ ನೆಗಟಿವ್ ಮಾಡಿದ್ರು, ಚಾನೆಲ್ ನವರು ಯಾವಾಗಲೂ ಹೀಗೆ ಮಾಡೋದು ಎಂದಿದ್ದಾರೆ. ಜೊತೆಗೆ ರಜತ್ ಅವರ ಬಗ್ಗೆ ಮುಂದುವರೆದು ಮಾತನಾಡಿ, ಬಿಗ್ ಬಾಸ್ ಇತಿಹಾಸದಲ್ಲಿ ವೈಲ್ಡ್ ಕಾರ್ಡ್ ಕಂಟೆಸ್ಟಂಟ್ ಗಳು ಹೆಚ್ಚು ದಿವಸ ಉಳಿದುಕೊಂಡಿಲ್ಲ, ಹೆಸರು ಕೂಡ ಮಾಡಿಲ್ಲ ರಜತ್ ಹೋಗಬಾರದಿತ್ತು ಅನ್ನೋದು ನನ್ನ ಅನಿಸಿಕೆ ಎಂದು ಹೇಳಿದ್ದ ಚಿತ್ರಲ್. ಇವರ ಈ ಮಾತುಗಳು ಈಗ ವೈರಲ್ ಆಗುತ್ತಿದೆ.
ಚಿತ್ರಲ್ ಅವರು ಹೇಳಿರುವ ಮಾತುಗಳಲ್ಲಿ ಎಷ್ಟು ಸತ್ಯವಿದೆಯೋ ಗೊತ್ತಿಲ್ಲ, ಆದರೆ ರಜತ್ ಅವರು ಮಾತ್ರ ಬಿಗ್ ಬಾಸ್ ಶೋಗೆ ಹೋಗಿ ಸಿಕ್ಕಾಪಟ್ಟೆ ಸುದ್ದಿ ಆಗುತ್ತಿದ್ದಾರೆ. ಕೆಲವರಿಗೆ ಇವರ ಸ್ವಭಾವ ಇಷ್ಟವಾದರೆ, ಇನ್ನು ಕೆಲವರಿಗೆ ಇಷ್ಟ ಆಗುತ್ತಿಲ್ಲ. ಪರ ವಿರೋಧದ ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ನಡೆಯುವುದು ಸಾಮಾನ್ಯ. ಆದರೆ ಒಳಗಿರುವವರಿಗೆ ಮಾತ್ರ ಅಲ್ಲಿ ಏನು ನಡೆಯುತ್ತಿದೆ ಎನ್ನುವುದು ಗೊತ್ತಿರುತ್ತದೆ. ಅರ್ಧ ಸೀಸನ್ ಮುಗಿದ ಮೇಲೆ ಬಂದಿದ್ದರೂ ರಜತ್ ಅವರು ಸಖತ್ ಸೌಂಡ್ ಮಾಡುತ್ತಿರುವುದಂತೂ ನಿಜ.