ಪ್ರಧಾನಿ ಮೋದಿ ನಿನ್ನೆ ರಾತ್ರಿ ಸದ್ದಿಲ್ಲದೇ, ಕಾರವಾರದ ಐಎನ್ಎಸ್ ವಿಕ್ರಾಂತ ಯುದ್ದನೌಕೆಗೆ ಬಂದು ನೌಕಾಪಡೆಯ ಯೋಧರ ಜೊತೆ ದೀಪಾವಳಿ ಆಚರಿಸಿದ್ದಾರೆ . ನರೇಂದ್ರ ಮೋದಿ ಅವರು ಭಾರತೀಯ ಸಶಸ್ತ್ರ ಪಡೆಗಳೊಂದಿಗೆ ದೀಪಾವಳಿ ಆಚರಿಸುವ ತಮ್ಮ ವಾರ್ಷಿಕ ಸಂಪ್ರದಾಯವನ್ನು ಮುಂದುವರೆಸಿದ್ದಾರೆ. ಇಂದು ಕರ್ನಾಟಕ ಕರಾವಳಿಯಲ್ಲಿ ಐಎನ್ಎಸ್ ವಿಕ್ರಾಂತ್ನಲ್ಲಿ ನೌಕಾಪಡೆಯ ಸಿಬ್ಬಂದಿಯೊಂದಿಗೆ ಬೆಳಕಿನ ಹಬ್ಬ ದೀಪಾವಳಿ ಆಚರಿಸಿದ್ರು.

“ಇಂದು ಅದ್ಭುತ ದಿನ. ಒಂದು ಕಡೆ, ನನಗೆ ಸಾಗರ, ಮತ್ತೊಂದೆಡೆ, ಭಾರತ ಮಾತೆಯ ಧೈರ್ಯಶಾಲಿ ಸೈನಿಕರ ಬಲವಿದೆ” ಎಂದ ಪ್ರಧಾನಿ “ನೌಕಾಪಡೆಯ ಯೋಧರೊಂದಿಗೆ ಪವಿತ್ರ ಹಬ್ಬವನ್ನು ಆಚರಿಸುತ್ತಿರುವುದು ಅದೃಷ್ಟ” ಎಂದರು.
ಒಂದು ಕಡೆ ನನಗೆ ಅನಂತ ದಿಗಂತಗಳು ಮತ್ತು ಅನಂತ ಆಕಾಶವಿದೆ, ಮತ್ತು ಇನ್ನೊಂದು ಕಡೆ ನನಗೆ ಅನಂತ ಶಕ್ತಿಗಳನ್ನು ಸಾಕಾರಗೊಳಿಸುವ ಈ ದೈತ್ಯ ಐಎನ್ಎಸ್ ವಿಕ್ರಾಂತ್ ಇದೆ. ಸಾಗರದ ನೀರಿನ ಮೇಲೆ ಸೂರ್ಯನ ಕಿರಣಗಳ ಹೊಳಪು ವೀರ ಸೈನಿಕರು ಬೆಳಗಿದ ದೀಪಾವಳಿ ದೀಪಗಳಂತಿದೆ” ಎಂದ ಪ್ರಧಾನಿ ಮೋದಿ,”ಆಪರೇಷನ್ ಸಿಂದೂರ್ ದಲ್ಲಿ ಪಾಕಿಸ್ತಾನವನ್ನು ಮಂಡಿಯೂರುವಂತೆ ಮಾಡಿತು” ಎಂದರು.
ಐಎನ್ಎಸ್ ವಿಕ್ರಾಂತ್ ಕೇವಲ ಯುದ್ಧನೌಕೆಯಲ್ಲ, ಇದು “21 ನೇ ಶತಮಾನದ ಭಾರತದ ಕಠಿಣ ಪರಿಶ್ರಮ, ಪ್ರತಿಭೆ, ಪ್ರಭಾವ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ” ಎಂದರು.



