ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದ ಇಲ್ಲಿವರೆಗೂ ಸರಿಯಾದ ಆಡಳಿತವನ್ನು ನಡೆಸುವುದಕ್ಕೆ ಸಾಧ್ಯವಿಲ್ಲ. ಒಂದು ಕಡೆ ಶಾಸಕರ ಅಸಮಾಧಾನ, ಮತ್ತೊಂದು ಕಡೆ ಸಿಎಂ ಸ್ಥಾನಕ್ಕಾಗಿ ಕಿತ್ತಾಟ, ಇನ್ನೊಂದು ಕಡೆ ವಿಪಕ್ಷದವರ ಆರೋಪಗಳು, ಇವೆಲ್ಲವೂ ಕೂಡ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ. ಪಂಚಾ ಗ್ಯಾರಂಟಿಗಳನ್ನ ಅನುಷ್ಠಾನ ಮಾಡಿದ್ದರು ಕೂಡ ಅವುಗಳ ನಿರ್ವಹಣೆ ಸರಿಯಾಗಿ ಆಗ್ತಾ ಇಲ್ಲ ಅನ್ನುವಂತಹದ್ದು ಆರೋಪ ಕೂಡ ಸರ್ಕಾರದ ಮೇಲಿದೆ.
ಇತ್ತೀಚಿಗಂತೂ ಶಾಸಕರುಗಳ ಬಹಿರಂಗ ಹೇಳಿಕೆಗಳು ಸರ್ಕಾರವನ್ನು ಎಲ್ಲಿ ಕೆಡವಿ ಬಿಡುತ್ತೋ ಅನ್ನುವಂತಹ ರೀತಿಯಲ್ಲಿ ಪರಿಸ್ಥಿತಿಗಳನ್ನ ನಿರ್ಮಾಣ ಮಾಡುತ್ತಿವೆ. ಅದಕ್ಕೆ ಪೂರಕವಾಗಿ ಪ್ರತಿದಿನವೂ ಕೂಡ ವಿಪಕ್ಷಗಳು ಸಿಎಂ ಸ್ಥಾನದ ಕುರಿತು ಹೇಳಿಕೆಗಳನ್ನು ಕೊಡುತ್ತಲೇ ಇದ್ದಾರೆ. ಇತ್ತೀಚಿಗೆ ರಾಜಣ್ಣ ನೀಡಿದಂತಹ ಸೆಪ್ಟೆಂಬರ್ ಕ್ರಾಂತಿಯನ್ನು ಹೇಳಿಕೆ ಮತ್ತೊಂದು ಮಟ್ಟಕ್ಕೆ ಹೋಗಿದೆ. ಹೈಕಮಾಂಡ್ ಅಂಗಳವನ್ನು ಕೂಡ ಈ ಹೇಳಿಕೆ ತಲುಪಿರೋದು ವಿಪರ್ಯಾಸ. ಬಹಿರಂಗ ಹೇಳಿಕೆಗಳಿಂದಲೇ ಸರ್ಕಾರ ಆಡಳಿತ ಡಿಸ್ಟ್ರರ್ಬ್ ಮಾಡ್ತೀರೋದು ಕೂಡ ಹೌದು.
ಇದೆಲ್ಲದರ ಮಧ್ಯೆ ಸಿಎಂ ಸಿದ್ದರಾಮಯ್ಯ 5 ವರ್ಷಗಳ ಕಾಲ ಸರ್ಕಾರಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ ಅನ್ನೋ ನಿಲುವಿನ ಮೇಲೆ ನಿಂತಿರುವುದು ವಿಪರ್ಯಾಸ. ಅದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಇವತ್ತು ಅವರೇ ನೀಡಿರುವಂತಹ ಹೇಳಿಕೆ ಮತ್ತೊಂದು ಆಯಾಮದ ಚರ್ಚೆಗೆ ಕಾರಣವಾಗಿದೆ. ಸಿಎಂ ಸಿದ್ದರಾಮಯ್ಯ ಒಗ್ಗಟ್ಟಿನ ಮಂತ್ರವನ್ನ ಇಂದು ಸಾರಿದ್ದಾರೆ. ಬಂಡೆಯಂತೆ ಸರ್ಕಾರ ಭದ್ರ ಅಂತ ಸಿಎಂ ಪರೋಕ್ಷವಾಗಿ ಎಲ್ಲರಿಗೂ ಸಂದೇಶ ರವಾನಿಸಿದ್ದಾರೆ.

ಸೆಪ್ಟೆಂಬರ್ ಕ್ರಾಂತಿ ಚರ್ಚೆಯನ್ನ ಕಾಂಗ್ರೆಸ್ ಸಚಿವರುಗಳೇ ತೇಲಿಬಿಟ್ಟಿದ್ದಾರೆ. ಇದನ್ನ ಅಸ್ತ್ರವಾಗಿ ಬಳಿಸಿಕೊಂಡ ಬಿಜೆಪಿ ಸಿದ್ದರಾಮಯ್ಯ ದಸರಾ ಉದ್ಘಾಟನೆ ಮಾಡಲ್ಲ ಎಂಬ ಚರ್ಚೆ ಹುಟ್ಟುಹಾಕಿದ್ರು. ಆದರೆ ಅದೇ ಮೈಸೂರಿಗೆ ಹೋಗಿದ್ದ ಸಿಎಂ ಡಿಸಿಎಂ ಒಗ್ಗಟ್ಟಿನ ಮಂತ್ರವನ್ನು ಸಾರಿದ್ದಾರೆ. ಮೈಸೂರು ವಿಮಾನ ನಿಲ್ದಾಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆ ಕೈ ಹಿಡಿದು ಒಗ್ಗಟ್ಟು ಪ್ರದರ್ಶಿಸಿದ ಸಿಎಂ ಸರ್ಕಾರ ಬಂಡೆಯಂತೆ ಐದು ವರ್ಷ ಇರಲಿದೆ ಎಂದಿದ್ದಾರೆ.
ಬಿಜೆಪಿಯ ಆರೋಪಗಳಿಗೆ ಉತ್ತರಿಸುತ್ತಾ ಸಿಎಂ ಸಿದ್ದರಾಮಯ್ಯ,ಡಿಕೆ ಶಿವಕುಮಾರ್ ಹಾಗೂ ನಾವು ಒಗ್ಗಟ್ಟು ಹೊಂದಿದ್ದೆವೆಎಂಬ ಸಂದೇಶವನ್ನು ರವಾನಿಸಿದ್ದಾರೆ. ಕಾರಣ ಇಷ್ಟೇ. ಸರ್ಕಾರದಲ್ಲಿ ಶಾಸಕರ ಅಸಮಾಧಾನ ಹೆಚ್ಚಾಗುತ್ತಿದೆ. ಅನುಧಾನ ಸಿಕ್ತಿಲ್ಲ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಅಂತೆಲ್ಲಾ ಆರೋಪ ಕೇಳಿಬರ್ತಿದೆ. ಇದರ ನಡುವೆ ಸಿಎಂ ಡಿಸಿಎಂ ಗೆ ಹೈಕಮಾಂಡ್ ಅಸಮಾಧಾನ ಬಗೆಹರಿಸಬೇಕು. ಹಾಗೇ ಸಿಎಂ ಡಿಸಿಎಂ ಒಗ್ಗಟ್ಟು ಸಾಧಿಸಬೇಕಂತಲೂ ಸೂಚಿಸಿದ್ರು. ಹೀಗಾದಾಗ ಮಾತ್ರ ಕಾರ್ಯಕರ್ತರಲ್ಲಿ ಹುಮ್ಮಸ್ಸು ಬರಲು ಸಾಧ್ಯ ಎಂದಿತ್ತು. ಕೈ ಉಸ್ತುವಾರಿ ಸುರ್ಜೆವಾಲ ಅವರು ರಾಜ್ಯಕ್ಕೆ ಬರ್ತಿದ್ದಂತೆ ಸಿಎಂ ತಮ್ಮ ತಂತ್ರಗಾರಿಕೆಯಿಂದ ಮೆರೆದಿದ್ದಾರೆ.
ಮೈಸೂರಿನಲ್ಲಿ ಮಾತಾಡಿದ ಸಿಎಂ,ನಾನು ಡಿ ಕೆ ಶಿವಕುಮಾರ್ ಚೆನ್ನಾಗಿಯೇ ಇದ್ದೇವೆ, ನಮ್ಮ ಸರ್ಕಾರ 5 ವರ್ಷ ಬಂಡೆಯ ರೀತಿ ಭದ್ರವಾಗಿ ಇರುತ್ತದೆ ಎಂದು ಡಿಕೆ ಶಿವಕುಮಾರ್ ಕೈಹಿಡಿದು ಘೋಷಿಸಿದ್ದಾರೆ. ಹಾಗೇ ಸಿಎಂ ಸಿದ್ದರಾಮಯ್ಯ, ನಮ್ಮಿಬ್ಬರ ನಡುವೆ ತಂದಾಕುವ ಪ್ರಯತ್ನ ಮಾಡಿದರೂ ಅದು ಆಗುವುದಿಲ್ಲ ಎಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಕೆಲವು ದಿನಗಳಿಂದ ಪವರ್ ಸೆಂಟರ್ ಬದಲಾವಣೆ, ಕ್ರಾಂತಿ, 3 ತಿಂಗಳಲ್ಲಿ ಅಧಿಕಾರ ಕಳೆದುಕೊಳ್ಳಲಿರುವ ಸಿದ್ದರಾಮಯ್ಯ ಹೀಗೆ ವಿವಿಧ ವಿಚಾರಗಳು ಚರ್ಚೆಯಾಗುತ್ತಿದ್ದು, ಇದಕ್ಕೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಸೂಕ್ತ ಉತ್ತರ ಕೊಟ್ಟು, ಟೀಕಿಸುವವರು ಬಾಯಿ ಮುಚ್ಚಿಸಲು ಯತ್ನಿಸಿದ್ದಾರೆ. ಇತ್ತೀಚೆಗೆ, ಸಹಕಾರ ಸಚಿವ ಕೆ.ಎನ್. ರಾಜಣ್ಣ ಸೆಪ್ಟೆಂಬರ್ ನಂತರ ರಾಜ್ಯ ರಾಜಕೀಯದಲ್ಲಿ ಕ್ರಾಂತಿ ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಎರಡೂವರೆ ವರ್ಷ ಪೂರೈಸಿದ ನಂತರ ಅಕ್ಟೋಬರ್ನಲ್ಲಿ ರಾಜೀನಾಮೆ ನೀಡಿದರೆ ಅದು ರಾಜಕೀಯ ಬೆಳವಣಿಗೆಗಳಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ.
ಸಿದ್ದು ಆಪ್ತರ ಈ ಹೇಳಿಕೆ ಹೈಕಮಾಂಡ್ ಮಟ್ಟದಲ್ಲೂ ಚರ್ಚೆಯಲ್ಲಿದೆ. ಇದರ ಡ್ಯಾಮೆಜ್ ಕಂಟ್ರೋಲ್ ಭಾಗವಾಗಿ ಬಂಡೆಯಂತೆ ಸುಭದ್ರ ಎಂಬ ಹೇಳಿಕೆ ನೀಡಿದ್ದರಾ ಸಿದ್ದರಾಮಯ್ಯ ಅನ್ನೋದು ಸದ್ಯದ ಚರ್ಚೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯಗಳಿವೆ. ಇದನ್ನ ಹೈಕಮಾಂಡ್ ಮುಂದೆ ಮರೆಮಾಚಬೇಕು. ವಿಪಕ್ಷಗಳಿಗೆ ಅಹಾರವಾಗೋದನ್ನ ತಪ್ಪಿಸಬೇಕು. ಈ ರೀತಿಯ ಗೊಂದಲಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಪರಸ್ಪರ ಕೈ ಹಿಡಿದು ಮೇಲೆಕ್ಕೆತ್ತಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇಲ್ಲಿ ಸಿಎಂ ಬಂಡೆಯಂತೆ ಅಂತ ಹೇಳಿದ್ದು ಡಿಕೆ ಶಿವಕುಮಾರ್ ಗೆ ಸಂತಸ ತಂದಿದೆ. ಮುಂದೆ ಎನೆಲ್ಲ ಬೆಳವಣಿಗೆ ಆಗುತ್ತೋ ಕಾದುನೋಡಬೇಕಿದೆ



