ಸಿನಿಮಾರಂಗದಲ್ಲಿ ಒಟ್ಟಿಗೆ ನಟಿಸಿದ ನಂತರ ಕೆಲವರು ಮದುವೆಯಾಗುವುದು ಸಹಜ. ಇನ್ನು ಇದೆ ರೀತಿ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿ, ನಂತರ ಸ್ನೇಹಿತರಾಗಿದ್ದ ಜೋಡಿ ಇದೀಗ ಮದುವೆಯಾಗಲು ನಿರ್ಧರಿಸಿದ್ದಾರೆ. ಹಾಗಾದರೆ ಆ ಜೋಡಿ ಯಾರು ಎಂದು ತಿಳಿಯುವ ಕುತೂಹಲ ಇದೆಯಾ, ಬನ್ನಿ ತಿಳಿಸುತ್ತೇವೆ. ಹೌದು ಬಾಲಿವುಡ್ ನ ಮೋಸ್ಟ್ ವಾಂಟೆಡ್ ಹೀರೋಗಳಲ್ಲಿ ಒಬ್ಬರಾಗಿರುವ ನಟ ಎಂದರೆ ಅದು ಸಿದಾರ್ಥ್ ಮಾಲೋತ್ರ. ಇನ್ನು ತನ್ನ ಗ್ಲಾಮರ್ ಹಾಗೂ ತಮ್ಮ ಅಮೋಘ ನಟನೆಯ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ನಟಿ ಕಿಯಾರಾ ಅದ್ವಾನಿ. ಚಿತ್ರರಂಗದಲ್ಲಿ ಈ ಇಬ್ಬರೂ ಕೂಡ ಒಳ್ಳೆಯ ಹೆಸರು ಮಾಡಿದ್ದಾರೆ. ಇನ್ನು ಇದೀಗ ಈ ಜೋಡಿ ಮದುವೆಯಾಗುತ್ತಿದ್ದಾರೆ ಎನ್ನುವ ಮಾತುಗಳು ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಬಹಳ ಸದ್ದು ಮಾಡುತ್ತಿದೆ.

ಹೌದು ನಟಿ ಕಿಯಾರಾ ಅದ್ವಾನಿ ಹಾಗೂ ನಟ ಸಿದಾರ್ಥ್ ಮಾಲೋತ್ರ ಇದೀಗ ಆಸೆಮಣೆ ಹೇರಲು ನಿರ್ಧರಿಸಿದ್ದಾರೆ ಎನ್ನುವ ಮಾತುಗಳು ಸದ್ಯ ಎಲ್ಲೆಡೆ ಕೇಳಿ ಬರುತ್ತಿದೆ. ಇನ್ನು ಇದೀಗ ಈ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಚರ್ಚೆಗಳು ಕೂಡ ಶುರುವಾಗಿದೆ. ಬಾಲಿವುಡ್ ನ ಕ್ಯೂಟ್ ಜೋಡಿ ಎಂದೇ ಗುರುತಿಸಿಕೊಂಡಿರುವ ಕಿಯಾರಾ ಅದ್ವಾನಿ ಹಾಗೂ ನಟ ಸಿದಾರ್ಥ್ ಮಾಲೋತ್ರ ಕೊನೆಗೂ ತಮ್ಮ ಪ್ರೀತಿಯ ದೋಣಿಯನ್ನು ಮದುವೆಯ ಅಂತಕ್ಕೆ ಕರೆದು ಹೋಗುತ್ತಿದ್ದಾರೆ.
ಶೆರ್ಶಾಹ್ ಎಂಬ ಸೂಪರ್ ಹಿಟ್ ಸಿನಿಮಾದಲ್ಲಿ ನಟಿ ಕಿಯಾರಾ ಅದ್ವಾನಿ ಹಾಗೂ ನಟ ಸಿದ್ಧಾರ್ಥ್ ಮಾಲೋತ್ರ ಒಟ್ಟಾಗಿ ನಟಿಸಿದ್ದರು, ಇನ್ನು ಈ ಸಿನಿಮಾ ಬಹಳ ದೊಡ್ಡ ಮಟ್ಟದಲ್ಲಿ ಎಲ್ಲರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಇನ್ನು ಈ ಸಿನಿಮಾದ ವೇಳೆ ಸಿದ್ಧಾರ್ಥ್ ಹಾಗೂ ಕಿಯಾರಾ ನಡುವೆ ಪ್ರೀತಿ ಚಿಗುರಿತ್ತು ಎನ್ನುವ ಮಾತುಗಳು ಸಹ ಕೇಳಿಬಂದಿತ್ತು. ಇನ್ನು ಕಿಯಾರಾ ಅದ್ವಾನಿ ಹಾಗೂ ಸಿದ್ದಾರ್ಥ್ ಮಾಲೋತ್ರ ಈ ಇಬ್ಬರೂ ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದಾರೆ ಎಂದು ಈ ಜೋಡಿ ಬಗ್ಗೆ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇತ್ತು.
ಆದರೆ ಇದೀಗ ಈ ಜೋಡಿ ಮದುವೆಯಾಗಲು ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಈ ವಿಷಯ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನು ಇತ್ತೀಚೆಗೆ ನಟಿ ಕಿಯಾರಾ ಅದ್ವಾನಿ ಕಾಫ್ಹಿ ವಿತ್ ಕರಣ್ ಕಾರ್ಯಕ್ರಮದಲ್ಲಿ ತಾವು ಮದುವೆಗೆ ರೆಡಿಯಾಗಿರುವುದಾಗಿ ತಿಳಿಸಿದ್ದರು. ಇನ್ನು ಇದೀಗ ಮೂಲಗಳ ಪ್ರಕಾರ ನಟಿ ಕಿಯಾರಾ ಅದ್ವಾನಿ ಹಾಗೂ ನಟ ಸಿದ್ಧಾರ್ಥ್ ಮಾಲೋತ್ರ ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಈ ಮದುವೆ ತುಂಬಾ ಸರಳವಾಗಿ ನಡೆಯುತ್ತಿದ್ದು, ಈ ಮದುವೆಯಲ್ಲಿ ಕೇವಲ ತಮ್ಮ ಪೋಷಕರು ಹಾಗೂ ಕುಟುಂಬಸ್ಥರು ಮಾತ್ರ ಭಾಗಿಯಾಗಿರಲಿದ್ದು, ಇನ್ನು ಬಾಲಿವುಡ್ ಮಂದಿಗೆ ಹಾಗೆ ಸ್ನೇಹಿತರಿಗೆ ಆರತಕ್ಷತೆ ಏರ್ಪಾಡು ಮಾಡಲಿದ್ದಾರೆ ಎನ್ನುವ ಮಾತುಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸದ್ಯ ಬಾಲಿವುಡ್ ಅಂಗಳದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಗಳು ಕೇಳಿ ಬರುತ್ತಿದೆ.



