ರಾಜ್ಯ ಕಾಂಗ್ರೆಸ್ ನಲ್ಲಿ ಈಗ ಇಡಿ ವಿಚಾರವಾಗಿ ಗಲಾಟೆ ಶುರುವಾಗಿದೆ. ಯಾವಾಗ ಪರಮೇಶ್ವರ್ ಒಡೆತನದ ಸಂಸ್ಥೆಗಳ ಮೇಲೆ ದಾಳಿ ನಡೀತೋ ಅದು ಕಾಂಗ್ರೆಸ್ ಒಳ ಜಗಳದಿಂದಲೇ ಅನ್ನೋದು ಚರ್ಚೆಗೆ ಬಂದಿದೆ. ಈಗಾಗಲೇ ಈ ದಾಳಿಗೆ ರನ್ಯಾರಾವ್ ಪ್ರಕರಣ ಅಂಟು ಹಾಕಲಾಗಿದ್ದರೂ ಒಳಗಿನ ವಿಷಯವೇ ಬೇರೆ ಇದ್ದಂಗಿದೆ.
ಈ ದಾಳಿ ಕಾಂಗ್ರೆಸ್ ನಲ್ಲಿನ ಒಳಬೇಗುದಿಯಿಂದಲೇ ಆಗಿದ್ದು ಅನ್ನೋದು ಬಿಜೆಪಿ ಹೇಳುತ್ತಿರೋ ಮಾತಾಗಿದೆ. ಇದಕ್ಕೆ ಪೂರಕವಾಗುವಂತೆಯೇ ಡಿಕೆ ಶಿವಕುಮಾರ್ ಅವರ ಹೇಳಿಕೆ ಇದ್ದಂಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಡಿಕೆ ಶಿವಕುಮಾರ್ ಕೂಡ ಹೇಳಿಕೆ ನೀಡಿದ್ದರು. ಈಗ ಮತ್ತೊಮ್ಮೆ ಈ ದಾಳಿ ಹಿಂದೆ ಮಹಾನಾಯನ ಕೈವಾಡ ಇದೆ ಅಂತ ಚರ್ಚೆ ಆಗ್ತಾ ಇದೆ. ಅಷ್ಟೆ ಅಲ್ಲ ಇದೇ ಮಾತನ್ನ ಕೇಂದ್ರ ಸಚಿವ ಕುಮಾರಸ್ವಾಮಿ ಕೂಡ ಹೇಳಿದ್ದಾರೆ.

ಹೌದು, ಯಾವಾಗ ದಾಳಿ ವಿಚಾರವಾಗಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರೋ ಆಗಲೇ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಡಿಕೆ ಗುರಿಯಾದರು. ಸಂಪುಟ ಸಭೆಯಲ್ಲೂ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ದ ಗರಂ ಆಗಿದ್ದಾರೆ ಪರಮೇಶ್ವರ್ ಎನ್ನಲಾಗಿದೆ.
ಸಿಎಂ ಮುಂದೆ ಪರಮೇಶ್ವರ್, ಮಹದೇವಪ್ಪ ಅಸಮಾಧಾನ ವ್ಯಕ್ತಪಡಿಸಿದ್ದು, ಹದಿನೈದು ಇಪ್ಪತ್ತು ಲಕ್ಷ ಕೊಟ್ಟಿದ್ದಾರೆ ಅಂತಾ ಮಾಧ್ಯಮಗಳ ಮುಂದೆ ಹೇಗೆ ಹೇಳಿದ್ರಿ, ಗಿಫ್ಟ್ ಕೊಟ್ಟಿದ್ದಾರೆ, ತಗೊಂಡಿದ್ದಾರೆ ಅಂತೆಲ್ಲಾ ಹೇಳಿದ್ದೀರಿ, ನನಗೆ ಅವರ ಜೊತೆ ಯಾವುದೇ ವ್ಯವಹಾರದ ನಂಟಿಲ್ಲ, ನಿಮ್ಮ ಹೇಳಿಕೆಯಿಂದ ನಾನು ಮುಜುಗರ ಪಡುವ ಪರಿಸ್ಥಿತಿ ಬಂದಿದೆ ಎಂದು ಹೇಳಿದ್ದಾರೆ ಪರಮೇಶ್ವರ್. ಪರಮೇಶ್ವರ್ ಮಾತಿಗೆ ದನಿಗೂಡಿಸಿ ಮಹದೇವಪ್ಪ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು ಇಂಥದ್ದನ್ನೆಲ್ಲಾ ಮಾಧ್ಯಮಗಳ ಮುಂದೆ ಹೇಳ್ತಾರಾ ಅಂತಾ ಮಹದೇವಪ್ಪ ಹೇಳಿದ್ದಾರೆ ಎನ್ನಲಾಗಿತ್ತು.

ಈಗ ಕುಮಾರಸ್ವಾಮಿ ಕೂಡ ಮಹಾನಾಯಕನಿಂದಲೇ ಅನ್ನೋದನ್ನ ಉಚ್ಚಾರ ಮಾಡಿದ್ದಾರೆ. ಹೆಣ್ಣು ಮಗಳು ಚಿನ್ನ ತರುವಾಗ ಮಾಹಿತಿ ಕೊಟ್ಟಿದ್ದು ಯಾರು. ಹರಿಪ್ರಸಾದ್ ನಿನ್ನೆ ದಲಿತ ನಾಯಕರು ಅನ್ನುವ ಕಾರಣಕ್ಕೆ ದಾಳಿ ಆಗಿದೆ ಅಂತಾ ಹೇಳಿದ್ದಾರೆ. ಹರಿ ಪ್ರಸಾದ್ ಅವರಿಗೆ ಈ ಮಾಹಿತಿ ಗೊತ್ತಿಲ್ವಾ..! ಅವರ ಪಕ್ಷದ ಮಹಾನ್ ನಾಯಕನೇ ಮಾಹಿತಿ ಕೊಟ್ಟಿದ್ದು. ನಿನ್ನೆ ಪ್ರಹ್ಲಾದ್ ಜೋಶಿ ಕೂಡ ಹೇಳಿದ್ದಾರೆ ಎಂದು ಹಿಸ ಬಾಂಬ್ ಸಿಡಿಸಿದ್ದಾರೆ.
ಮಾತು ಮುಂದುವರೆಸಿ ಮಾತನಾಡಿದ ಅವರು, ಪರಮೇಶ್ವರ್ ದಲಿತ ಸಮಾವೇಶ ಮಾಡಲು ಹೊರಟ್ರು ಆಗ ಆ ಪ್ರಭಾವಿ ನಾಯಕ ಮಾಹಿತಿ ಕೊಟ್ರು. ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಟವಲ್ ಹಾಸಿಕೊಂಡು ಕೂತವರೇ ಈ ಕೃತ್ಯ ಮಾಡಿದ್ದು. ಇದು ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ವಾ? ಪೆನ್ ಡ್ರೈವ್ ಫ್ಯಾಕ್ಟರಿ ಸೂತ್ರದಾರ ಯಾರು? ಯಾರ ಮಾಡಿದ್ದಾರೆ ಅನ್ನೋದು ಕಾಂಗ್ರೆಸ್ಸಿಗರಿಗೆ ಗೊತ್ತಿದೆ. ಅದ್ರೇ ಅವರೇ ಇಡಿ ವಿರುದ್ದ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಸರ್ಕಾರದಲ್ಲಿ ಯಾರನ್ನು ಬೇಕಾದ್ರೂ ಅಪರಾಧಿ ಮಾಡ್ತಿರಿ ಯಾರನ್ನು ಬೇಕಾದ್ರೂ ನಿರಾಪರಾಧಿ ಮಾಡ್ತಿರಿ ಎಂದು ಕಿಡಿ ಕಾರಿದ್ದಾರೆ.

ಸದ್ಯ ಕಾಂಗ್ರೆಸ್ ಒಳ ಜಗಳ ಬೀದಿಗೆ ಬಿತ್ತಾ ಅನ್ನೋ ಪ್ರಶ್ನೆ ಹಾಗೂ ಅನುಮಾನ ಈಗ ಎದ್ದಿದೆ. ಅಷ್ಟೆ ಅಲ್ಲ ಸಿಎಂ ರೇಸ್ ನಲ್ಲಿದ್ದ ಪರಮೇಶ್ವರ್ ನ ಕಟ್ಟಿ ಹಾಕೋಕೆ ಸ್ವ ಪಕ್ಷದವರೇ ಹೀಗೆ ಮಾಡಿದ್ರಾ ಅನ್ನೋದು ಕೂಡ ಚರ್ಚೆ ಆಗ್ತಾ ಇದೆ. ಅದಕ್ಕೆ ಪೂರಕವಾಗಿಯೇ ಪ್ರಹ್ಲಾದ್ ಜೋಷಿ ಹಾಗೂ ಕುಮಾರಸ್ವಾಮಿ ಕೂಡ ಮಾತನಾಡಿರೋದು ಹಲವು ಚರ್ಚೆಗೆ ಕಾರಣವಾಗಿದೆ.



