ರೀಲ್ಸ್ ಮಾಡೋದು ಫೇಮಸ್ ಆಗೋದು ಇಂದಿನ ಜಮಾನದ ಟ್ರೆಂಡ್. ಇದಕ್ಕೆ ವಯಸ್ಸಿನ ಮಿತಿ ಇಲ್ಲ. ಗೆಳತಿಯರು, ಪ್ರೇಮಿಗಳು, ಸಹೋದರಿಯರು ಒಟ್ಟಾಗಿ ಹಾಡುಗಳಿಗೆ ಸ್ಟೆಪ್ ಹಾಕಿ ರೀಲ್ಸ್ ಮಾಡುವುದನ್ನು ನೀವು ಕಂಡಿರಬಹುದು. ಆದರೆ ಅಮ್ಮ-ಮಗನ ಡ್ಯಾನ್ಸ್ ರೀಲ್ಸ್ ಕಂಡಿದ್ದೀರಾ. ಸದ್ಯ, ಈ ಅಮ್ಮ-ಮಗನ ಡ್ಯಾನ್ಸ್ ವಿಡಿಯೋ ಸಕ್ಕತ್ ವೈರಲ್ ಆಗುತ್ತಿದ್ದು, ವಿಡಿಯೋ ಕಂಡವರೆಲ್ಲ ಇದು ನಿಮ್ಮ ಅಮ್ಮನೋ ಅಥವಾ ಅಕ್ಕನೋ ಎಂದು ಕೇಳುತ್ತಿದ್ದಾರೆ.
https://www.instagram.com/reel/CkFrdqljmDX/?utm_source=ig_web_copy_link&igshid=MzRlODBiNWFlZA==

2022ರಲ್ಲಿ ತಮಿಳು ಭಾಷೆಯಲ್ಲಿ ಬಿಡುಗಡೆಯಾದ ಸಿನಿಮಾವೊಂದರ ‘ಮಲ್ಲಿಪೂ’ ಹಾಡಿಗೆ ತಮಿಳುನಾಡು ಮೂಲದ ಅಜಿತ್ ಕುಮಾರ್ ಎಂಬಾತ ತನ್ನ ತಾಯಿಯೊಂದಿಗೆ ಟೆರೆಸ್ ಮೇಲೆ ಕುಣಿದು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಸೋಶಿಯಲ್ ಮೀಡಿಯಾಗೆ ಈ ವಿಡಿಯೋ ಅಪ್ಲೋಡ್ ಆದ ಕೆಲವೇ ದಿನಗಳಲ್ಲಿ ಈ ಡ್ಯಾನ್ಸ್ ವಿಡಿಯೋ ಸಕ್ಕತ್ ವೈರಲ್ ಆಗಿದೆ. 1 ಲಕ್ಷಕ್ಕಿಂತಲೂ ಹೆಚ್ಚು ಜನ ಈ ರೀಲ್ಸ್ ನೋಡಿ ಲೈಕ್ ಮಾಡಿದ್ದಾರೆ.
ಅಮ್ಮ-ಮಗನ ಸಕ್ಕತ್ ಸ್ಟೆಪ್ ಕಂಡಿರುವ ನೆಟ್ಟಿಗರಲ್ಲಿ ಒಬ್ಬ ‘ಸೂಪರ್ ಡ್ಯಾನ್ಸ್ ಅಜಿತ್ ಇದು ನಿಮ್ಮ ಅಮ್ಮನೋ ಅಥವಾ ಅಕ್ಕನೋ’ ಎಂದಿದ್ದಾರೆ. ಮತ್ತೊಬ್ಬ ‘ಅಮ್ಮ ಮಗ ಅಂದರೆ ಹೀಗಿರಬೇಕು ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡಿದ್ದೀರಾ’ ಎಂದಿದ್ದಾನೆ. ಇನ್ನೊಬ್ಬ ‘ನನ್ನ ತಾಯಿ ತುಂಬಾ ನಾಚಿಕೆ ಸ್ವಭಾವದವರು. ಅವರಿಗೆ ಈ ವಿಡಿಯೋ ತೋರಿಸುತ್ತೇನೆ. ನಾನೂ ಕೂಡ ಅವರೊಂದಿಗೆ ಡ್ಯಾನ್ಸ್ ಮಾಡಬೇಕು’ ಎಂದು ಬರೆದುಕೊಂಡಿದ್ದಾನೆ. ಒಟ್ಟಾರೆಯಾಗಿ ಅಮ್ಮ ಮಗನ ಡ್ಯಾನ್ಸ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಸದ್ದು ಮಾಡುತ್ತಿದೆ.



