ಬಿಗ್ ಬಾಸ್ ಕನ್ನಡ ಸೀಸನ್ 12 ರ ಕಾರ್ಯಕ್ರಮವು ಈ ಹಿಂದಿನ ಎಲ್ಲಾ ಸೀಸನ್ ಗಳಿಗಿಂತ ಹಲವಾರು ಟ್ವಿಸ್ಟ್ ಟರ್ನಿಂಗಗಳನ್ನು ಒಳಗೊಂಡು ವಿಭಿನ್ನತೆಯಿಂದ ಮೂಡಿ ಬರುತ್ತಿದೆ. ಕಿಚ್ಚನ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಕಾರ್ಯಕ್ರಮವು ಜನ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಮೊದಲನೇ ವಾರದ ಪಂಚಾಯಿತಿಯಲ್ಲಿ ಕರಿಬಸಪ್ಪ ಮತ್ತು ಅಮಿತ್ ಔಟ್ ಆಗಿದ್ದು ಮನೆಯಿಂದ ಹೊರ ಬಂದಿದ್ದರು.
ಆನಂತರ ಎರಡನೇ ವಾರ ಮಿಡ್ನೈಟ್ ಎಲಿಮಿನೇಷನ್ ಮೂಲಕ ಸತೀಶ್ ಹೊರಬಂದಿದ್ದು ಮೂರನೇ ಪಂಚಾಯಿತಿಯಲ್ಲಿ ಮಂಜು ಭಾಷಣೆ ಮತ್ತು ಅಶ್ವಿನಿ ಎಸ್ ಎನ್ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಅದರ ಜೊತೆಗೆ ಮೂರು ಜನ ವೈಲ್ಡ್ ಕಾರ್ಡ್ ಸ್ಪರ್ಧಿಗಳಾದ ರಘು ಸೂರಜ್ ಹಾಗೂ ರಿಷಿ ಮನೆಯನ್ನ ಪ್ರವೇಶಿಸಿದ್ದಾರೆ.

ರಘು ರವರು ಬೆಳ್ಳಂಬೆಳಗ್ಗೆ ಮೈಕಿನಲ್ಲಿ ಕೂಗುತ್ತಾ ಎದ್ದೇಳಿಸಿ , ಇನ್ನು ನಿದ್ರೆಯಲ್ಲಿರುವ ಮೂವರು ಸ್ಪರ್ಧಿಗಳ ಮೇಲೆ ತಣ್ಣೀರು ಸುರಿಯುವ ಮೂಲಕ ರಫ್ ಅಂಡ್ ಆಫ್ ಎಂಟ್ರಿ ನೀಡಿದ್ದಾರೆ. ಮತ್ತೆ ಎರಡನೇ ಎಂಟ್ರಿ ರಿಷಿ ಗೌಡ ಇವರು ತಮ್ಮದೇ ಆದ ಸ್ಟೈಲ್ ನಲ್ಲಿ ಎಂಟ್ರಿಕೊಟ್ಟು ಅಲ್ಲಿನ ಕೆಲವು ಸ್ಪರ್ಧಿಗಳ ಭಾವಚಿತ್ರಗಳನ್ನು ಒಡೆದು ಹಾಕಿ ಅದಕ್ಕೆ ತಕ್ಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಮತ್ತೆ ಮೂರನೇ ಸ್ಪರ್ಧಿಯಾದ ಸೂರಜ್ ಸಿಂಗ್ ಇವರು ರೋಮ್ಯಾಂಟಿಕ್ ಆಗಿ ಈಜುಕೊಳದಿಂದ ಎದ್ದು ಬರುವ ಮೂಲಕ ಸಿಕ್ಸ್ ಪ್ಯಾಕ್ ತೋರಿಸುತ್ತ ಹುಡುಗಿಯರಿಗೆ ಹಾಟ್ ಬ್ರೇಕ್ ಮಾಡಿ ರೋಮ್ಯಾಂಟಿಕ್ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಷನ್ ಸಂದರ್ಭದಲ್ಲಿ ಮನೆಯವರೆಲ್ಲರು ಗೆಜ್ಜೆಯ ವಿಷಯವನ್ನು ತೆಗೆದುಕೊಂಡು ಅಶ್ವಿನಿ ಗೌಡ ರನ್ನು ನಾಮಿನೇಷನ್ ಮಾಡುತ್ತಾರೆ. ಇದರಿಂದಲೇ ಅರ್ಧದಷ್ಟು ಕುಗ್ಗಿ ಹೋದ ಅಶ್ವಿನಿ ಗೌಡ ಬೇಸರದಿಂದಿದ್ದರು. ಅದೇ ಸಂದರ್ಭದಲ್ಲಿ ಈ ಸೀಸನ್ನ ಮೊದಲ ಕ್ಯಾಪ್ಟನ್ ಸಿ ಓಟದಿಂದ ಅರ್ಹರಲ್ಲದ ಕೆಲವು ಸ್ಪರ್ಧಿಗಳನ್ನು ಹೊರಗಿಡಲು ಸೂಚಿಸುವಂತೆ ಬಿಗ್ ಬಾಸ್ ಹೇಳುತ್ತಾರೆ.
ಮನೆಯ ಎಲ್ಲಾ ಸ್ಪರ್ಧಿಗಳು ಒಬ್ಬರಾದ ಮೇಲೆ ಒಬ್ಬರಂತೆ ಬಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಅಶ್ವಿನಿ ಗೌಡರನ್ನು ಹೊರ ಹಾಕುತ್ತಾರೆ. ಹಾಗೆಯೇ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಬಂದಂತಹ ರಘು ಅಶ್ವಿನಿ ಗೌಡ ರವರನ್ನು ನಾನು ಕ್ಯಾಪ್ಟನ್ ಸಿ ಓಟದಿಂದ ಹೊರ ಹಾಕಲು ಇಚ್ಛಿಸುತ್ತೇನೆ ಏಕೆಂದರೆ ಅವರಿಗೆ ಕ್ಯಾಪ್ಟನ್ ಸಿ ಪಟ್ಟ ಸಿಕ್ಕಿದರೆ ನಾನು ನಾನು ಎಂಬ ಅಹಂನಿಂದ ಡೊಮಿನೆಟಿಂಗ್ ಮಾಡುವುದು ಹೆಚ್ಚಾಗುತ್ತದೆ.
ಈ ರೀತಿಯ ಸ್ಟೇಟ್ಮೆಂಟ್ ಕೊಟ್ಟ ಮೇಲೆ ಅಶ್ವಿನಿ ಗೌಡ ಈ ರೀತಿಯಾಗಿ ಹೇಳಿಕೊಳ್ಳುತ್ತಾ ಓಡುವ ಕುದುರೆಯನ್ನು ರೇಸ್ ನಲ್ಲಿ ಬಿಟ್ಟಿಲ್ಲ ಎಂದರೆ ಹೇಗೆ ? ಬಿಗ್ ಬಾಸ್ ಮನೆಯಲ್ಲಿ ಆಗುವ ಅವಮಾನ ನೋವುಗಳನ್ನ ಮರೆಯಲು ಆಗುವುದಿಲ್ಲ ಎಂದು ಹೇಳಿಕೊಳ್ಳುತ್ತಾ ಕಣ್ಣೀರು ಹಾಕಿದ್ದಾರೆ ಎಲ್ಲರನ್ನೂ ನೋಯಿಸಿ ಅಳಿಸುತ್ತಿದ್ದ ಅಶ್ವಿನಿ ಗೌಡಳಿಗೆ ಅಳುವ ಕಾಲ ಬಂದಿತ್ತು ಎಂದರೆ ತಪ್ಪಾಗಲಾರದು. ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ಅವಳಿಗೆ ತಕ್ಕ ಶಾಸ್ತಿಯಾಗಿದೆ.



