ಎಲ್ಲರ ಮುಂದಿ ವೇದಿಕೆಯ ಮೇಲೆ, ಅಥವಾ ಸ್ಕ್ರೀನ್ ಮೇಲೆ ಡ್ಯಾನ್ಸ್ ಮಾಡಲು ಆತ್ಮವಿಶ್ವಾಸದ ಜೊತೆ ಧೈರ್ಯವೂ ಬೇಕು. ಹೀಗಿರುವಾಗ ನಡುರಸ್ತೆಯಲ್ಲಿ ಅದೂ ರಾತ್ರಿಯ ಹೊತ್ತು ಡ್ಯಾನ್ಸ್ ಮಾಡಲು ಗುಂಡಿಗೆ ಎರಡಿರಬೇಕು. ಅಂತಹ ಎರಡು ಗುಂಡಿಗೆಯ ಯುವತಿಯ ಡ್ಯಾನ್ಸ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಯುವತಿಯೊಬ್ಬಳು ಹಸಿಬಿಸಿ ಬಟ್ಟೆ ಧರಿಸಿ ನಡು ರಸ್ತೆಯಲ್ಲಿ ಸಿನಿಮಾ ಹಾಡಿಗೆ ಡ್ಯಾನ್ಸ್ ಮಾಡಿದ ವಿಡಿಯೋ ಇದಾಗಿದೆ.

https://www.instagram.com/reel/CyLm1QSJOD_/?utm_source=ig_web_copy_link
ಇಶಾ ಶರ್ಮಾ ಎಂಬ ಯುವತಿ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾಳೆ. ಈತನಕ 4.5 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. 7.4 ಲಕ್ಷ ಜನರು ಲೈಕ್ ಮಾಡಿದ್ದು, ಲಕ್ಷಾಂತರ ಜನರು ಈ ವಿಡಿಯೋ ಶೇರ್ ಮಾಡುತ್ತಿದ್ದಾರೆ. ರಸ್ತೆಯಲ್ಲಿ ಈಕೆ ತನ್ನಷ್ಟಕ್ಕೆ ತಾನು ಡ್ಯಾನ್ಸ್ ಮಾಡಲು ಶುರು ಮಾಡುತ್ತಿದ್ದಾರೆ. ಅಲ್ಲಿರುವ ನೋಡುಗರು ತಮ್ಮ ಮೊಬೈಲ್ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿಯುವುದನ್ನು ಕೂಡ ಈ ವಿಡಿಯೋದಲ್ಲಿ ಕಾಣಬಹುದಾಗಿದೆ.
ಹಿಂದಿಯ ಶಾರುಖ್ ಖಾನ್ ಮತ್ತು ಅನುಷ್ಕಾ ಶರ್ಮಾ ಅಭಿನಯದ ಝೀರೋ ಸಿನೆಮಾದ ‘ಮೇರೆ ನಾಮ್ ತೂ’ ಹಾಡಿಗೆ ಈ ಇಶಾ ಶರ್ಮ ಹೀಗೆ ಮನದುಂಬಿ ನಡುರಸ್ತೆಯಲ್ಲಿ ಡ್ಯಾನ್ಸ್ ಮಾಡಿದ್ದಾಳೆ. ವಿಡಿಯೋ ಕಂಡಿರುವ ನೆಟ್ಟಿಗರು, ‘ಈಕೆಯ ಧೈರ್ಯಕ್ಕೆ ಮೆಚ್ಚಬೇಕು. ಈಕೆಯನ್ನು ನೋಡುತ್ತಿದ್ದರೆ ನನಗೂ ಹೀಗೆಯೇ ಡ್ಯಾನ್ಸ್ ಮಾಡಬೇಕು ಎನಿಸುತ್ತಿದೆ ಎಂದಿದ್ದಾರೆ. ಸಾಕಷ್ಟು ಜನ ಈ ಯುವತಿಯ ನೃತ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಸದ್ಯ ಈ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.



