ನಟಿ ಪವಿತ್ರಾ ಗೌಡ ನಟ ದರ್ಶನ್ ಅವರೊಡನೆ ಆತ್ಮೀಯವಾಗಿದ್ದಾರೆ. ಇವರಿಬ್ಬರು 10 ವರ್ಷಗಳಿಂದ ರಿಲೇಶನ್ಷಿಪ್ ನಲ್ಲಿ ಇದ್ದಾರೆ ಎನ್ನುವ ವಿಷಯ ಪವಿತ್ರಾ ಇನ್ಸ್ಟಾಗ್ರಾಮ್ ನಲ್ಲಿ ದರ್ಶನ್ ಅವರ ಜೊತೆಗೆ ಇರುವ ಹಲವು ಫೋಟೋಸ್ ಗಳನ್ನು ಶೇರ್ ಮಾಡಿಕೊಂಡಾಗ ಗೊತ್ತಾಯಿತು. ಇದೆಲ್ಲವೂ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದ್ದು ನಿಜ. ಆದರೆ ಪವಿತ್ರಾ ಗೌಡ ಇಂದ ಆದ ಮತ್ತೊಂದು ದೊಡ್ಡ ತಪ್ಪಿಗೆ, ಆಕೆ, ನಟ ದರ್ಶನ್ ಹಾಗೂ ಇನ್ನು ಹಲವು ಜನರು ಜೈಲಿಗೆ ಹೋಗುವ ಹಾಗೆ ಆಯಿತು. 6 ತಿಂಗಳ ನಂತರ ಈಗ ಎಲ್ಲರೂ ಸಹ ಜಾಮೀನು ಪಡೆದು ಬಿಡುಗಡೆಯಾಗಿ ಜೈ*ಲಿನಿಂದ ಹೊರಗಡೆ ಬಂದಿದ್ದಾರೆ.

ಪವಿತ್ರಾ ಗೌಡ ಸಹ ನಿನ್ನೆ ಜೈ*ಲಿನಿಂದ ಹೊರಬಂದಿದ್ದು, ನೇರವಾಗಿ ಮನೆಗೆ ಹೋಗದೇ, ಅವರ ತಾಯಿಯ ಜೊತೆಗೆ ದೇವಸ್ಥಾನಕ್ಕೆ ಹೋಗಿ, ದೇವರಿಗೆ ಪೂಜೆ ಮಾಡಿಸಿದರು, ದರ್ಶನ್ ಅವರ ಹೆಸರಲ್ಲು ಅರ್ಚನೆ ಮಾಡಿಸಲಾಯಿತು. ಇಷ್ಟೆಲ್ಲ ಆದ ನಂತರ ಇದೀಗ ಪವಿತ್ರಾ ಗೌಡ ಮಾಜಿ ಪತಿ ಸಂಜಯ್ ಸಿಂಗ್, ಇದ್ದಕ್ಕಿದ್ದ ಹಾಗೆ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ, ಹಲವು ವರ್ಷಗಳ ಹಿಂದೆ ಪವಿತ್ರಾ ಗೌಡ ಸಂಜಯ್ ಸಿಂಗ್ ಜೊತೆಗೆ ಮದುವೆಯಾದರು. ಇವರಿಬ್ಬರಿಗೆ ಒಬ್ಬ ಮಗಳು ಕೂಡ ಜನಿಸಿದ್ದಾಳೆ. 5 ವರ್ಷಗಳ ಕಾಲ ಜೊತೆಯಾಗಿದ್ದ ಇವರು, 12 ವರ್ಷಗಳ ಹಿಂದೆ ಕಾನೂನಿನ ಮೂಲಕ ಬೇರೆಯಾದರು.
ನಂತರ ಸಂಜಯ್ ಸಿಂಗ್ ಸಹ ತಮ್ಮ ಹುಟ್ಟೂರಿಗೆ ಹೊರಟು ಹೋದರು. ಆದರೆ ಸಂಜಯ್ ಅವರು ಇವತ್ತಿಗೂ ಸಹ ಇನ್ನೊಂದು ಮದುವೆ ಆಗಿಲ್ಲ. ಈಗಲೂ ಕೂಡ ಸಿಂಗಲ್ ಆಗಿಯೇ ಇದ್ದಾರೆ. ಹಾಗೆಯೇ ಪವಿತ್ರಾ ಅವರಿಂದ ದೂರವಾದ ನಂತರ ಆಕೆಯನ್ನು ಅವರು ಭೇಟಿ ಮಾಡಿಲ್ಲ, ಮಾತು ಕೂಡ ಆಡಿಲ್ಲ. ಆದರೆ 6 ತಿಂಗಳ ಹಿಂದೆ ಪವಿತ್ರಾ ಅವರು ಅರೆ*ಸ್ಟ್ ಆದಾಗ ಮಾಧ್ಯಮಗಳ ಜೊತೆಗೆ ಫೋನ್ ನಲ್ಲಿ ಮಾತನಾಡಿ, ಪವಿತ್ರಾ ಅವರಿಗೆ ಸಪೋರ್ಟ್ ಮಾಡಿದ್ದರು. ಇದೀಗ ಪವಿತ್ರಾ ಗೌಡ ಅವರು ಬಿಡುಗಡೆ ಆಗೋ ಹೊತ್ತಿಗೆ ಸಂಜಯ್ ಸಹ ಬೆಂಗಳೂರಿಗೆ ಬಂದಿದ್ದಾರೆ, ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ತಾವು ಸ್ನೇಹಿತರನ್ನ ಭೇಟಿ ಮಾಡೋಕೆ ಬೆಂಗಳೂರಿಗೆ ಬಂದಿರುವುದಾಗಿ ಹೇಳಿದ್ದಾರೆ ಸಂಜಯ್. ಆದರೆ ಅವರ ಮನಸ್ಸಿನಲ್ಲಿ ಪವಿತ್ರ ಅವರ ಮೇಲೆ ಮೊದಲಿದ್ದ ಪ್ರೀತಿ ಹಾಗೆ ಇದೆ. ಇದುವರೆಗೂ ಅವರನ್ನು ಭೇಟಿ ಮಾಡಿಲ್ಲ, ಲೈವ್ ಆಗಿ ನೋಡಿಲ್ಲ. ಅವರನ್ನು ನೋಡಬೇಕು ಅನ್ನಿಸಿದರೆ ಸೋಶಿಯಲ್ ಮೀಡಿಯಾ ಅಥವಾ ಯೂಟ್ಯೂಬ್ ನಲ್ಲಿ ನೋಡ್ತಿದ್ದೆ. ಪವಿತ್ರಾ ತುಂಬಾ ಸ್ಟ್ರಾಂಗ್ ಆದ ಹುಡುಗಿ, ಅವರು ಚೆನ್ನಾಗಿರಬೇಕು, ಅವರ ಕೆರಿಯರ್ ಕೂಡ ಚೆನ್ನಾಗಿರಬೇಕು. ನನಗೆ ಅವರನ್ನ ಡಿಸ್ಟರ್ಬ್ ಮಾಡೋದಕ್ಕೆ ಇಷ್ಟವಿಲ್ಲ. ಅವರಾಗೆ ಬಂದರೆ , ಮಾತನಾಡಿಸಿದರೆ ಮಾತನಾಡುತ್ತೇನೆ, ನಾನಾಗೆ ಹೋಗುವುದಿಲ್ಲ ಎಂದಿದ್ದಾರೆ ಸಂಜಯ್.

ಇನ್ನು ಪವಿತ್ರಾ ಗೌಡ ಅವರು ವಾಪಸ್ ಬಂದರೆ, ಮತ್ತೆ ಅವರನ್ನು ಸ್ವೀಕರಿಸುವುದಾಗಿ ಹೇಳಿದ್ದಾರೆ ಸಂಜಯ್. ಇನ್ನು ದರ್ಶನ್ ಅವರ ಬಗ್ಗೆ ಸಹ ಮಾತನಾಡಿ, ದರ್ಶನ್ ಪವಿತ್ರಾ ಗೌಡ ಮತ್ತೆ ಆತ್ಮೀಯವಾಗಿ ಇರುತ್ತಾರೆ ಅಂದ್ರೆ ನನಗೆ ಏನು ಅಭ್ಯಂತರವಿಲ್ಲ, ದರ್ಶನ್ ಅವರು ಚೆನ್ನಾಗಿರಬೇಕು, ಪವಿತ್ರಾ ಕೂಡ ಚೆನ್ನಾಗಿರಬೇಕು.. ಎಂದು ಸಂಜಯ್ ಸಿಂಗ್ ಅವರು ಹೇಳಿಕೆ ನೀಡಿದ್ದು, ಈ ಮಾತುಗಳು ಈಗ ವೈರಲ್ ಆಗಿದೆ. ಮಾಜಿ ಗಂಡ ಹೆಂಡತಿ ಆಗಿದ್ದವರು ಮತ್ತೆ ಒಂದಾಗ್ತಾರಾ? ದರ್ಶನ್ ಅವರು ಸಂಪೂರ್ಣವಾಗಿ ಪವಿತ್ರಾ ಅವರಿಂದ ದೂರ ಆಗ್ತಾರಾ ಎಂದು ಕಾದು ನೋಡಬೇಕಿದೆ.



