ಕ್ಯಾಸೆಟ್ ರೀಲ್’ಗಳು, ಗಾಜು, ಸೈಕಲ್ ಚೈನ್’ಗಳು, ರೆಡ್ ಟೇಪ್, ಕೈಗಡಿಯಾರಗಳು ಮತ್ತು ಪೆಬ್ಬಲ್ ಸ್ಟೋನ್’ಗಳಂತಹ ವಸ್ತುಗಳಿಂದ ಮಾಡಿದ ವೇಷಭೂಷಣಗಳನ್ನು ಧರಿಸಿ ಉರ್ಫಿ ಜಾವೇದ್ ಆಗಾಗ್ಗೆ ಸುದ್ದಿಯಲ್ಲಿದ್ದಾರೆ. ನಗ್ನತೆಯನ್ನು ಹರಡಿದ ಆರೋಪದ ಮೇಲೆ ಅವರ ವಿರುದ್ಧ ದೂರುಗಳನ್ನು ದಾಖಲಿಸಲಾಯಿತು. ಅಷ್ಟೇ ಏಕೆ, ಅವರ ದಿರಿಸುಗಳನ್ನು ಮುಂದಿಟ್ಟುಕೊಂಡು ಟ್ರೋಲಿಗರು ಕೂಡ ಬಹಳ ಸುಲಭವಾಗಿ ಕಾಮೆಂಟ್ ಮಾಡುತ್ತಾರೆ. ಆದರೆ ಉರ್ಫಿ ಮಾತ್ರ ಅವರೆಲ್ಲರ ಮಾತುಗಳನ್ನು ಪದೇ ಪದೇ ನಿರ್ಲಕ್ಷಿಸುತ್ತಾರೆ. ಉರ್ಫಿಯನ್ನು ದ್ವೇಷಿಸಬಹುದು ಅಥವಾ ಪ್ರೀತಿಸಬಹುದು ಆದರೆ ಯಾರೂ ನಿರ್ಲಕ್ಷಿಸಲು ಸಾಧ್ಯವಿಲ್ಲ.

2022 ರಲ್ಲಿ ಇಂಟರ್ನೆಟ್’ನಲ್ಲಿ ಉರ್ಫಿ ಜಾವೇದ್ ಅತ್ಯಂತ ಜನಪ್ರಿಯ ತಾರೆಗಳಲ್ಲಿ ಒಬ್ಬರು ಎಂದರೆ ತಪ್ಪಾಗಲಾರದು. ಆಗಾಗ್ಗೆ ಸುದ್ದಿಯಲ್ಲಿರುವ ಯುವ ನಟಿಗೆ ಫ್ಯಾಷನ್ ಆಯ್ಕೆಗಳು ಮತ್ತು ಬಟ್ಟೆಗಳಿಗಾಗಿ 2022 ರೋಮಾಂಚನಕಾರಿ ವರ್ಷವಾಗಿತ್ತು. ಉರ್ಫಿ ಫ್ಯಾಶನ್ ಐಕಾನ್ ಆಗಿ ಹೊರಹೊಮ್ಮಿದರು ಕೂಡ. ಇದೀಗ ಉರ್ಫಿ ಜಾವೇದ್ 2023ಕ್ಕೆ ಕೆಲವೇ ಗಂಟೆಗಳು ಬಾಕಿಯಿರುವಾಗ ತಮ್ಮ ಅಭಿಮಾನಿಗಳಿಗಾಗಿ ಮತ್ತೊಂದು ಸರ್ ಪ್ರೈಸ್ ಡ್ರೆಸ್ ಧರಿಸಿ ವಿಶಿಷ್ಟವಾಗಿ ಕ್ಯಾಪ್ಷನ್ ಬರೆದು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
ಅಷ್ಟೇ ಅಲ್ಲ, ಮಂಚದ ಮೇಲೆ ಕುಳಿತುಕೊಂಡು ಸ್ನೇಹಿತನೊಂದಿಗೆ ಸಂಭಾಷಣೆ ನಡೆಸುತ್ತಿರುವ ವಿಡಿಯೋವನ್ನು ಉರ್ಫಿ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಉರ್ಫಿ ಎಳನೀರು ಕುಡಿಯುತ್ತಿರುತ್ತಾರೆ. ಅಷ್ಟರಲ್ಲಿ ಆಕೆ ಧರಿಸಿದ್ದ ಕೃತಕ ಉಗುರು ನೆಲದ ಮೇಲೆ ಬಿಳುತ್ತದೆ. ಆಗ ಉರ್ಫಿ ಅದನ್ನು ಎತ್ತಿಕೊಂಡು ಒಂದು ಕ್ಷಣ ನೋಡುತ್ತಾರೆ. ಆ ನಂತರ ನೋಡಿದಾಗ ಉರ್ಫಿ ಕೃತಕ ಉಗುರುಗಳಿಂದ ಮಾಡಿದ ಉಡುಪನ್ನು ಧರಿಸಿ ಬರುತ್ತಾರೆ. ವಿಡಿಯೋ ನೋಡಿದ ಎಲ್ಲರಿಗೂ ಒಮ್ಮೆಲೆ ಸರ್ ಪ್ರೈಸ್ ಆಗುವುದು ಖಂಡಿತ.
ಉರ್ಫಿ ಪ್ರತಿ ಬಾರಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಆದರೂ “ಅದು ಮಾನಸಿಕ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ” ಎನ್ನುತ್ತಾರೆ. ಉರ್ಫಿ ಜಾವೇದ್ ಅವರ ಬೋಲ್ಡ್ ಲುಕ್ ಆನ್ ಲೈನ್ನಲ್ಲಿ ಸದಾ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯುತ್ತದೆ. ಕೆಲವರು ಉರ್ಫಿ ಅವರ ಆತ್ಮವಿಶ್ವಾಸವನ್ನು ಶ್ಲಾಘಿಸಿದರೆ, ಇತರರು ಆಕೆಯ ಟಾಪ್ ಲೆಸ್ ಉಡುಪು ನೋಡಿ ಸಿಟ್ಟಾಗುತ್ತಾರೆ. ಉರ್ಫಿ ಜಾವೇದ್ ಬಿಗ್ ಬಾಸ್ ಒಟಿಟಿಯಲ್ಲಿ ಭಾಗವಹಿಸಿದ ನಂತರ ಮನೆ ಮಾತಾದರು. ಅಂದಹಾಗೆ ಉರ್ಫಿ ಬಡೇ ಭಯ್ಯಾ ಕಿ ದುಲ್ಹನಿಯಾ, ಚಂದ್ರ ನಂದಿನಿ, ಮೇರಿ ದುರ್ಗಾ, ಬೆಪನ್ನಾಹ್, ಜಿಜಿ ಮಾ, ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಮತ್ತು ಕಸೌತಿ ಜಿಂದಗಿ ಕೇ ನಂತಹ ಧಾರವಾಹಿಗಳಲ್ಲಿ ನಟಿಸಿದ್ದಾರೆ.



