ಪವಿತ್ರಾ ಈಗ ಪಕ್ಕಾ ಬ್ಯುಸಿನೆಸ್ ವುಮನ್ ಆಗಿದ್ದಾರೆ. ಜೈ*ಲಿಯಿಂದ ಹೊರಬಂದ ನಂತರ, ಅವರು ಬೇರೆ ವಿಚಾರಕ್ಕೆ ಹೋಗದೇ ರೆಡ್ ಕಾರ್ಪೆಟ್ ಸ್ಟುಡಿಯೋ ಉದ್ಘಾಟನೆಗೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಂಡರು. ಇಂದು ಪ್ರೇಮಿಗಳ ದಿನದಂದು, ಅವರು ಸ್ಟುಡಿಯೋವನ್ನು ಮರು ಆರಂಭಿಸಿದ್ದಾರೆ. ಹೊರಬಂದ ಬಳಿಕ ಹಲವು ಕಾರಣಗಳಿಂದ ಸುದ್ದಿಯಾಗಿದ್ದ ಪವಿತ್ರಾ ಗೌಡ, ಈಗ ತಮ್ಮ ಬ್ಯುಸಿನೆಸ್ ಮರು ಲಾಂಚ್ ಮಾಡುವ ಮೂಲಕ, ಇನ್ಯಾವುದೇ ವಿಷಯಕ್ಕೆ ಹೋಗುವುದಿಲ್ಲ ಎಂಬ ಸಂದೇಶ ನೀಡಿದ್ದಾರೆ.
ರೆಡ್ ಕಾರ್ಪೆಟ್ ಸ್ಟುಡಿಯೋ ಉದ್ಘಾಟನೆ ಹೇಗಿತ್ತು? ಯಾರೆಲ್ಲಾ ಭಾಗವಹಿಸಿದ್ದರು? ಪೂರ್ತಿ ವಿವರಗಳಿಗಾಗಿ ಈ ಲೇಖನವನ್ನು ಓದಿ!
ಪವಿತ್ರಾ ಗೌಡ ಸಿನಿಮಾ ನಟಿ ಆಗಿದ್ದರು ಸಹ, ಇವರು ಹೆಚ್ಚು ಸುದ್ದಿ ಆಗಿದ್ದು ವೈಯಕ್ತಿಕ ಜೀವನದ ವಿಚಾರಗಳಿಂದ. ಅದರಲ್ಲೂ ನಟ ದರ್ಶನ್ ಅವರ ಜೊತೆಗೆ ರಿಲೇಶನ್ಷಿಪ್ ನಲ್ಲಿ ಇರುವ ವಿಷಯವನ್ನು ಬಹಿರಂಗಗೊಳಿಸಿದ ನಂತರವೇ ಇವರು ಎಲ್ಲಾ ಕಡೆ ಸುದ್ದಿಯಾಗಿದ್ದು. ಕೆಲ ಸಮಯದ ದರ್ಶನ್ ಅವರ ಜೊತೆಗಿನ ಒಂದು ಫೋಟೋ ಶೇರ್ ಮಾಡಿ, ಎಲ್ಲರಿಗೂ ಶಾಕ್ ಕೊಟ್ಟಿದ್ದರು, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ದರ್ಶನ್ ಅವರ ಅಭಿಮಾನಿಗಳು ಅಣ್ಣ ಅತ್ತಿಗೆ ಮಧ್ಯೆ ಬಂದಿದ್ದಾಳೆ ಎಂದು ಈಕೆಯನ್ನು ದೂರಿದ್ದಿದೆ. ನೆಟ್ಟಿಗರು ಕೂಡ ಇನ್ನೊಬ್ಬರ ಸಂಸಾರದ ಮಧ್ಯೆ ಯಾತಕ್ಕೆ ಹೋಗಬೇಕು ಎಂದು ಈಕೆಯನ್ನು ಅವಮಾನಿಸಿ, ಬೈದು, ಕೆಟ್ಟದಾಗಿ ಮಾತನಾಡಿದ್ದು ಎಲ್ಲವೂ ನಡೆಯಿತು. ಆದರೆ ಕೆಲ ದಿನಗಳ ನಂತರ ಮತ್ತೊಂದು ಬಾಂಬ್ ಹಾಕಿದರು ಪವಿತ್ರಾ ಗೌಡ.

ತಾವು ದರ್ಶನ್ ಅವರ ಜೊತೆಗೆ 10 ವರ್ಷಗಳಿಂದ ರಿಲೇಶನ್ಷಿಪ್ ನಲ್ಲಿ ಇರುವುದಾಗಿ ತಿಳಿಸಿ, ಒಂದಷ್ಟು ಫೋಟೋಗಳನ್ನು ಶೇರ್ ಮಾಡಿ, ವಿಶ್ ಮಾಡಿದ್ದರು. ಈ ವಿಡಿಯೋ ಇನ್ನು ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು, ಹೆಂಡತಿ ಇರುವಾಗ ದರ್ಶನ್ ಅವರಿಗೆ ಇದೆಲ್ಲಾ ಬೇಕಿತ್ತಾ ಎನ್ನುವ ಮಾತು ಕೂಡ ಕೇಳಿಬಂದಿತ್ತು. ವಿಜಯಲಕ್ಷ್ಮೀ ಅವರು ಸಹ ಅದಕ್ಕೆ ಕೋಪ ಮಾಡಿಕೊಂಡು, ಪವಿತ್ರಾ ಗೌಡ ಮೊದಲ ಗಂಡನ ಫೋಟೋಗಳನ್ನು ಶೇರ್ ಮಾಡಿದ್ದರು. ಬಳಿಕ ಪವಿತ್ರಾ ಗೌಡ ಕೂಡ ವಿಜಯಲಕ್ಷ್ಮಿ ಅವರಿಗೆ ಸೋಷಿಯಲ್ ಮೀಡಿಯಾ ಮೂಲಕವೇ ಠಕ್ಕರ್ ಕೊಟ್ಟಿದ್ದರು. ಇದೆಲ್ಲವೂ ನಡೆದ ಕೆಲವೇ ದಿನದಲ್ಲೇ ರೇಣುಕಾಸ್ವಾಮಿ ಪ್ರಕರಣ ನಡೆದು, ನಟ ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರು ಕೂಡ ಜೈ*ಲಿಗೆ ಸೇರುವ ಹಾಗಾಯಿತು..ಇಬ್ಬರು 6 ತಿಂಗಳ ಕಾಲ ಒಳಗೆ ಇರಬೇಕಾಯಿತು. ಪವಿತ್ರ ಗೌಡ ಪರಪ್ಪನ ಅಗ್ರಹಾರದ ಒಳಗೆ 6 ತಿಂಗಳ ಸಮಯ ಕಳೆದರು.

6 ತಿಂಗಳು ಒಳಗಿದ್ದು, ಕಷ್ಟಪಟ್ಟು ಬಂದಿದ್ದಾರೆ ಎಂದು ಎಲ್ಲರ ನಿರೀಕ್ಷೆ ಇತ್ತು. ಆದರೆ ಶೂಟಿಂಗ್ ಗೆ ಹೋಗಿಬಂದ ರೀತಿ, ಪವಿತ್ರಾ ಗೌಡ ಲಿಪ್ ಸ್ಟಿಕ್ ಹಚ್ಚಿಕೊಂಡು, ಮೇಕಪ್ ಮಾಡಿಕೊಂಡು ಬಂದಿದ್ದು ಎಲ್ಲರಿಗೂ ಶಾಕ್ ಆಗಿತ್ತು. ಪವಿತ್ರಾ ಗೌಡ ಅವರಿಗೆ ಸ್ವಲ್ಪವೂ ಪಶ್ಚಾತ್ತಾಪ ಇಲ್ಲವಾ ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡಿತ್ತು. ಹೊರಗಡೆ ಬಂದ ಮೇಲೆ ಕೂಡ ದೇವಸ್ಥಾನದಲ್ಲಿ ದರ್ಶನ್ ಅವರ ಹೆಸರಿನಲ್ಲಿ ಅರ್ಚನೆ ಮಾಡಿಸಿ, ಸುದ್ದಿಯಾಗಿದ್ದರು ಪವಿತ್ರಾ ಗೌಡ. ಅದೆಲ್ಲ ನಡೆದ ನಂತರ ದರ್ಶನ್ ಅವರ ವಿಚಾರಕ್ಕೆ ಹೋಗಿರಲಿಲ್ಲ. ತಮ್ಮ ಬ್ಯುಸಿನೆಸ್ ಮುಂದುವರೆಸಲು, ಅದಕ್ಕೆ ಬೇಕಾದ ಎಲ್ಲವನ್ನು ತರಲು ಹೊರಗಡೆ ಓಡಾಡುತ್ತಿದ್ದರು, ಮೌನಿ ಅಮಾವಸ್ಯೇ ದಿವಸ ಕುಂಭಮೇಳಕ್ಕೆ ಹೋಗಿ, ಪುಣ್ಯಸ್ನಾನ ಮಾಡಿ, ಅಲ್ಲಿನ ಫೋಟೋ ಗಳನ್ನು ಶೇರ್ ಮಾಡಿಕೊಂಡಿದ್ದರು. ಆಗಾಗ ಸ್ಟೋರಿ ಶೇರ್ ಮಾಡುತ್ತಿರುತ್ತಾರೆ.
ಇನ್ನು ತಮ್ಮ ಹುಟ್ಟುಹಬ್ಬದ ದಿನವೂ ಯಾವುದೇ ಸ್ಪೆಶಲ್ ಪೋಸ್ಟ್ ಶೇರ್ ಮಾಡಿರಲಿಲ್ಲ ಪವಿತ್ರಾ ಗೌಡ. ಆದರೆ, ಅವರು ತಮ್ಮ ಬ್ಯುಸಿನೆಸ್ ಕಡೆ ಹೆಚ್ಚು ಗಮನಹರಿಸುತ್ತಿದ್ದರು. ಇದೀಗ ರೆಡ್ ಕಾರ್ಪೆಟ್ ಸ್ಟುಡಿಯೋ ಉದ್ಘಾಟನೆ ಮಾಡಿದ್ದಾರೆ. ಇದಕ್ಕಾಗಿ ಇಷ್ಟು ದಿನ ತಯಾರಿ ನಡೆಸಿದ್ದರು.
ಪವಿತ್ರಾ ಗೌಡ ಜೈ*ಲಿಗೆ ಹೋದಾಗಿನಿಂದ ರೆಡ್ ಕಾರ್ಪೆಟ್ ಸ್ಟುಡಿಯೋ ಮುಚ್ಚಿತ್ತು. ಆದರೆ, 8 ತಿಂಗಳ ಅವಧಿಯ ನಂತರ, ಎಲ್ಲಾ ತಯಾರಿಗಳ ಬಳಿಕ ಅದು ಮತ್ತೆ ರೀ ಲಾಂಚ್ ಆಗಿದೆ. ಈ ಬಾರಿ, ಸ್ಟುಡಿಯೋವನ್ನು ಹೊಸ ರೂಪದಲ್ಲಿ ರಿನೋವೇಟ್ ಮಾಡಿ, ಹೊಸ ಕಲೆಕ್ಷನ್ಗಳ ಮತ್ತು ವಿಶೇಷತೆಗಳೊಂದಿಗೆ ಮರು ಆರಂಭಿಸಲಾಗಿದೆ.
ಇದುವರೆಗೆ ಇಲ್ಲಿ ಇಂಡೋ-ವೆಸ್ಟರ್ನ್ ಔಟ್ಫಿಟ್ಗಳು ಮಾತ್ರ ಲಭ್ಯವಿದ್ದವು. ಆದರೆ, ಈಗ ಸೀರೆಗಳನ್ನು ಸಹ ವಿಶೇಷ ಡಿಸೈನ್ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ರೆಡ್ ಕಾರ್ಪೆಟ್ ಸ್ಟುಡಿಯೋ ಉದ್ಘಾಟನೆ ಮತ್ತೊಂದು ಹೊಸ ಅಧ್ಯಾಯಕ್ಕೆ ಚಾಲನೆ ನೀಡಿದೆ!

ಮಹಿಳೆಯರಿಗೆ ಅವರ ಕನಸಿಗೆ ತಕ್ಕ ಹಾಗೆ, ಅವರ ಆಸೆಗಳಿಗೆ ಬಣ್ಣ ಹಚ್ಚುವ ಹಾಗೆ, ವಿಶೇಷವಾಗಿ ಸೀರೆಗಳನ್ನು ಡಿಸೈನ್ ಮಾಡಲಾಗುತ್ತದೆ ಎಂದು ಖುದ್ದು ಪವಿತ್ರಾ ಗೌಡ ತಿಳಿಸಿದ್ದಾರೆ. ಈ ಎಲ್ಲಾ ಆಕರ್ಷಣೆಗಳ ಜೊತೆಗೆ ರೆಡ್ ಕಾರ್ಪೆಟ್ ಸ್ಟುಡಿಯೋಸ್ ಮತ್ತೆ ರೀಲಾಂಚ್ ಆಗಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಜನರಿಗೆ ಆಹ್ವಾನ ಇರಲಿಲ್ಲ ಎನ್ನಲಾಗಿದ್ದು, ಪವಿತ್ರಾ ಗೌಡ ಅವರ ಆಪ್ತರು ಮಾತ್ರ ಇದರಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಹೋಮ, ವಿಶೇಷ ಪೂಜೆ ಇದೆಲ್ಲವನ್ನು ಮಾಡಿಸಿ, ಸ್ಟುಡಿಯೋ ರೀ ಲಾಂಚ್ ಮಾಡಲಾಗಿದೆ. ಇದೆಲ್ಲವೂ ಒಂದು ಕಡೆಯಾದರೆ ಸ್ಟುಡಿಯೋ ರೀ ಲಾಂಚ್ ಕಾರ್ಯಕ್ರಮಕ್ಕೆ ಪವಿತ್ರಾ ಗೌಡ ಬಂದಿದ್ದು ಇನ್ನೊಂದು ವಿಶೇಷ, ಪವಿತ್ರಾ ಗೌಡ ಎಂಟ್ರಿ ಕೊಟ್ಟಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಆ ರೀತಿ ಬರುತ್ತಾರೆ ಎಂದು ಯಾರು ಕೂಡ ಭಾವಿಸಿರಲಿಲ್ಲ. ಅಷ್ಟರ ಮಟ್ಟಿಗೆ ಬಂದಿದ್ದಾರೆ ಪವಿತ್ರಾ ಗೌಡ.
ಈ ಬಾರಿ ರೆಡ್ ಕಾರ್ಪೆಟ್ ಸ್ಟುಡಿಯೋ ರೀ ಲಾಂಚ್ ಕಾರ್ಯಕ್ರಮಕ್ಕೆ ಪವಿತ್ರಾ ಗೌಡ ಬಂದು ಇಳಿದಿದ್ದು, ರೇಂಜ್ ರೋವರ್ ಕಾರ್ ನಲ್ಲಿ. ಇದು ಅತ್ಯಂತ ದುಬಾರಿ ಕಾರ್ ಗಳಲ್ಲಿ ಒಂದು. ಕನ್ನಡದ ಕೆಲವೇ ಸ್ಟಾರ್ ಗಳ ಬಳಿ ಮಾತ್ರ ರೇಂಜ್ ರೋವರ್ ಕಾರ್ ಇದೆ. ಇದೀಗ ಪವಿತ್ರಾ ಗೌಡ ಸಹ ಇದೇ ಕಾರ್ ನಲ್ಲಿ ತಮ್ಮ ಸ್ಟುಡಿಯೋ ರೀ ಲಾಂಚ್ ಕಾರ್ಯಕ್ರಮಕ್ಕೆ ಬಂದಿರುವುದು ಎಲ್ಲರೂ ಬಾಯಿ ಮೇಲೆ ಬೆರಳು ಇಡುವ ಹಾಗೆ ಮಾಡಿದೆ. ಈ ರೀ ಲಾಂಚ್ ಕಾರ್ಯಕ್ರಮವನ್ನು ಫೆಬ್ರವರಿ 16ರಂದು ದರ್ಶನ್ ಅವರ ಹುಟ್ಟುಹಬ್ಬದ ದಿವಸ ಮಾಡಬಹುದು ಎಂದು ಎಲ್ಲರೂ ಭಾವಿಸಿದ್ದರು, ಆದರೆ ಪವಿತ್ರಾ ಗೌಡ ಉಲ್ಟಾ ಹೊಡೆದು, ಎರಡು ದಿನಗಳ ಮೊದಲೇ, ಪ್ರೇಮಿಗಳ ದಿನದಂದು ರೀಲಾಂಚ್ ಮಾಡಿದ್ದಾರೆ.