ಈ ಬಾರಿಯ ಬಿಗ್ ಬಾಸ್ “ಸೀಸನ್ 9” ರೋಚಕ ಟ್ವಿಸ್ಟ್ ನೀಡುತ್ತಾ.ಕಾರಣ ಈ ಬಾರಿಯ ವಿಬ್ಬಿನ್ನತೆ.ಕಳೆದ ಎಲ್ಲಾ ಸೀಸನ್ ಗಳಿಗಿಂತಲು ಬಹಳಷ್ಟು ವಿಶೇಷತೆಗಳನ್ನು ಹೊತ್ತು ಈ ಸೀಸನ್ ಶುರುವಾಗಿತ್ತು.ಈ ಸೀಸನ್ ಶುರುವಿನಲ್ಲಿ ಎಷ್ಟು ಹೈಪ್ ಪಡೆದುಕೊಂಡಿತ್ತು ಎಂದರೆ ತಪ್ಪಾಗಲಾರದು.ಮೊದಲ ಓಟಿಟಿಯಲ್ಲಿ ಆರಂಭಿಸಿದ ಮೊದಲ ಸೀಸನ್ ಕೂಡ ಭರ್ಜರಿ ಶುರು ಪಡೆದುಕೊಂಡು ಜನರಿಂದ ಅರ್ಹತೆ ಪಡೆದ ನಾಲ್ಕು ಮಂದಿಯನ್ನು ಅಯ್ಕ ಮಾಡಿ ದೊಡ್ಡ ಮನೆಯ ಪ್ರವೇಶ ಮಾಡಿದ್ದಾರೆ.ಅವರೊಟ್ಟಿಗೆ ಕಳೆದ ಸೀಸನ್ ಗಳಲ್ಲಿ ಉತ್ತಮ ಸ್ಪರ್ದಿಗಳಾಗಿದ್ದವರನ್ನು 5 ಮಂದಿಯನ್ನು ಆಯ್ಕೆ ಮಾಡಿ ಸೀಸನ್ 9ರ ಸ್ಪರ್ದಿಗಳಾಗಿದ್ದಾರೆ.

ಇನ್ನು ನವೀನರ ಪ್ರವೀಣರ ಆಟ ಶುರುವಾಗಿ 7ವಾರಗಳು ಮುಗಿದಿದೆ.ಅರ್ಧ ಪ್ರಯಾಣ ಮುಗಿಸಿರುವ ದೊಡ್ಡ ಮನೆ ಮತ್ತಷ್ಟು ಟ್ವಿಸ್ಟ್ ಗಳ ಮದ್ಯೆ ದೊಡ್ಡ ಮನೆ ಸ್ಪರ್ದಿಗಳು ಮಿಶ್ರ ಅಭಿಪ್ರಾಯಗಳನ್ನು ಹೊತ್ತು ಪಯಣ ನಡೆಸುತ್ತಿದ್ದಾರೆ.ಈಗ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಿಗ್ ಬಾಸ್ ಮಧ್ಯದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಹಾಗೂ ಮಿಡ್ ವೀಕ್ ಎಲಿಮಿನೇಷನ್ ಇದ್ದೆ ಇರುತ್ತದೆ.ಇದೀಗ ಮನೆ ಮಂದಿ ಮಿಡ್ ವೀಕ್ ಎಲಿಮಿನೇಷನ್ ಭಯದಲ್ಲಿ ಇದ್ದಾರೆ.
ಹೀಗೆ ಸಾಕಷ್ಟು ಟ್ವಿಸ್ಟ್ ಗಳನ್ನು ನೀಡುತ್ತಾ ದಿನದಿಂದ ದಿನಕ್ಕೆ ಕುತೂಹಲವನ್ನು ಹೆಚ್ಚಿಸುತ್ತಿದೆ.ಇನ್ನು ಟಾಸ್ಕ್ ಮುಕಾಂತರವು ಕೂಡ ದೊಡ್ಡ ಮನೆ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡುತ್ತಿದೆ.ಈ ಹಿಂದೆ ಮನೆ ಮಂದಿ ಮನೋರಂಜನೆಯಲ್ಲಿ ಹಿಂದೆ ಬಿದ್ದಿದ್ದರು.ಆದರೆ ದಿನ ಕಳೆಯುತ್ತಿದ್ದಂತೆ ಸ್ಪರ್ದಿಗಳನ್ನು ಸ್ವತಹ ಅವರೇ ಮನೋರಂಜನೆ ನೀಡುವಂತಹ ಚಾಲೆಂಜ್ ಗಳನ್ನು ಬಿಗ್ ಬಾಸ್ ನೀಡುತ್ತಿದ್ದಾರೆ. ಇನ್ನು ಕಳೆದ ಭಾನುವಾರ ಸುದೀಪ್ ಅವರು ರಾಜಣ್ಣ ಅವರಿಗೆ ಟಾಸ್ಕ್ ನೀಡಿದ್ದರು.ಅದರ ಅನುಸಾರದಂತೆ ಎಂದು ಅಡುಗೆ ಮನೆಗೆ ಕಾಲೇ ಇಡದ “ರಾಜಣ್ಣ” ಸ್ವತಹ ಅವರೇ ನಾಳಿನ ಅಡುಗೆ ಮಾಡುಬೇಕು ಹಾಗೂ ಯಾರ ಸಹಾಯವೂ ತೆಗೆದುಕೊಳ್ಳುವಂತಿಲ್ಲ ಎಂದು ಹೇಳಲಾಗುತ್ತು.
ಅವರ ಮಾತಿನಂತೆ ಬೆಳಿಗ್ಗೆ ಎದ್ದ ಕೂಡಲೇ ದಿನ ಶುರು ಮಾಡುವ ಚಹಾಯಿಂದ ಪ್ರಾರಂಭವಾಗುವ ತಯಾರಿ ಮಾಡಲು ರಾಜಣ್ಣ ಅಡುಗೆಮನೆ ಪ್ರವೇಶ ಮಾಡುತ್ತಾರೆ.ಎಲ್ಲರಿಗೂ ಕುತೂಹಲದ ಜೊತೆಗೆ ಭಯವೂ ಕೊಡ ಆರಂಭವಾಯಿತು.ಇದಕ್ಕೆ ಕಾರಣ ರಾಜಣ್ಣ ಅವರು ಒಲೆ ಹತ್ತಿಸಿದ ರೀತಿ.ಲೈಟರ್ ಹಿಡಿದು ಒಲೆ ಹಟ್ಟಿಸುತ್ತಿದ್ದಂತೆ ದಡ್ ಯೆಂದು ಹಿಂದಕ್ಕೆ ಜಿಗಿಯುತ್ತಾರೆ.ಅದನ್ನು ನೋಡಿದ ಮನೆ ಮಂದಿ ಎಲ್ಲರ ಮುಖದಲ್ಲೂ ನಗುವಿನ ಜೊತೆಗೆ ಭಯ ಕೊಡ ಆರಂಭವಾಗುತ್ತದೆ.ಇನ್ನು ಅರ್ಧದಷ್ಟು ಪ್ರಯಾಣ ಬಾಕಿ ಇದೆ.ಇವರ ಅಡುಗೆ ತಿಂದು ಹೆಚ್ಚು ಕಮ್ಮಿ ಯಾದರೆ ಏನಪ್ಪಾ ಗತಿ ಎಂದು ರಾಜಣ್ಣ ಅವರ ಕಲೆಳೆಯುತ್ತಾರೆ.
ಒಂದು ಗೆಸ್ ವರ್ಕ್ ನಲ್ಲಿಯೇ ಬೆಳಗಿನ ಉಪಹಾರಕ್ಕೆ ಚಪಾತಿ ಟೊಮ್ಯಾಟೋ ಗೊಜ್ಜು ಹಾಗೂ ರಸಂ ಮತ್ತು ಅನ್ನ ಮಾಡುತ್ತಾರೆ.ಭಯದಿಂದ ತಿಂದ ಮನೆ ಮಂದಿ ಚೆನ್ನಾಗಿದೆ ಎಂದು ತಿಳಿಸುತ್ತಾರೆ.ಇನ್ನು ಸುದೀಪ್ ಅವರು ಹೇಳಿದಂತೆ ತಾವು ‘ಕಾವ್ಯ’ ಅವರಿಗೆ ತಿನ್ನಿಸಿ ಆಮೇಲೆ ಊಟ ಮಾಡಬೇಕು ಎಂದು ಹೇಳಿದ್ದರು.ಹಾಗೆಯೇ ರಾಜಣ್ಣ ಅವರು ಕೂಡ ನಡೆದುಕೊಂಡರು.ಇನ್ನು ಮೊದಲ ಅಡುಗೆಯನ್ನು ಕ್ಯಾಮರಾ ಮುಂದೆ ಬಂದು ತೋರಿಸಿ ಧನ್ಯವಾದಗಳು ಕೊಡ ತಿಳಿಸುತ್ತಾರೆ.ಆ ದಿನ “ಸುದೀಪ” ಅವ್ರು ಕೊಟ್ಟ ಟಾಸ್ಕ್ ಮುಗಿದ ನಂತರ ಎಲ್ಲರಲ್ಲೂ ನನ್ನಿಂದ ಅಥವಾ ನಾನು ಮಾಡಿದ ಅಡುಗೆಯಿಂದ ಯಾರಿಗಾದರೂ ಬೇಸರ ತಂದಿದ್ದರೆ ಕ್ಷಮೆ ಇರಲಿ ಎಂದು ಕೊಡ ಹೇಳುತ್ತಾರೆ. ಅದಕ್ಕೆ ರಾಜಣ್ಣ ನೀವು ಮಾಡಿದ ಚೆನ್ನಾಗೇ ಇತ್ತು ಎಂದು ಮನೆ ಮಂದಿ ಕೂಡ ಪ್ರಶಂಶಿಸಿದ್ದಾರೆ.



