ಇಂದು ಸಿಎಂ ಸಿದ್ದರಾಮಯ್ಯ ದಾಖಲೆಯ ಅಂದರೆ 16 ನೇ ಬಜೆಟ್ ಮಂಡಿಸಿದ್ದಾರೆ. ಮಂಡಿ ನೋವಿನ ಹಿನ್ನೆಲೆ ಕುಳಿತುಕೊಂಡು ಬಜೆಟ್ ಮಂಡನೆ ಮಾಡಿದ್ದಾರೆ. ಬೆಳಿಗ್ಗೆ 10:15 ಕ್ಕೆ ಬಜೆಟ್ ಓದಲು ಸಿಎಂ ಪ್ರಾರಂಭ ಮಾಡಿದರು. ಬಜೆಟ್ ಮಂಡನೆಗೂ ಮುನ್ನ ವಿಧಾನಸೌಧದಲ್ಲಿ 9:30 ಕ್ಕೆ ವಿಶೇಷ ಸಚಿವ ಸಂಪುಟ ಸಭೆ ನಡೆಸಿ, ಸಭೆಯಲ್ಲಿ ಬಜೆಟ್ ಗೆ ಅನುಮೋಧನೆ ಪಡೆದರು. ಇನ್ನು ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಗೆ ವಿರೋಧ ಪಕ್ಷಗಳು ಸಾಲದ ಬಜೆಟ್ ಇದು ಅಂತ ವ್ಯಾಖ್ಯಾನ ಮಾಡುತ್ತಿವೆ.

ಸಿದ್ದರಾಮಯ್ಯ ಬಜೆಟ್ ಮಂಡನೆ ವಿಚಾರವಾಗಿ ಇಂದು ವಿಧಾನಸೌಧದಲ್ಲಿ ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್ ಮಾತನಾಡಿ, ದಾಖಲೆಯ ಬಜೆಟ್ ಅಂತ ಸಾಲದ ಬಜೆಟ್ ಮಂಡಿಸಿದ್ದಾರೆ. ೧.೧೬ ಸಾವಿರ ಕೋಟಿ ಸಾಲ ಮಾಡಿದ್ದಾರೆ. ನಾನು ದಾಖಲೆಯ ಬಜೆಟ್ ಮಂಡನೆ ಮಾಡ್ತಾ ಇದ್ದೀನಿ ಅಂತ ಹೇಳ್ತಾರೆ. ಯಾವುದೇ ಮೂಲಭೂತ ಸೌಕರ್ಯ ಕೊಡೋದ್ರಲ್ಲಿ ವಿಫಲರಾಗಿದ್ದಾರೆ. ನಮಗೆ ನಿರಾಸೆ ಮೂಡಿಸಿದೆ. ಎರಡನೆಯದು ಆರ್ಥಿಕತೆಯಲ್ಲಿ ವಿಭಜನೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಸಮಾಜ ವಿಭಜನೆ ಮಾಡಿದ್ರುಆರ್ಥಿಕ ವಿಭಜನೆ ಮಾಡಿದ್ದಾರೆ. ಇವತ್ತು ಎರಡು ಕೋಟಿ ಗುತ್ತಿಗೆಯಲ್ಲಿ,ಒಂದು ಕೋಟಿ ಸರ್ಕಾರಿ ಖರೀದಿಯಲ್ಲಿ ಮುಸ್ಲಿಂಮರಿಗೆ ಮೀಸಲಾತಿ ನೀಡಿ ಆರ್ಥಿಕ ವಿಭಜನೆಗೆ ಹೊರಟಿದೆ. ಗ್ರಾಮ ಗ್ರಾಮಗಳಲ್ಲಿ ವಿಭಜನೆ ಮಾಡುವ ಕೆಲಸವನ್ನು ಸಿದ್ದರಾಮಯ್ಯರಿಂದ ನಾವು ನಿರೀಕ್ಷೆ ಮಾಡಿರಲಿಲ್ಲ. ನೀವು ನಕ್ಸಲ್ ಮುಕ್ತ ಆಯ್ತು ಅಂತ ಯಾವ ರೀತಿ ಖಾತ್ರಿ ಮಾಡಬೇಕಾಗಿತ್ತು.
ಇದಕ್ಕೆ ಖಾತ್ರಿಯನ್ನ ರಾಜ್ಯ ಸರ್ಕಾರ ಕೊಡಬೇಕಿತ್ತು.ಅದರೆ ರಾಜ್ಯ ಸರ್ಕಾರ ಯಾವುದೇ ಖಾತ್ರಿ ಕೊಟ್ಟಿಲ್ಲ ಅಂತ ಕಿಡಿ ಕಾರಿದ್ದಾರೆ.

ಇನ್ನು ಸಿಎಂ ಬಜೆಟ್ ವಿಚಾರವಾಗಿ ಮಾತನಾಡಿದ ಶಾಸಕ ಯತ್ನಾಳ್, ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರು ಅತಿ ಹೆಚ್ಚು ಬಜೆಟ್ ಮಂಡಿಸಿದ ಖ್ಯಾತಿ ಇದೆ. ಇದು ಬರೀ ಜಮೀರ್ ಅಹಮದ್ ಖಾನ್, ಪಾಕಿಸ್ತಾನದ ಬಜೆಟ್ ಆಗಿದೆ. ದಲಿತರಿಗೆ ಯಾವುದೇ ಯೋಜನೆ ಇಲ್ಲ. ಮುಸ್ಲಿಂ ಹೆಣ್ಣುಮಕ್ಕಳ ಆತ್ಮ ರಕ್ಷಣೆಗೆ ತರಬೇತಿ ಕೊಟ್ಟು, ಕೋಮು ಗಲಭೆ ಮಾಡೋದು ಇವರ ಪ್ಲಾನ್. ಕೃಷ್ಣಾ ನೀರಾವರಿಗೆ ಹಣ ಇಟ್ಟಿಲ್ಲ. ನೀರಾವರಿ ಯೋಜನೆ ಪ್ರಸ್ತಾಪ ಮಾಡಿಲ್ಲ. ಗ್ಯಾರಂಟಿ ಯೋಜನೆಗೆ 2025-26ಕ್ಕೆ 1ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಸಾಲ ಮಾಡಿ ಅಲ್ಪಸಂಖ್ಯಾತರಿಗೆ ಮೀಸಲಿಟ್ಟಿದ್ದಾರೆ. ಅಲ್ಪ ಅಂಖ್ಯಾತರಿಗೆ ಕೊಟ್ಟಿರುವಷ್ಟು, SC, ST ಗಳಿಗೆ ಕೊಟ್ಟಿಲ್ಲ. ಇದು ನಾಲ್ಕು ತಾಸು ಬೇಕು ಬಜೆಟ್ ಓದಲು. ಕೇಂದ್ರದ ಬಜೆಟನ್ನ ಕೇವಲ ಒಂದು ಗಂಟೆಯಲ್ಲಿ ದೇಶದ ಬಜೆಟ್ ಮುಗಿಸಿದ್ದಾರೆ. ಸಿದ್ದರಾಮಯ್ಯ ಅವರು ಇನ್ನೂ ಓದುತ್ತಲೇ ಇದ್ದಾರೆ. ಕಲ್ಯಾಣ ಕರ್ನಾಟಕಕ್ಕೆ 5 ಸಾವಿರ ಕೋಟಿ ಕೊಟ್ಟಿದ್ದಾರೆ. ವಕ್ಫ್ ಆಸ್ತಿ ಕಾಂಪೌಂಡ್ ಕಟ್ಟಲು 150 ಕೋಟಿ ಕೊಟ್ಟಿದ್ದಾರೆ. ಇದು ಸಂಪೂರ್ಣ ಸಿದ್ದರಾಮಯ್ಯ ಅವರ ನಿರ್ಗಮನ ಬಜೆಟ್ ಆಗಿದೆ ಎಂದು ವ್ಯಂಗ್ಯವಾಡಿದರು.

ಇನ್ನು ಈ ಕುರಿತು ಎಕ್ಸ್ ಖಾತೆ ಮೂಲಕ ಬಜೆಟ್ ಅನ್ನ ಟೀಕಿಸಿದ್ದಾರೆ ವಿಜಯೇಂದ್ರ,
ಹಣಕಾಸು ಖಾತೆಯನ್ನು ಹೊತ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ರಾಜ್ಯದ ಜನತೆಯ ನಿರೀಕ್ಷೆಯನ್ನು ಹುಸಿ ಮಾಡಿದೆ. ನಿಖರ ಭರವಸೆ ನೀಡುವ ಯೋಜನೆ ಹಾಗೂ ಅದಕ್ಕೆ ಅನುದಾನ ಪ್ರಕಟಿಸದೆ ಆಕರ್ಷಕ ಕಾರ್ಯಕ್ರಮಗಳನ್ನು ಘೋಷಿಸೋ, ಜನರ ಮೂಗಿಗೆ ತುಪ್ಪ ಸವರಲು ಹೊರಟಿದ್ದಾರೆ. ಅಲ್ಪಸಂಖ್ಯಾತರ ಹೆಸರಿನಲ್ಲಿ ಮುಸ್ಲಿಂ ಸಮುದಾಯವನ್ನು ಓಲೈಸಲು ಒತ್ತು ನೀಡಿರುವ ಬಜೆಟ್. ಶಿಕ್ಷಣದ ಕ್ಷೇತ್ರದ ಸಮಗ್ರ ಅಭಿವೃದ್ಧಿ ಬಗ್ಗೆ ಯಾವುದೇ ಕೊಡುಗೆ ನೀಡಿಲ್ಲ. ಉದ್ಯೋಗ ಸೃಷ್ಟಿಗೆ ಅವಕಾಶವಿರುವ ಕೈಗಾರಿಕೆಗಳಿಗೆ ಉತ್ತೇಜನವೇ ಇಲ್ಲ ಎಂದಿದ್ದಾರೆ.

ಇನ್ನು ಇಡೀ ಬಜೆಟ್ ನ ಅಲ್ಪಸಂಖ್ಯಾತರಿಗೆ ಮೀಸಲಿಡಲಾಗಿದೆ ಅಂತ ಬಿಜೆಪಿ ಕಿಡಿ ಕಾರುತ್ತಿದೆ. ಇದರ ಮಧ್ಯೆ ಸಚಿವರುಗಳು ಬಿಜೆಪಿ ನಾಯಕರಿಗೆ ತಿರುಗೇಟು ನೀಡುತ್ತಿದ್ದಾರೆ. ದಾಖಲೆ ಬಜೆಟ್ ಅನ್ನ ಸಿಎಂ ಮಂಡಿಸುತ್ತಿದ್ದಾರೆ. ಹೀಗಾಗಿ ಇವರಿಗೆಲ್ಲ ಹೊಟ್ಟೆ ಉರಿ ಅಷ್ಟೆ. ಎಲ್ಲಾ ವರ್ಗದವರಿಗೂ ಈ ಬಜೆಟ್ ಅನುಕೂಲ ಅಂತ ಬಜೆಟ್ ಸಮರ್ಥನೆ ಮಾಡಿಕೊಂಡಿದ್ದಾರೆ.