ಜೆಡಿಎಸ್ ನಲ್ಲಿ ಈಗ ತಾಳ ತಂತಿ ಎರಡು ಇಲ್ವಾ ಅನ್ನುವಂತಹದೊಂದು ಪ್ರಶ್ನೆ ಕಾರ್ಯಕರ್ತರಲ್ಲೇ ಮೂಡಿದಂತಿದೆ. ಯಾವಾಗ ಕುಮಾರಸ್ವಾಮಿ ಕೇಂದ್ರ ಸಚಿವರಾದ್ರು ಅಂದಿನಿಂದಲೂ ಕೂಡ ರಾಜ್ಯ ರಾಜಕಾರಣ, ರಾಜ್ಯದ ಜೆಡಿಎಸ್ ಕಾರ್ಯಕರ್ತರುಗಳನ್ನ ಮಾತನಾಡಿಸುವವರೇ ಇಲ್ಲ ಅನ್ನುವಂತಾಗಿದೆ. ಅಷ್ಟೇ ಅಲ್ಲ ಒಂದು ರೀತಿ ಕಾರ್ಯಕರ್ತರೆಲ್ಲರೂ ಕೂಡ ತಾಯಿ ಇಲ್ಲದ ತಬ್ಬಲಿಯಾದಂತೆ ಆಗಿರೋದು ಕೂಡ ನಿಜ. ನಿಖಿಲ್ ಏನೇ ಹೇಳಿದ್ರು ಕೂಡ, ಎಷ್ಟೇ ಭರವಸೆ ನೀಡಿದರೂ, ಕಾರ್ಯಕ್ರಮಗಳಲ್ಲಿ ಕಾರ್ಯಕರ್ತರ ಜೊತೆ ನಿಂತರೂ ಕೂಡ ಕುಮಾರಸ್ವಾಮಿ ನಿಂತಂಗೆ ಆಗುವುದಿಲ್ಲ ಅನ್ನೋದು ಅನೇಕ ಕಾರ್ಯಕರ್ತರ ಮಾತು.
ಇದೆಲ್ಲದರ ಮಧ್ಯೆ ಆಗಿಂದಾಗಲೇ ಕುಮಾರಸ್ವಾಮಿ ಅವರ ಆರೋಗ್ಯ ಕೂಡ ಏರುಪೇರು ಆಗ್ತಾ ಇದೆ. ದೆಹಲಿಯ ವಾತಾವರಣ ಅವರಿಗೆ ಸೆಟ್ ಆಗ್ತಿಲ್ಲ ಅನ್ನುವಂತಹದ್ದು ಕೂಡ ಅನೇಕರ ಮಾತು. ಸದ್ಯ ರಾಜ್ಯ ರಾಜಕಾರಣದಿಂದ ಒಂದೆಡೆ ಕುಮಾರಸ್ವಾಮಿಯವರಿಗೆ ಯಾಕಾದ್ರೂ ಕೇಂದ್ರ ಸಚಿವ ಆದೆ ಅನ್ನುವಂತಹ ಒಂದೇ ಒಂದು ಅನಿಸಿಕೆ ಬಂದಿರೋದಂತು ಸುಳ್ಳಲ್ಲ. ಕುಮಾರಸ್ವಾಮಿ ದೇವೇಗೌಡರು ಇದ್ದರೆ ಮಾತ್ರ ಪಕ್ಷ ಅನ್ನುವಂತಹ ರೀತಿಯಲ್ಲಿಯೇ ಜೆಡಿಎಸ್ ನ ಪ್ರಸ್ತುತ ಸ್ಥಿತಿ.
ರಾಜ್ಯದಲ್ಲಿ ಅನೇಕ ರಾಜಕೀಯ ಬೆಳವಣಿಗೆ ಆದರೂ, ಸದನದಲ್ಲಿ ಸರ್ಕಾರದ ವೈಫಲ್ಯಗಳನ್ನು ಎದ್ದು ನಿಂತು ಮಾತನಾಡುತ್ತಿದ್ದ ಕುಮಾರಸ್ವಾಮಿ ಈಗ ಕೇಂದ್ರಕ್ಕೆ ಸೀಮಿತ ಆಗಿರೋದಂತೂ ನಿಜ. ಈಗ ಪಕ್ಷದ ಅಳಿವು ಉಳಿವಿನ ಪ್ರಶ್ನೆ ಎದ್ದಿದೆ. ಮಗ ಕೇಂದ್ರದ ಕಡೆ ಮುಖ ಮಾಡಿದ್ದರೆ, ಮತ್ತೊಬ್ಬ ಮಗನ ಕುಟುಂಬದ ಕಾನೂನು ಹೋರಾಟದಲ್ಲಿ ಮುಳುಗಿದೆ. ಇದರ ಮಧ್ಯೆ ಪಕ್ಷದ ಕಾರ್ಯಕರ್ತರಿಗೆ ಬಲ ತುಂಬಲೇಬೇಕಾದ ಅನಿವಾರ್ಯತೆ ದೇವೇಗೌಡರ ಮೇಲೆ ಇದೆ. ಹೀಗಾಗಿ ಈ ಇಳಿ ವಯಸ್ಸಿನಲ್ಲೂ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಲೇ ಇದ್ದಾರೆ.

ಇದರ ಮುಂದುವರೆದ ಭಾಗವಾಗಿ ಈಗ ಕುಮಾರಸ್ವಾಮಿ ಅವರಿಗೆ ಕೇಂದ್ರ ಮಂತ್ರಿ ಸ್ಥಾನದ ಜವಬ್ದಾರಿ ಇದ್ದರೂ ರಾಜ್ಯದ ಪಕ್ಷದ ಜವಬ್ದಾರಿಯನ್ನೂ ಮೊದಲಿನ ಹಾಗೆ ತೆಗೆದಯಕೊಂಡು ಹೋಗುವ ಅವಶ್ಯಕ ಕೆಲಸ ಇರೋದ್ರಿಂದ ರಾಜ್ಯದಲ್ಲಿ ಸಭೆ, ಸಮಾವೇಶ ಮಾಡಲು ಮುಂದಾಗುತ್ತಿದ್ದಾರೆ. ಪಕ್ಷದಲ್ಲಿ ಆಗುತ್ತಿರುವ ಒಡಕುಗಳನ್ನ ಸರಿ ಮಾಡಿಕೊಂಡು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡ ಹೋಗಬೇಕಾದಂತಹ ಅನಿವಾರ್ಯತೆಯು ಅವರ ಮುಂದಿನ ಶಾಸಕರು ಮಾಜಿ ಶಾಸಕರುಗಳ ಸಭೆಯು ದೇವೇಗೌಡರು ಸೂಚನೆ ನೀಡಿದಂತಿದೆ.
ಈ ಬಗ್ಗೆ ಇಂದು ಮಾತನಾಡಿರಯವ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು, ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗಿದೆ. ಈಗ ಅವರು ಚೆನ್ನಾಗಿದ್ದಾರೆ. ಅವರು ಸಕ್ರಿಯ ಕಾರ್ಯಕ್ರಮಗಳನ್ನ ಮಾಡಲು ಒಂದು ದಿನಾಂಕ ನಿಗದಿ ಮಾಡಲು ಹೇಳಿದ್ದೇನೆ. ನಮ್ಮೆಲ್ಲಾ ಪಕ್ಷದ ಶಾಸಕರು ಮಾಜಿ ಶಾಸಕರು ರಾಜ್ಯಾದ್ಯಂತ ಮುಖಂಡರುಗಳನ್ನು ಕರೆಸಿ ಒಂದು ಸಭೆ ಮಾಡಲು ನಿರ್ಧಾರ ಮಾಡಿದ್ದಾರೆ. ಬಳಿಕ ಬೃಹತ್ ಸಭೆ ಮಾಡಲು ತೀರ್ಮಾನ ಮಾಡಿದ್ದೇವೆ. ಈ ಮೂಲಕ ಪಕ್ಷದ ವರ್ಧನೆ ಕಾರ್ಯಕರ್ತರಲ್ಲಿ ಬಲ ತುಂಬುವಂತಹ ಕೆಲಸ ಆಗಬೇಕಿದೆ ಎಂದಿದ್ದಾರೆ.
ಇದೆಲ್ಲದರ ಮತ್ತೆ ಪಕ್ಷದಿಂದ ಹೊರ ಹೋಗಿರುವ ಸಿಎಂ ಇಬ್ರಾಹಿಂ ಮೂರನೇ ಶಕ್ತಿಯನ್ನು ಮಾಡೋದಿಕ್ಕೆ ಮುಂದಾಗಿದ್ರು. ಜೆಡಿಎಸ್ ನಿಂದ ಕೆಲವು ಕಹಿ ಅನುಭವಗಳನ್ನು ಅನುಭವಿಸಿದ ಬಳಿಕ ರಾಜ್ಯದಲ್ಲಿ ಜೆಡಿಎಸ್ ಒಂದೇ ಅಲ್ಲ ಪ್ರಾದೇಶಿಕ ಪಕ್ಷಗಳು ಹೆಚ್ಚಾಗಬೇಕು ಅಂತ ಒಂದಿಷ್ಟು ಪ್ಲಾನ್ ಗಳನ್ನು ಮಾಡಿದ್ದಂತು ನಿಜ. ಈ ಬಗ್ಗೆ ಮಾತನಾಡಿರುವವರು ಅವರು, ಕೋಡಿಹಳ್ಳಿ ಮಾರ್ಸಂದ್ರ ಮುನಿಯಪ್ಪ ಎಲ್ಲರೂ ಸೇರಿ ಮೂರನೇ ಶಕ್ತಿ ಮಾಡೋಕೆ ಹೊರಟಿದ್ದೇವೆ. ಪ್ರಾದೇಶಿಕ ಪಕ್ಷ ಸ್ಥಾಪನೆಗೆ ರಾಜ್ಯದ್ಯಂತ ಪ್ರವಾಸ ಮಾಡುತ್ತಿದ್ದೇವೆ. ಎರಡು ತಿಂಗಳಲ್ಲಿ ಹೊಸ ಪಕ್ಷ ಘೋಷಿಸುತ್ತೇವೆ. ಜೆಡಿಎಸ್ ಗೆದ್ದ ಕಡೆ ಮುಸ್ಲಿಂ ವೋಟ್ ಕೊಟ್ಟಿದ್ರು ರಾಜ್ಯದಲ್ಲಿ ಜೆಡಿಎಸ್ ಭವಿಷ್ಯ ಕಷ್ಟ ಇದೆ. ಜೆಡಿಎಸ್ ಗೆ ಬಿಜೆಪಿ ಭಾರವಾಗಿದೆ. ಅವರಿಗೆ ಇವರನ್ನ ಇಟ್ಟುಕೊಳ್ಳುವ ಮನಸ್ಥಿತಿ ಇಲ್ಲ ಬಿಜೆಪಿಗೆ ಜೆಡಿಎಸ್ ಉಪಯೋಗವಿಲ್ಲ ಎಂದಿದ್ದಾರೆ.
ಒಟ್ಟಾರೆ ಬಿಜೆಪಿ ಮೈತ್ರಿ ಬಳಿಕವೂ ಕೂಡ ಜೆಡಿಎಸ್ ಒಂಟಿ ಆಗುತ್ತಿದೆ ಅನ್ನೋದು ದೇವೇಗೌಡರ ಊಹೆ. ಯಾವತ್ತೂ ಪ್ರಾದೇಶಿಕ ಪಕ್ಷ ಹಾಗಬಾರದು ಅಂತ ತಮ್ಮ ಸ್ವಂತ ಬಲದ ಮೇಲೆ ಇದೀಗ ಮತ್ತೆ ರಾಜ್ಯದಲ್ಲಿ ಪಕ್ಷ ಉಳಿಸುವ, ಕಾರ್ಯಕರ್ತರಿಗೆ ಬಲ ತುಂಬುವ ಕೆಲಸಕ್ಕೆ ಕೈ ಹಾಕಿದ್ದಾರೆ. ಇಷ್ಟಾದ ಮೇಲೂ ಯಾವ ರೀತಿ ಇದನ್ನ ಮೊದಲಿನ ಹಾಗೆ ಸರಿದಾರಿಗೆ ತರ್ತಾರೆ ಅನ್ನೋದೆ ಕುತೂಹಲ.



