ಸದ್ಯ ಬಸನಗೌಡ ಪಾಟೀಲ್ ಯತ್ನಾಳ್ ಆಗಿಂದಗ್ಲೇ ಹೇಳಿಕೆಗಳನ್ನ ನೀಡುತ್ತಲೇ ಇರುತ್ತಾರೆ. ಆ ಹೇಳಿಕೆಗಳು ವಿವಾದಾತ್ಮಕವಾಗಿಯೂ ವೈರಲ್ ಆಗುತ್ತವೆ. ಇಂತಹ ಅನೇಕ ಉದಾಹರಣೆ ರಾಜ್ಯದ ಜನರ ಮುಂದೆ ಇದೆ. ಅದರಲ್ಲೂ ಮುಸ್ಲೀಮರ ಕುರಿತಂತೂ ಅವರ ಹೇಳಿಕೆಗಳು ಅನೇಕರ ಭಾವನೆ ಕೆರಳಿಸಿರೋದು ಕೂಡ ಇದೆ. ಈಗ ಅಂತಹದ್ದೇ ಮತ್ತೊಂದು ಹೇಳಿಕೆ ನೀಡೋ ಮೂಲಕ ಮುಸ್ಲಿಮರಷ್ಟೆ ಅಲ್ಲ ಹಿಂದೂ ಭಾವನೆ ಕೆರಳಿಸುವಂತಿದೆ.

ಏ.7 ರಂದು ಹುಬ್ಬಳ್ಳಿಯ ಬಾಣಿ ಓಣಿಯಲ್ಲಿ ನಡೆದ ರಾಮನವಮಿ ಕಾರ್ಯಕ್ರಮದಲ್ಲಿ ಯತ್ನಾಳ್ ಇಂತಹ ಹೇಳಿಕೆಯನ್ನ ನೀಡಿದ್ದಾರೆ. ಇಸ್ಲಾಂ ಧರ್ಮ ಮತ್ತು ಪ್ರವಾದಿ ಮಹಮ್ಮದ್ ಪೈಗಂಬರ್ ಬಗ್ಗೆ ಪ್ರಚೋದನಕಾರಿ ಹಾಗೂ ಅವಹೇಳನಕಾರಿ ಹೇಳಿಕೆ ನೀಡಿದ್ದು ಮುಸ್ಲೀಮರ ಭಾವನೆ ಕೆರಳಿಸಿದ್ದಾರೆ. ಈಗ ಯತ್ನಾಳ್ ವಿರುದ್ಧ ಪ್ರತಿಭಟನೆಗಳ ಕಾವು ಜೋರಾಗಿದೆ.
ಭಾಷಣದ ವೇಳೆ ದಿ.ಬಾಳಾಸಾಹೇಬ್ ಠಾಕ್ರೆ ಮನೆಯಲ್ಲಿ ಮಹಮ್ಮದ್ ಪೈಗಂಬರ್ ಹುಟ್ಟಿದ್ದಾನೆ. ಅವನು ಸಂಕರ ತಳಿ ಎಂದು ಕರೆದಿದ್ದರು. ಈ ಹೇಳಿಕೆಗೆ ದೊಡ್ಡ ಮಟ್ಟಿನ ಹೋರಾಟಗಳು ಯತ್ನಾಳ್ ವಿರುದ್ಧ ನಡೆಯುತ್ತಿವೆ. ಇಂದು ಕೂಡ ವಿಜಯಪುರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ನಗರದ ಅಂಬೇಡ್ಕರ್ ಸರ್ಕಲ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಯತ್ನಾಳ್ ವಿರುದ್ಧ ಕಿಡಿ ಕಾರಲಾಯ್ತು. ಪ್ರತಿಭಟನೆ ವೇಳೆ ಶಾಸಕ ಯಶವಂತರಾಗೌಡ ಪಾಟೀಲ್ ಮಾತನಾಡಿ, ನಗರ ಶಾಸಕ ಬಸನಗೌಡ ಪಾಟೀಲ ಅವರ ಹೇಳಿಕೆಗೆ ಇಡೀ ನಾಗರಿಕ ಸಮಾಜ ಖಂಡಿಸುತ್ತದೆ. ಪ್ರವಾದಿ ಮಹ್ಮದ ಪೈಗಂಬರ್ ಅವರ ಬಗ್ಗೆ ಇಡೀ ಪ್ರಪಂಚದಲ್ಲಿ ಭಕ್ತ ಭಾವ ಇದೆ. ಬಸನಗೌಡ ಪಾಟೀಲ ಅವರ ಹೇಳಿಕೆಗೆ ನಮ್ಮ ಧಿಕ್ಕಾರ. ಇನ್ನೊಬ್ಬರ ಮನಸ್ಸಿಗೆ ನೋವಾಗದ ಹಾಗೆ ನೀವು ಮಾತನಾಡಬೇಕು. ನಿರಂತರವಾಗಿ ನೀವು ಒಂದು ಸಮುದಾಯದ ಬಗ್ಗೆ ಮಾತನಾಡುತ್ತಿದ್ದೀರಿ ಈಗ ಪ್ರವಾದಿಗಳ ಬಗ್ಗೆ ಮಾತನಾಡಿದ್ದೀರಿ. ರಾಜಕೀಯ ಶಾಶ್ವತ ಅಲ್ಲ ಇವತ್ತು ಇರತ್ತೆ ನಾಳೆ ಹೋಗತ್ತೆ ಆದರೆ ನಾವು ಹೇಗೆ ಬಾಳಿ ಬದುಕಬೇಕು ಎಂಬುದು ಮಹತ್ವದ್ದಾಗಿದೆ. ನೀವು ಮಾತನಾಡುವ ಮಾತು ನಾಗರಿಕ ಸಮಾಜಕ್ಕೆ ಭಂಗ ತರುವ ಕೆಲಸ ವಾಗುತ್ತಿದೆ. ಮನುಷ್ಯನ ಬದುಕಿಗೆ ತೊಂದರೆ ಕೊಡುವ ಕೆಲಸ ಮಾಡಿದ್ದೀರಿ. ಬಸನಗೌಡ ಪಾಟೀಲ ಯತ್ನಾಳ ಅವರು ಬೇ ಶರತ್ತಾಗಿ ಕ್ಷೆಮೆಯಾಚಿಸಬೇಕು. ಇರದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ.

ಬಸನಗೌಡರೇ ಈ ಜನಾಂಗಕ್ಕೆ ಬೈಯ್ದರೆ ಹಿಂದುಗಳ ಮತ ಬರುತ್ತವೆ ಎಂದುಕೊಂಡಿದ್ದೀರಿ, ಅದೆಲ್ಲ ಆಗಲ್ಲ. ಪ್ರವಾದಿ ಮಹ್ಮದ ಪೈಗಂಬರ್ ಬಗ್ಗೆ ಮಾತನಾಡಿದ್ದಾರೆ, ಒಬ್ಬ ಹುಚ್ಚ ಏನೆಲ್ಲ ಮಾತನಾಡಿದ್ದಾನೆ ಎಂದು ಸುಮ್ಮನಾಗೋಣ. ಬಸನಗೌಡ ರನ್ನು ನಾನೊಬ್ಬ ಹುಚ್ಚ ಎಂದು ತಿಳಿದುಕೊಂಡಿರುವೆ.ಎಲ್ಲಿಯವರೆಗೆ ನಿಮಗೆ ನ್ಯಾಯ ಸಿಗುವದಿಲ್ಲವೋ ಅಲ್ಲಿಯವರೆಗೆ ನಿಮ್ಮ ಜೊತೆಗೆ ನಾವಿರುತ್ತೇವೆ ಎಂದಿದ್ದಾರೆ.
ಇತ್ತ ವೀರತೀಶಾಂತನಂದ ಸ್ವಾಮೀಜಿ ಕೂಡ ವೇದಿಕೆ ಮೇಲೆಯೇ ಯತ್ನಾಳ್ ಗೆ ಹಿಗ್ಗಾಮುಗ್ಗ ಬೈದಿದ್ದಾರೆ. ಈ ರೀತಿ ಹೀನಾಯವಾಗಿ ಮಾತನಾಡಿದ್ದು ಕ್ಷಮೆ ನೀಡಲು ಸಾಧ್ಯವಿಲ್ಲ. ರೈಲ್ವೇ ಮಂತ್ರಿಯಾದಾಗ ಒಂದು ಭರವಸೆ ಇತ್ತು. ಪ್ರಧಾನಿ ಆಗ್ತಾರೆ ಅಂತ ಅದೆಲ್ಲವೂ ಸುಳ್ಳು. ಬಚ್ಚಲು ಬಾಯಿ ಅನ್ನೋದು ನಿಜ ಆಯ್ತು. ಇತ್ತ ರಾಜ್ಯ ರಾಜಕಾರಣಕ್ಕೆ ಬಂದ ಇವರು ನಾನು ಮುಖ್ಯಮಂತ್ರಿ, ನಾನು ಮುಖ್ಯಮಂತ್ರಿ ಅಂತ ಹೇಳಿಕೊಂಡು ಓಡಾಡುತ್ತಿದ್ದಾರೆ. ಜನರ ನಡುವೆ ಧರ್ಮದ ನಶೆ ಹಾಕಿ ರಾಜಕಾರಣ ಮಾಡಬೇಕು ಅಂತಿದ್ದರೆ ಅದು ನಡೆಯುವುದಿಲ್ಲ. ನಿಮ್ಮ ದುರಂಕಾರ ಮಿತಿ ಮೀರಿ ಹೋಗಿದೆ. ದೇವರು ಕೂಡ ರಕ್ಷಣೆ ಮಾಡೋದಿಕ್ಕೆ ಸಾಧ್ಯವಿಲ್ಲ. ಗೌಡ್ರು ಎಂದರೆ ಇಡೀ ಊರಿಗೆ ತಂದೆ ತಾಯಿಯಾಗಿ ಇರುತ್ತಿದ್ದರು. ಎಲ್ಲರಿಗೂ ಕೂಡ ಸಹಾಯ ಮಾಡುವವರಾಗಿದ್ದರು. ಆದರೆ ಜಾತಿ ಜಾತಿಯೊಳಗೆ ಜಗಳ ಹಚ್ಚುವವರನ್ನ ಗೌಡ್ರು ಅನ್ನೋದು ಹೇಗೆ ಅಂತ ವೀರತಿಶಾಂತನಂದ ಸ್ವಾಮೀಜಿ ಬೈದಿದ್ದಾರೆ.
ಇತ್ತ ಈ ಘಟನೆ ನಡೆದು ದೂರು ನೀಡಿದ ಬಳಿಕ ನಾನು ಪ್ರವಾದಿ ಮಹಮ್ಮದ್ ಪೈಗಂಬರ್ ಬಗ್ಗೆ ಮಾತನಾಡಿಲ್ಲ. ಮಹಮ್ಮದ್ ಅಲಿ ಜಿನ್ನಾ ಬಗ್ಗೆ ಮಾತನಾಡುತ್ತಿದೆ. ಮಾತಿನ ವೇಗದಲ್ಲಿ ತಪ್ಪಾಗಿದೆ ಎಂದು ಸ್ಪಷ್ಟನೆ ನೀಡಿದ್ದರು. ಸದ್ಯ ಪೈಂಗಬರರ ಬಗ್ಗೆ ಮಾತನಾಡಿ ಆ ಸಮುದಾಯದ ಕೆಂಗಣ್ಣಿಗೆ ಯತ್ನಾಳ್ ಗುರಿಯಾಗಿರೋದಂತೂ ಸತ್ಯ



