ಸದ್ಯ ತಮ್ಮದೇ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದ ಬಿ ಆರ್ ಪಾಟೀಲ್ ಆಡಿಯೋ ಸದ್ಯ ಬಾರೀ ಕೋಲಾಹಲಕ್ಕೆ ಕಾರಣವಾಗಿತ್ತು. ಬಿ ಆರ್ ಪಾಟೀಲ್ ಯಾವಾಗ ಬಹಿರಂಗವಾಗಿ ಮಾತನಾಡಿದ್ರೋ ಕೂಡಲೇ ಅವರ ಬೆನ್ನಿಗೆ ನಿಂತ ಕೆಲವು ಶಾಸಕರು ಅವರೂ ಬಹಿರಂಗ ಹೇಳಿಕೆ ನೀಡಲು ಮುಂದಾದರು. ರಾಜು ಕಾಗೆ, ಬೇಳೂರು ಗೋಪಾಲ ಕೃಷ್ಣ ಹೀಗೆ ಅನೇಕರು ಬಹಿರಂಗವಾಗಿ ಜಮೀರ್ ವಿರುದ್ಧ ವಾಗ್ದಾಳಿ ನಡೆಸಿದ್ರು. ರಾಜಿನಾಮೆಗೂ ಕೂಡ ಆಗ್ರಹ ಮಾಡಿದ್ದರು. ಇಲ್ಲಿಯವರೆಗು ತುಟಿ ಬಿಚ್ಚದ ಜಮೀರ್ ಅಹ್ಮದ್ ಎಲ್ಲದಕ್ಕೂ ಇಂದು ಸ್ಪಷ್ಟನೆ ನೀಡಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಈಗ ವಿಪಕ್ಷಗಳ ಟೀಕೆಗಿಂತ ಆಡಳಿತ ಪಕ್ಷದ ಟೀಕೆಯೇ ಸಚಿವರಿಗೆ ನುಂಗಲಾರದ ತುತ್ತಾಗಿದೆ. ತಮ್ಮದೇ ಶಾಸಕರು ಸರ್ಕಾರದ ವಿರುದ್ಧ ಬೀದಿಯಲ್ಲಿ ನಿಂತು ಹೇಳಿಕೆ ನೀಡ್ತಾ ಇರೋದು ಸಾಕಷ್ಟು ಆಕ್ರೋಶಕ್ಕೂ ಕಾರಣವಾಗಿದೆ. ಅಷ್ಟೆ ಯಾಕೆ ವಿಪಕ್ಷಕ್ಕೂ ಆಹಾರವಾಗಿದೆ. ವಸತಿ ಸಚಿವ ಜಮೀರ್ ಅಹ್ಮದ್ ಮೇಲಂತೂ ಒಬ್ಬರಲ್ಲೊಬ್ಬ ಶಾಸಕರು ಮುಗಿಬೀಳುತ್ತಿದ್ದಾರೆ. ಇತ್ತೀಚೆಗೆ ಬಿ ಆರ್ ಪಾಟೀಲ್ ರ ಆಡಿಯೋ ಒಂದು ವೈರಲ್ ಆದ ಬಳಿಕ ಸಾಕಷ್ಟು ಬೆಳವಣಿಗೆಗಳು ಆಗಿವೆ. ವಸತಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಅಂತ ಆರೋಪ ಮಾಡಿದ್ದೇ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಈ ಆರೋಪ ಬಂದ ಬಳಿಕ ಅನೇಕರು ಬಿ ಆರ್ ಪಾಟೀಲ್ ಬೆನ್ನಿಗೆ ನಿಂತು ವಸತಿ ಇಲಾಖೆಯಲ್ಲಿ ನಡೆಯುತ್ತಿದೆ ಎನ್ನಲಾದಂತಹ ಭ್ರಷ್ಟಾಚಾರ ಬಿಚ್ಚಿಟ್ಟಿದ್ದರು. ಈಗ ಅದಕ್ಕೆಲ್ಲಾ ಉತ್ತರ ನೀಡುವ ಕೆಲಸ ಮಾಡಿದ್ದಾರೆ ಸಚಿವ ಜಮೀರ್ ಅಹ್ಮದ್. ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಾನು ಈ ಇಲಾಖೆ ವಹಿಸಿಕೊಂಡ ಮೇಲೆ ಸಾಕಷ್ಟು ಮನೆಗಳನ್ನು ಕಟ್ಟಿಸಿಕೊಟ್ಟಿದ್ದೇನೆ. ಯೋಜನಾ ಮನೆಗಳಿಗೆ ನೀಡುವ ಹಣವನ್ನೂ ಹೆಚ್ಚು ಮಾಡುವಲ್ಲಿ ಸಿಎಂಗೂ ಮನವರಿಕೆ ಮಾಡಿದ್ದೇವೆ. ಆದರೆ ಭ್ರಷ್ಟಾಚಾರ ಅಥವಾ ಮನೆಗಳನ್ನು ಮಂಜೂರಾತಿಗೆ ಹಣ ಪಡೆದಿಲ್ಲ. ಬಿ ಆರ್ ಪಾಟೀಲ್ ಹೊರಿಯರಿದ್ದಾರೆ. ಆತ್ಮೀಯರು ಇದ್ದಾರೆ. ಏನಾದರೂ ಅಂತದ್ದು ಇದ್ದರೆ ಮಾಹಿತಿ ನೀಡಲಿ ಎಂದರು.
ಸಚಿವ ಜಮೀರ್ ಹೇಳಿಕೆ
ರಾಜೀವ್ ಗಾಂಧಿ ಅವಾಸ್ ಮನೆಗೆ ಏಳು ಲಕ್ಷ ಆಗುತ್ತದೆ. ಕೇಂದ್ರ ಸರ್ಕಾರ ಒಂದುವರೆ ಲಕ್ಷ ಮಾತ್ರ ನೀಡುತ್ತದೆ. ರಾಜ್ಯ ಸರ್ಕಾರ ಕೂಡ ಒಂದುವರೆ ಲಕ್ಷ ಕೋಡುತ್ತದೆ. ಇದಕ್ಕೆ ಕೇಂದ್ರ ಸರ್ಕಾರ ಜಿಎಸ್ಟಿ ಹಾಕಲಾಗಿದೆ. ನಾನು ಕೇಂದ್ರ ಸರ್ಕಾರವನ್ನು ಜಿಎಸ್ಟಿ ಬಿಡಲು ಕೇಳಿದ್ದೆವು. ಬಾಕಿ ಹಣ ಫಲಾನುಭವಿಗಳು ನೀಡಬೇಕು. ಆದ್ರೆ ಫಲಾನುಭವಿಗಳ ಹಣ ಸಮರ್ಪಕವಾಗಿ ಬಂದಿಲ್ಲ. ಹೀಗಾಗಿ ಮನೆಗಳು ಕಂಪ್ಲಿಟ್ ಆಗಿಲ್ಲ. ಸರ್ಕಾರವೇ ದುಡ್ಡು ಹಾಕಿ ಮನೆ ಕಂಪ್ಲಿಟ್ ಮಾಡಲಾಗುತ್ತಿದೆ. ಮುಂದಿನ ತಿಂಗಳು 42 ಸಾವಿರ ಮನೆಗನ್ನು ಕೋಡುತ್ತೇವೆ.

ಬಿ ಆರ್ ಪಾಟೀಲ್ ನನ್ನ ಮೇಲೆ ಆರೋಪ ಮಾಡಿಲ್ಲ. ನಾನುಕೊಟ್ಟ ಪತ್ರಕ್ಕೆ ಮನೆ ಕೊಟ್ಟಿಲ್ಲ ಎಂದಿದ್ದಾರೆ. ಪಂಚಾಯತಿ ಮೇಲೆ ಆರೋಪಮಾಡಿದ್ದಾರೆ. ಪ್ರತಿ ಪಂಚಾಯತಿಗೆ 900 ಮನೆ ನೀಡಲಾಗಿದೆ. ಶಾಸಕರು ಕೊಟ್ಟ ಮನವಿ ನಮ್ಮ ಬಳಿ ಇವೆ. ಬಿ ಆರ್ ಪಾಟೀಲ್ ಅವರು ಯಾವ ಸಂದರ್ಭದಲ್ಲಿ, ಯಾವ ಅರ್ಥದಲ್ಲಿ ಈ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ವಸತಿ ಯೋಜನೆಯಲ್ಲಿ ಯಾವುದೇ ಲಂಚ ಪಡೆದಿಲ್ಲ. ಬಡವರಿಂದ ಹಣ ತೆಗೆದುಕೊಂಡರೆ ನಮಗೆ ಒಳ್ಳೆಯದಾಗುತ್ತಾ? ದುಡ್ಡು ತೆಗೆದುಕೊಂಡು ಮನೆ ಕೊಟ್ಟರೆ ಶಾಪ ತಟ್ಟುವುದಿಲ್ವಾ. ದುಡ್ಡು ಪಡೆದು ಹಣ ಕೊಟ್ಟಿದ್ದರೆ ಹುಳ ಬೀಳುತ್ತೆ ಅಷ್ಟೆ. ಇದರಲ್ಲಿ ನನ್ನ ಕೈವಾಡ ಇಲ್ಲ. ನಾನು ತಪ್ಪು ಮಾಡಿದ್ದು ಸಾಬೀತು ಆದರೆ ನೂರಕ್ಕೆ ನೂರರಷ್ಟು ನಾನು ರಾಜೀನಾಮೆ ಕೊಡ್ತೀನಿ. ಯಾರೇ ತಪ್ಪು ಮಾಡಿದರೂ ಕ್ರಮ ಆಗಲಿದೆ ಎಂದರು.
ಯಾರು ದುಡ್ಡು ಪಡೆದು ಮನೆ ಕೊಟ್ಟಿದ್ದಾರೆ ಅಂತ ಹೇಳಬೇಕು. ಈ ಬಗ್ಗೆ ತನಿಖೆಯಾಗಬೇಕು. ಸಿಎಂ ಅವರಿಗೆ ಪತ್ರ ಬರೆಯಲಿ. ಸಿಬಿಐ ತನಿಖೆಯಾಗಲಿ.
ಅಷ್ಟೆ ಅಲ್ಲ ಸಿಎಂ ಗೂ ಈ ಬಗ್ಗೆ ಮಾಹಿತಿ ನೀಡಿದ್ದಾಗಿ ಹೇಳಿದ್ದಾರೆ. ಒಟ್ನಲ್ಲಿ ಇದರಲ್ಲಿ ನಮ್ಮದು ತಪ್ಪೇ ಇಲ್ಲ ಅನ್ನೋ ರೀತಿಯಲ್ಲಿ ಮಾತನಾಡಿದ್ದಾರೆ ಜಮೀರ್.



