ಜೆಡಿಎಸ್ ಅನ್ನ ಸ್ವಯಂ ಶಕ್ತಿಯಿಂದಲೇ ಮೇಲೆ ಬರಬೇಕು ಅನ್ನೋ ನಿಟ್ಟಿನಲ್ಲಿ ನಿಖಿಲ್ ಕುಮಾರಸ್ವಾಮಿ ರಾಜ್ಯ ಪ್ರವಾಸದಲ್ಲಿ ಇದ್ದಾರೆ. ಹಂತ ಹಂತವಾಗಿ ರಾಜ್ಯ ಪ್ರವಾಸ ಕೈಗೊಂಡಿರುವ ನಿಖಿಲ್ ಕಾರ್ಯಕರ್ತರಿಗೆ ಹುರಿದುಂಬಿಸುವ ಕೆಲಸ ಮಾಡ್ತಾ ಇದ್ದಾರೆ. ಸದ್ಯ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಆರನೇ ದಿನದ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನದಲ್ಲಿ ಭಾಗಿಯಾಗಿದ್ದರು.

ಮೂರು ಬಾರಿ ಸೋತರು ಮತ್ತೆ ಪಕ್ಷ ಸಂಘಟನೆಯತ್ತ ಮುಖ ಮಾಡಿರೋ ನಿಖಿಲ್ ಕುಮಾರಸ್ವಾಮಿ ಸದ್ಯ ಪಕ್ಷದ ಕಾರ್ಯಕರ್ತರ ಜೊತೆ ಬ್ಯುಸಿಯಾಗಿದ್ದಾರೆ. ಅತ್ತ ಕುಮಾರಸ್ವಾಮಿ ಅನುಪಸ್ಥಿತಿಯಲ್ಲಿ ಪಕ್ಷ ಸಂಘಟನೆಯ ಜವಬ್ದಾರಿ ಹೊತ್ತಿದ್ದಾರೆ. ಇನ್ನೇನು ಪಕ್ಷ ಮುಳುಗೇಹೋಯ್ತು ಅನ್ನೋ ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ತಿರುಗೇಟು ನೀಡುವ ಕೆಲಸ ಮಾಡುತ್ತಾ ಕಾರ್ಯಕರ್ತರ ಜೊತೆ ನಿಲ್ಲುವ ಕೆಲಸ ಮಾಡ್ತಾ ಇದ್ದಾರೆ.
ಈ ಮಧ್ಯೆ ರಾಮನಗರದಲ್ಲೇ ಸೋತಿರೋ ನಿಖಿಲ್ ಅಲ್ಲೇ ಮುಂದಿನ ಚುನಾವಣೆ ಎದುರಿಸಲು ಪಣ ತೊಟ್ಟಿದ್ದಾರೆ. ಈ ಬಗ್ಗೆ ಅವರೇ ಮಾತನಾಡಿದ್ದಾರೆ. ಚುನಾವಣೆಗೆ ನಿಲ್ಲುವ ಸಮಯ ಬಂದರೆ ರಾಮನಗರದಲ್ಲಿಯೇ ನನ್ನ ಮುಂದಿನ ಚುನಾವಣೆ. ಯಾವುದೇ ಕಾರಣಕ್ಕೂ ನಾನು ಜಿಲ್ಲೆಯಿಂದ ಪಲಾಯನ ಮಾಡುವುದಿಲ್ಲ.

ಇದು ನಮ್ಮ ಸ್ವ ಕ್ಷೇತ್ರ, ನೀವು ಬೆಳೆಸಿದ ಮನೆ ಮಕ್ಕಳು ನಾವು. ನಮ್ಮನ್ನ ಪ್ರೀತಿಯಿಂದ ಅರಸಿದ್ದೀರಿ, ಬೆಳೆಸಿದ್ದೀರಿ. ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಪಲಾಯನ ಮಾಡುವುದಿಲ್ಲ. ಸೋಲು ಗೆಲುವು ಸರ್ವೇ ಸಾಮಾನ್ಯ ನನ್ನ ಮೂರು ಸೋಲುಗಳು ನನಗೆ ರಾಜಕೀಯವಾಗಿ ಪರಿಪಕ್ವತೆಯನ್ನು ಕಲಿಸಿವೆ. ಈ ಸೋಲುಗಳಿಂದ ಕುಗ್ಗದೆ ಮತ್ತೆ ಅವಕಾಶ ಸಿಕ್ಕರೆ ರಾಮನಗರದಿಂದಲೇ ಸ್ವರ್ಧೆ ಮಾಡುತ್ತೇನೆ.
ಸದ್ಯ ಮೂರು ಸೋಲಿನ ಬಳಿಕವೂ ಕೂಡ ಕುಗ್ಗದೆ ಜಗ್ಗದೆ ಮತ್ತೆ ಸೋತಲ್ಲೇ ಗೆಲುವಿನ ನಿರೀಕ್ಷೆ ಇಟ್ಟು ಚುನಾವಣೆಗೆ ನಿಲ್ತೀನಿ ಎಂದಿದ್ದಾರೆ ನಿಖಿಲ್. ಇನ್ನೂ ಮೂರು ವರ್ಷ ಚುನಾವಣೆಗೆ ಕಾಲವಕಾಶ ಇದೆ. ಈಗಿನಿಂದಲೇ ತಯಾರಿ ನಡೆಸವ ಮೂಲಕ ವೇದಿಕೆ ಭದ್ರಪಡಿಸುತ್ತಿದ್ದಾರೆ.



