ರಿಯಾಲಿಟಿ ಶೋಗಳ ಪೈಕಿ ಸಾದಾ ನಂಬರ್ ಒನ್ ಸ್ಥಾನದಲ್ಲಿ ಇರುವ ಶೋ ಎಂದರೆ ಅದು “ಬಿಗ್ ಬಾಸ್”.ಈ ಶೋ ಹಿಂದಿಯ ಅವತರಣಿಕೆಯಲ್ಲಿ ಮೂಡಿ ಬರುತ್ತಿದ್ದು ಎಲ್ಲಾ ಭಾಷೆಗಳಲ್ಲು ಕೊಡ ಪ್ರಸಾರ ಪಡೆದುಕೊಂಡಿದೆ.ಈ ಶೋ ಎಲ್ಲಾ ಭಾಷೆಗಳಲ್ಲು ಕೂಡ ಶುರುವಾಗಿ ಯಶಸ್ವಿ ಪ್ರದರ್ಶನ ಪಡೆದುಕೊಂಡಿದೆ.ಈ ಶೋ ಶುರುವಾಗಿ ಸಾಕಷ್ಟು ಸೀಸನ್ ಗಳು ಕಳೆದಿದ್ದರೂ ಕೂಡ ಇಂದಿಗೂ ಆ ಶೋ ನಲ್ಲಿ ಇರುವ ಗ್ರೇಸ್ ಯಾವತ್ತಿಗೂ ಕಳೆದುಕೊಂಡಿಲ್ಲ. ಇದೇ ರೀತಿಯ ಯಶಸ್ಸನ್ನು ಕಂಡ ಈ ಶೋ ಕನ್ನಡದಲ್ಲಿ 9 ಸೀಸನ್ ಗಳು ಕಳೆದಿವೆ. ಆದರೆ ಈ ಸೀಸನ್ 9 ಕಳೆದ ಎಲ್ಲಾ ಸೀಸನ್ ಗಳಿಗಿಂತಲು ವಿಭಿನ್ನಾವಾಗಿದೆ.ಈ ಬಾರಿಯ ವಿಭಿನ್ನತೆಗೆ ನಮ್ಮ ಕನ್ನಡ ಪ್ರೇಕ್ಷಕರಲ್ಲಿ ಮತ್ತಷ್ಟು ಕುತೂಹಲವನ್ನು ಹುಟ್ಟಿಹಾಕಿತ್ತು.ಅದ್ರಲ್ಲೂ ಮೊದಲ ಓಟಿಟಿ ಸೀಸನ್ ಕೊಡ ಯಶಸ್ವಿಯಾಗಿ ಈ ಸೀಸನ್ ನಿಂದ ಅರ್ಹತೆ ಪಡೆದ ನಾಲ್ಕು ಜನರನ್ನು ಕೊಡ ಸೀಸನ್ 9ರ ದೊಡ್ಡ ಮನೆ ಪ್ರವೇಶ ನೀಡಿದ್ದಾರೆ.ಅವರಿಟ್ಟಿಗೆ ಹಳೆಯ ಸೀಸನ್ ನ ಐದು ಪ್ರವಿಣರು ಕೊಡ ಸ್ಪರ್ದಿಗಳಗಿದ್ದಾರೆ.ಅವರೊಟ್ಟಿಗೆ 9ನವೀನರು ಕೂಡ ಸ್ಪರ್ದಿಗಳಾಗಿದ್ದಾರೆ.ಈ ಮನೆ ಈಗಾಗಲೇ 6ನೆ ವಾರ ಕೊಡ ಮುಗಿಸಿದೆ.

ಇಷ್ಟು ವಾರಗಳಲ್ಲಿ ಈ ಮನೆ ಸಾಕಷ್ಟು ಏರಿಳಿತಗಳನ್ನು ನೋಡಿದೆ.ಎಲ್ಲಾ ಸಿಸನ್ ಗಳಲ್ಲಿ ಮನೋರಂಜನೆ ಹೆಚ್ಚಿದ್ದರೆ ಈ ಸೀಸನ್ ನಲ್ಲಿ ವೈಮನಸ್ಯ ಹಾಗೂ ಜಗಳವೇ ಹೆಚ್ಚಾಗಿದೆ.ಈಗಾಗಲೇ ಈ ಮನೆಯಿಂದ “ಕಿರಣ್,ಐಶ್ವರ್ಯ ಪೈಸೆ, ದರ್ಶ ಚಂದ್ರಪ್ಪ,ಮಯೂರಿ” ಹೊರಬಿದಿದ್ದರು. ಈಗ ಐದನೇ ವಾರದಲ್ಲಿ ಕಿಚ್ಚನ ನೇತೃತ್ವದಲ್ಲಿ “ನೇಹಾ ಗೌಡ” ಅವರು ಮನೆಯಿಂದ ಹೊರಬಂದಿದ್ದು ನಿಮಗೆಲ್ಲರಿಗೂ ತಿಳಿದೇ ಇದೆ.ಕಳೆದ ವಾರ ಮಯೂರಿ ಅವರ ಜೊತೆ ಕೊನೆಯ ಕ್ಷಣಗಳಲ್ಲಿ ದೇವರ ಸ್ಮರಣೆ ಮಾಡುತ್ತಾ ತಮ್ಮ ಅಭಿಮಾನಿಗಳು ಉಳಿಸಿಕೊಂಡು ಒಂದು ಅವಕಾಶ ನೀಡುತ್ತಾರೆ ಎಂಬ ನಂಬಿಕೆಯಲ್ಲಿ ಇದ್ದ ಗೊಂಬೆಗೆ ಬೇಸರವಾಗಲಿಲ್ಲ.
ಆದರೆ ಈ ಬಾರಿಯೂ ಕೂಡ ಅದೇ ನಂಬಿಕೆಯಲ್ಲಿ ಇದ್ದ ನೇಹಾ ಅವರಿಗೆ ದೊಡ್ಡ ಆಘಾತವೇ ಕಾದಿತ್ತು.ರಾಜಣ್ಣ ಜೊತೆ ಕಡೆಯದಾಗಿ ಉಳಿದಿದ್ದರು ನೇಹಾ.ಈ ಬಾರಿ ಬ್ಯಾಡ್ ಲಕ್ ನೇಹಾ ಅವರ ಕಡೆ ಇದ್ದಿದ್ದರಿಂದ ನೇಹಾ ಅವರು ಮನೆಯಿಂದ ಹೊರ ನಡೆದರು.ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಿಗ್ ಬಾಸ್ ಮನೆಯಿಂದ ಹೊರ ನಡೆಯುವ ಸದಸ್ಯರಿಗೆ ಒಂದು ವಿಶೇಷ ಅಧಿಕಾರ ನೀಡುತ್ತಾರೆ.ಆ ಅಧಿಕಾರದಿಂದ ಮನೆ ಯಿಂದ ಹೊರ ನಡೆಯುವ ಮುಂಚೆ ಮನೆಯಲ್ಲಿ ಕ್ಯಾಪ್ಟನ್ ಅವರನ್ನು ಹೊರತುಪಡಿಸಿ ಮಿಕ್ಕುಳಿದವರಲ್ಲಿ ಯರೊಬ್ಬರನ್ನಾದರು ನೇರವಾಗಿ ನಾಮಿನೇಟ್ ಮಾಡಬೇಕು.
ಅದರ ಅನುಸಾರದಂತೆ ನೇಹಾ ಅವರು ಪ್ರಶಾಂತ್ ಸಂಬರ್ಗಿ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ.ನೇಹಾ ಅವರು ಒಂದು ಒಳ್ಳೆಯ ಆಟಗಾರ್ತಿ ಯಾಗಿದ್ದರು ಅವರು ಹೊಸಬರೊಂದಿಗೆ ಬೆರೆಯಲು ಬಹಳ ಸಮಯ ತೆಗೆದುಕೊಂಡರು ಹಾಗೂ ತಮ್ಮ ಅತಿಯಾದ ಒಳ್ಳೆ ತನ ಇವರಿಗೆ ಮುಳುವಾಗಿದೆ ಎಂದರೆ ತಪ್ಪಾಗಲಾರದು. ಮೊನ್ನೇ ಕಿಚ್ಚಾ ಸುದೀಪ್ ಅವರು ಎಲ್ಲರಿಗೂ ಹಬ್ಬದ ವಿಶೇಷವಾಗಿ ತಮ್ಮ ಕೈಯಾರ ಅಡುಗೆ ಮಾಡಿ ಎಲ್ಲರಿಗೂ ತಮ್ಮ ಹಸ್ತಕಷರ ದಿಂದ ಎಲ್ಲರಿಗು ಕಿವಿ ಮಾತಿನಂತೆ ಬರೆದು ಕಳುಹಿಸಿದ್ದರು.ಅದರಲ್ಲಿಯೂ ಕಿಚ್ಚ ಇದೆ ವಿಚಾರವಾಗಿ ತಿಳಿಸಿದ್ದದು.ಆದರೆ ನೇಹಾ ತಂದೆ ಹಾಗೂ ಅಕ್ಕನ ಹೇಳಿದ ಹಾಗೆ ಪ್ರಶಾಂತ್ ಹಾಗೂ ಅರುಣ್ ಅವರ ಏರು ದ್ವನಿ ಇವರನ್ನು ಸೈಲೆಂಟ್ ಆಗುವಂತೆ ಮಾಡಿದೆ ಎಂದು ತಿಳಿಸಿದ್ದಾರೆ.