ಒಳ್ಳೆ ಹುಡುಗ ಪ್ರಥಮ್ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ವ್ಯಕ್ತಿ, ಬಿಗ್ ಬಾಸ್ ಮೂಲಕ ಕನ್ನಡಿಗರಿಗೆ ಪರಿಚಯವಾದ ಪ್ರಥಮ್ ನಂತರ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ನಟನೆಯ ಮೂಲಕ ಸೈ ಎನಿಸಿಕೊಂಡವರು. ತನ್ನ ವಿಚಿತ್ರ ಮ್ಯಾನರಿಸಮ್, ನೇರ ಮಾತುಗಳಿಂದ ಇಷ್ಟವಾಗುವ ಪ್ರಥಮ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಒಳ್ಳೆ ಹುಡುಗ ಪ್ರಥಮ್ ತನ್ನ ನಿಶ್ಚಿತಾರ್ಥವನ್ನು ಸರಳವಾಗಿ ಮಾಡಿಕೊಳ್ಳುವ ಮುಖಾಂತರ ತಾನೊಬ್ಬ ಸಿಂಪಲ್ ಮನುಷ್ಯ ಎನ್ನುವುದನ್ನು ಸಾಭೀತು ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಿಶ್ಚಿತಾರ್ಥದ ಕುರಿತು ಫೋಟೋ ಹಂಚಿಕೊಂಡ ಪ್ರಥಮ್ ತಾನು ಮದುವೆ ಆಗುತ್ತಿರುವ ಹುಡುಗಿಯ ಬಗ್ಗೆ ಏನನ್ನು ಕೂಡ ರಿವೀಲ್ ಮಾಡಿಲ್ಲ.

ಈ ಕುರಿತು ಪ್ರಥಮ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇದೊಂದು ಸುಂದರ ಕ್ಷಣ, ಇಂದು ನನ್ನ ನಿಶ್ಚಿತಾರ್ಥ ಮುಗಿದಿದೆ, ಯಾವುದೇ ತೊರ್ಪಡಿಕೆಯಿಲ್ಲದೆ ಸರಳವಾಗಿ ಬದುಕಲು ಇಷ್ಟಪಡುವುದರಿಂದ ಸಿಂಪಲ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದೇನೆ. ನನ್ನ ನಿಶ್ಚಿತಾರ್ಥ ದೇಶದಲ್ಲಿ ದೊಡ್ಡ ಸುದ್ದಿಯಾಗ ಬೇಕಂತಿಲ್ಲ. ಮದುವೆ ಅದ್ದೂರಿಯಾಗಬೇಕಂತಿಲ್ಲ ನೀವು ಹೇಗೆ ಜೀವನ ನೆಡೆಸುತ್ತಿರಿ ಎನ್ನುವುದು ಮುಖ್ಯವಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ಒಳ್ಳೆ ಹುಡುಗ ಪ್ರಥಮ್ ತಮ್ಮ ವ್ಯಕ್ತಿತ್ವದ ಮೂಲಕವೇ ಸಾಕಷ್ಟು ಹೆಸರುವಾಸಿ ಆಗಿದ್ದಾರೆ.

ಈ ಹಿಂದೆ ಕೂಡ ತನ್ನ ಸರಳತೆ ಮೂಲಕವೇ ಕರ್ನಾಟಕದೇಲ್ಲೆಡೆ ಸಾಕಷ್ಟು ಸದ್ದು ಮಾಡಿದ್ದ ಒಳ್ಳೆ ಹುಡುಗ ಪ್ರಥಮ್ ಇದೀಗ ತಮ್ಮ ಸಿಂಪಲ್ ವ್ಯಕ್ತಿತ್ವದಿಂದ ಇನ್ನಷ್ಟು ಸುದ್ದಿಯಾಗಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋಗೆ ಕಾಮನ್ ಮ್ಯಾನ್ ಒಬ್ಬನಿಗೆ ಅವಕಾಶ ಕೊಡಲು ಕಲರ್ಸ್ ಕನ್ನಡ ನಿರ್ಧರಿಸುತ್ತೆ, ಈ ಸಂದರ್ಭದಲ್ಲಿ ಎಂಟ್ರಿಕೊಟ್ಟದು ಒಳ್ಳೆ ಹುಡುಗ ಪ್ರಥಮ್. ಬಿಗ್ ಬಾಸ್ ಶೋ ವಿನ್ನರ್ ಆದಾಗಲೂ ಕೂಡ ಅದರಲ್ಲಿ ಗಳಿಸಿದ ಹಣವನ್ನ ಬಡವರಿಗೆ ದಾನ ಮಾಡುವ ಮುಖಾಂತರ ಸಾಕಷ್ಟು ಅಭಿಮಾನಿಗಳನ್ನ ಗಳಿಸುವಲ್ಲಿ ಸಫಲವಾದರು.
ಸಣ್ಣ ಪುಟ್ಟ ನಟನೆ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪ್ರಥಮ್, ನಂತರ ನಟನಾಗಿ ಕೂಡ ಕಾಣಿಸಿಕೊಂಡು ಬೆಳ್ಳಿ ಪರದೆ ಮೇಲೆ ರಾರಾಜಿಸಿದರು. ಒಳ್ಳೆ ಹುಡುಗ ಎನ್ನುವ ಬಿರುದನ್ನ ಪಡೆದುಕೊಂಡ ಪ್ರಥಮ್ ಸಾಕಷ್ಟು ಅಭಿಮಾನಿ ಬಳಗವನ್ನ ಸಂಪಾದನೆ ಮಾಡಿದ್ದು, ರಿಯಾಲಿಟಿ ಶೋಗಳಲ್ಲಿ ಬಂದ ಹಣವನ್ನ ಸ್ವಂತ ಉಪಯೋಗಕ್ಕೆ ಉಪಯೋಗಿಸಿಕೊಳ್ಳದೆ, ಸಮಾಜಕ್ಕೆ ಏನಾದರೂ ಒಳಿತು ಮಾಡಬೇಕು ಎನ್ನುವ ಮಹದಾಸೆ ಒಳ್ಳೆ ಹುಡುಗ ಪ್ರಥಮ್ ಮಾಡುತ್ತಿದ್ದರು.
ಒಂದು ಸಣ್ಣ ಪುಟ್ಟ ನಟನಾದರೆ ತನ್ನ ದರ್ಪ ಐಷಾರಾಮಿ ಜೀವನ ನೆಡೆಸಿ ಅದ್ದೂರಿಯಾಗಿ ಮದುವೆಗಳನ್ನ ಮಾಡಿ ಇಡೀ ಕರ್ನಾಟಕವೇ ನಮ್ಮ ಮದುವೆ ನೆನಪಿಟ್ಟುಕೊಳ್ಳಬೇಕು ಎನ್ನುವ ಈ ಕಾಲಘಟ್ಟದಲ್ಲಿ, ಒಳ್ಳೆ ಹುಡುಗ ಪ್ರಥಮ್ ನಿಶ್ಚಿತಾರ್ಥ ಯುವ ಸಮುದಾಯದಕ್ಕೆ ಮಾದರಿಯಾಗಿದೆ. ಕೋವಿಡ್ ಸಮಯದಲ್ಲಿ ಸಂಕಷ್ಟದಲ್ಲಿದ್ದ ಜನರಿಗೆ ಆಸರೆಯಾಗುವ ಮುಖಾಂತರ ಬಡವರ ಪಾಲಿಗೆ ಒಳ್ಳೆಯ ಹುಡುಗನಾಗಿ ಪ್ರಥಮ್ ಕಾಣಿಸಿಕೊಂಡಿದ್ರು.
ಚಿತ್ರರಂಗದಲ್ಲಿ ತನ್ನದೇಯಾದ ಒಂದು ಪುಟ್ಟ ಅಭಿಮಾನಿಗಳನ್ನ ಹೊಂದಿರುವ ಪ್ರಥಮ್, ಕನ್ನಡ ಚಿತ್ರರಂಗದಲ್ಲಿ ಇದೀಗ ನಿರ್ದೇಶನ ಕ್ಷೇತ್ರಕ್ಕೂ ಕಾಲಿಟ್ಟು ನಾನು ಆಕ್ಷನ್ ಕಟ್ ಹೇಳಲು ಕೂಡ ಸಿದ್ದರಾಗಿದ್ದಾರೆ. ಈಗಾಗಲೇ ಕೆಲ ಚಿತ್ರಗಳ ನಿರ್ದೇಶನ ಮಾಡಿದ್ದು, ಸಿನಿಮಾ ಕ್ಷೇತ್ರ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಪ್ರಥಮ್ ಅಭಿನಯದ ದೇವತಾ ಮನುಷ್ಯ ಸಾಕಷ್ಟು ಸದ್ದು ಮಾಡಿದ ಸಿನಿಮಾವಾಗಿತ್ತು. ಒಟ್ಟಾರೆ ಸಿಂಪಲ್ ಆಗಿ ನಿಶ್ಚಿತಾರ್ಥವಾದ ಒಳ್ಳೆ ಹುಡುಗ ಪ್ರಥಮ್ ಇದೀಗ ಯಾವಾಗ ಮದುವೆಯಾಗುತ್ತಾರೆ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದ್ದಾರೆ.



