ತೆಲುಗಿನ ಖ್ಯಾತ ನಟ ನಾಗಚೈತನ್ಯ ಅವರು ನಟಿ ಸಮಂತಾ ಅವರೊಡನೆ ವಿಚ್ಛೇದನ ಪಡೆದು, ಮೂರೇ ವರ್ಷಗಳಲ್ಲಿ ನಟಿ ಶೋಭಿತಾ ಅವರೊಡನೆ ಮದುವೆಯಾಗಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಇವರಿಬ್ಬರ ಆಗಾಗ ಹೊಸ ಹೊಸ ಸುದ್ದಿಗಳು ಕೇಳಿಬರುತ್ತಲೇ ಇರುತ್ತದೆ. ಇದೀಗ ಈ ಜೋಡಿಯ ಬಗ್ಗೆ ಹೊಸದೊಂದು ಸುದ್ದಿ ವೈರಲ್ ಆಗಿದ್ದು, ಶೋಭಿತಾ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ಸುದ್ದಿಯೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇತ್ತೀಚಿನ ಇವರ ಫೋಟೋಗಳು ಈ ರೀತಿಯ ಸುದ್ದಿಯೊಂದು ವೈರಲ್ ಆಗುವುದಕ್ಕೆ ಕಾರಣ ಆಗಿದ್ದು, ನೆಟ್ಟಿಗರು ಇದರಿಂದ ಶಾಕ್ ಆಗಿರುವುದಂತೂ ನಿಜ. ಆದರೆ ಅಸಲಿ ವಿಷಯ ಏನು? ಈ ಜೋಡಿ ಸಿಹಿ ಸುದ್ದಿ ಕೊಡೋಕೆ ತಯಾರಾಗಿದ್ಯಾ? ಪೂರ್ತಿ ಡೀಟೇಲ್ಸ್ ಇಲ್ಲಿದೆ.
ನಟ ನಾಗಚೈತನ್ಯ ಸಮಂತಾ ಅವರನ್ನು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದರು, ಆದರೆ ಈ ಜೋಡಿಯ ಜೊತೆಯಾಗಿ ಇದ್ದಿದ್ದು ಕೇವಲ 4 ವರ್ಷಗಳ ಕಾಲ ಮಾತ್ರ. 2021ರಲ್ಲೇ ಇವರಿಬ್ಬರು ವಿಚ್ಛೇದನ ಪಡೆದು, ದೂರ ಆಗಿರುವ ಸುದ್ದಿಯನ್ನು ಘೋಷಿಸಿದರು. ಇದರಿಂದ ಇವರಿಬ್ಬರ ಫ್ಯಾನ್ಸ್ ಗೆ ಬಹಳ ಬೇಸರ ಆಗಿದ್ದು, ಇವತ್ತಿಗೂ ಇವರಿಬ್ಬರ ಕೆಲವು ಫೋಟೋಸ್ ಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಇದೆಲ್ಲವೂ ಒಂದು ಕಡೆಯಾದರೆ, ಕಳೆದ ವರ್ಷ ಡಿಸೆಂಬರ್ ನಲ್ಲಿ ನಾಗಚೈತನ್ಯ ಅವರು ಶೋಭಿತಾ ಧೂಳಿಪಾಲ ಅವರೊಡನೆ ಮದುವೆಯಾಗಿದ್ದು, ಇನ್ನು ದೊಡ್ಡದಾಗಿ ಸುದ್ದಿಯಾಗಿತ್ತು. ಇಷ್ಟು ಬೇಗ ನಾಗಚೈತನ್ಯ ಎರಡನೇ ಮದುವೆ ಆಗಿಬಿಟ್ರ ಎಂದು ನೆಟ್ಟಿಗರ ವಲಯದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯಿತು.
ಇವರಿಬ್ಬರು ಈಗ ಬಹಳ ಚೆನ್ನಾಗಿಯೇ ಜೀವನ ನಡೆಸುತ್ತಿದ್ದಾರೆ. ಆಗಾಗ ತಮ್ಮ ದಿನನಿತ್ಯ ಜೀವನದ ಕೆಲವು ಫೋಟೋಸ್ ಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಇವರಿಬ್ಬರು ಟ್ರೋಲ್ ಆಗುವುದು ಕೂಡ ಉಂಟು. ಅದೆಲ್ಲವೂ ಒಂದು ಕಡೆಯಾದರೆ, ಇತ್ತೀಚೆಗೆ ಇವರಿಬ್ಬರ ಬಗ್ಗೆ ಮತ್ತೊಂದು ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದೇನು ಎಂದರೆ, ನಾಗಚೈತನ್ಯ ಮತ್ತು ಶೋಭಿತಾ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ಸುದ್ದಿ ಇದು, ಈ ವಿಚಾರ ವೈರಲ್ ಆಗಿರುವುದು ನೆಟ್ಟಿಗರು ಇತ್ತೀಚೆಗೆ ಶೋಭಿತಾ ಅವರ ಫೋಟೋಸ್ ಗಳನ್ನು ನೋಡಿದ ಬಳಿಕ, ಈ ಸುದ್ದಿಗೆ ನಾಗಚೈತನ್ಯ ಅವರ ಕುಟುಂಬದ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ಅಷ್ಟಕ್ಕೂ ಆಗಿರುವುದು ಏನು ಎಂದರೆ..
ಇತ್ತೀಚೆಗೆ ನಡೆದ 2025ರ ವೀವ್ಸ್ ಸಮಿಟ್ ನಲ್ಲಿ ನಾಗಚೈತನ್ಯ ಮತ್ತು ಶೋಭಿತಾ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಶೋಭಿತಾ ಅವರು ಲಕ್ಷಣವಾಗಿ ಸೀರೆ ಉಟ್ಟುಕೊಂಡು ಕಾಣಿಸಿಕೊಂಡಿದ್ದು, ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಫೋಟೋಸ್ ಗಳಲ್ಲಿ ಶೋಭಿತಾ ಅವರು ಕಾಣಿಸಿಕೊಂಡಿರುವ ರೀತಿಯನ್ನು ನೋಡಿದ ನೆಟ್ಟಿಗರು ಬಹುಶಃ ಗರ್ಭಿಣಿ ಆಗಿರಬಹುದು, ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಬಗ್ಗೆ ನಾಗಚೈತನ್ಯ ಅವರ ಆಪ್ತಬಳಗಕ್ಕೆ ಪ್ರಶ್ನೆ ಕೇಳಲಾಗಿದ್ದು, ಅವರಿಂದ ಉತ್ತರ ಸಿಕ್ಕಿದೆ. ಅವರು ಹೇಳಿರುವುದು ಏನು ಎಂದರೆ..
ನಾಗಚೈತನ್ಯ ಅವರ ಆಪ್ತ ಬಳಗ ತಿಳಿಸಿರುವ ಮಾಹಿತಿಯ ಅನುಸಾರ, ಈ ಸುದ್ದಿಗಳು ಸುಳ್ಳು ಸುದ್ದಿ ಆಗಿದ್ದು, ಅವರಿಬ್ಬರಿಂದ ಯಾವುದೇ ಸಿಹಿ ಸುದ್ದಿ ಇನ್ನೂ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಇದೆಲ್ಲವೂ ವದಂತಿ ಮಾತ್ರ ಎಂದು ತಿಳಿದುಬಂದಿದೆ. ಇನ್ನು ನಾಗಚೈತನ್ಯ ಅವರ ಬಗ್ಗೆ ಹೇಳುವುದಾದರೆ, ಇವರು ತೆಲುಗು ರಾಜ್ಯದ ಪ್ರತಿಷ್ಠಿತ ಕುಟುಂಬದಲ್ಲಿ ಹುಟ್ಟಿ ಬೆಳೆದ ಹುಡುಗ ಎಂದು ನಮಗೆಲ್ಲ ಗೊತ್ತೇ ಇದೆ. ಇವರ ತಂದೆ ಖ್ಯಾತ ನಟ ನಾಗಾರ್ಜುನ ಅವರು. ಇವರು ತೆಲುಗಿನ ಖ್ಯಾತ ನಟ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಮಗ. ನಾಗಾರ್ಜುನ್ ಅವರ ಮೊದಲ ಪತ್ನಿ ಲಕ್ಷ್ಮೀ ದಗ್ಗುಬಾಟಿ ಅವರು, ಇವರೊಡನೆ ನಾಗಾರ್ಜುನ ಅವರು ಮೊದಲು ಮದುವೆಯಾಗಿದ್ದು. ಲಕ್ಷ್ಮೀ ಅವರು ತೆಲುಗಿನ ಖ್ಯಾತ ನಟ ವೆಂಕಟೇಶ್ ಅವರ ತಂಗಿ.

ತೆಲುಗಿನ ಮತ್ತೊಬ್ಬ ಖ್ಯಾತ ನಟ ರಾಣಾ ಅವರಿಗೆ ಲಕ್ಷ್ಮೀ ದಗ್ಗುಬಾಟಿ ಅವರು ಚಿಕ್ಕಮ್ಮ ಆಗಬೇಕು. ಲಕ್ಷ್ಮೀ ಅವರು ದೊಡ್ಡ ಮನೆತನದ ಮಗಳು. ಇವರೊಡನೆ ನಾಗಾರ್ಜುನ ಅವರು ಮೊದಲು ಮದುವೆ ಆಗಿದ್ದು, ನಾಗಚೈತನ್ಯ ಇವರಿಬ್ಬರ ಮಗ. ಆದರೆ ಕೆಲವು ವರ್ಷಗಳ ನಂತರ ಇಬ್ಬರ ಮನಸ್ತಾಪ ಮೂಡಿದ ಕಾರಣ ನಾಗಾರ್ಜುನ ಅವರಿಂದ ವಿಚ್ಛೇದನ ಪಡೆದರು. ನಂತರ ನಾಗಾರ್ಜುನ ಅವರು ಖ್ಯಾತ ನಟ ಅಮಲಾ ಅವರೊಡನೆ ಮದುವೆಯಾದರು, ಇನ್ನು ಲಕ್ಷ್ಮೀ ದಗ್ಗುಬಾಟಿ ಅವರು ಸಹ ಶರತ್ ವಿಜಯೇಂದ್ರನ್ ಅವರೊಡನೆ ಮದುವೆಯಾದರು. ಇಬ್ಬರು ಕೂಡ ಪ್ರತ್ಯೇಕ ಜೀವನ ನಡೆಸುತ್ತಿದ್ದಾರೆ. ಲಕ್ಷ್ಮಿ ಅವರು ಯು. ಎಸ್ ನಲ್ಲಿ ಸೆಟ್ಲ್ ಆಗಿದ್ದು ತಮ್ಮದೇ ಆದ ಸ್ವಂತ ಬ್ಯುಸಿನೆಸ್ ಹೊಂದಿದ್ದಾರೆ. ಆಗಾಗ ಭಾರತಕ್ಕೆ ಬಂದು ಹೋಗುತ್ತಾರೆ.
ಕಳೆದ ಬಾರಿ ನಾಗಚೈತನ್ಯ ಮತ್ತು ಶೋಭಿತಾ ಅವರ ಮದುವೆಗೆ ಬಂದು ಹೋಗಿದ್ದರು. ಅಮ್ಮ ಅಪ್ಪ ಇಬ್ಬರ ಜೊತೆಯಲ್ಲಿ ಕೂಡ ನಾಗಚೈತನ್ಯ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಇನ್ನು ಶೋಭಿತಾ ಅವರ ಕುಟುಂಬದ ಜೊತೆಗೆ ಸಹ ಅಷ್ಟೇ ಚೆನ್ನಾಗಿದ್ದಾರೆ. ಈ ಜೋಡಿ ಬಹಳ ಅನ್ಯೋನ್ಯವಾಗಿ ಜೀವನ ನಡೆಸಿಕೊಂಡು ಹೋಗುತ್ತಿದ್ದು, ಶೀಘ್ರದಲ್ಲೇ ಗುಡ್ ನ್ಯೂಸ್ ಕೊಡುತ್ತಾರಾ ಎಂದು ಕಾದು ನೋಡಬೇಕಿದೆ.



