ತಮಿಳಿನ ಖ್ಯಾತ ನಟ ಸೂರ್ಯ ಅವರ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಇವರು ದಕ್ಷಿಣ ಭಾರತದಲ್ಲಿ ತಮ್ಮ ವಿಭಿನ್ನವಾದ ಪಾತ್ರಗಳು ಮತ್ತು ಅದ್ಭುತ ಅಭಿನಯದ ಕಾರಣಕ್ಕೆ ಹೆಚ್ಚು ಹೆಸರು ಮಾಡಿದ್ದಾರೆ. ಇವರು ಮದುವೆ ಆಗಿರುವುದು ಖ್ಯಾತ ನಟಿ ಜ್ಯೋತಿಕಾ ಅವರೊಡನೆ. ಈ ಜೋಡಿ ಎಲ್ಲರಿಗೂ ಮಾದರಿ ಜೋಡಿ ಆಗಿದೆ, ಲವ್ ಮ್ಯಾರೇಜ್ ಆದರೆ ಎಷ್ಟು ಚೆನ್ನಾಗಿ ಇರಬೇಕು ಎನ್ನುವುದನ್ನು ತೋರಿಸಿಕೊಟ್ಟ ಜೋಡಿ ಇವರು. ಇವರಿಬ್ಬರೇನೋ ಸ್ಟಾರ್ ಗಳು, ಆದರೆ ಇವರ ಮಕ್ಕಳು ತಂದೆ ತಾಯಿಯ ನೆರಳಿನಲ್ಲಿ ಇಲ್ಲ, ಇಬ್ಬರು ಚೆನ್ನಾಗಿ ಓದುತ್ತಿದ್ದಾರೆ, ತಮಗಾಗಿ ಹೊಸ ಜೀವನ ಕಟ್ಟಿಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಅದಕ್ಕೆ ಸಾಕ್ಷಿ ಎನ್ನುವ ಹಾಗೆ ಸೂರ್ಯ ಜ್ಯೋತಿಕಾ ದಂಪತಿಯ ಮಗಳ 12ನೇ ತರಗತಿ ರಿಸಲ್ಟ್ ಸ್ಕೋರ್ ಇದೆ. ಮಕ್ಕಳು ಇಷ್ಟು ಚೆನ್ನಾಗಿ ಓದಿದಾಗ ತಂದೆ ತಾಯಿಗೆ ಎಷ್ಟು ಸಂತೋಷ ಆಗುತ್ತದೆ ಅಲ್ವಾ..

ಸಾಮಾನ್ಯವಾಗಿ ಸ್ಟಾರ್ ಕಿಡ್ ಗಳು ಎಂದರೆ ಅಪ್ಪ ಅಮ್ಮನ ಹಾಗೆ ಅವರು ಕೂಡ ಬಣ್ಣದ ಲೋಕಕ್ಕೆ ಬಂದು ಸ್ಟಾರ್ ಆಗುತ್ತಾರೆ ಎನ್ನುವುದು ಎಲ್ಲರ ನಿರೀಕ್ಷೆ ಆಗಿರುತ್ತದೆ. ಕೆಲವು ಸ್ಟಾರ್ ಕಿಡ್ ಗಳು ಅದೇ ರೀತಿ ಇರುತ್ತಾರೆ. ಅವರೆಲ್ಲ ಓದುವ ಬಗ್ಗೆ ಹೆಚ್ಚು ಗಮನ ಕೊಡುವುದು ಸಹ ಇಲ್ಲ. ಇದೆಲ್ಲವೂ ಕಾಮನ್ ಆಗಿದೆ. ಆದರೆ ಕೆಲವು ಸ್ಟಾರ್ ಕಿಡ್ ಗಳು ಆ ರೀತಿ ಇರುವುದಿಲ್ಲ. ಅಪ್ಪ ಅಮ್ಮ ಎಷ್ಟು ದೊಡ್ಡ ಹೆಸರು ಮಾಡಿ, ಸ್ಟಾರ್ ಗಳಾಗಿದ್ದರೂ ಸಹ ಅವರ ಮೇಲೆ ಡಿಪೆಂಡ್ ಆಗಿರದೇ, ತಾವು ಚೆನ್ನಾಗಿ ಓದಬೇಕು ಎಂದು ನಿರ್ಧಾರ ಮಾಡಿರುತ್ತಾರೆ. ಅದೇ ನಿಟ್ಟಿನಲ್ಲಿ ಕಷ್ಟಪಟ್ಟು ಓದುತ್ತಾರೆ, ಅಂಥ ಸಾಲಿಗೆ ಸೇರುವ ಮಕ್ಕಳು ಸೂರ್ಯ ಮತ್ತು ಜ್ಯೋತಿಕಾ ದಂಪತಿಯ ಮಕ್ಕಳು.
ಸೂರ್ಯ ಹಾಗೂ ಜ್ಯೋತಿಕಾ ಜೋಡಿ ಪ್ರೀತಿಸಿ ಮದುವೆಯಾದರು. ಸಿನಿಮಾದಲ್ಲಿ ಶೂಟಿಂಗ್ ಮಾಡುವ ವೇಳೆ, ಇಬ್ಬರಲ್ಲೂ ಪ್ರೀತಿ ಶುರುವಾಯಿತು. ಆ ಪ್ರೀತಿಯಿಂದಲೇ ಇಬ್ಬರೂ ಮದುವೆಯಾದರು. ಈ ಜೋಡಿಗೆ ಇಬ್ಬರು ಮಕ್ಕಳು. ಇವರ ಮಗಳು ದಿಯಾ ಹಾಗೂ ಮಗ ದೇವ್. ಈಗ ಜ್ಯೋತಿಕಾ ಅವರ ಜೊತೆಗೆ ಇಬ್ಬರು ಮಕ್ಕಳು ಮುಂಬೈನಲ್ಲಿ ವಾಸ ಮಾಡುತ್ತಾ, ಅಲ್ಲಿಯೇ ಓದುತ್ತಿದ್ದಾರೆ. ಮಕ್ಳಳ ವಿದ್ಯಾಭ್ಯಾಸದ ಕಾರಣಕ್ಕೆ ಜ್ಯೋತಿಕಾ ಮತ್ತು ಮಕ್ಕಳು ಚೆನ್ನೈ ಬಿಟ್ಟು ಮುಂಬೈಗೆ ಹೋಗಿ, ಅಲ್ಲಿಯೇ ಇದ್ದಾರೆ ಎಂದು ಹೇಳಲಾಗುತ್ತಿದೆ. ಮುಂಬೈನ ಪ್ರತಿಷ್ಠಿತ ಶಾಲೆಯಲ್ಲಿ ಇವರ ಇಬ್ಬರು ಮಕ್ಕಳು ಓದುತ್ತಿದ್ದಾರೆ. ವಿದ್ಯಾಭ್ಯಾಸದಲ್ಲಿ ಇಬ್ಬರೂ ಚನ್ನಾಗಿ ಓದುತ್ತಿದ್ದಾರೆ. ಇದಕ್ಕೆ ಸಾಕ್ಷಿ ದಿಯಾ ಅವರ ಮಾರ್ಕ್ಸ್. ಇವರ ಮಾರ್ಕ್ಸ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇಂಗ್ಲೀಷ್ ನಲ್ಲಿ 97, ತಮಿಳ್ ನಲ್ಲಿ 96, ಅಕೌಂಟ್ಸ್ ನಲ್ಲಿ 94, ಫಿಸಿಕ್ಸ್ ನಲ್ಲಿ 99, ಕೆಮಿಸ್ಟ್ರಿಯಲ್ಲಿ 98, ಕಂಪ್ಯೂಟರ್ ಸೈನ್ಸ್ ನಲ್ಲಿ 97 ಮಾರ್ಕ್ಸ್ ಗಳಿಸಿದ್ದಾರೆ ದಿಯಾ. ಇದು ಇವರ 12ನೇ ತರಗತಿ ಮಾರ್ಕ್ಸ್ ಆಗಿದ್ದು, ಇವರ ಮಾರ್ಕ್ಸ್ ಕಾರ್ಡ್ ಫೋಟೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದು ಈ ವರ್ಷ ಇವರು ಪಾಸ್ ಮಾಡಿರುವ ಮಾರ್ಕ್ಸ್ ಅಲ್ಲ, ಹಳೆಯ ಮಾರ್ಕ್ಸ್ ಕಾರ್ಡ್ ಆಗಿದ್ದು, ಕಳೆದ ವರ್ಷ ಸಹ ಈ ಮಾರ್ಕ್ಸ್ ಕಾರ್ಡ್ ವೈರಲ್ ಆಗಿತ್ತು, ಈಗಲೂ ಅದೇ ರೀತಿ ವೈರಲ್ ಆಗಿದೆ. ಅಭಿಮಾನಿಗಳಿಗೆ ತಮ್ಮ ಮೆಚ್ಚಿನ ನಟನ ಮಕ್ಕಳು ಇಷ್ಟು ಚೆನ್ನಾಗಿ ಓದುತ್ತಿರುವುದನ್ನು ನೋಡಿ ಬಹಳ ಸಂತೋಷವಿದೆ. ಅಪ್ಪ ಅಮ್ಮನ ನೆರಳಿನಲ್ಲಿ ಇರದೇ, ಇವರ ಮಕ್ಕಳು ಓದಿನ ಬಗ್ಗೆ ಗಮನ ಕೊಡುತ್ತಿರುವುದು ನಿಜಕ್ಕೂ ಬಹಳ ಸಂತೋಷ ಪಡುವಂಥ ವಿಷಯ ಆಗಿದೆ. ಈ ಕಾರಣಕ್ಕೆ ನೆಟ್ಟಿಗರು ಸೂರ್ಯ ಅವರ ಮಗಳನ್ನು ಹೊಗಳುತ್ತಿದ್ದಾರೆ.
ಇನ್ನು ಸೂರ್ಯ ಅವರ ಮಗಳು ದಿಯಾ ಓದಿನಲ್ಲಿ ಇಷ್ಟು ಒಳ್ಳೆಯ ಸ್ಕೋರ್ ಮಾಡಿರುವುದು ಮಾತ್ರವಲ್ಲ, ಕ್ರಿಯೇಟಿವ್ ಆಗಿ ಕೂಡ ಅಷ್ಟೇ ಚೆನ್ನಾಗಿದ್ದಾರೆ. ಮಹಿಳೆಯರ ವಿಚಾರಕ್ಕೆ ಬೆಳಕು ಚೆಲ್ಲುವ ಹಾಗೆ ಇವರು ನಿರ್ದೇಶನ ಮಾಡಿದ ಶಾರ್ಟ್ ಮೂವಿ, ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸೋಶಿಯಲ್ ಮೀಡಿಯಾದಲ್ಲಿ ಸಹ ಈ ಶಾರ್ಟ್ ಮೂವಿ ಬಗ್ಗೆ ಪ್ರಶಂಸೆ ಕೇಳಿಬಂದಿತ್ತು. ಅಮ್ಮ ಜ್ಯೋತಿಕಾ ಅವರು ಮಗಳ ಈ ಶಾರ್ಟ್ ಮೂವಿ ಬಗ್ಗೆ ಬಹಳ ಹೆಮ್ಮೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಹೀಗೆ ಸ್ಟಾರ್ ಕಿಡ್ ಆಗಿದ್ದರೂ ಸಹ, ಸೂರ್ಯ ಅವರ ಮಗಳು ಮಗ ಇಬ್ಬರೂ ಕೂಡ ಈ ರೀತಿ ಓದಿನ ಕಡೆಗೆ ಒಳ್ಳೆಯ ರೀತಿಯಲ್ಲಿ ಮುಂದಿವರೆಯುತ್ತಿರುವುದು, ಬಹಳ ಒಳ್ಳೆಯ ವಿಚಾರ.

ಎಲ್ಲಾ ಮಕ್ಕಳು ಸಹ ಇದೇ ರೀತಿ ಯೋಚನೆ ಮಾಡಿದರೆ ತಂದೆ ತಾಯಿಯ ನೆರಳಲ್ಲಿ ಬದುಕುವ ಅವಶ್ಯಕತೆಯೇ ಬರುವುದಿಲ್ಲ. ಇನ್ನು ನಟ ಸೂರ್ಯ ಅವರ ಬಗ್ಗೆ ಹೇಳುವುದಾದರೆ, ಇತ್ತೀಚೆಗೆ ಇವರು ನಟಿಸಿರುವ ಸಿನಿಮಾಗಳು ಅಂದುಕೊಂಡ ಹಾಗೆ ಯಶಸ್ವಿಯಾಗಿಲ್ಲ. ಕಳೆದ ವರ್ಷ ತೆರೆಕಂಡ ಕಂಗುವ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋತಿತು, ಇನ್ನು ಇತ್ತೀಚೆಗೆ ತೆರೆಕಂಡ ರೆಟ್ರೋ ಸಿನಿಮಾ ಕೂಡ ಗೆಲ್ಲಲಿಲ್ಲ. ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ಗಳಿಸಿರುವುದು ಕೇವಲ 54 ಕೋಟಿ ರೂಪಾಯಿ ಮಾತ್ರ. ಈ ಸಿನಿಮಾ ಹಣವನ್ನು ಸಹ ಗಳಿಸಿಲ್ಲ. ಸೂರ್ಯ ಅವರು ಮುಂದಿನ ಸಿನಿಮಾದಲ್ಲಿ ಆದರೂ ಒಳ್ಳೆಯ ಕಂಟೆಂಟ್ ಇರುವ ಕಥೆ ಆಯ್ಕೆ ಮಾಡಿಕೊಂಡು, ಗೆಲುವು ಕಾಣಲಿ ಎನ್ನುವುದೇ ಇವರ ಫ್ಯಾನ್ಸ್ ಗಳ ಆಸೆ ಆಗಿದೆ.



