ಎಸ್ಸಿಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ನಾಗಮೋಹನ್ ದಾಸ್ ಸಮಿತಿಯನ್ನು ರಚನೆ ಮಾಡಿದ್ದೆ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಆದರೆ ಚುನಾವಣೆ ಹತ್ತಿರ ಬಂದಿರುವುದರಿಂದ ಬಿಜೆಪಿ ಸರ್ಕಾರ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಲಾಗಿದೆ ಎಂದು ತಮ್ಮನ್ನ ತಾವೇ ಬಿಂಬಿಸಿಕೊಳ್ಳಲು ಹೊರಟಿದ್ದಾರೆ ಈ ಬಗ್ಗೆ ಎಸ್ಸಿ ಎಸ್ಟಿ ಸಮುದಾಯದವರು ಎಚ್ಚರದಿಂದಿರಬೇಕು ಎಂದು ವರುಣ ಕ್ಷೇತ್ರದ ಶಾಸಕ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿದರು.
ಅವರು ಇಂದು ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹೆಬ್ಯ ಗ್ರಾಮದಲ್ಲಿ ಸುಮಾರು 30 ಲಕ್ಷ ರೂಗಳ ಹೆಚ್ಚಿದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ನೆರವೇರಿಸಿದ ಬಳಿಕ ಗ್ರಾಮದ ಮುಖಂಡರು ಗ್ರಾಮ ಪಂಚಾಯತಿ ಅಧ್ಯಕ್ಷರು ನೀಡಿದ ಸನ್ಮಾನ ಹಾಗೂ ಗೌರವವನ್ನು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಅವಧಿಯಲ್ಲಿ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಸಮಿತಿ ರಚನೆ ಮಾಡಿತ್ತು ಬಿಜೆಪಿ ಪಕ್ಷದವರು ನಮ್ಮ ಪಕ್ಷ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಎಸ್ಸಿ ಎಸ್ಟಿ ಮೀಸಲಾತಿ ಎಚ್ಚರ ಮಾಡುತ್ತೇವೆ ಎಂದು ರಾಜ್ಯದ ಜನತೆಗೆ ಭರವಸೆ ನೀಡಿದರು.

24ಗಂಟೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದು ಇದು ಸಹ ಮೀಸಲಾತಿ ಹೆಚ್ಚಳ ಮಾಡಿರಲಿಲ್ಲ ಆದರೆ ಕೆಲವೇ ದಿನಗಳಲ್ಲಿ ಚುನಾವಣೆ ಬರುತ್ತಿರುವುದರಿಂದ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿರುವವರು ನಾವು ಎಂದು ಹೇಳಿಕೊಂಡು ಜನರ ಮುಂದೆ ನಾಟಕವಾಡುವ ಒಂದು ಭಾಗವಾಗಿದೆ ಎಂದು ಸರ್ಕಾರ ನಾವೇ ಮಾಡಿದ್ದೇವೆ ಎಂದು ಹೇಳಿದ ವಿಚಾರಕ್ಕೆ ವರುಣ ಕ್ಷೇತ್ರದ ಶಾಸಕ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯ ಅವರು ಕಿಡಿಕಾರಿದರು ಅಲ್ಲದೆ ಈ ಬಗ್ಗೆ ಎಸ್ಸಿ ಎಸ್ಟಿ ಸಮುದಾಯದವರು ಬಿಜೆಪಿ ಪಕ್ಷದ ಹಾಗೂ ಸರ್ಕಾರದ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್ ಸಿ ಬಸವರಾಜು ತಗಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗವೇಣಿ ರಾಜು ತಾಲೂಕು ಪಂಚಾಯಿತಿ ಸದಸ್ಯ ಲಕ್ಷ್ಮಿ ಬಿಪಿ ಮಹಾದೇವ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಕಂಠಸ್ವಾಮಿ ಬಿ ಶಿವಣ್ಣ ಬಸಪ್ಪ ಚಂದ್ರು ಕಾಂಗ್ರೆಸ್ ಯುವ ಮುಖಂಡ ಗಿರೀಶ್ ರಾಯರ ಹುಂಡಿ ಮಾದಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ತಗಡೂರು ಯುವ ಕಾಂಗ್ರೆಸ್ ಉಪಾಧ್ಯಕ್ಷ ವಿಜಿ ಕಾರ್ಯದರ್ಶಿ ಕುಮಾರ್ ಹೆಜ್ಜೆಗೆ ರವಿಕುಮಾರ್ ಅರ್ಕೇಶ ವಕೀಲರಾದ ಎಂಸಿ ಹುಂಡಿ ಶಿವಪ್ರಸಾದ್ ಲಲಿತಾದ್ರಿಪುರ ಬಸವರಾಜು ರಮೇಶ ಸೇರಿದಂತೆ ಅನೇಕ ಮುಖಂಡರುಗಳು ಹಾಜರಿದ್ದರು