ಕಾಶ್ಮೀರದ ಪಹಲ್ಗಾಮದಲ್ಲಿ ನಡೆದ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ.
ಭಾರತದ ಪ್ರವಾಸಿಗರ ಮೇಲೆ ಪಾಕ್ ಯಾವಾಗ ದಾಳಿ ನಡೆಸಿ ಅಮಾಯಕರನ್ನ ಹತ್ಯೆ ಮಾಡ್ತೋ ಅಂದೇ ಇಡೀ ಭಾರತೀಯರ ರಕ್ತ ಕುದಿಯುವಂತೆ ಮಾಡಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಕಠಿಣ ನಿರ್ಧಾರಗಳನ್ನ ತೆಗೆದುಕೊಂಡಿದೆ. ಆದರೆ ಈಗ ಇದು ರಾಜಕೀಯಕ್ಕೂ ತಿರುಗಿದೆ. ಅಷ್ಟೆ ಅಲ್ಲ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ವಾಕ್ಸಮರಗಳು ಹಾಗೂ ರಾಜಕೀಯ ಕೆಸರೆರಚಾಟಗಳು ನಡೆಯುತ್ತಿವೆ.

ಇದರ ಮಧ್ಯೆ ಹತ್ಯೆ ನಡೆದ ಸ್ಥಳಕ್ಕೆ ಸಚಿವ ಸಂತೋಷ್ ಲಾಡ್ ಹೋಗಿ ಬಂದ ಬಳಿಕ ಅಲ್ಲಿನ ಘಟನೆಗಳನ್ನ ಎಳೆ ಎಳೆಯಾಗಿ ಬಿಚ್ವಿಡುತ್ತಿದ್ದಾರೆ. ಅಲ್ಲಿ ನಡೆದ ಘಟನೆಗೆ ನೇರವಾಗಿ ಕೇಂದ್ರದ ವೈಫಲ್ಯವೇ ಕಾರಣ ಅಂತಲೂ ಹೇಳುತ್ತಿದ್ದಾರೆ. ಇದು ಕೇವಲ ಅವರ ಮಾತಲ್ಲ ಅನೇಕರು, ಅಲ್ಲಿನ ಪ್ರವಾಸಿಗರು ಹೇಳ್ತಾ ಇರೋ ಹೇಳಿಕೆ. ಮೋದಿ ತೆಗೆದುಕೊಂಡ ನಿರ್ಧಾರಗಳು ಕೂಡ ಈಗ ಪ್ರಶ್ನೆ ಮಾಡುವಂತೆ ಇವೆ ಅನ್ನೋದು ಕಾಂಗ್ರೆಸ್ ವಾದ.
ಇದರ ಮಧ್ಯೆ ಅನೇಕ ವಿಚಾರಗಳನ್ನು ಕೇಂದ್ರ ಮುಚ್ವಿಟ್ಟಿದೆ ಅನ್ನೋದು ಕೂಡ ಅವರ ವಾದವಾಗಿದೆ. ಅಷ್ಟೆ ಅಲ್ಲ ಮೋದಿಯವರ ನಡೆಗೆ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ನರೇಂದ್ರ ಮೋದಿ ಇಲ್ಲಿ ರಾಜಕೀಯ ಮಾಡ್ತಾ ಇದ್ದಾರೆ. ಕಾಶ್ಮೀರಕ್ಕೆ ಹೋಗುವ ಬದಲು ಬಿಹಾರ್ ಹೋಗಿ ರಾಜಕೀಯ ಚುನಾವಣಾ ಪ್ರಚಾರ ಮಾಡ್ತಾ ಇದ್ದಾರೆ. ಇದು ಇವರ ರಾಜಕೀಯ. ಅವರನ್ನ ಪ್ರಶ್ನೆ ಮಾಡುವವರು ಯಾರೂ ಇಲ್ಲ. ಇವರೇ ಒಂದು ಟ್ರೆಂಡ್ ಸೆಟ್ ಮಾಡ್ತಾ ಇದ್ದಾರೆ. ಅಷ್ಟೆ ಅಲ್ಲ ಸೆಲಿಬ್ರಿಟಿಗಳನ್ನ ಕರೆದು ಟ್ರೆಂಡ್ ಸೆಟ್ ಮಾಡ್ತಾರೆ ಅಂತಲೂ ಕಿಡಿ ಕಾರಿದ್ದಾರೆ.

ಈ ಜೊತೆಗೆ ನಟ ಅಕ್ಷಯ್ ಕುಮಾರ್ ಮೇಲೂ ಆಕ್ರೋಶ ವ್ಯಕ್ತಪಡಿಸಿದ್ದಾರೆ ಸಂತೋಷ್ ಲಾಡ್. ಅಕ್ಷಯ್ ಕುಮಾರ್ಗೆ ಮೋದಿ ಇಂಟರ್ವ್ಯೂವ್ ಕೊಟ್ಟಿದ್ರು. ಅದಕ್ಕೆ ಮೋದಿ ಇಂಟರ್ವ್ಯೂವ್ ಮಾಡಿದ್ರು
ಅಕ್ಷಯ್ ಕುಮಾರ್ ಮೋದಿ ಮಾವಿನಹಣ್ಣು ಹೇಗೆ ತಿಂದ್ರಿ, ಹಣ್ಣು ಪೀಸ್ ಮಾಡಿ ತಿಂದ್ರಾ..? ಅಥವಾ ಕಿವುಚಿ ತಿಂದ್ರಾ ಅಂತೆಲ್ಲಾ ವಿಡಿಯೋ ಮಾಡಿದ್ರು. ಮೋದಿ ಬಗ್ಗೆ ಗುಣಗಾನ ಮಾಡಿದ್ರು. ಈಗ ಅವರನ್ನ ಹೋಗಿ ಕೇಳಬೇಕು. ಪಾಸ್ ಪೋರ್ಟ್ ಸಂಖ್ಯೆ ಎಷ್ಟು ಇಳಿದಿದೆ ಅಂತ.
ಎಐ ಕೇಂದ್ರ ಉದ್ಘಾಟನೆಗೆ ಕರಣ್ ಜೋಹರ್ ಕರೆಯುತ್ತಾರೆ. ಅವರಿಗೆ ಏನೇನು ಗೊತ್ತಿರಲ್ಲ, ಅವರು ಬಂದು ಉದ್ಘಾಟನೆ ಮಾಡ್ತಾರೆ. ಅವರೆಲ್ಲ ಡ್ರೀಮ್ ಎಲೆವೆನ್ ಪ್ರಮೋಷನ್ ಮಾಡ್ತಾರೆ. ಪಾರ್ಲಿಮೆಂಟಿನಲ್ಲಿಟ್ಟು ಆ್ಯಪ್ ಬ್ಯಾನ್ ಮಾಡಿ ನೋಡೋಣ. ಎಷ್ಟೋ ಯುವಕರು ಇವತ್ತು ಬೆಟ್ಟಿಂಗ್ ನಿಂದ ಸಾಯುತ್ತಿದ್ದಾರೆ. ಯಾಕೆ ಆಗ್ತಿಲ್ಲ ಇವರ ಕೈಯಲ್ಲಿ ಅಂತ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು ಸಂತೋಷ ಲಾಡ್.



