ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ರಾಜ್ಯದಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್ಟೇಬಲ್ ಸಿವಿಲ್, ಸೇವಾನಿರತ ಮತ್ತು ಬ್ಯಾಕ್ಲಾಗ್ ಸೇರಿದಂತೆ 1,137 ಹುದ್ದೆಗಳ ನೇರ ನೇಮಕಕ್ಕೆ ಪುರುಷ, ಮಹಿಳೆ ಮತ್ತು ತೃತೀಯ ಲಿಂಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯದಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್ಟೇಬಲ್ ಸಿವಿಲ್, ಸೇವಾನಿರತ ಮತ್ತು ಬ್ಯಾಕ್ಲಾಗ್ ಸೇರಿದಂತೆ 1,137 ಹುದ್ದೆಗಳ ನೇರ ನೇಮಕಕ್ಕೆ ಪುರುಷ, ಮಹಿಳೆ ಮತ್ತು ತೃತೀಯ ಲಿಂಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು 1,137ಹುದ್ದೆಗಳ ವಿವರ ಇಂತಿದೆ
ಪೊಲೀಸ್ ಕಾನ್ಸ್ಟೇಬಲ್ ಸಿವಿಲ್ ಹುದ್ದೆಗಳು:
ಪುರುಷ -683 ಹುದ್ದೆಗಳು
ಮಹಿಳೆ-229 ಹುದ್ದೆಗಳು
ಪುರುಷ ತೃತೀಯ ಲಿಂಗಿ -22 ಹುದ್ದೆಗಳು
ಮಹಿಳಾ ತೃತೀಯ ಲಿಂಗಿ – 10 ಹುದ್ದೆಗಳು
ಸೇವಾನಿರತ ಪೊಲೀಸ್ ಕಾನ್ಸ್ಟೇಬಲ್ ಸಿವಿಲ್ ಹುದ್ದೆಗಳು:
ಪುರುಷ – 134 ಹುದ್ದೆಗಳು
ಮಹಿಳೆ- 57 ಹುದ್ದೆಗಳು
ಪುರುಷ ತೃತೀಯ ಲಿಂಗಿ – 1 ಹುದ್ದೆ
ಮಹಿಳಾ ತೃತೀಯ ಲಿಂಗಿ – 1 ಹುದ್ದೆ
ನೇಮಕಾತಿ ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪಿಯುಸಿ ಉತ್ತೀರ್ಣರಾಗಿರಬೇಕು.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳ ವಯಸ್ಸು 25 ವರ್ಷಗಳು ಮೀರಿರಬಾರದು. ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 2 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಬುಡಕಟ್ಟು ಜನಾಂಗದಲ್ಲಿ ವಾಸಿಸುತ್ತಿರುವ ಅಭ್ಯರ್ಥಿಗಳಾಗಿದ್ದರೆ 5 ವರ್ಷಗಳ ವಯೋಮಿತಿ ಸಡಿಲಿಕೆ ಇದೆ.
ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ ಪ್ರವರ್ಗ 1 ಅಭ್ಯರ್ಥಿಗಳು 200 ರೂ ಅರ್ಜಿ ಶುಲ್ಕ ಪಾತಿಸಬೇಕು ಮತ್ತು ಸಾಮಾನ್ಯ, ಪ್ರವರ್ಗ -2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು 400 ರೂ ಅರ್ಜಿ ಶುಲ್ಕವನ್ನು ಆನ್ಲೈನ್ ಅಥವಾ ಚಲನ್ ಮೂಲಕ ಪಾವತಿ ಮಾಡಬೇಕು.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ, ದೈಹಿಕ ಗುಣಮಟ್ಟದ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅಕ್ಟೋಬರ್ 20.10.2022 (ಬೆಳಿಗ್ಗೆ 10.00 ಗಂಟೆ) ರಿಂದ ಅರ್ಜಿ ಸಲ್ಲಿಸಬಹುದು. 21.11.2022 ಅರ್ಜಿ ಸಲ್ಲಿಸಲು (ಸಂಜೆ 06.00 ಗಂಟೆ) ಕೊನೆಯ ದಿನವಾಗಿದೆ. ಶುಲ್ಕ ಸೇರಿದಂತೆ ಇತರೆ ಮಾಹಿತಿಗಾಗಿ https://ksp.karnataka.gov.in/ ಅಥವಾ https://ksp-recruitment.in/ ಇಲಾಖೆಯ ಅಧಿಕೃತ ವೆಬ್ ಸೈಟ್ಗೆ ಭೇಟಿ ನೀಡಬಹುದು.



