ಇಂದು 29 ಏಪ್ರಿಲ್ 2025 ಮಂಗಳವಾರ. ವಿಶ್ವವಸು ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ದ್ವಿತೀಯ. ಮಧ್ಯಾಹ್ನ 03:29 ರಿಂದ 05:02 ವರೆಗೆ ರಾಹುಕಾಲವಿರುತ್ತದೆ. ಮೇಷ ರಾಶಿಯವರು ಸಾಲದ ಸುಳಿಯಲ್ಲಿ ಸಿಲುಕುವ ಸಾಧ್ಯತೆ ಇದೆ. ಮೀನ ರಾಶಿಯವರಿಗೆ ಅನಿರೀಕ್ಷಿತ ಆರ್ಥಿಕ ಲಾಭವಾಗಲಿದೆ.
ಮೇಷ ರಾಶಿ
ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸ್ವಲ್ಪ ಮಟ್ಟಿನ ಪರಿಹಾರ ಸಿಗಲಿದೆ. ಸಾಲದ ಸುಳಿಯಲ್ಲಿ ಸಿಲುಕುವ ಸಾಧ್ಯತೆ ಇದೆ ಜಾಗ್ರತೆಯಿಂದ ವ್ಯವಹರಿಸಿ. ಸಾಡೇಸಾತಿ ಶುರುವಾಗಿದೆ, ಯಾವುದೇ ಕೆಲಸ ಮಾಡುವ ಮುನ್ನ ಎಚ್ಚರಿಕೆಯಿಂದಿರಿ, ಆದಷ್ಟು ಖರ್ಚು ಕಡಿಮೆ ಮಾಡಿ ಆದಾಯವನ್ನು ವೃದ್ಧಿ ಮಾಡಿಕೊಳ್ಳಿ. ವ್ಯಾಪಾರ ವ್ಯವಹಾರದಲ್ಲಿ ಲಾಭ ಕಡಿಮೆ ಇರುತ್ತದೆ. ಶುಭ ಸಮಾರಂಭಗಳಲ್ಲಿ ಭಾಗವಹಿಸುವಿರಿ, ಆತ್ಮೀಯರ ಭೇಟಿಯಿಂದ ಮನಸ್ಸಿಗೆ ಖುಷಿಯಾಗುತ್ತದೆ.
ವೃಷಭ ರಾಶಿ
ಬಹಳ ದಿನಗಳಿಂದ ಅನುಭವಿಸುತ್ತಿದ್ದ ಸಮಸ್ಯೆಗಳಿಗೆ ಸ್ವಲ್ಪ ಮಟ್ಟಿನ ಪರಿಹಾರ ದೊರೆಯಲಿದೆ. ಭಯ ಪಡುವ ಅಗತ್ಯವಿಲ್ಲ, ಹೊಸ ಉದ್ಯಮ ಆರಂಭಿಸಲು ಕಾಯುತ್ತಿರುವವರಿಗೆ ಶುಭ ದಿನವಾಗಿದೆ. ಕೆಲಸಗಳಲ್ಲಿ ಮನೆಯವರ ಸಹಾಯ, ಸಹಕಾರ ದೊರೆಯುತ್ತದೆ. ಇದರಿಂದ ಮನಸ್ಸಿಗೆ ಸಮಾಧಾನ ಇರುತ್ತದೆ. ಕೆಲವೊಂದು ವಿಚಾರಗಳಲ್ಲಿ ಗೊಂದಲ ಉಂಟಾಗುವ ಸಾಧ್ಯತೆ ಇದೆ. ಆತ್ಮವಿಶ್ವಾಸದಿಂದ ಮುಂದುವರೆಯಿರಿ.
ಮಿಥುನ ರಾಶಿ
ಹೂವು ಹಣ್ಣು, ತರಕಾರಿ ಬೆಳೆ ಬೆಳೆಯುವ ಕೃಷಿಕರಿಗೆ ಇಂದು ಉತ್ತಮ ಲಾಭವಾಗಲಿದೆ. ಹೋಟೆಲ್, ಕ್ಯಾಟರಿಂಗ್ ಬಿಸ್ನೆಸ್ ಮಾಡುವವರಿಗೆ ಕೂಡಾ ಲಾಭದಾಯಕ ದಿನವಾಗಿದೆ. ಹೊಸ ಕೆಲಸ ಆರಂಭಿಸಬೇಕು , ಆಸ್ತಿ ಖರೀದಿಸಬೇಕು ಎನ್ನುವವರು ಕೆಲಸವನ್ನು ಮುಂದೂಡಿದರೆ ಉತ್ತಮ, ಇಲ್ಲದಿದ್ದರೆ ನಷ್ಟ ಉಂಟಾಗುವ ಸಾಧ್ಯತೆ ಇದೆ.
ಕಟಕ ರಾಶಿ:
ವ್ಯಾಪಾರದಲ್ಲಿ ಯಥೇಚ್ಛ ಲಾಭವಿದೆ. ಪೊಲೀಸ್ ಇಲಾಖೆ, ರಕ್ಷಣಾ ಇಲಾಖೆಯಲ್ಲಿರುವವರಿಗೆ ಬಡ್ತಿ ದೊರೆಯಬಹುದು, ವರ್ಗಾವಣೆ ಬಯಸುತ್ತಿರುವವರಿಗೆ ಸಿಹಿಸುದ್ದಿ ದೊರೆಯಲಿದೆ, ಇವೆಂಟ್ ಮ್ಯಾನೇಜ್ಮೆಂಟ್ , ಕುಶಲಕರ್ಮಿಗಳು, ಬಟ್ಟೆ ಉದ್ಯಮದವರಿಗೆ ಕೂಡಾ ಲಾಭ ದೊರೆಯಲಿದೆ. ಕೃಷಿ ಚಟುವಟಿಕೆ ಆರಂಭಿಸಬೇಕು ಎಂದುಕೊಂಡಿರುವವರಿಗೆ ಭೂದೇವಿ ಆಶೀರ್ವಾದ ದೊರೆಯಲಿದೆ.
ಸಿಂಹ ರಾಶಿ
ಮಾಡುವ ಕೆಲಸದಲ್ಲಿ ವೃದ್ಧಿ ಉಂಟಾಗಲಿದೆ, ಹೊಸ ಕೆಲಸ ಆರಂಭಿಸಬೇಕು ಎನ್ನುವವರು ಕೆಲವು ದಿನಗಳ ಕಾಲ ಮುಂದೂಡಿ. ಇಲ್ಲದಿದ್ದರೆ ನೀವು ಸಮಸ್ಯೆ ಅನುಭವಿಸುವ ಸಾಧ್ಯತೆ ಇದೆ, ಭೂಮಿ ವ್ಯಾಜ್ಯದಂಥ ಪಿತ್ರಾರ್ಜಿತ ಆಸ್ತಿ ವಿವಾದದಲ್ಲಿ ಸಿಲುಕಿರುವವರಿಗೆ ಸ್ವಲ್ಪ ಮಟ್ಟಿನ ಪರಿಹಾರ ದೊರೆಯಲಿದೆ, ಸ್ನೇಹಿತರ ವಿರೋಧ ಕಟ್ಟಿಕೊಳ್ಳಲಿದ್ದೀರಿ. ನೀವು ಆಡುವ ಮಾತುಗಳಿಂದಲೇ ತೊಂದರೆ ಎದುರಿಸುವ ಸಾಧ್ಯತೆ ಇದೆ. ಸಮಸ್ಯೆಯ ಸುಳಿಯಲ್ಲಿ ಸಿಲುಕುವಿರಿ. ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿ. ಇಲ್ಲದಿದ್ದರೆ ಗಂಭೀರ ಸಮಸ್ಯೆ ಉಂಟಾಗಬಹುದು.
ಕನ್ಯಾ ರಾಶಿ
ಅತಿಯಾದ ಬುದ್ಧಿವಂತಿಕೆ ತೋರಬೇಡಿ, ಇಲ್ಲದಿದ್ದರೆ ಸಮಸ್ಯೆ ಉಂಟಾಗುತ್ತದೆ. ಇದು ನಿಮಗೆ ದೊಡ್ಡ ಅಪಾಯವನ್ನೇ ಉಂಟು ಮಾಡಬಹುದು, ಏನೇ ಸಮಸ್ಯೆ ಇದ್ದರೂ ಬುದ್ಧಿವಂತಿಕೆಯಿಂದ , ತಾಳ್ಮೆಯಿಂದ ಪರಿಹರಿಸಿಕೊಳ್ಳಿ, ವ್ಯಾಪಾರದಲ್ಲಿ ಲಾಭ ಕಡಿಮೆ ಇರಲಿದೆ. ಆತ್ಮೀಯರೊಂದಿಗೆ ಭೂರಿ ಭೋಜನ ಮಾಡುವಿರಿ.
ತುಲಾ ರಾಶಿ
ಆರೋಗ್ಯದಲ್ಲಿ ಏರು ಪೇರಾಗಲಿದೆ. ಕೆಲಸದಲ್ಲಿ ಬಹಳ ಒತ್ತಡ ಅನುಭವಿಸುವಿರಿ, ಏಕಾಗ್ರತೆಯಿಂದ ಕೆಲಸ ಮಾಡಿದರೆ ಎಲ್ಲವೂ ಸುಸೂತ್ರವಾಗಿ ಸಾಗಲಿದೆ. ಕುಟುಂಬದ ಸದಸ್ಯರು ನೀವು ಮಾಡುವ ಕೆಲಸಕ್ಕೆ ಪ್ರೋತ್ಸಾಹ ನೀಡಲಿದ್ದಾರೆ. ಆತ್ಮೀಯ ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಲಿದೆ. ತಾಳ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿ, ಇಲ್ಲದಿದ್ದರೆ ಸಂಬಂಧದಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ
ಬಹಳ ದಿನಗಳಿಂದ ನಿಮ್ಮನ್ನು ಕಾಡುತ್ತಿದ್ದ ಆರೋಗ್ಯ ಸಮಸ್ಯೆ ಕಡಿಮೆಯಾಗಲಿದೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭ ದೊರೆಯಲಿದೆ, ಕುಟುಂಬದಲ್ಲಿ ಸಂತೋಷ ಇರುತ್ತದೆ. ಬಟ್ಟೆ ವ್ಯಾಪಾರಿಗಳಿಗೆ, ಹೂವಿನ ವ್ಯಾಪಾರಿಗಳಿಗೆ, ಮಂಗಳದ್ರವ್ಯಗಳ ವ್ಯಾಪಾರ ಮಾಡುವವರಿಗೆ ಹೆಚ್ಚು ಲಾಭವಾಗಲಿದೆ. ಇಷ್ಟದೇವರ ದರ್ಶನದಿಂದ ಮನಸ್ಸಿಗೆ ಶಾಂತಿ ದೊರೆಯಲಿದೆ.
ಧನು ರಾಶಿ
ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಮೂಲಕ ಆತ್ಮೀಯರನ್ನು ಭೇಟಿ ಮಾಡುವಿರಿ, ಚಿನ್ನದ ವ್ಯಾಪಾರಿಗಳಿಗೆ ಕೆಲಸದಲ್ಲಿ ಅಡತಡೆಗಳು ಉಂಟಾಗಬಹುದು, ಶಿಕ್ಷಕರಿಗೆ, ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಬಹಳ ಒಳ್ಳೆಯ ದಿನ. ಹೊಸ ಕೆಲಸವನ್ನು ಆರಂಭಿಸಬಹುದು, ಆಟೋ, ಕ್ಯಾಬ್ ಚಾಲಕರಿಗೆ ದ್ವಿಗುಣ ಲಾಭವಿರಲಿದೆ. ಗೃಹಿಣಿಯರಿಗೆ ಇಂದು ಬಹಳ ಒತ್ತಡದ ದಿನವಾಗಿರುತ್ತದೆ.
ಮಕರ ರಾಶಿ
ಕೆಲಸದಲ್ಲಿ ಅಧಿಕಾರಿಗಳ, ಜನರ ವಿರೋಧ ಎದುರಾಗಲಿದೆ. ಆತ್ಮವಿಶ್ವಾಸ ತಗ್ಗಲಿದೆ. ಶ್ರದ್ಧೆ, ಏಕಾಗ್ರತೆಯಿಂದ ಮುಂದುವರೆದರೆ ಎಲ್ಲವೂ ಒಳ್ಳೆಯದಾಗಲಿದೆ. ರಕ್ತ ಪರೀಕ್ಷಾ ಕೇಂದ್ರ ನಡೆಸುತ್ತಿರುವವರಿಗೆ ಲಾಭ ದೊರೆಯಲಿದೆ, ಕೃಷಿಕರಿಗೆ ಲಾಭವಾಗಲಿದೆ, ಮಾಡಿದ ಸಾಲ ತೀರಿಸುವಿರಿ, ದೂರದ ಪ್ರಯಾಣ ಮಾಡುವವರು ಎಚ್ಚರಿಕೆಯಿಂದ ಇರಿ.
ಕುಂಭ ರಾಶಿ
ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರಿಗೆ ಲಾಭ ಕಡಿಮೆ ಇರಲಿದೆ. ಚರ್ಮದ ವಸ್ತುಗಳ ತಯಾರಿಕರಿಗೆ ಉತ್ತಮ ಲಾಭವಾಗಲಿದೆ, ಹೊಸ ಮನೆ ಅಥವಾ ಕಟ್ಟಡ ಕಟ್ಟಬೇಕು ಎಂದುಕೊಂಡಿರುವವರು ಹೊಸ ಹೆಜ್ಜೆ ಇಡಲಿದ್ದೀರಿ. ಹಿತಶತ್ರುಗಳು ಮನೆಯ ನೆಮ್ಮದಿ ಹಾಳುಮಾಡಬಹುದು, ಎಚ್ಚರದಿಂದಿರಿ.
ಮೀನ ರಾಶಿ
ಈ ದಿನ ಮಾಡುವ ಎಲ್ಲಾ ಕೆಲಸಗಳಲ್ಲೂ ಒತ್ತಡದ ದಿನವಾಗಿರುತ್ತದೆ. ಕಲಾವಿದರಿಗೆ ಶುಭ ದಿನವಾಗಿದೆ. ವ್ಯಾಪಾರ ವ್ಯವಹಾರದಲ್ಲಿ ಲಾಭ ದೊರೆಯಲಿದೆ. ಇಂದು ಅನಿರೀಕ್ಷಿತವಾಗಿ ಆರ್ಥಿಕ ಲಾಭವಾಗಲಿದೆ. ಬಹಳ ದಿನಗಳಿಂದ ಬಾಕಿ ಉಳಿದಿರುವ ಕೆಲಸಗಳು ಇಂದು ಪೂರ್ಣಗೊಳ್ಳಲಿದೆ.
ಶ್ರೀ ದರ್ಶನ್ ದೀಕ್ಷಿತ್ ಗುರೂಜಿಯನ್ನು ನೇರವಾಗಿ ಭೇಟಿ ಮಾಡಲು 9902595318, 9041874187 ಮೊಬೈಲ್ ನಂಬರನ್ನು ಸಂಪರ್ಕಿಸಿ



