ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕನ್ನಡ ಸ್ಟಾರ್ ಹೀರೋ ಆಗಿದ್ದವರು. ಇಂದು ಅವರು ದೈಹಿಕವಾಗಿ ನಮ್ಮ ಜೊತೆ ಇಲ್ಲದೇ ಹೋದರು ಸಹ, ಅವರ ನೆನಪುಗಳು ಎಲ್ಲರ ಜೊತೆಗಿದೆ. ಅಪ್ಪು ಅವರ ಯಾವ ಅಭಿಮಾನಿ ಕೂಡ ಮರೆತಿಲ್ಲ ಹಾಗು ಮರೆಯುವುದು ಇಲ್ಲ. ಇನ್ನು ಪುನೀತ್ ರಾಜ್ ಕುಮಾರ್ ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಇವರ ಮಗಳು ಧೃತಿ ವಿದೇಶದಲ್ಲಿ ಓದುತ್ತಿದ್ದಾರೆ. ಧೃತಿ ಅವರು ಓದುತ್ತಿರುವುದು ಯಾವ ಕಾಲೇಜಿನಲ್ಲಿ? ಅಲ್ಲಿನ ವಿಶೇಷತೆ ಏನು ಗೊತ್ತಾ? ಪೂರ್ತಿ ಮಾಹಿತಿ ತಿಳಿಸುತ್ತೇವೆ ನೋಡಿ..
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಚಿಕ್ಕಮಗಳೂರು ಮೂಲದ ರೇವನಾಥ್ ಅವರ ಮಗಳು ಅಶ್ವಿನಿ ಅವರನ್ನು ಪ್ರೀತಿಸಿ ಮದುವೆಯಾದರು. ಇವರಿಬ್ಬರು ಮಾದರಿ ಜೋಡಿ, ಅಪ್ಪು ಅವರು ಇದ್ದಷ್ಟು ದಿವಸ ಕೂಡ ಅಶ್ವಿನಿ ಅವರು ಗಂಡನಿಗೆ ಸಾಥ್ ನೀಡಿ, ಎಲ್ಲಾ ಕೆಲಸಗಳಲ್ಲೂ ಅಪ್ಪು ಅವರ ಜೊತೆಗೆ ಇರುತ್ತಿದ್ದರು. ಅಪ್ಪು ಅವರು ವಿಧಿವಶರಾದ ಬಳಿಕ ಅಪ್ಪು ಅವರ ಕನಸುಗಳನ್ನು ನನಸು ಮಾಡುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಇದ್ದಾಗ ಶುರು ಮಾಡಿದ ಪಿ.ಆರ್.ಕೆ ಸಂಸ್ಥೆಯನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಒಳ್ಳೆಯ ಸಿನಿಮಾಗಳನ್ನು ಕನ್ನಡ ಚಿತ್ರಪ್ರೇಮಿಗಳಿಗೆ ನೀಡುತ್ತಿದ್ದಾರೆ.

ಇನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು. ಮೊದಲನೆಯ ಮಗಳು ಧೃತಿ ಪುನೀತ್ ರಾಜ್ ಕುಮಾರ್, ಎರಡನೆಯ ಮಗಳು ವಂದಿತಾ ಪುನೀತ್ ರಾಜ್ ಕುಮಾರ್. ಇವರ ಮಗಳು ವಂದಿತಾ ಈಗ ಕಾಲೇಜಿನಲ್ಲಿ ಓದುತ್ತಿದ್ದಾರೆ. ಇವರು ಬೆಂಗಳೂರಿನಲ್ಲೇ ಓದುತ್ತಿದ್ದು, ಮೊದಲನೆಯ ಮಗಳು ಧೃತಿ ಪುನೀತ್ ರಾಜ್ ಕುಮಾರ್ ವಿದೇಶದಲ್ಲಿ ಓದುತ್ತಿದ್ದಾರೆ. ನಮಗೆಲ್ಲಾ ಗೊತ್ತಿರುವ ಹಾಗೆ ಭಾರತದಿಂದ ಪ್ರತಿ ವರ್ಷ 7.5 ಲಕ್ಷ ವಿದ್ಯಾರ್ಥಿಗಳು ವಿದೇಶಕ್ಕೆ ಓದಲು ಹೋಗುತ್ತಾರೆ.
ಅಮೆರಿಕಾ, ಲಂಡನ್, ಕೆನಡಾ ಸೇರಿದಂತೆ ಹಲವು ದೇಶಗಳಿಗೆ ಹೋಗಿ ಒಳ್ಳೆಯ ಕಾಲೇಜುಗಳಲ್ಲಿ ಓದುತ್ತಾರೆ. ಅದೇ ರೀತಿ ಧೃತಿ ಅವರು ಕೂಡ ಓದುತ್ತಿದ್ದಾರೆ, ಇವರ ಬಗ್ಗೆ ವಿಶೇಷ ಏನು ಎಂದರೆ, ಧೃತಿ ಅವರು ತಂದೆ ಅಥವಾ ತಾಯಿಯ ದುಡ್ಡಿನಲ್ಲಿ ವಿದೇಶಕ್ಕೆ ಓದಲು ಹೋಗಿಲ್ಲ. ತಮ್ಮ ಸ್ವಂತ ಪರಿಶ್ರಮದಿಂದ ಎಕ್ಸಾಂ ಬರೆದು, ಸ್ಕಾಲರ್ಶಿಪ್ ಪಡೆದು ವಿದೇಶಕ್ಕೆ ಓದಲು ಹೋಗಿದ್ದಾರೆ. ಅಪ್ಪ ಅಮ್ಮನಿಂದ ಒಂದು ರೂಪಾಯಿಯನ್ನು ಕೂಡ ಧೃತಿ ಅವರು ಪಡೆದಿಲ್ಲ ಎನ್ನುವುದು ಹೆಮ್ಮೆ ಪಡಬೇಕಾದ ವಿಚಾರ. ಇನ್ನು ಧೃತಿ ಅವರು ಓದುತ್ತಿರುವುದು ನ್ಯೂಯಾರ್ಕ್ ನಲ್ಲಿ.
ಇವರ ಕಾಲೇಜಿನ ಹೆಸರು ಪಾರ್ಸನ್ಸ್ ಕಾಲೇಜ್, ಇದನ್ನು ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್ ಎಂದು ಸಹ ಕರೆಯುತ್ತಾರೆ. ಇದು ಅಮೆರಿಕಾದ ಅತ್ಯಂತ ಹಳೆಯ ಕಾಲೇಜುಗಳಲ್ಲಿ ಒಂದು, 1800ರ ವೇಳೆಯಲ್ಲೇ ಶುರುವಾರ ವಿಶ್ವವಿದ್ಯಾಲಯ ಇದು. ಇಲ್ಲಿ ಫ್ಯಾಶನ್ ಡಿಸೈನಿಂಗ್, ಇಂಟೀರಿಯರ್ ಡಿಸೈನಿಂಗ್, ಗ್ರಾಫಿಕ್ ಡಿಸೈನಿಂಗ್ ಸೇರಿದಂತೆ ಹಲವು ಕೋರ್ಸ್ ಗಳಿವೆ. ಇಲ್ಲಿ ಒಂದು ಸೆಮಿಸ್ಟರ್ ಗೆ ಟ್ಯೂಷನ್ ಫೀಸ್ $28 ಸಾವಿರ ಡಾಲರ್ ಇಂದ $29 ಸಾವಿರ ಡಾಲರ್ ಗಳ ವರೆಗು ಇರುತ್ತದೆ ಎಂದು ಅಂದಾಜಿಸಲಾಗಿದೆ. ಇದನ್ನು ಹೊರತುಪಡಿಸಿ, ಬುಕ್ಸ್ ಫೀಸ್, ವಾಸದ ವ್ಯವಸ್ಥೆಗೆ ಬೇರೆ ಖರ್ಚು ಇರುತ್ತದೆ ಎಂದು ಮಾಹಿತಿ ಸಿಕ್ಕಿದೆ.



