ಕನ್ನಡ ಕಿರುತೆರೆಯ ನಟಿ ರಂಜನಿ ರಾಘವನ್ ಅವರು ಈಗ ಮನರಂಜನಾ ಮಾಧ್ಯಮದ ಹಲವು ಆಯಾಮಗಳಲ್ಲಿ ಪ್ರಯೋಗ ಮಾಡುವುದಕ್ಕೆ ಶುರು ಮಾಡಿದ್ದಾರೆ. ನಟಿಯಾಗಿದ್ದ ಇವರು ಈಗ ನಿರ್ದೇಶಕಿಯಾಗಿದ್ದಾರೆ. ಢಿ ಢಿ ಢಿಕ್ಕಿ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ ಎನ್ನುವ ವಿಷಯ ನಮಗೆಲ್ಲ ಗೊತ್ತೇ ಇದೆ. ಈ ಸಿನಿಮಾದ ಪ್ರೊಮೋಷನ್ ಗಳಲ್ಲಿ ಹೆಚ್ಚು ನಿರತರಾಗಿದ್ದಾರೆ ರಂಜನಿ ಅವರು. ರಂಜನಿ ಅವರು ತಮ್ಮ ಕೆರಿಯರ್ ನಲ್ಲಿ ಇನ್ನು ಎತ್ತರಕ್ಕೆ ಬೆಳೆಯುತ್ತಿದ್ದಾರೆ ಎನ್ನುವ ವಿಷಯ ನಮಗೆಲ್ಲ ಗೊತ್ತೇ ಇದೆ. ರಂಜನಿ ಅವರು ಕಿರುತೆರೆಗೆ ನಟಿಯಾಗಿ ಎಂಟ್ರಿ ಕೊಡುವುದಕ್ಕಿಂತ ಮೊದಲೇ ಶಾಲಾ ದಿನಗಳಲ್ಲೇ ಒಂದು ಶೋನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಆ ಶೋ ಯಾವುದು? ರಂಜನಿ ಅವರ ಪ್ಯಾಷನ್ ಏನು ಎನ್ನುವ ಬಗ್ಗೆ ಫುಲ್ ಡೀಟೇಲ್ಸ್ ಇಲ್ಲಿದೆ..

ರಂಜನಿ ಅವರು ಎಷ್ಟು ಚೆನ್ನಾಗಿ ಕನ್ನಡ ಮಾತಾಡ್ತಾರೆ, ಅವರಿಗೆ ಕನ್ನಡದ ಬಗ್ಗೆ ಎಷ್ಟು ಗೌರವ ಪ್ರೀತಿ ಇದೆ ಎಂದು ನಮಗೆಲ್ಲಾ ಗೊತ್ತೇ ಇದೆ. ಕನ್ನಡತಿ ಧಾರಾವಾಹಿಯ ಮೂಲಕ ರಂಜನಿ ಅವರು ಮನೆಮಾತಾದರು, ಆ ಧಾರಾವಾಹಿಯ ಪ್ರತಿ ಸಂಚಿಕೆಯ ಕೊನೆಯಲ್ಲಿ ಅವರು ಹೇಳಿಕೊಡುತ್ತಿದ್ದ ಕನ್ನಡ ಪಾಠ ಎಲ್ಲರ ಮೆಚ್ಚುಗೆ ಗಳಿಸಿತ್ತು. ಪ್ರತಿದಿನ ಒಂದು ಕನ್ನಡ ಪದದ ಬಗ್ಗೆ ರಂಜನಿ ಅವರು ತಿಳಿಸುತ್ತಿದ್ದರು. ಹಾಗೆಯೇ ಧಾರಾವಾಹಿಯಲ್ಲಿ ಇವರು ಮಾತನಾಡುವ ಸ್ಪಷ್ಟವಾದ ಕನ್ನಡ ಸಹ ಎಲ್ಲರಿಗೂ ತುಂಬಾ ಇಷ್ಟವಾಗಿತ್ತು. ಕನ್ನಡದ ಬಗ್ಗೆ ಇರುವ ಪ್ರೀತಿ ಹೇಗಿದೆ ಅಂದ್ರೆ ರಂಜನಿ ಅವರು ಕನ್ನಡದಲ್ಲಿ ಎರಡು ಪುಸ್ತಕಗಳನ್ನು ಸಹ ಬರೆದಿದ್ದಾರೆ. ಕತೆ ಡಬ್ಬಿ ಮತ್ತು ಸ್ವೈಪ್ ರೈಟ್. ಒಂದು ಕಾದಂಬರಿ, ಒಂದು ಸಣ್ಣ ಕಥೆಗಳ ಪುಸ್ತಕ. ಹೀಗೆ ರಂಜನಿ ರಾಘವನ್ ಅವರಿಗೆ ಕನ್ನಡ ಪ್ರೇಮ ತುಂಬಾ ಇದೆ.
ರಂಜನಿ ಅವರು ಕಿರುತೆರೆಯಲ್ಲಿ ನಟಿಯಾಗಿ ಮಿಂಚಿದರು, ಆಕಾಶ ದೀಪ, ಪುಟ್ಟಗೌರಿ ಮದುವೆ, ಕನ್ನಡತಿ ಧಾರಾವಾಹಿಗಳಲ್ಲಿ ನಟಿಸಿದರು. ಈ ಮೂರು ಧಾರಾವಾಹಿಗಳು ಕೂಡ ಸೂಪರ್ ಹಿಟ್ ಆದವು, ಇವರ ಅಭಿನಯ ಮತ್ತು ಆ ಕಥೆ ಎಲ್ಲವೂ ಸಹ ಜನರಿಗೆ ಬಹಳ ಇಷ್ಟವಾಯಿತು. ಸ್ಯಾಂಡಲ್ ವುಡ್ ಗೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದು ಆಗಿದೆ, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾದಲ್ಲಿ ರಂಜನಿ ರಾಘವನ್ ಅವರು ದಿಗಂತ್ ಅವರಿಗೆ ನಾಯಕಿಯಾಗಿ ನಟಿಸಿದರು. ಈ ಸಿನಿಮಾ ಬಳಿಕ ರಂಜನಿ ಅವರು ಒಂದು ಬ್ರೇಕ್ ಪಡೆದು ಈಗ ತೆರೆ ಮುಂದೆ ಅಲ್ಲದೇ, ತೆರೆ ಹಿಂದೆ ನಿರ್ದೇಶಕಿಯಾಗಿ ಕೆಲಸ ಶುರು ಮಾಡಿದ್ದಾರೆ. ಇವರು ನಿರ್ದೇಶನ ಮಾಡುತ್ತಿರುವ ಸಿನಿಮಾ ಹೆಸರು ಢಿ ಢಿ ಢಿಕ್ಕಿ. ಇದೊಂದು ವಿಭಿನ್ನ ಕಥಾಹಂದರ ಹೊಂದಿರುವ ಸಿನಿನ ಆಗಿದೆ. ಸಿನಿಮಾ ಮೇಲೆ ಭಾರಿ ನಿರೀಕ್ಷೆ ಕೂಡ ಇದೆ.

ಈ ಸಿನಿಮಾದಲ್ಲಿ ನೆನಪಿರಲಿ ಪ್ರೇಮ್ ಅವರು ನಾಯಕನಾಗಿ ನಟಿಸುತ್ತಿದ್ದು, ಗೋಲ್ಡನ್ ಸ್ಟಾರ್ ಗಣೇಶ್ ಅವರ ಮಗ ಢಿ ಢಿ ಢಿಕ್ಕಿ ಸಿನಿಮಾ ಮೂಲಕ ಬಾಲನಟನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾನೆ. ಮೊದಲ ಸಿನಿಮಾಗೆ ಬಹಳ ವಿಶೇಷವಾದ ಕಾನ್ಸೆಪ್ಟ್ ಅನ್ನೇ ಇಟ್ಟುಕೊಂಡಿದ್ದಾರೆ ರಂಜನಿ ಅವರು. ಇವರ ಸಿನಿಮಾಗೆ ಭಾರತ ಚಿತ್ರರಂಗದ ಮಾಂತ್ರಿಕ ಸಂಗೀತ ನಿರ್ದೇಶಕ ಇಳಯರಾಜ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ, ಇದು ಎಂಥಾ ಒಳ್ಳೇ ವಿಷಯ ಅಲ್ವಾ. ತಮ್ಮ ಸಿನಿಮಾವನ್ನು ಒಳ್ಳೆಯ ರೀತಿಯಲ್ಲಿ ಜನರಿಗೆ ಪ್ರೆಸೆಂಟ್ ಮಾಡಬೇಕು ಜನರಿಗೆ ಒಳ್ಳೆಯ ಕಥೆಯನ್ನು ಕೊಡಬೇಕು ಎಂದು ಬಹಳ ಶ್ರಮ ಪಡುತ್ತಿದ್ದಾರೆ. ತಮ್ಮ ಸಿನಿಮಾವನ್ನು ಪ್ರೊಮೋಟ್ ಮಾಡುವುದಕ್ಕೆ ಬಹಳ ಪ್ಲಾನ್ ಗಳನ್ನು ಕೂಡ ಮಾಡಿಕೊಂಡಿದ್ದಾರೆ ರಂಜನಿ. ಇದರ ನಡುವೆ ಇವರ ಬಗ್ಗೆ ಇನ್ನಷ್ಟು ವಿಚಾರಗಳು ವೈರಲ್ ಆಗಿದೆ..
ಹೌದು, ರಂಜನಿ ರಾಘವನ್ ಅವರು ಮಲ್ಟಿ ಟ್ಯಾಲೆಂಟೆಡ್ ಹುಡುಗಿ ಆಗಿದ್ದಾರೆ. ಇವರು ನಟನೆಯಲ್ಲಿ ನಿಸ್ಸಿಮರು, ಬರವಣಿಗೆಯಲ್ಲಿ ಮುಂದಿದ್ದಾರೆ, ಒಳ್ಳೆಯ ಕಥೆಗಳನ್ನು ಬರೆಯುತ್ತಾರೆ, ಈಗ ನಿರ್ದೇಶನ ಶುರು ಮಾಡಿದ್ದಾರೆ. ಇದರ ಜೊತೆಗೆ ರಂಜನಿ ಅವರಿಗೆ ಮತ್ತೊಂದು ಪ್ಯಾಷನ್ ಕೂಡ ಇದೆ. ಅದೇನು ಎಂದರೆ, ಹಾಡುವುದು. ಹೌದು ರಂಜನಿ ಅವರಿಗೆ ಚಿಕ್ಕ ವಯಸ್ಸಿನಿಂದ ಕೂಡ ಹಾಡುವುದು ಅಂದ್ರೆ ತುಂಬಾ ಇಷ್ಟವಂತೆ. ಧಾರಾವಾಹಿಯಲ್ಲಿ ಕೂಡ ಕೆಲವು ಬಾರಿ ಹಾಡಿದ್ದಾರೆ, ಇಂಥ ಮಲ್ಟಿ ಟ್ಯಾಲೆಂಟೆಡ್ ರಂಜನಿ ಅವರು ಕಿರುತೆರೆ, ಬೆಳ್ಳಿತೆರೆ ಎಂಟ್ರಿ ಗಿಂತ ಮೊದಲೇ, ಶಾಲೆಯ ದಿನಗಳಲ್ಲಿ ಒಂದು ಶೋನಲ್ಲಿ ಕಾಣಿಸಿಕೊಂಡಿದ್ದರು. ಅದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ಲಿಟ್ಲ್ ಸ್ಟಾರ್ ಸಿಂಗರ್ ಶೋ ಆಗಿತ್ತು. 9ನೇ ತರಗತಿಯಲ್ಲಿ ಇದ್ದಾಗ ಈ ಶೋನಲ್ಲಿ ಸ್ಪರ್ಧಿಸಿದ್ದರು ರಂಜನಿ.

ಅಂದು ಇವರು ಶೋನಲ್ಲಿ ಗೆದ್ದಿರಲಿಲ್ಲ, ಹಾಡುವ ಬಗೆಗಿನ ಆಸಕ್ತಿಯಿಂದ ಶೋನಲ್ಲಿ ಪಾರ್ಟಿಸಿಪೇಟ್ ಮಾಡಿದ್ದರು, ಹಾಗೆಯೇ ರಂಜನಿ ಅವರು ಸ್ಕೂಲ್ ನಲ್ಲಿ ಕೂಡ ಹಾಡುವ ಕಾರಣಕ್ಕೆ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರಂತೆ. ಹಾಡುವುದು ಅಂದರೆ ಅಷ್ಟು ಇಷ್ಟವಂತೆ ರಂಜನಿ ಅವರಿಗೆ. 9ನೇ ತರಗತಿಯಲ್ಲೇ ಅವರಿಗೆ ಬಣ್ಣದ ಲೋಕದ ನಂಟು ಇತ್ತು ಅನ್ನೋದು ಹಲವರಿಗೆ ಗೊತ್ತಿರದ ವಿಷಯ. ಇತ್ತೀಚೆಗೆ ರಂಜನಿ ಅವರು ಒಂದು ಇಂಟರ್ವ್ಯೂನಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲಿ ಈ ಎಲ್ಲಾ ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ. ರಂಜನಿ ಅವರ ಫ್ಯಾನ್ಸ್ ಈ ವಿಚಾರವನ್ನು ಕೇಳಿ, ಸಂತೋಷ ಪಟ್ಟಿದ್ದಾರೆ. ಇದೆಲ್ಲದರ ಜೊತೆಗೆ ಮತ್ತೊಂದು ವಿಷಯ ಕೂಡ ಇದೆ. ಅದು ರಂಜನಿ ಅವರ ವೈಯಕ್ತಿಕ ಜೀವನದ ಬಗ್ಗೆ ಆಗಿದೆ. ರಂಜನಿ ಅವರು ಈಗಾಗಲೇ ತಮ್ಮ ಹುಡುಗನನ್ನು ಸೋಷಿಯಲ್ ಮೀಡಿಯಾ ಮೂಲಕ ಪರಿಚಯ ಮಾಡಿದ್ದಾರೆ.
ರಂಜನಿ ಅವರು ಪ್ರೀತಿ ಮಾಡುತ್ತಿರುವ ಹುಡುಗನ ಹೆಸರು ಸಾಗರ್. ಇವರಿಬ್ಬರು ಪಿಯುಸಿ ಓದುವ ಸಮಯದಿಂದ ಕೂಡ ಫ್ರೆಂಡ್ಸ್ ಆಗಿದ್ದು, ತಮ್ಮ ನಡುವೆ ಫ್ರೆಂಡ್ಶಿಪ್ ಗಿಂತ ಹೆಚ್ಚಿನ ಭಾವನೆ ಇದೆ ಎನ್ನುವುದು ಇಬ್ಬರಿಗೂ ಅರಿವಾಗಿ, ಪ್ರೀತಿ ನಿವೇದನೆ ಮಾಡಿಕೊಂಡು, ಮದುವೆ ಆಗುವುದಕ್ಕೆ ಸಿದ್ಧವಾಗಿದ್ದಾರೆ. ಮನೆಯಲ್ಲಿ ಸಹ ಎಲ್ಲರ ಒಪ್ಪಿಗೆ ಪಡೆದು ಈ ಜೋಡಿ ಮದುವೆ ಆಗುವುದಕ್ಕೆ ಸಿದ್ಧವಾಗಿದ್ದಾರೆ. ರಂಜನಿ ರಾಘವನ್ ಅವರು ವೈಯಕ್ತಿಕವಾಗಿ ಮತ್ತು ವೃತ್ತಿಯಲ್ಲಿ ಎರಡು ಕಡೆ ಒಳ್ಳೆಯ ಹಂತವನ್ನು ತಲುಪಿದ್ದು, ಇವರ ಮುಂದಿನ ಭವಿಷ್ಯ ಒಳ್ಳೆಯದಾಗಲಿ ಎಂದು ಹಾರೈಸೋಣ..



