ನಟಿ ನಮ್ರತಾ ಗೌಡ ಅವರ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಇವರು ಬಹಳ ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ನಮ್ರತಾ ಅವರು ಚಿಕ್ಕ ವಯಸ್ಸಿನಿಂದಲೇ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದವರು. ಇಂದು ಇವರು ಬಹಳ ಜನಪ್ರಿಯ ಕಿರುತೆರೆ ನಟಿಯರಲ್ಲಿ ಒಬ್ಬರು. ಇಂಥ ನಮ್ರತಾ ಗೌಡ ಅವರು ಈಗ ಜೀಕನ್ನಡ ವಾಹಿನಿಯ ಕರ್ಣ ಧಾರಾವಾಹಿ ಮೂಲಕ ರೀಎಂಟ್ರಿ ಕೊಡುತ್ತಿದ್ದಾರೆ. ಈ ಪಾತ್ರದ ಬಗ್ಗೆ ಬಹಳ ಕುತೂಹಲ ಇದೆ. ಯಾಕೆಂದರೆ ಕರ್ಣ ಧಾರಾವಾಹಿಯಲ್ಲಿ ಇಬ್ಬರು ನಾಯಕಿಯರು. ಭವ್ಯ ಗೌಡ ಮತ್ತು ನಮ್ರತಾ ಗೌಡ, ಹಾಗಾಗಿ ಕುತೂಹಲ ಇನ್ನು ಜಾಸ್ತಿ ಇತ್ತು. ನಮ್ರತಾ ಅವರ ಪಾತ್ರ ಏನಿರಬಹುದು ಎಂದು. ಇದೀಗ ಅವರ ಪಾತ್ರದ ಬಗ್ಗೆ ಕುತೂಹಲ ಹೆಚ್ಚಾಗಿದ್ದು, ಖುದ್ದು ನಮ್ರತಾ ಅವರು ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಧಾರವಾಹಿ ಶುರು ಆಗುವುದಕ್ಕೆ ಮೊದಲು ಈ ಬಗ್ಗೆ ತಿಳಿಸಿದ್ದಾರೆ..

ಹೌದು, ನಮ್ರತಾ ಅವರು ಚಿತ್ರರಂಗಕ್ಕೆ ಅಥವಾ ಕಿರುತೆರೆಗೆ ಹೊಸಬರಲ್ಲ. ಬಾಲನಟಿಯಾಗಿ ಕೆಲವು ಸಿನಿಮಾಗಳಲ್ಲಿ ನಮ್ರತಾ ಅವರು ನಟಿಸಿದ್ದಾರೆ. ಪ್ರೇಮ್ ಅವರು ನಿರ್ದೇಶನ ಮಾಡಿದ ಎಕ್ಸ್ಕ್ಯೂಸ್ ಮಿ ಸಿನಿಮಾದಲ್ಲಿ ನಮ್ರತಾ ಅವರು ಸಣ್ಣದೊಂದು ಪಾತ್ರದಲ್ಲಿ ಅಭಿನಯಿಸಿದ್ದರು. ಹೀಗೆ ಕೆಲವು ಸಿನಿಮಾಗಳಲ್ಲಿ ನಮ್ರತಾ ಅವರು ಬಾಲನಟಿಯಾಗಿ ಅಭಿನಯಿಸಿದ್ದಾರೆ. ಆರಂಭದ ಒಂದೆರಡು ಧಾರಾವಾಹಿಗಳಲ್ಲಿ ಪೋಷಕ ಪಾತ್ರದಲ್ಲಿ ಸಹ ನಟಿಸಿದ್ದರು ನಮ್ರತಾ. ಬಳಿಕ ಇವರು ಕಾಣಿಸಿಕೊಂಡಿದ್ದು ಪುಟ್ಟಗೌರಿ ಮದುವೆ ಧಾರಾವಾಹಿಯ ಹಿಮ ಪಾತ್ರದಲ್ಲಿ. ಈ ಪಾತ್ರಕ್ಕೆ ರೀಪ್ಲೇಸ್ಮೆಂಟ್ ಆಗಿ ಬಂದಿದ್ದು ನಮ್ರತಾ ಅವರು. ಆದರೆ ಹಿಮ ಪಾತ್ರ ಇವರಿಗೆ ದೊಡ್ಡ ಮಟ್ಟದಲ್ಲಿಯೇ ಹೆಸರನ್ನು ತಂದುಕೊಟ್ಟಿತು. ಬಹಳಷ್ಟು ವರ್ಷಗಳ ಕಾಲ ಇದೇ ಪಾತ್ರದ ಮೂಲಕ ಗುರುತಿಸಿಕೊಂಡರು ನಮ್ರತಾ.

ಪುಟ್ಟಗೌರಿ ಮದುವೆ ನಂತರ ನಮ್ರತಾ ಗೌಡ ಅವರು ಬಹಳ ವರ್ಷಗಳ ಕಾಲ ನಟಿಸಿದ ಬಳಿಕ ಇವರು ನಾಗಿಣಿ 2 ಧಾರಾವಾಹಿಯಲ್ಲಿ ನಟಿಸಿದರು. ಈ ಧಾರಾವಾಹಿ ಕೂಡ ನಮ್ರತಾ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು. ನಮ್ರತಾ ಅವರು ನಾಗಿಣಿ ಪಾತ್ರಕ್ಕೆ ಹೇಳಿ ಮಾಡಿಸಿದ ಹಾಗಿದ್ದರು, ಅವರ ಡ್ರೆಸಿಂಗ್ ಮತ್ತು ಧರಿಸುವ ಜ್ಯುವೆಲರಿಗಳು ಎಲ್ಲವೂ ಕೂಡ ಜನರಿಗೆ ಬಹಳ ಇಷ್ಟವಾಗಿತ್ತು, ಹಾಗೆಯೇ ನಾಗಿಣಿ ಪಾತ್ರದಲ್ಲಿ ಇವರ ಅಭಿನಯ ಕೂಡ ಅಷ್ಟೇ ಚೆನ್ನಾಗಿತ್ತು. ಹೀಗೆ ಈ ಧಾರಾವಾಹಿಯ ಮೂಲಕ ಸಹ ಜನಪ್ರಿಯತೆ ಪಡೆದುಕೊಂಡ ನಮ್ರತಾ ಅವರು ಬಳಿಕ ಬಿಗ್ ಬಾಸ್ ಶೋಗೆ ಎಂಟ್ರಿ ಕೊಟ್ಟರು. ಬಿಗ್ ಬಾಸ್ ನಲ್ಲಿ ಫಿನಾಲೆ ವರೆಗು ತಲುಪಿದ್ದರು ನಮ್ರತಾ, ಆದರೆ ಫಿನಾಲೆ ಸ್ಪರ್ಧಿಯಾಗಲಿಲ್ಲ. ಇದು ಅವರ ಅಭಿಮಾನಿಗಳಿಗೆ ಬಹಳ ಬೇಸರ ಆಗಿತ್ತು.



