ರೆಟ್ರೋ ಸ್ಟೈಲ್ ಸಿನಿಮಾಗಳು ಭಾರತೀಯ ಸಿನಿಮಾ ರಂಗದಲ್ಲಿ ಹೆಚ್ಚಾಗುತ್ತಿದೆ. ಇದಕ್ಕೆ ಅನುಗಿಣವಾಗಿ ನಟನಟಿಯರೂ ಕೂಡ ಬದಲಾಗಿತ್ತಿದ್ದಾರೆ. ಇದೀಗ ಬಾಲಿವುಡ್ನ 90ರ ದಶಕದ ಫೇಮಸ್ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಕೂಡ ರೆಟ್ರೋ ಕಾಲದತ್ತ ಮುಖ ಮಾಡಿದ್ದಾರೆ. ಜಾನ್ವಿ ಕಪೂರ್ ಮಾಡಿಸಿಕೊಂಡಿರುವ ರೆಟ್ರೋ ಫೋಟೋಶೂಟ್ ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ಟ್ರೆಂಡಿಂಗ್ ನಲ್ಲಿದೆ.

ಬಾಲಿವುಡ್ನಲ್ಲಿ ಹೆಚ್ಚು ಫೋಟೋಶೂಟ್ ನಡೆಸಿಕೊಳ್ಳುವ ನಟಿಯರ ಸಾಲಿನಲ್ಲಿರುವ ಜಾನ್ವಿ ಕಪೂರ್ ಇದೀಗ ಹಳೆಯ ಕಾಲದ ಬಟ್ಟೆ ತೊಟ್ಟು ಫೋಸ್ ಕೊಟ್ಟಿದ್ದಾರೆ. ಕೆಂಪು ಬಣ್ಣದ ಬಟ್ಟೆ, ತಲೆಗೆ ಹೂವು ತೊಟ್ಟು ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ. ಅಭಿಮಾನಿಗಳಂತೂ ತಮ್ಮ ನೆಚ್ಚಿನ ನಟಿಯನ್ನು ರೆಟ್ರೋ ಲುಕ್ ನಲ್ಲಿ ಕಂಡು ಫಿದಾ ಆಗಿದ್ದಾರೆ. ಲಕ್ಷಾಂತರ ಮಂದಿ ಜಾನ್ವಿಯ ಹೊಸ ಫೋಟೋಸ್ ನೋಡಿ ಲೈಕ್ ಕೊಡುತ್ತಿದ್ದಾರೆ.
ಫೋಟೋ ಕಂಡಿರುವ ನೆಟ್ಟಿಗರು ತರಹೆವಾರಿ ಕಮೆಂಟ್ ಮೂಲಕ ನಟಿಯನ್ನು ಹೊಗಳುತ್ತಿದ್ದಾರೆ.ಒಬ್ಬ, ‘ರೆಟ್ರೋ ಲುಕ್ ನಿಮಗೆ ಚೆನ್ನಾಗಿ ಹೊಂದುತ್ತದೆ. ನೀವು ನಿಮ್ಮ ತಾಯಿ ಶ್ರೀದೇವಿಯಂತೆ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೀರಿ’ ಎಂದರೆ ಮತ್ತೊಬ್ಬ, ‘ಆಕರ್ಷಕವಾದ ಬಟ್ಟೆಯಲ್ಲಿ ಸುಂದರವಾಗಿ ಕಾಣುತ್ತಿದ್ದೀರಿ’ ಎಂದಿದ್ದಾನೆ. ಆದರೆ ಈ ಫೋಟೋಶೂಟ್ ನಡೆಸಿದ್ದು ಹೊಸ ಸಿನಿಮಾಗಾಗಿಯೋ ಅಥವಾ ಸುಮ್ಮನೆ ನಡೆಸಿದ್ದಾರೋ ಎಂಬುದು ತಿಳಿದಿಲ್ಲ.



