ನಟ ಯಶ್ ಅವರು ಒಂದು ಕಾಲದಲ್ಲಿ ಸಾಮಾನ್ಯ ಹುಡುಗನಾಗಿ ಬೆಂಗಳೂರಿಗೆ ಬಂದವರು. ಆದರೆ ಯಶ್ ಅವರಿಗೆ ಬದುಕಿನಲ್ಲಿ ಏನಾದರೂ ಸಾಧಿಸಲೇಬೇಕು ಅನ್ನೋ ಛಲ, ಧೈರ್ಯ ಕೂಡ ಇತ್ತು. ಬೆಂಗಳೂರಿಗೆ ಬಂದು ಇಲ್ಲಿ ನಾನೊಬ್ಬ ಹೀರೋ ಆಗೇ ಆಗ್ತೀನಿ, ಗಾಂಧಿನಗರದಲ್ಲಿ ನನ್ನ ಕಟೌಟ್ ಬಿದ್ದೇ ಬೀಳುತ್ತೆ ಅನ್ನೋ ದೃಢ ನಿರ್ಧಾರ ಹೊಂದಿದ್ದರು. ಅದರಂತೆಯೇ ಮುಂದೆ ಹೆಜ್ಜೆ ಇಟ್ಟರು. ಧಾರಾವಾಹಿಗಳ ಮೂಲಕ ನಟನೆ ಶುರು ಮಾಡಿ, ಸಿಕ್ಕ ಒಂದೊಂದೇ ಅವಕಾಶಗಳನ್ನು ಉಪಯೋಗಿಸಿಕೊಂಡು. ಒಂದೊಂದೇ ಗೆಲುವುಗಳನ್ನು ಪಡೆಯುತ್ತಾ, ಮುಂದೆ ಕೆಜಿಎಫ್ ಅಂಥ ದೊಡ್ಡ ಸಿನಿಮಾ ಮಾಡಿದರು. ಕೆಜಿಎಫ್ ಚಾಪ್ಟರ್ 1 ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಎಷ್ಟು ದೊಡ್ಡ ಮಟ್ಟಕ್ಕೆ ಸದ್ದು ಮಾಡಿತು ಎಂದು ನಮಗೆಲ್ಲಾ ಗೊತ್ತೇ ಇದೆ.

ಇನ್ನು ಕೆಜಿಎಫ್2 ಸಿನಿಮಾ ಅದಕ್ಕಿಂತ ದೊಡ್ಡ ಹೆಸರು ಮಾಡಿತು.
ಕೆಜಿಎಫ್2 ನಂತರ ಯಶ್ ಅವರು ಇಡೀ ಭಾರತ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ, ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇವರ ಮುಂದಿನ ಸಿನಿಮಾಗಾಗಿ ಭಾರತಾದ್ಯಂತ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನು ಟಾಕ್ಸಿಕ್ ಸಿನಿಮಾದ ಟೀಸರ್ ಸಹ ಬಿಡುಗಡೆಯಾಗಿ, ಜನರಿಂದ ಅದ್ಭುತವಾದ ರೆಸ್ಪಾನ್ಸ್ ಸಿಕ್ಕಿತು. ಇನ್ನು ಟಾಕ್ಸಿಕ್ ಸಿನಿಮಾ ಈ ವರ್ಷ ಬಿಡುಗಡೆ ಆಗುವುದಿಲ್ಲ. ಮುಂದಿನ ವರ್ಷ, 2026ರ ಮಾರ್ಚ್ 19ರಂದು ಯಶ್ ಅವರ ಟಾಕ್ಸಿಕ್ ಸಿನಿಮಾ ಬಿಡುಗಡೆ ಆಗಲಿದೆ. ಅಷ್ಟೇ ಅಲ್ಲ, ಮುಂದಿನ ವರ್ಷ ಯಶ್ ಅವರ ರಾಮಾಯಣ ಸಿನಿಮಾ ಕೂಡ ಬಿಡುಗಡೆ ಆಗಲಿದೆ. ಅಭಿಮಾನಿಗಳಿಗೆ ಇದಕ್ಕಿಂತ ಏನು ಸಂತೋಷ ಬೇಕು ಹೇಳಿ..
ಯಶ್ ಅವರು ನಡೆದುಬಂದ ಹಾದಿ ಸುಲಭದ್ದಲ್ಲ, ಒಂದು ಕಾಲದಲ್ಲಿ ಯಶ್ ಅವರು, ಗಾಂಧಿನಗರದಲ್ಲಿ ತನ್ಮ ಕಟೌಟ್ ಇರಬೇಕು ಎಂದು ಪಣ ತೊಟ್ಟಿದ್ದರು, ಆ ಕನಸನ್ನು ನನಸು ಮಾಡಿಕೊಂಡರು. ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಯಶ್ ಅವರ ಟಾಕ್ಸಿಕ್ ಸಿನಿಮಾ ಗ್ಲೋಬಲ್ ಲವೆಲ್ ನಲ್ಲಿ ಸದ್ದು ಮಾಡುವುದಕ್ಕೆ ಮುಂದಾಗಿದೆ. ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಇಂಗ್ಲಿಷ್ ಮತ್ತು ಕನ್ನಡ ಎರಡು ಭಾಷೆಯಲ್ಲಿ ಚಿತ್ರೀಕರಣ ಆಗುತ್ತಿರುವ ಸಿನಿಮಾ ಆಗಿದೆ ಟಾಕ್ಸಿಕ್. ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ನೀಡಿರುವ ಮಾಹಿತಿಯ ಅನುಸಾರ, ಈ ಸಿನಿಮಾವನ್ನು ಗ್ಲೋಬಲ್ ಆಡಿಯನ್ಸ್ ಗಾಗಿ ತಯಾರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಸಿನಿಮಾದ ಕ್ವಾಲಿಟಿ ಹೇಗಿದೆ ಅನ್ನೋದು ಸಿನಿಮಾದ ಒಂದು ಟೀಸರ್ ನೋಡಿಯೇ ಗೊತ್ತಾಗಿದೆ. ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಸಿನಿಮಾ ಮೂಲಕ ಯಶ್ ಅವರು ಕನ್ನಡ ಚಿತ್ರರಂಗವನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದರು.

ಆದರೆ ಈಗ ಟಾಕ್ಸಿಕ್ ಮೂಲಕ ಗ್ಲೋಬಲ್ ಲೆವೆಲ್ ಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಯಶ್ ಅವರನ್ನು ಕಂಡರೆ ನಮ್ಮೆಲ್ಲರಿಗೂ ಬಹಳ ಹೆಮ್ಮೆ ಇದೆ. ಯಶ್ ಅವರು ಈಗ ಟಾಕ್ಸಿಕ್ ಸಿನಿಮಾ ಶೂಟಿಂಗ್ ಇಂದ ಒಂದು ಬ್ರೇಕ್ ಪಡೆದು, ರಾಮಾಯಣ ಶೂಟಿಂಗ್ ನಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ. ಯಶ್ ಅವರು ರಾಮಾಯಣ ಸಿನಿಮಾದಲ್ಲಿ ರಾವಣ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ಯಶ್ ಅವರು ನಟನೆ ಮಾತ್ರ ಮಾಡುತ್ತಿಲ್ಲ, ರಾಮಾಯಣ ಸಿನಿಮಾದ ನಿರ್ಮಾಪಕರಲ್ಲಿ ಇವರು ಸಹ ಒಬ್ಬರು. ಇದು ಯಶ್ ಅವರ ಕೆರಿಯರ್ ಗೆ ದೊಡ್ಡ ಪ್ಲಸ್ ಆಗಿದೆ. ಇನ್ನು ಟಾಕ್ಸಿಕ್ ಸಿನಿಮಾ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಕೊಡುವುದಾದರೆ, ಈ ಸಿನಿಮಾ ಮುಂದಿನ ವರ್ಷ ತೆರೆ ಕಾಣಲಿದೆ. ಟಾಕ್ಸಿಕ್ ಸಿನಿಮಾದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ನಯನತಾರ ನಟಿಸುತ್ತಿದ್ದಾರೆ ಎನ್ನುವ ವಿಷಯ ಗೊತ್ತೇ ಇದೆ..

ನಯನತಾರ ಅವರು ಲೇಡಿ ಸೂಪರ್ ಸ್ಟಾರ್ ಎಂದೇ ಹೆಸರು ಪಡೆದಿರುವವರು. ಇವರು ಅಷ್ಟು ಸುಲಭಕ್ಕೆ ಸಿನಿಮಾ ಒಪ್ಪುವುದಿಲ್ಲ. ತಮ್ಮ ಪಾತ್ರಕ್ಕೆ ಪ್ರಾಮುಖ್ಯತೆ ಇದ್ದರೆ ಮಾತ್ರ ಒಪ್ಪುತ್ತಾರೆ. ಜೊತೆಗೆ ನಯನತಾರ ಅವರು ಸಿನಿಮಾಗಳನ್ನು ಒಪ್ಪುವ ಮೊದಲು ಕೆಲವು ಕಂಡಿಷನ್ಸ್ ಗಳನ್ನು ಕೂಡ ಹಾಕುತ್ತಾರೆ. ಅದೆಲ್ಲವೂ ಸರಿ ಬಂದರೆ ಮಾತ್ರ ಸಿನಿಮಾ ಮಾಡುತ್ತಾರೆ. ಅಂಥ ನಯನತಾರ ಟಾಕ್ಸಿಕ್ ಸಿನಿಮಾ ಒಪ್ಪಿದ್ದಾರೆ ಅಂದ್ರೆ ಈ ಸಿನಿಮಾದಲ್ಲಿ ಅವರ ಪಾತ್ರ ಏನಿರಬಹುದು ಎನ್ನುವ ಕುತೂಹಲ ಮತ್ತು ಚರ್ಚೆ ಎಲ್ಲೆಡೆ ಶುರುವಾಗಿದೆ. ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಅನುಸಾರ ನಯನತಾರ ಅವರ ಪಾತ್ರ ಯಶ್ ಅವರ ಪಾತ್ರಕ್ಕೆ ಸರಿಸಮವಾಗಿ ಇರುತ್ತದೆ ಎಂದು ಹೇಳಲಾಗುತ್ತಿದೆ. ಹೌದು, ಯಶ್ ಅವರು ಈ ಸಿನಿಮಾದಲ್ಲಿ ಗ್ಯಾಂಗ್ಸ್ಟರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ನಯನತಾರ ಲೇಡಿ ಗ್ಯಾಂಗ್ಸ್ಟರ್ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ..

ಯಶ್ ಅವರ ಪಾತ್ರವನ್ನು ಬಿಟ್ಟರೆ, ಇನ್ಯಾವ ಪಾತ್ರದ ಲುಕ್ ಕೂಡ ಹೇಗಿರುತ್ತದೆ ಎಂದು ಇದುವರೆಗೂ ಚಿತ್ರತಂಡ ರಿವೀಲ್ ಮಾಡಿಲ್ಲ, ಹಾಗಾಗಿ ಇದೆಲ್ಲವೂ ಸೀಕ್ರೆಟ್ ಆಗಿದ್ದರೂ, ಚರ್ಚೆ ಅಂತೂ ನಡೆಯುತ್ತಿದೆ. 40ರ ದಶಕದಲ್ಲಿ ನಡೆಯುವ ಗ್ಯಾಂಗ್ಸ್ಟರ್ ಗಳ ಕಥೆ ಇದು ಎಂದು ಈಗಾಗಲೇ ತಿಳಿದಿದೆ. ಹಾಗಾಗಿ ಯಶ್ ಅವರಿಗೆ ಪೈಪೋಟಿ ನೀಡುವಂಥ ಸ್ಟ್ರಾಂಗ್ ಆದ ನಯನತಾರ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ರೀತಿ ಹೇಳುತ್ತಿರುವುದು ಯಾಕೆ ಎಂದರೆ, ಲೇಡಿ ಸೂಪರ್ ಸ್ಟಾರ್ ಎಂದು ಖ್ಯಾತಿ ಪಡೆದಿರುವ ನಯನತಾರ ಅವರು ಹೀರೊಗೆ ಸರಿಸಮವಾದ ಪಾತ್ರದಲ್ಲೇ ನಟಿಸೋದು, ಶಾರುಖ್ ಖಾನ್ ಅವರೊಡನೆ ಜವಾನ್ ಸಿನಿಮಾದಲ್ಲಿ ನಟಿಸಿದಾಗ ಕೂಡ ಅವರಿಗೆ ಸರಿಸಮವಾಗಿ ರೋಮ್ಯಾನ್ಸ್ ಮತ್ತು ಆಕ್ಷನ್ ದೃಶ್ಯಗಳಲ್ಲಿ ಕೂಡ ನಟಿಸಿದ್ದರು. ಈ ಕಾರಣಕ್ಕೆ ನಯನತಾರ ಅವರ ಪಾತ್ರದ ಬಗ್ಗೆ ಇಷ್ಟು ಚರ್ಚೆ ಆಗುತ್ತಿದೆ.
ಇನ್ನು ಯಶ್ ಅವರ ಈ ಸಿನಿಮಾದಲ್ಲಿ ಬಹಳಷ್ಟು ಕಲಾವಿದರು ನಟಿಸುತ್ತಿದ್ದಾರೆ. ಸಿನಿಮಾ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿದೆ. ನಯನತಾರಾ ಬಿಟ್ಟು ದೊಡ್ಡ ನಟಿಯರು, ದೊಡ್ಡ ತಂತ್ರಜ್ಞರು ಸಹ ಸಿನಿಮಾದಲ್ಲಿ ಇದ್ದಾರೆ. ಹಾಗಾಗಿ ಸಿನಿಮಾ ಬಗ್ಗೆ ಹೆಚ್ಚು ನಿರೀಕ್ಷೆ ಇದೆ. ಮುಂದಿನ ವರ್ಷ ಸಿನಿಮಾ ತೆರೆಕಾಣಲಿದ್ದು, ಟ್ರೈಲರ್ ಮತ್ತು ಸಿನಿಮಾ ಅಪ್ಡೇಟ್ ಬಗ್ಗೆ ಕಾದು ನೋಡಬೇಕಿದೆ.



