ರೆಬೆಲ್ ಸ್ಟಾರ್ ಅಂಬರೀಶ್ ಅವರ ಕುಟುಂಬ ಮತ್ತು ದರ್ಶನ್ ಅವರ ಕುಟುಂಬದ ನಡುವೆ ಎಷ್ಟು ಆತ್ಮೀಯತೆ ಇದೆ ಎನ್ನುವ ವಿಷಯ ನಮಗೆಲ್ಲಾ ಗೊತ್ತೇ ಇದೆ. ಅಂಬರೀಶ್ ಅವರ ಕುಟುಂಬಕ್ಕೆ ದರ್ಶನ್ ಅವರು ದೊಡ್ಡ ಮಗನ ಹಾಗೆಯೇ ಇದ್ದವರು. ಅದರಲ್ಲೂ ಅಂಬರೀಶ್ ಅವರು ಹೋದ ನಂತರ, ಸುಮಲತಾ ಅವರ ಬೆಂಬಲಕ್ಕೆ ನಿಂತವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಸುಮಲತಾ ಅವರನ್ನು ಮದರ್ ಇಂಡಿಯಾ ಎಂದೇ ದರ್ಶನ್ ಅವರು ಕರೆಯುತ್ತಿದ್ದರು. ಅಷ್ಟು ಚೆನ್ನಾಗಿದ್ದ ಇವರ ಬಾಂಧವ್ಯಕ್ಕೆ ಏನಾಯ್ತೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ದರ್ಶನ ಅವರು ಸುಮಲತಾ ಅವರನ್ನು ಅನ್ ಫಾಲೋ ಮಾಡಿದ್ದರು, ಈ ವಿಚಾರ ಸಿಕ್ಕಾಪಟ್ಟೆ ಚರ್ಚೆ ಆಗಿತ್ತು, ಇವರಿಬ್ಬರ ಸಂಬಂಧದಲ್ಲಿ ಈಗ ಹೆಚ್ಚು ಬಿರುಕು ಬಿದ್ದಿರುವ ಹಾಗೆ ತೋರುತ್ತಿದೆ ಇತ್ತೀಚೆಗೆ ನಡೆದಿರುವ ಘಟನೆ.

ನಟ ದರ್ಶನ್ ಅವರು ಅಂಬರೀಶ್ ಅವರ ಜೊತೆಗೆ ಮತ್ತು ಅವರ ಕುಟುಂಬದ ಜೊತೆಗೆ ಒಳ್ಳೆಯ ಬಾಂಧವ್ಯ ಇದ್ದವರು, ಮನೆವ ಯಾವುದೇ ಕಾರ್ಯಕ್ರಮದಲ್ಲಿ ದರ್ಶನ್ ಅವರು ಮುಂದಿರುತ್ತಿದ್ದರು. ಅಭಿಷೇಕ್ ಅಂಬರೀಶ್ ಅವರಿಗೆ ದೊಡ್ಡಣ್ಣನ ಹಾಗೆ ಇದ್ದರು. ಆದರೆ ದರ್ಶನ್ ಅವರು ಕಷ್ಟಕಾಲದಲ್ಲಿ ಇದ್ದಾಗ ಸುಮಲತಾ ಅವರು ಮತ್ತು ಅಭಿಷೇಕ್ ಅವರು ಜೊತೆಯಲ್ಲಿ ಇದ್ದ ಹಾಗೆ ಕಾಣಲಿಲ್ಲ. ಇದರಿಂದ ದರ್ಶನ್ ಅವರಿಗೆ ಬೇಸರ ಆಗಿರಬಹುದು ಎಂದು ಹೇಳಲಾಗುತ್ತಿದೆ. ರೇಣುಕಾಸ್ವಾಮಿ ಅವರ ಘಟನೆ ನಡೆದಾಗ, ಸುಮಲತಾ ಅವರು ದರ್ಶನ್ ಅವರ ಪರವಾಗಿ ಮಾತನಾಡಲಿಲ್ಲ, ಬದಲಾಗಿ ಸುಮಲತಾ ಅವರು ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದರು, ನ್ಯಾಯದ ಪರವಾಗಿ ನಿಂತರು. ವಿಷಯ ಪೂರ್ತಿ ಗೊತ್ತಾಗದೇ ಯಾವುದನ್ನು ಮಾತನಾಡೋಕೆ ಆಗೋದಿಲ್ಲ ಎಂದಿದ್ದರು.
ಇನ್ನು ದರ್ಶನ್ ಅವರು ಜೈ*ಲಿನಲ್ಲಿ ಇದ್ದಾಗ ಸುಮಲತಾ ಅವರಾಗಲಿ ಅಥವಾ ಅಭಿಷೇಕ್ ಆಗಲಿ ದರ್ಶನ್ ಅವರನ್ನು ನೋಡಿಕೊಂಡು ಬರಲಿಲ್ಲ, ದರ್ಶನ್ ಅವರ ಕುಟುಂಬವನ್ನು ಸಹ ಭೇಟಿ ಮಾಡಲಿಲ್ಲ. ಮಗ ಕಷ್ಟದಲ್ಲಿ ಇದ್ದಾಗ ಅಮ್ಮ ಬರಲಿಲ್ಲ ಎನ್ನುವ ಬೇಸರ ದರ್ಶನ್ ಅವರಲ್ಲಿ ಸಹ ಇದ್ದಿರಬಹುದು, ಈ ಕಾರಣಕ್ಕೋ ಏನೋ ದರ್ಶನ್ ಅವರು ಈ ಕುಟುಂಬದಿಂದ ದೂರ ಆಗಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಸುಮಲತಾ ಅವರನ್ನು ಅನ್ ಫಾಲೋ ಮಾಡಿದರು. ಇದಕ್ಕೆ ಸುಮಲತಾ ಅವರು ಕ್ಲಾರಿಟಿ ಕೊಟ್ಟಿದ್ದರು. ಆದರೆ ಈ ಬಿರುಕು ಈಗ ದೊಡ್ಡದಾಗಿರುವ ಹಾಗೆ ಕಾಣುತ್ತಿದೆ. ದರ್ಶನ್ ಅವರು ಸುಮಲತಾ ಅವರಿಗೆ ಆಪ್ತವಾಗಿ ದೂರವಾಗಿರುವ ಸಚ್ಚಿದಾನಂದ್ ಬರ್ತ್ ಡೇ ಸೆಲೆಬ್ರೇಟ್ ಮಾಡಿರುವ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ.

ಸಚ್ಚಿದಾನಂದ ಎನ್ನುವ ಈ ವ್ಯಕ್ತಿ ಅಂಬರೀಶ್ ಅವರ ಕುಟುಂಬಕ್ಕೆ ಬಹಳ ಆತ್ಮೀಯರು. ಸುಮಲತಾ ಅವರು 2019ರಲ್ಲಿ ಎಲೆಕ್ಷನ್ ಗೆ ನಿಂತಾಗ ಬಹುತೇಕ ಎಲ್ಲಾ ವಿಷಯಗಳನ್ನು ನೋಡಿಕೊಂಡು, ಸುಮಲತಾ ಅವರ ಸಪೋರ್ಟ್ ಗೆ ನಿಂತವರು ಸಚ್ಚಿದಾನಂದ. ಎಲ್ಲಾ ಕಾರ್ಯಕ್ರಮಗಳನ್ನು ಇವರೇ ನೋಡಿಕೊಳ್ಳುತ್ತಿದ್ದರು, ಸುಮಲತಾ ಅವರಿಗೆ ಬಹಳ ಆತ್ಮೀಯರಾಗಿದ್ದರು. ಆದರೆ ಮತ್ತೊಮ್ಮೆ ಎಲೆಕ್ಷನ್ ಬಂದಾಗ, ಅದೇ ರೀತಿಯ ಸಪೋರ್ಟ್ ಸುಮಲತಾ ಅವರಿಂದ ಸಚ್ಚಿದಾನಂದ ಅವರಿಗೆ ಸಿಗಲಿಲ್ಲ. ಈ ಕಾರಣಕ್ಕೆ ಆ ವ್ಯಕ್ತಿ ಸುಮಲತಾ ಅವರಿಂದ ದೂರ ಆಗಿದ್ದರು. ಇದೀಗ ದರ್ಶನ್ ಅವರ ಜೊತೆಗೆ ಬಹಳ ಆತ್ಮೀಯತೆ ಬೆಳೆಸಿಕೊಂಡಿದ್ದಾರೆ. ಸುಮಲತಾ ಅವರಿಗೆ ಬಾಯ್ ಹೇಳಿ, ದರ್ಶನ್ ಅವರಿಗೆ ಹಾಯ್ ಹೇಳಿದ್ದಾರೆ ಸಚ್ಚಿದಾನಂದ. ದರ್ಶನ್ ಅವರಿ ಜೈ*ಲಿನಲ್ಲಿ ಇದ್ದಾಗ ಹಲವು ಬಾರಿ ಹೋಗಿ ನೋಡಿಕೊಂಡು ಬಂದಿದ್ದರು..
ದರ್ಶನ್ ಅವರು ಸಹ ಈಗ ಸುಮಲತಾ ಅವರಿಂದ ದೂರ ವಾಗಿದ್ದು, ಬೇರೆಯವರ ಜೊತೆಗೆ ಹತ್ತಿರ ಆಗಿದ್ದಾರೆ. ಇದೀಗ ಈ ಸಚ್ಚಿದಾನಂದ ಅವರ ಬರ್ತ್ ಡೇ ಅನ್ನು ನಟ ದರ್ಶನ್ ಅವರು ಆತ್ಮೀಯವಾಗಿ ಸೆಲೆಬ್ರೇಟ್ ಮಾಡಿದ್ದಾರೆ. ಶೂಟಿಂಗ್ ಸೆಟ್ ನಲ್ಲೇ ಸಚ್ಚಿದಾನಂದ ಅವರ ಬರ್ತ್ ಡೇ ಸೆಲೆಬ್ರೇಷನ್ ನಡೆದಿದ್ದು, ದರ್ಶನ್ ಅವರು ಕೇಕ್ ಕಟ್ ಮಾಡಿಸಿ, ನಗುತ್ತಾ ಫೋಟೋಸ್ ಗಳಿಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಹ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸುಮಲತಾ ಅವರು ಎಲ್ಲರನ್ನು ದೂರ ಮಾಡಿಕೊಂಡರು ಎನ್ನುತ್ತಿದ್ದಾರೆ ನೆಟ್ಟಿಗರು. ಒಟ್ಟಿನಲ್ಲಿ ದರ್ಶನ್ ಅವರು ಅಂಬರೀಶ್ ಅವರ ಕುಟುಂಬದಿಂದ ಸಂಪೂರ್ಣವಾಗಿ ದೂರ ಆಗಿಬಿಟ್ಟಿದ್ದಾರೆ ಎನ್ನುವುದು ಇದರಿಂದ ಗೊತ್ತಾಗುತ್ತದೆ..

ಇನ್ನು ನಟ ದರ್ಶನ್ ಅವರು ಈಗ ಹಲವು ಜನರಿಂದ ದೂರವೇ ಆಗಿದ್ದಾರೆ. ಈಗ ವಿಜಯಲಕ್ಷ್ಮಿ ಅವರೇ ದರ್ಶನ್ ಅವರ ಪೂರ್ತಿ ಜವಾಬ್ದಾರಿ ತೆಗೆದುಕೊಂಡಿದ್ದು, ಎಲ್ಲರ ಜೊತೆಗೆ ಅಂತರ ಕಾಯ್ದುಕೊಂಡಿದ್ದಾರೆ. ದರ್ಶನ್ ಅವರನ್ನು ಯಾರಾದರೂ ಮೀಟ್ ಮಾಡಬೇಕು ಎಂದರೆ ಮೊದಲು ಇವರ ಒಪ್ಪಿಗೆ ಪಡೆದು ನಂತರವೇ ಮೀಟ್ ಮಾಡಬೇಕು. ಇನ್ನು ದರ್ಶನ್ ಅವರು ಅಭಿಮಾನಿಗಳನ್ನು ಭೇಟಿ ಮಾಡುವುದು ಕೂಡ ಬಾಕಿ ಇದೆ. ಈ ವರ್ಷ ಅವರ ಹುಟ್ಟುಹಬ್ಬವನ್ನು ಜೋರಾಗಿ ಸೆಲೆಬ್ರೇಟ್ ಮಾಡಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದರು. ಆದರೆ ದರ್ಶನ್ ಅವರು ಆರೋಗ್ಯದ ಸಮಸ್ಯೆ ಇರುವ ಕಾರಣ ಎಲ್ಲರ ಜೊತೆಗೆ ಬರ್ತ್ ಡೇ ಆಚರಿಸೋಕೆ ಆಗೋದಿಲ್ಲ ಎಂದು ವಿಡಿಯೋ ಮಾಡಿ ಎಲ್ಲರಿಗೂ ತಿಳಿಸಿದ್ದರು. ಹಾಗೆಯೇ ಕೆಲವರಿಗೆ ಧನ್ಯವಾದ ಕೂಡ ಕೇಳಿದರು..
ಆ ಲಿಸ್ಟ್ ನಲ್ಲಿ ಸಹ ಸುಮಲತಾ ಅವರ ಬಗ್ಗೆ ಮತ್ತು ಅವರ ಮಗನ ಬಗ್ಗೆ ಆಗಲಿ ಏನನ್ನು ಹೇಳಿರಲಿಲ್ಲ. ಹಾಗೆಯೇ ಅಭಿಷೇಕ್ ಅಂಬರೀಶ್ ಅವರ ಮಗನ ನಾಮಕರಣಕ್ಕೆ ಸಹ ದರ್ಶನ್ ಅವರು ಬಂದಿರಲಿಲ್ಲ. ಇದೆಲ್ಲವನ್ನು ಕೂಡ ನೋಡಿದ ಕೂಡಲೇ, ದರ್ಶನ್ ಹಾಗೂ ಸುಮಲತಾ ಅವರ ಕುಟುಂಬದ ನಡುವೆ ಏನೋ ಬಿರುಕು ಮೂಡಿರುವ ಹಾಗಿದೆ ಅನ್ನಿಸಿತ್ತು, ಆದರೆ ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ, ನಿಜಕ್ಕೂ ದೊಡ್ಡದಾಗಿಯೇ ಏನೋ ನಡೆದಿರಬಹುದು ಎಂದು ತೋರುತ್ತಿದೆ. ಎಲ್ಲಾ ಪ್ರಶ್ನೆಗಳಿಗೂ ದರ್ಶನ್ ಅವರಾಗಲಿ ಅಥವಾ ಸುಮಲತಾ ಅವರಾಗಲಿ ಖುದ್ದಾಗಿ ಉತ್ತರ ಕೊಡಬೇಕು. ಆಗಷ್ಟೇ ಎಲ್ಕವು ಗೊತ್ತಾಗುತ್ತದೆ.



