ಡ್ರೋನ್ ಪ್ರತಾಪ್ ಕೆಲವು ವರ್ಷಗಳ ಹಿಂದೆ ನೆಗಟಿವ್ ಆಗಿ ಎಲ್ಲಾ ಕಡೆ ಸುದ್ದಿಯಾಗಿದ್ದರು. ಈ ವ್ಯಕ್ತಿ ಕರ್ನಾಟಕದ ಜನರಿಗೆ ಮೋಸ ಮಾಡಿದ್ದಾನೆ ಎಂದು ಜನರು ಈತನನ್ನು ಅವಮಾನ ಮಾಡಿದ್ದರು. ಈತನ ಬಗ್ಗೆ ತಪ್ಪಾಗಿ ಮಾತನಾಡಿದ್ದರು. ಹಲವು ವೇದಿಕೆಗಳಲ್ಲಿ ಪ್ರತಾಪ್ ಮೋಸ ಮಾಡಿದ್ದಾನೆ ಎನ್ನುವ ಆರೋ*ಪ ಕೇಳಿಬಂದಿತ್ತು. ಇದೆಲ್ಲವೂ ನಡೆಯುತ್ತಿದ್ದ ವೇಳೆಯಲ್ಲೇ ಪ್ರತಾಪ್ ಕಳೆದ ವರ್ಷ ಬಿಗ್ ಬಾಸ್ ಶೋಗೆ ಬಂದಿದ್ದು. ಬಿಗ್ ಬಾಸ್ ಶೋ ಇವರ ಬಗ್ಗೆ ಜನರಿಗೆ ಇದ್ದ ಅಭಿಪ್ರಾಯವನ್ನೇ ಬದಲಾಯಿಸಿಬಿಟ್ಟಿತು. ಬಿಗ್ ಬಾಸ್ ಶೋನಲ್ಲಿ ಶಾಂತಚಿತ್ತ ಇಂದಲೇ ಪ್ರತಾಪ್ ಎಲ್ಲಾ ಟಾಸ್ಕ್ ಗಳನ್ನು ಗೆದ್ದುಕೊಂಡು ಬಂದರು. ಎಲ್ಲರಿಗೂ ಬಹಳ ಇಷ್ಟವಾದರು ಪ್ರತಾಪ್. ಪ್ರತಾಪ್ ವ್ಯಕ್ತಿತ್ವ ಎಲ್ಲರೂ ಅಂದುಕೊಂಡ ಹಾಗಲ್ಲ ಎಂದು ಎಲ್ಲರಿಗು ಅರ್ಥವಾಯಿತು.

ಬಹಳ ವರ್ಷಗಳಿಂದ ಕುಟುಂಬದಿಂದ ದೂರವಿದ್ದ ಪ್ರತಾಪ್ ಗೆ ಬಿಗ್ ಬಾಸ್ ಶೋ ಇಂದ ಮತ್ತೆ ತಂದೆ ತಾಯಿಯ ಜೊತೆ ಒಂದಾಗುವ ಅವಕಾಶ ಕೂಡ ಸಿಕ್ಕಿತು. ಹೀಗೆ ಬಿಗ್ ಬಾಸ್ ಶೋ ಪ್ರತಾಪ್ ಜೀವನವನ್ನೇ ಬದಲಾಯಿಸಿದೆ. ಅಲ್ಲಿಂದ ರನ್ನರ್ ಅಪ್ ಆಗಿ ಹೊರಗಡೆ ಬಂದ ನಂತರ ಪ್ರತಾಪ್ ತಮ್ಮ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುವುದರ ಜೊತೆಗೆ ಸಾಕಷ್ಟು ಸಮಾಜ ಸೇವೆಯನ್ನು ಕೂಡ ಮಾಡುತ್ತಾ ಬಂದಿದ್ದಾರೆ. ಇದರಿಂದ ಸಹ ಜನರಿಗೆ ಹತ್ತಿರವಾಗಿದ್ದಾರೆ. ಇತ್ತೀಚೆಗೆ ಗಾಯಕಿ ಮಂಜಮ್ಮ ಅವರ ತಂಗಿಗೆ ಸಹಾಯ ಮಾಡಿದ್ದರು. ಹಾಗೆಯೇ ಭರ್ಜರಿ ಬ್ಯಾಚುಲರ್ಸ್ ಶೋನಲ್ಲಿ ಕೂಡ ಸ್ಪರ್ಧಿಯಾಗಿ ಬಂದಿದ್ದು, ಡ್ರೋನ್ ಪ್ರತಾಪ್ ಹೆಚ್ಚು ಜನರಿಗೆ ಇಷ್ಟವಾಗುತ್ತಿದ್ದಾರೆ.. ಒಂದೊಂದು ಟಾಸ್ಕ್ ಗಳಲ್ಲಿ ಸಹ ಇವರ ಪರ್ಫಾರ್ಮೆನ್ಸ್ ಬಹಳ ಚೆನ್ನಾಗಿದೆ.
ರವಿಚಂದ್ರನ್ ಅವರಿಂದ ಸಾಕಷ್ಟು ಸಾರಿ ಪ್ರಶಂಸೆ ಪಡೆದಿದ್ದಾರೆ. ರಚಿತಾ ರಾಮ್ ಅವರು ಸಹ ಪ್ರತಾಪ್ ಅವರಿಗೆ ಮೆಚ್ಚುಗೆ ನೀಡಿದ್ದಾರೆ. ಹೀಗೆ ಪ್ರತಾಪ್ ಅವರು ರಿಯಾಲಿಟಿ ಶೋಗಳ ಮೂಲಕ ಜನರಿಗೆ ಬಹಳ ಇಷ್ಟವಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಹ ಪ್ರತಾಪ್ ಅವರು ತುಂಬಾ ಆಕ್ಟಿವ್. ಇದೀಗ ಪ್ರತಾಪ್ ಅವರು ತಮ್ಮ ಊರಿನ ಮನೆಯ ಹೋಮ್ ಟೂರ್ ಮಾಡಿದ್ದು, ತಮ್ಮ ಮನೆಯನ್ನು ತೋರಿಸಿದ್ದಾರೆ. ನಮಗೆಲ್ಲ ಗೊತ್ತಿರುವ ಹಾಗೆ ಪ್ರತಾಪ್ ಅವರು ಮಂಡ್ಯ ಜಿಲ್ಲೆಯ ಕನಕಪುರ ತಾಲ್ಲೂಕಿನವರು. ಇವರ ತಂದೆ ತಾಯಿ ಮತ್ತು ತಂಗಿ ಇರುವುದು ಇದೇ ಊರಿನಲ್ಲೇ. ಪ್ರತಾಪ್ ಅವರು ಬಹಳ ದಿನಗಳ ನಂತರ ಊರಿಗೆ ಹೋಗಿದ್ದು, ಕುಟುಂಬದ ಜೊತೆಗೆ ಸಮಯ ಕಳೆದಿದ್ದಾರೆ. ಹಾಗೆಯೇ ಹೋಮ್ ಟೂರ್ ಅನ್ನು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಶೇರ್ ಮಾಡಿದ್ದಾರೆ.

ಪ್ರತಾಪ್ ಅವರಿಗೆ ಊರಿಗೆ ಹೋದಾಗಲೆಲ್ಲ ನೆಮ್ಮದಿ ಅನ್ನಿಸುತ್ತದೆ ಎಂದಿದ್ದಾರೆ. ಮನೆಯನ್ನು ತೋರಿಸಿದ್ದು, ಅವರು ಇರುವ ಮನೆ ಕಟ್ಟಿ 3 ವರ್ಷ ಆಗಿದೆ, ಗೃಹಪ್ರವೇಶ ನಡೆದಾಗ ತಾವು ಇರಲಿಲ್ಲ ಎಂದಿದ್ದಾರೆ ಪ್ರತಾಪ್. ಮನೆಯಲ್ಲಿ ಒಂದು ಸಣ್ಣದಾದ ಕೈತೋಟ ಕೂಡ ಮಾಡಿಕೊಂಡಿದ್ದಾರಂತೆ. ಇನ್ನು ಪ್ರತಾಪ್ ಅವರ ತಾಯಿಗೆ ಅಡುಗೆ ಮನೆಯಲ್ಲಿ ಅಡುಗೆ ಮಾಡಿದರೆ ಎಲ್ಲವೂ ಗಲೀಜಾಗುತ್ತದೆ ಎಂದು ಅನ್ನಿಸುವ ಕಾರಣಕ್ಕೆ, ಅದಕ್ಕಾಗಿಯೇ ಒಂದು ಸಣ್ಣದಾದ ರೂಮ್ ಮಾಡಿ ಅಲ್ಲಿ ಅಡುಗೆ ಮಾಡುತ್ತಾರಂತೆ. ಇನ್ನು ಪ್ರತಾಪ್ ಅವರ ತಂದೆ ಮಾತನಾಡಿ, ಹಳ್ಳಿಯಲ್ಲಿ ಮನೆ ಕಟ್ಟುವುದು ಕಷ್ಟ, ಒಂದೊಂದು ರೂಪಾಯಿಗೂ ನಾವು ಕಷ್ಟಪಟ್ಟು ಕೆಲಸ ಮಾಡುತ್ತೇವೆ ಎಂದು ಪ್ರತಾಪ್ ಅವರ ತಂದೆ ತಿಳಿಸಿದ್ದಾರೆ. ಮುಂಚೆ ಇವರೆಲ್ಲರೂ ಬೇರೆ ಮನೆಯಲ್ಲಿ ಇದ್ದರಂತೆ, ಈಗ ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ.
ಇದೇ ವರ್ಷ ತಮ್ಮ ತಂಗಿಯ ಮದುವೆ ಮಾಡಬೇಕು ಎಂದು ಪ್ರತಾಪ್ ನಿರ್ಧಾರ ಮಾಡಿದ್ದಾರೆ. ಪ್ರತಾಪ್ ಅವರ ತಂಗಿ ಇಂಜಿನಿಯರಿಂಗ್ ಮಾಡಿದ್ದು, ದೊಡ್ಡ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರಂತೆ, ಅವರ ತಂಗಿ ಕೂಡ ಮನೆ ಕಟ್ಟುವುದಕ್ಕೆ ಸಹಾಯ ಮಾಡಿದ್ದಾರೆ ಎಂದು ಪ್ರತಾಪ್ ತಿಳಿಸಿದ್ದಾರೆ. ತಂಗಿ ಇರುವುದು ಸಾಫ್ಟ್ ವೇರ್ ಫೀಲ್ಡ್ ನಲ್ಲಿ. ಈ ವರ್ಷ ಒಳ್ಳೆಯ ಹುಡುಗನನ್ನು ಹುಡುಕಿ ತಂಗಿಯ ಮದುವೆ ಮಾಡಬೇಕು ಎನ್ನುವುದು ಪ್ರತಾಪ್ ಅವರ ಆಸೆ ಆಗಿದ್ದು, ತಂಗಿಯ ಮದುವೆ ಮಾಡೇ ಮಾಡ್ತೀನಿ ಎಂದು ಪ್ರತಾಪ್ ಹೇಳಿದ್ದಾರೆ. ಊರಿಗೆ ಹೋಗಿರುವುದು ಪ್ರತಾಪ್ ಅವರಿಗೆ ಬಹಳ ಸಂತೋಷ ತಂದಿದೆ. ಈ ವಿಡಿಯೋ ಬಹಳ ಬಹಳಷ್ಟು ವೀಕ್ಷಣೆ ಮಾಡಿದ್ದು, ಪ್ರತಾಪ್ ಮನೆಯನ್ನು ನೋಡಿ ಫ್ಯಾನ್ಸ್ ಬಹಳ ಸಂತೋಷ ಪಟ್ಟಿದ್ದಾರೆ.
ಡ್ರೋನ್ ಪ್ರತಾಪ್ ಈಗ ರಿಯಾಲಿಟಿ ಶೋಗಳಲ್ಲಿ ಬ್ಯುಸಿ ಆಗಿದ್ದರೂ ಸಹ ಅವರ ಕೆಲಸಗಳನ್ನು ಮತ್ತು ಫ್ಯಾಮಿಲಿಯನ್ನು ಬಿಟ್ಟಿಲ್ಲ. ಫ್ಯಾಮಿಲಿಗೆ ಹೆಚ್ಚು ಸಮಯ ಕೊಡುತ್ತಾರೆ. ಬಿಗ್ ಬಾಸ್ ಮನೆಯ ಒಳಗೆ ಇದ್ದಾಗ ದೀದಿ ಎಂದು ಕರೆದ ಸಂಗೀತ ಶೃಂಗೇರಿ ಮತ್ತು ನೀತು ಅವರೊಡನೆ ಸಹ ಪ್ರತಾಪ್ ಅಷ್ಟೇ ಆತ್ಮೀಯತೆ ಇಂದ ಇದ್ದಾರೆ. ಅವರೆಲ್ಲರಿಗು ಪ್ರತಾಪ್ ಅಂದ್ರೆ ತಮ್ಮ ಸ್ವಂತ ಸಹೋದರ ಎನ್ನುವ ಹಾಗೆಯೇ ಇತ್ತು. ಇನ್ನು ನಿಜ ಜೀವನದಲ್ಲಿ ಸಹ ಪ್ರತಾಪ್ ಅದೇ ರೀತಿ ಇದ್ದಾರೆ. ತಂಗಿ ಮದುವೆಯ ಜವಾಬ್ದಾರಿಯನ್ನು ಸಹ ತೆಗೆದುಕೊಂಡಿದ್ದು, ಪ್ರತಾಪ್ ಅವರು ಅಣ್ಣನಾಗಿ ಬಹಳ ಒಳ್ಳೆಯ ಕೆಲಸ ಮಾಡುವುದಕ್ಕೆ ಮುಂದಾಗಿದ್ದಾರೆ. ಒಂದಷ್ಟು ಸಮಯ ಕುಟುಂಬದಿಂದ ದೂರ ಇದ್ದರೂ ಸಹ, ಈಗ ಪ್ರತಾಪ್ ತಮ್ಮ ಕುಟುಂಬದ ಜೊತೆಗೆ ನಿಂತಿದ್ದಾರೆ.



