ಯಾರಾದರು ಸ್ವರ್ಗ ಎಲ್ಲಿದೆ? ಎಂದು ಕೇಳಿದರೆ. ನಾವೆಲ್ಲ ತಟ್ಟಂತ ಆಕಾಶದ ಕಡೆಗೆ ಕೈ ತೋರಿಸುತ್ತೇವೆ. ಇದನ್ನು ಕೆಲವೊಂದಿಷ್ಟು ಜನ ಇದನ್ನು ಮೂಢನಂಬಿಕೆ ಎನ್ನುತ್ತಾರೆ. ಆದರೆ ಇನ್ನೊಂದಿಷ್ಟು ಜನ ಇದನ್ನು ಬಲವಾಗಿ ನಂಬುತ್ತಾರೆ ಮತ್ತು ಒಪ್ಪುತ್ತಾರೆ. ಆದರೆ ಇದೀಗ ವೈರಲ್ ಆಗುತ್ತಿರುವ ವಿಡಿಯೋ ನೋಡಿದ್ರೆ ಆಕಾಶದಲ್ಲಿ ಸ್ವರ್ಗ ಇರೋದು ನಿಜವೆನೋ ಎನ್ನುತ್ತಿರಿ. ಹೌದು ಆಕಾಶದಲ್ಲಿ ಸ್ವರ್ಗದ ಬಾಗಿಲು ಕಾಣಿಸಿದ್ದು, ಇದರ ವಿಡಿಯೋ ವೈರಲ್ ಆಗಿದೆ.
ಸದ್ಯ, ರಾಜ್ಯದಾದ್ಯಂತ ಭಾರೀ ಮಳೆಯಾಗುತ್ತಿದೆ. ಈ ನಡುವೆ ಆಕಾಶದಲ್ಲಿ ಕಿರಣಗಳ ನಡುವೆ ಬಾಗಿಲಿ ಆಕೃತಿಯ ನೆರಳು ಕಂಡುಬಂದಿದ್ದು ಭಾರೀ ಚರ್ಚೆಗೆ ಎಡೆಮಾಡಿ ಕೊಟ್ಟಿದೆ. ಬೆಂಗಳೂರಿನ ವಸೀಮ್ ಎನ್ನುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದು ‘ನಿನ್ನೆ ಆಕಾಶದಲ್ಲಿ ನಿಗೂಢ ನೆರಳು ಕಾಣಿಸಿಕೊಂಡಿದೆ.ಇದು ಏನಾಗಿರಬಹುದು?, ಕಟ್ಟಡದ ನೆರಳಾ?’ ಎಂದು ಬರೆದುಕೊಂಡಿದ್ದಾರೆ.
ಈ ವರೆಗೆ ವಿಡಿಯೋವನ್ನು 49 ಸಾವಿರ ಜನ ವೀಕ್ಷಿಸಿದ್ದು, ನೋಡಿದವರೆಲ್ಲ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೆಲವರು ‘ಇದು ಸ್ವರ್ಗದ ಬಾಗಿಲು’ ಎಂದರೆ, ಇನ್ನೂ ಕೆಲವರು ಇದು ‘ಯಾವುದೋ ಕಟ್ಟಡದ ನೆರಳಿರಬಹುದು’ ಎಂದಿದ್ದಾರೆ. ಆದರೂ ಕೂಡ ಇದೊಂದ ಅಚ್ಚರಿಯ ವಿಡಿಯೋವಾಗಿದ್ದು ಈ ರೀತಿಯ ನೆರಳು ಆಕಾಶದಲ್ಲಿ ಹೇಗೆ ಬಂತು ಎಂಬುದೇ ಎಲ್ಲರ ಪ್ರಶ್ನೆ.