ಪಹ!ಲ್ಗಾಮ ದುರ್ಘಟನೆಯ ನಂತರ ಇಡೀ ದೇಶ ಕುದಿಯುತ್ತಿದೆ. ಪಾಪಿ ಪಾಕಿಸ್ತಾನದ ವಿರುದ್ಧ ಸೇಡು ತೀರಿಸಿಕೊಳ್ಳಲು ಭಾರತದ ಜನ ಕಾಯುತ್ತಿದ್ದಾರೆ. ಈಗಾಗಲೇ ಪಾಕಿಸ್ತಾನಕ್ಕೆ ಪಾಠ ಕಲಿಸಬೇಕು ಅಂತ ಒಂದಿಷ್ಟು ಕಠಿಣ ನಿರ್ಧಾರ ತೆಗದುಕೊಳ್ಳಲಾಗಿದೆ. ಅಷ್ಟೆ ಅಲ್ಲ ನದಿ ನೀರು ಒಪ್ಪಂದ ಕೂಡ ಮುರಿದುಕೊಳ್ಳಲಾಗಿದೆ. ದೇಶದಲ್ಲಿ ಇರುವ ಪಾಕಿಸ್ತಾನಿಗಳನ್ನ ದೇಶದಿಂದ ಹೊರ ಹಾಕುವ ಕೆಲಸವನ್ನೂ ಸರ್ಕಾರ ಮಾಡಿದೆ. ಈಗಾಗಲೇ ಇದರ ಎಫೆಕ್ಟ್ ಪಾಕಿಸ್ತಾನಕ್ಕೂ ತಟ್ಟಿದೆ.
ಇನ್ನು ಯುದ್ಧ ನಡೆಯಲೇಬೇಕ, ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು ಅಂತ ಇಡೀ ದೇಶದ ಜನತೆ ನರೇಂದ್ರ ಮೋದಿಯವರಿಗೆ ಮನವಿ ಮಾಡುತ್ತಿದ್ದಾರೆ. ಅಮಾಯಕರ ಜೀವ ಪಡೆದ ಪಾಪಿಗಳ ಜೀವ ತೆಗೆಯಬೇಕು ಅನ್ನೋ ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ಮಧ್ಯೆ ಯುದ್ಧದ ಸ್ಥಿತಿಯೂ ನಿರ್ಮಾಣವಾಗಿದೆ. ಯು1ದ್ಧ ನಡೆಯಲೇಬೇಕು ಅನ್ನೋದು ಕೂಡ ಭಾರತೀಯರ ಒತ್ತಾಯ.
ಈ ಮಧ್ಯೆ ಯುದ್ಧ ನಡೆಯುತ್ತೆ ಅನ್ನೋ ಭಯದಲ್ಲೇ ಪಾಕಿಸ್ತಾನ ಇದೆ. ಅಷ್ಟೆ ಅಲ್ಲ ಯಾವಾಗ ಬೇಕಾದರೂ ಯುದ್ಧ ನಡೆಯಬಹುದು ಅಂತ ಕುತಂತ್ರಿ ಪಾಕಿಸ್ತಾನ ಇನ್ನಿಲ್ಲದ ಪ್ರಿಪರೇಷನ್ ಮಾಡ್ತಾ ಇದೆ. ತಮ್ಮ ಸೈನಿಕರನ್ನ ಗಡಿಯಿಂದ ವಾಪಸ್ ಕರೆಸಿಕೊಳ್ಳೋದನ್ನೂ ಮಾಡಿದೆ. ಅಷ್ಟೆ ಯಾಕೆ ಗಡಿಯಲ್ಲಿ ಆಗಿಂದಾಗ್ಲೆ ಅಪ್ರಚೋದಿತ ಗುಂಡಿನ ದಾಳಿ ಮಾಡಿ ಹೆಸರಿಸುವ ಪ್ರಯತ್ನ ಮಾಡ್ತಾ ಇದೆ. ಇದ್ಯಾವುದಕ್ಕೂ ಭಾರತ ಬಗ್ಗಲ್ಲ ಅನ್ನೋದು ಪಾಕಿಸ್ತಾನಕ್ಕೆ ಗೊತ್ತಿಲ್ಲ.

ಇದೆಲ್ಲದರ ಮಧ್ಯೆ ಮೋದಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ದ ಅಂತ ಕಾಂಗ್ರೆಸ್ ಜೆಡಿಎಸ್ ನಾಯಕರು ಹೇಳಿದ್ದಾರೆ. ನರೇಂದ್ರ ಮೋದಿತಗೆದುಕೊಳ್ಳೊ ನಿರ್ಧಾರಕ್ಕೆ ನಾವು ನಿಲ್ತೀವಿ ಅಂದಿದ್ದಾರೆ. ಅದೇ ರೀತಿ ದೆಹಲಿಯಲ್ಲಿ ಇಂದು ಮಾತನಾಡಿರುವ ಜೆಡಿಎಸ್ ವರಿಷ್ಠ ದೇವೇಗೌಡರು, ಯಾರು ಟೆರ!ರಿಸ್ಟ್ ಇದ್ದಾರೆ ಅವರನ್ನ ಸೆದೆ ಬಡಿಯೋ ವರೆಗೂ ನಾನು ವಿಶ್ರಾಂತಿ ತೆಗದುಕೊಳ್ಳಲ್ಲ. ನಮ್ಮ ದೇಶದ ಪ್ರಧಾನಿ ಆರ್ಮಿಗೆ ಸಂಪೂರ್ಣ ಫ್ರೀ ಹ್ಯಾಂಡ್ ಕೊಟ್ಟಿದ್ದಾರೆ. ಹಿಂದೆ ಯಾರೂ ಈ ರೀತಿ ಸೈನಿಕರಿಗೆ ಫ್ರೀ ಹ್ಯಾಂಡ್ ಕೊಟ್ಟಿರಲಿಲ್ಲ. ನಾನು ನಮ್ಮ ಪಕ್ಷ ಇಡೀ ದೇಶ ಮೋದಿಯವರ ಬೆನ್ನ ಹಿಂದೆ ಇರ್ತೀವಿ. ನಾವಷ್ಟೆ ಅಲ್ಲ ಇಡೀ ದೇಶ ಅವರ ಹಿಂದೆ ಇರುತ್ತದೆ. ಪ್ರಧಾನಿಯವರ ನಿರ್ಧಾರವನ್ನ ನಾನು ಬೆಂಬಲಿಸುತ್ತೇನೆ. ಯು!ದ್ಧದ ಕುರಿತು ಮಾತನಾಡಿರೋ ಅವರು, ಅಂದಿನ ಯುದ್ಧಕ್ಕೂ ಇಂದಿಗೂ ವ್ಯತ್ಯಾಸ ಇದೆ. ಆದರೆ ಮೋದಿಯವರ ಜೊತೆ ನಾವು ಕೈ ಜೋಡಿಸಬೇಕು. ದೇಶ ಮೊದಲು ಅಂದಿದ್ದಾರೆ.
ಇದೊಂದು ಮಾಸ್ಟರ್ ಮೈಂಡ್ ಅಟ್ಯಾಕ್. 26 ಜನರು ಇದರಲ್ಲಿ ಸಾವನ್ನಪ್ಪಿದ್ದಾರೆ. ನಮ್ಮ ಪಕ್ಷ ಸರ್ಕಾರದ ಪರವಾಗಿದೆ. ಪ್ರಧಾನಿ ಮೋದಿ ರಷ್ಯಾ ಪ್ರವಾಸ ರದ್ದು ಮಾಡಿದ್ದಾರೆ. ಗೃಹ ಸಚಿವರು, ರಕ್ಷಣಾ ಸಚಿವರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳು ಪ್ರಧಾನಿ ಬೆಂಬಲಕ್ಕೆ ನಿಂತಿವೆ. ಯಾವ ಸಂದರ್ಭದಲ್ಲಿ ಏನು ನಿರ್ಣಯ ತೆಗೆದುಕೊಳ್ಳಬೇಕು ಅದರ ಜವಾಬ್ದಾರಿ ಸೇನೆಗೆ ನೀಡಿದೆ. ಸೇನೆಯ ವಿವೇಚನೆಯ ಮೇಲೆ ನಿರ್ಧಾರ ಮಾಡಲಾಗುವುದು. ಮೂರು ಸೇನಾ ಮುಖ್ಯಸ್ಥರು ಯುದ್ಧದ ಬಗ್ಗೆ ನಿರ್ಧಾರ ಮಾಡ್ತಾರೆ ಎಂದಿದ್ದಾರೆ.
ಈಗಾಗಲೇ ಸಾಕಷ್ಟು ಸುತ್ತಿನ ಮಾತುಕತೆ ಬಳಿಕವೂ ಕೂಡ ಒಂದಿಷ್ಟು ಕಠಿಣ ನಿರ್ಧಾರ ತೆಗೆದುಕೊಂಡಿರೋ ಕೇಂದ್ರ ಸರ್ಕಾರ ಈಗ ಯು!ದ್ಧದ ತಯಾರಿ ಆರಂಭಿಸಿದೆ. ಯುದ್ಧಭ್ಯಾಸವನ್ನ ಮಾಡಬೇಕು ಅಂತ ಕೇಂದ್ರ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಈ ಮಧ್ಯೆ ಎಲ್ಲಾ ರಾಜಕೀಯ ನಾಯಕರು ಮೋದಿ ಬೆನ್ನಿಗೆ ನಿಂತಿದ್ದು ದೇಶ ಮೊದಲು ಅಂತಿದ್ದಾರೆ.



