ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲಿ ಒಂದು ಶ್ರೀರಸ್ತು ಶುಭಮಸ್ತು. ಈ ಧಾರಾವಾಹಿ 2 ವರ್ಷಗಳ ಹಿಂದೆ ಶುರುವಾಗಿ ಇತ್ತೀಚೆಗೆ 700 ಸಂಚಿಕೆಗಳನ್ನು ಪೂರೈಸಿದೆ. ಶ್ರೀರಸ್ತು ಶುಭಮಸ್ತು ಒಂದು ರೀತಿಯಲ್ಲಿ ವಿಭಿನ್ನವಾದ ಕಥಾಹಂದರ ಹೊಂದಿದ್ದ ಧಾರಾವಾಹಿ ಆಗಿದೆ. ಮಧ್ಯ ವಯಸ್ಸಿನಲ್ಲಿ ಪ್ರೀತಿ ಅರಸುವುದು, ಮದುವೆ ಆಗುವುದು ತಪ್ಪಲ್ಲ ಎಂದು ತೋರಿಸಿಕೊಟ್ಟ ಧಾರಾವಾಹಿ. ಕನ್ನಡದ ಖ್ಯಾತ ನಟಿ ಸುಧಾರಾಣಿ ಅವರು ಬಹಳ ವರ್ಷಗಳ ನಂತರ ಕಿರುತೆರೆಗೆ ಕಂಬ್ಯಾಕ್ ಮಾಡಿ, ನಾಯಕಿಯಾಗಿ ಕಾಣಿಸಿಕೊಂಡಿದ್ದು ಶ್ರೀರಸ್ತು ಶುಭಮಸ್ತು ಮೂಲಕ. ನಟ ಅಜಿತ್ ಹಂದೆ ಅವರು ಸಹ ಈ ಧಾರಾವಾಹಿ ಇಂದ ಮತ್ತೆ ಕನ್ನಡ ಕಿರುತೆರೆಗೆ ಬಂದರು. ಈ ಧಾರಾವಾಹಿಯ ಕಥೆ ಸಹ ಇವರಿಬ್ಬರಿಗೆ ಹೇಳಿ ಮಾಡಿಸಿದ ರೀತಿ ಇದೆ. ಇದೀಗ ಶ್ರೀರಸ್ತು ಶುಭಮಸ್ತು ಬಗ್ಗೆ ಹೊಸ ಕಥೆ ಶುರುವಾಗಿದೆ.
ಮಾಧವ ತುಳಸಿ ಅಂದ್ರೆ ಅವರಿಬ್ಬರ ನಡುವಿನ ಪ್ರೀತಿ ಮತ್ತು ಸ್ನೇಹಕ್ಕೆ ಹೆಸರುವಾಸಿ ಆಗಿರುವವರು. ಮಧ್ಯ ವಯಸ್ಸಿನಲ್ಲಿ ಸ್ನೇಹ ಪ್ರೀತಿ ಶುರುವಾಗಿ, ಇಬ್ಬರಿಗೂ ಮದುವೆಯಾಗಿ ಬಹಳ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದಾರೆ..ಗಂಡ ಹೆಂಡತಿ ಅಂದ್ರೆ ಹೀಗಿರಬೇಕು ಎಂದು ಇವರಿಬ್ಬರನ್ನ ನೋಡಿ ಬಹಳ ಜನರಿಗೆ ಅನ್ನಿಸಿದ್ದಿದೆ. ತುಳಸಿ ಮಾಧವ ಜೋಡಿ ಅಷ್ಟು ಚೆನ್ನ, ಜೋಡಿ ಅಂದ್ರೆ ಹೀಗಿರಬೇಕು ಅಂದುಕೊಳ್ಳೋ ಮೊದಲೇ ಮಾಧವ ಈಗ ಶಾರ್ವರಿ ಜೊತೆ ಹೋಗಿದ್ದಾರೆ. ಅರೆರೆ ಇದೇನಾಯ್ತು, ತುಳಸಿ ಎಲ್ಲಿ, ಮಾಧವ ಯಾಕೆ ಅವರ ಜೊತೆಗೆ ಹೋದ್ರು ಎಂದು ಅಭಿಮಾನಿಗಳು ಶಾಕ್ ಆಗಿದ್ದು ನಿಜ, ಆದರೆ ಇಲ್ಲಿ ಮಾಧವ ಶಾರ್ವರಿ ಜೊತೆಗೆ ಹೋಗಿದ್ದು ಧಾರಾವಾಹಿಯಲ್ಲಿ ಅಲ್ಲ.. ಇಬ್ಬರೂ ಜೊತೆಯಾಗಿ ಹೋಗಿದ್ದು ಆಫ್ ಸ್ಕ್ರೀನ್ ಹಾಲಿಡೇ ಗಾಗಿ..
ಹೌದು ಶ್ರೀರಸ್ತು ಶುಭಮಸ್ತು ತಂಡ ಈಗ ಹಾಲಿ ಡೇ ಮೂಡ್ ನಲ್ಲಿದ್ದಾರೆ. ಮಾಧವ, ಶಾರ್ವರಿ, ಅವಿ, ಅಭಿ, ಪೂರ್ಣಿ ಮತ್ತು ದೀಪಿಕಾ ಎಲ್ಲರೂ ಸೇರಿ ಕೇರಳದ ವಯನಾಡಿಗೆ ಭೇಟಿ ನೀಡಿದ್ದು, ಸಖತ್ ಎಂಜಾಯ್ ಮಾಡಿದ್ದಾರೆ. ಈ ಶಾರ್ಟ್ ಟ್ರಿಪ್ ನಲ್ಲಿ ಎಲ್ಲರು ಸೇರಿ ದರ್ಶನ್ ಅವರ ನವಗ್ರಹ ಸಿನಿಮಾದ ಹಾಡಿಗೆ ರೀಲ್ಸ್ ಮಾಡಿ, ಅದನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು, ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಎಲ್ಲರೂ ಬಹಳ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಧಾರಾವಾಹಿಗಿಂತ ಭಿನ್ನವಾಗಿ ಕಾಣಿಸಿಕೊಂಡಿದ್ದು, ಈ ವಿಡಿಯೋ ನೋಡಿ ಕಿರುತೆರೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇದೇ ರೀತಿ ಹೆಚ್ಚು ಹೆಚ್ಚು ರೀಲ್ಸ್ ಮಾಡಿ ಎನ್ನುತ್ತಿದ್ದಾರೆ ಫ್ಯಾನ್ಸ್. ಇನ್ನು ಮಾಧವ ಪಾತ್ರದ ಅಜಿತ್ ಅವರನ್ನು ನೋಡಿ, ತಮಿಳು ನಟ ಅಜಿತ್ ಅವರನ್ನೇ ನೋಡಿದ ಹಾಗೆ ಆಗುತ್ತಿದೆ ಎನ್ನುತ್ತಿದ್ದಾರೆ..

ಪೂರ್ಣಿ ಮತ್ತು ದೀಪಿಕಾ ಮಾಡರ್ನ್ ಲುಕ್ ಫ್ಯಾನ್ಸ್ ಗೆ ಸಖತ್ ಇಷ್ಟವಾಗಿದೆ. ಇನ್ನು ಅವಿ ಅಭಿ ಬಹಳ ಡ್ಯಾಶಿಂಗ್ ಆಗಿ ಕಾಣಿಸಿಕೊಂಡಿದ್ದಾರೆ. ಶಾರ್ವರಿ ಹಾಗೂ ಮಾಧವ ರಾಕಿಂಗ್ ಆಗಿ ಕಾಣುತ್ತಿದ್ದಾರೆ. ಈ ವಿಡಿಯೋದಲ್ಲಿ ಶಾರ್ವರಿ ಹಾಗೂ ಮಾಧವ ಇಬ್ಬರನ್ನು ನೋಡಿದ ನೆಟ್ಟಿಗರು, ಮಾಧವ ಸರ್ ಶಾರ್ವರಿ ಹಿಂದೆ ಹೋಗಿದ್ದಾರೆ, ಇದನ್ನು ನೋಡಿದರೆ ತುಳಸಿ ಅವರ ಗತಿ ಏನು ಎಂದು ಕಾಮೆಂಟ್ಸ್ ನಲ್ಲಿ ತಮಾಷೆ ಮಾಡುತ್ತಿದ್ದಾರೆ. ತುಳಸಿ ಸ್ವಲ್ಪ ತಮ್ಮ ಕುಟುಂಬದ ಬಗ್ಗೆ ಗಮನ ಕೊಡಬೇಕು, ಎಲ್ಲರೂ ಹೀಗೆ ಹೊರಗಡೆ ಹೋಗಿದ್ದಾರೆ ಎಂದು ಬಹಳಷ್ಟು ಅಭಿಮಾನಿಗಳು ಕಾಮೆಂಟ್ಸ್ ಗಳನ್ನು ಮಾಡುತ್ತಿದ್ದು, ತುಳಸಿ ಅವರು ಎಲ್ಲಿ, ಸುಧಾರಾಣಿ ಮೇಡಂ ಎಲ್ಲಿ ಅವರನ್ನು ಎಲ್ಲಿ ಬಿಟ್ಟುಬಿಟ್ರಿ ಎಂದು ತಮಾಷೆಯಾಗಿ ಕೇಳುತ್ತಿದ್ದಾರೆ. ಸುಧಾರಾಣಿ ಅವರು ಮಾತ್ರ ಈ ಟ್ರಿಪ್ ಇಂದ ಮಿಸ್ ಆಗಿದ್ದು, ಅವರು ಹೊರದೇಶದಲ್ಲಿದ್ದಾರೆ.
ಒಟ್ಟಿನಲ್ಲಿ ಇವರ ಫ್ಯಾಮಿಲಿ ಪುಟ್ಟ ಪರದೆಯ ಮೇಲೆ ಜನರಿಗೆ ಮನರಂಜನೆ ಕೊಡುವುದು ಮಾತ್ರವಲ್ಲ, ಸೋಷಿಯಲ್ ಮೀಡಿಯಾದಲ್ಲಿ ಈ ಥರದ ರೀಲ್ಸ್ ಮೂಲಕ ಇನ್ನಷ್ಟು ಮನರಂಜನೆ ಕೊಡುತ್ತಿದ್ದಾರೆ. ಕಿರುತೆರೆಗೆ ಅಡಿಕ್ಟ್ ಆಗಿರುವ ಫ್ಯಾನ್ಸ್ ಗೆ ಇದಕ್ಕಿಂತ ಇನ್ನೇನು ಬೇಕು ಹೇಳಿ.. ಇನ್ನು ಶ್ರೀರಸ್ತು ಶುಭಮಸ್ತು ಧಾರಾವಾಹಿ ಬಗ್ಗೆ ವೀಕ್ಷಕರಿಗೆ ಒಂದು ಬೇಸರದ ಸುದ್ದಿ ಕೂಡ ಇದೆ. ಅದೇನು ಎಂದರೆ ಶೀಘ್ರದಲ್ಲೇ ಅಂದರೆ ಈ ತಿಂಗಳಲ್ಲೇ ಶ್ರೀರಸ್ತು ಶುಭಮಸ್ತು ಧಾರಾವಾಹಿ ಮುಕ್ತಾಯ ಆಗಬಹುದು ಎನ್ನುವ ಮಾತು ಕೇಳಿ ಬರುತ್ತಿದೆ. ಜೀಕನ್ನಡ ವಾಹಿನಿಯಲ್ಲಿ ಈಗಾಗಲೇ ಎರಡು ಹೊಸ ಧಾರಾವಾಹಿಗಳು ಅನೌನ್ಸ್ ಆಗಿದೆ. ಕರ್ಣ ಮತ್ತು ರಾಘವೇಂದ್ರ ಸ್ವಾಮಿಯ ಧಾರಾವಾಹಿ. ಈ ಎರಡರಲ್ಲಿ ಕರ್ಣ ಧಾರಾವಾಹಿ ಐಪಿಎಲ್ ಮುಗಿಯುವ ವೇಳೆಗೆ ಶುರುವಾಗಬಹುದು ಎನ್ನಲಾಗಿದ್ದು, ಈಗಾಗಲೇ ಪ್ರೊಮೋಗಳು ಸದ್ದು ಮಾಡುತ್ತಿದೆ.

ಇನ್ನು ಹೊಸ ಧಾರಾವಾಹಿಗೆ ಅನುವು ಮಾಡಿ ಕೊಡುವುದಕ್ಕಾಗಿ ಶ್ರೀರಸ್ತು ಶುಭಮಸ್ತು ಧಾರಾವಾಹಿಯನ್ನು ಮುಗಿಸಲಾಗುತ್ತಿದೆ ಎನ್ನುವ ವಿಷಯ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೌದು, ಕಥ ಸಹ ಮುಕ್ತಾಯದ ಹಂತ ತಲುಪಿರುವ ಸೂಚನೆ ಕೊಡುತ್ತಿದೆ. ಶಾರ್ವರಿಯ ಕುತಂತ್ರಗಳು ಮನೆಯಲ್ಲಿ ಒಬ್ಬೊಬ್ಬರಾಗಿ ಎಲ್ಲರಿಗೂ ಗೊತ್ತಾಗುತ್ತಿದೆ, ಮಾಧವನಿಗೆ ಗೊತ್ತಾಗುವುದು ಮಾತ್ರ ಬಾಕಿ ಇದೆ. ಶಾರ್ವರಿಯ ಮೇಲಿನ ಅತಿಯಾದ ನಂಬಿಕೆ ಇಂದ ಮಾಧವ ಯಾವುದೇ ವಿಷಯವನ್ನು ನಂಬುವುದಕ್ಕೆ ತಯಾರಿಲ್ಲ. ಮಕ್ಕಳಿಗೆ ಎಲ್ಲಾ ವಿಷಯ ಗೊತ್ತಾಗಿದ್ದು, ಸಾಕ್ಷಿ ಜೊತೆಗೆ ಪ್ರೂವ್ ಮಾಡಬೇಕು ಎಂದು ತುಳಸಿ, ದತ್ತ ಹಾಗೂ ಎಲ್ಲಾ ಮಕ್ಕಳು ಪ್ಲಾನ್ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಕೆಲಸವನ್ನು ಶುರು ಮಾಡಿದ್ದಾರೆ. ಈಗ ತುಳಸಿಗೆ ಎಲ್ಲರ ಸಾಥ್ ಸಿಗುತ್ತಿದೆ..
ಇದೆಲ್ಲವನ್ನು ನೋಡಿದರೆ ಶ್ರೀರಸ್ತು ಶುಭಮಸ್ತು ಧಾರಾವಾಹಿ ಮುಕ್ತಾಯದ ಹಂತ ತಲುಪಿರುವುದು ನಿಜವೇ ಅನ್ನಿಸುತ್ತಿದ್ದು, ವಾಹಿನಿ ಇಂದ ಅಥವಾ ತಂಡದ ಕಡೆಯಿಂದ ಈ ವಿಷಯದ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಆದರೆ ಕಥೆ ಸಾಗುತ್ತಿರುವ ರೀತಿ ಇಂದ ಆ ರೀತಿ ಅನ್ನಿಸುತ್ತಿದ್ದು, ಐಪಿಎಲ್ ಮುಗಿಯುವ ಹಂತಕ್ಕೆ ಬರುವ ವೇಳೆಗೆ ಧಾರಾವಾಹಿ ಮುಗಿದು, ಹೊಸ ಧಾರಾವಾಹಿಗಳು ಶುರುವಾಗಬಹುದು ಎಂದು ಹೇಳಲಾಗುತ್ತಿದೆ. ನಿಜಕ್ಕೂ ಶ್ರೀರಸ್ತು ಶುಭಮಸ್ತು ಧಾರಾವಾಹಿ ಮುಗಿದು ಹೋಗುತ್ತಾ ಎಂದು ಕಾದು ನೋಡಬೇಕಿದೆ.



