ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗಿ ಇಂದಿಗೆ ಮೂರು ವಾರಗಳು ಕಳೆದಿದ್ದು ಮೊದಲ ಫಿನಾಲೆಯಲ್ಲಿ ಮೂವರು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಲವರ್ ಬಾಯ್ ಕೊರತೆ ಇತ್ತು ಅಂತಹ ಸಂದರ್ಭದಲ್ಲಿ ಮೈಸೂರಿನ ಹುಡುಗ ಸೂರಜ್ ಸಿಂಗ್ ಆಕರ್ಷಕವಾದ ರೀತಿಯಲ್ಲಿ ಈಜುಕೊಳದಿಂದ ಒದ್ದೆಯಾಗಿ ಎದ್ದು ಬಂದು ಶರ್ಟ್ ತೆಗೆದಾಗ ಅವರ ಸಿಕ್ಸ್ ಪ್ಯಾಕ್ ನೋಡಿ ಕ್ಲೀನ್ ಬೋಲ್ಡ್ ಆಗಿ ಮನೆಯ ಎಲ್ಲಾ ಹುಡುಗಿಯರು ಜೋರಾಗಿ ಕೂಗಿದ್ದಾರೆ.

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಮೂರನೇ ವೈಲ್ಡ್ ಕಾರ್ಡ್ ಸ್ಪರ್ಧಿ ಸೂರಜ್ ಸಿಂಗ್ ಸ್ವಲ್ಪ ವಿಶೇಷ ರೀತಿಯಲ್ಲಿ ಎಂಟ್ರಿ ಕೊಟ್ಟಿದ್ದಾರೆ. Heart ಸಿಂಬಲ್ ಹಿಡಿದು ಸ್ವಿಮ್ಮಿಂಗ್ ಪೂಲ್ ನಲ್ಲಿ ರೋಮ್ಯಾಂಟಿಕ್ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಒದ್ದೆ ಬಟ್ಟೆ ತೆಗೆದು ಸಿಕ್ಸ್ ಪ್ಯಾಕ್ ತೋರಿಸುವ ಮೂಲಕ ಹುಡುಗಿಯರಿಗೆ ಹಾರ್ಟ್ ಬ್ರೇಕ್ ಆಗುವಂತೆ ಮಾಡಿದ್ದಾರೆ.
ರೋಮ್ಯಾಂಟಿಕ್ ಲವರ್ ಬಾಯ್ ಲುಕ್ ನಲ್ಲಿ ಎಂಟ್ರಿ ಕೊಟ್ಟ ಸೂರಜ್ ಸಿಂಗ್, ಇಲ್ಲಿ ನಿಮಗೆ ಇಷ್ಟವಾದ ಸುಂದರವಾದ ಮಹಿಳೆಗೆ ಕೆಂಪು ಗುಲಾಬಿ ನೀಡಿ ಎಂದು ಬಿಗ್ ಬಾಸ್ ಹೇಳುತ್ತಿದ್ದಂತೆ ನೇರವಾಗಿ ಬಂದು ಸೂಪರ್ ಹುಡುಗಿ ರಾಶಿಕಾ ಗೆ ಕೆಂಪು ಗುಲಾಬಿ ನೀಡಿ ಸೆಲೆಕ್ಟ್ ಮಾಡಿದ್ದಾರೆ.

ಸ್ವಿಮ್ಮಿಂಗ್ ಪೂಲ್ ಇಂದ ಎದ್ದು ಬರುತ್ತಿದ್ದಂತೆಯೇ ಬಿಗ್ ಬಾಸ್ ಟಾಸ್ಕ್ ಒಂದನ್ನು ನೀಡಿ , ಈ ಬಿಗ್ ಬಾಸ್ ಮನೆಯಲ್ಲಿ ಸುಂದರವಾದ ಮಹಿಳಾ ಸ್ಪರ್ಧೆ ಯಾರು? ಮತ್ತು ಯಾರಿಗೆ ಗುಲಾಬಿ ಹೂವನ್ನು ನೀಡುತ್ತೀರಾ ಎಂದು ಕೇಳಿದರು. ನೇರವಾಗಿ ಬಂದು ರಾಶಿಕ ಶೆಟ್ಟಿಗೆ ಕೊಟ್ಟು ನೀವು ಕ್ಯೂಟ್ ಆಗಿದ್ದೀರಾ ಎಂದು ಹೇಳಿದ್ದಾರೆ. ಹೀಗಾಗಿ ಬಿಗ್ ಬಾಸ್ ಮನೆಯಲ್ಲಿ ಇನ್ನು ಮುಂದೆ ಲವ್ ಸ್ಟೋರಿ ಶುರುವಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ಇನ್ನು ಸೂರಜ್ ಸಿಂಗ್ ರವರ ಹಿನ್ನೆಲೆಯ ಬಗ್ಗೆ ಹೇಳುವುದಾದರೆ ಇವರು ಮೂಲತಃ ಕನ್ನಡದವರೇ ಆಗಿದ್ದು ಅದರಲ್ಲೂ ನಮ್ಮ ಮೈಸೂರಿನವರು. ಚೂರು ಓದಿದ್ದು ಬೆಳೆದಿದ್ದೆಲ್ಲ ಇಲ್ಲಿಯೆ. ಪ್ರಸ್ತುತದ ಲ್ಲಿ ಇವರು ರೆಸ್ಟೋರೆಂಟ್ ಒಂದರಲ್ಲಿ ಶೆಫ್ ಆಗಿ ಕೆಲಸ ಮಾಡುತ್ತಿದ್ದಾರೆ, ಅವರಿಗೆ ಅಡುಗೆ ಬರುತ್ತದೆ ಇದರಿಂದ ದೊಡ್ಡ ಮನೆಯಲ್ಲಿ ಇದು ಕೂಡ ಅವರಿಗೆ ಒಂದು ಪ್ಲಸ್ ಪಾಯಿಂಟ್ ಆಗಬಹುದು.
ಚೆನ್ನಾಗಿ ಡ್ರೆಸ್ ಮಾಡಿಕೊಳ್ಳುವುದು ಮತ್ತು ಅದನ್ನು ನೀಟಾಗಿ ಪ್ರೆಸೆಂಟ್ ಮಾಡುವುದು ಕೂಡ ಇವರಿಗೆ ಚೆನ್ನಾಗಿ ತಿಳಿದಿದೆ. ಡ್ರೆಸ್ಸಿಂಗ್ ಸೆನ್ಸ್ ನಿಂದ ಲವರ್ ಬಾಯಾಗಿ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳುವ ಎಲ್ಲಾ ಲಕ್ಷಣಗಳು ಕೂಡ ಇದೆ. ರೋಮ್ಯಾಂಟಿಕ್ ಲುಕ್ ನಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಸೂರಜ್ ಸಿಂಗ್ ಮನೆಯಲ್ಲಿ ಇನ್ನೇನು ಕಮಾಲು ಮಾಡುತ್ತಾರೊ ಕಾದು ನೋಡಬೇಕು.



