ಜಾಲಿವುಡ್ ಸ್ಟುಡಿಯೋ ಪರಿಸರ ನಿಯಮ ಪಾಲಿಸದೇ ಇದ್ದಿದ್ದರಿಂದ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಬಿಗ್ ಬಾಸ್ ಸೀಸ್ ಮಾಡಿತ್ತು ಇದೇ ಕಾರಣದಿಂದ ಬಿಗ್ ಬಾಸ್ ಕನ್ನಡ ಸೀಸನ್ 12 ಸಿಕ್ಕಾಪಟ್ಟೆ ಸುದ್ದಿಯಲ್ಲಿತ್ತು.ಎರಡು ದಿನ ಬಿಗ್ ಬಾಸ್ ಶೋವನ್ನು ರದ್ದು ಮಾಡಿತ್ತು. ಈಗ ಸಮಸ್ಯೆ ಬಗೆಹರಿದು ಮತ್ತೆ ಬಿಗ್ ಬಾಸ್ ಶೋ ಆರಂಭ ಆಗಿದೆ.

ಆರಂಭಕ್ಕೂ ಮುನ್ನವೇ ಈ ಬಾರಿ ಬಿಗ್ ಬಾಸ್ ವಿಭಿನ್ನವಾಗಿರುತ್ತೆ ಎಂದು ತಿಳಿಸಲಾಗಿತ್ತು. ಅದರಂತೆ ಬಿಗ್ ಬಾಸ್ 12ನೇ ಸೀಸನ್ ಆರಂಭ ಆಗುತ್ತಿದ್ದಂತೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟು ವೀಕ್ಷಕರನ್ನು ತನ್ನತ್ತ ಸೆಳೆದಿತ್ತು. ಈಗ ಮೊದಲ ವಾರ ಕನ್ನಡದ ಈ ಬಿಗ್ ರಿಯಾಲಿಟಿ ಶೋಗೆ ಟಿಆರ್ಪಿ ಫಲಿತಾಂಶನೂ ಹೊರಬಿದ್ದಿದೆ
ಬಿಗ್ ಬಾಸ್ ಸೀಸನ್ 12ರ ಮೊದಲ ವಾರದ ಟಿಆರ್ಪಿ ಲಿಸ್ಟ್ ಹೊರಬಿದ್ದಿದೆ. ಕನ್ನಡದ ಈ ಜನಪ್ರಿಯ ರಿಯಾಲಿಟಿ ಶೋಗೆ ಸಿಕ್ಕಾಪಟ್ಟೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ವಾರವೇ ಬಿಗ್ ಬಾಸ್ ಕನ್ನಡ ಸೀಸನ್ 12ಗೆ ಸಿಕ್ಕಿರುವ ಟಿಆರ್ಪಿ ಎಷ್ಟು?
ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಕನ್ನಡ ಸೀಸನ್ 12 ಗ್ರಾಂಡ್ ಓಪನಿಂಗ್ಗೆ ಅತೀ ಹೆಚ್ಚು ಟಿಆರ್ಪಿ ಬಂದಿದೆ. ಸೆಪ್ಟೆಂಬರ್ 28 ಭಾನುವಾರ ಸಂಜೆ 6 ಗಂಟೆಯಿಂದ ಆರಂಭ ಆಗಿ 10.30ರವರೆಗೆ ನಡೆದಿತ್ತು. ಈ ದಿನ ಕಲರ್ಸ್ ಕನ್ನಡಕ್ಕೆ ಅತೀ ಹೆಚ್ಚು ಟಿಆರ್ಪಿ ಬಂದಿದೆ. ಇದೊಂದು ದಿನ 10.8 ಟಿಆರ್ಪಿ ಬಂದಿದೆ.
ಹಾಗೇ ಮೊದಲ ವಾರ ವೀಕ್ ಡೇಸ್ ಟಿಆರ್ಪಿ ಕೂಡ ಅಷ್ಟೇ ಅದ್ಭುತವಾಗಿದೆ. ಗ್ರ್ಯಾಂಡ್ ಓಪನಿಂಗ್ ಬಳಿಕ ಆರಂಭವಾದ ಡೈಲಿ ಶೋಗೂ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. 7.1 ಟಿಆರ್ಪಿ ಮೂಲಕ ಕಲರ್ಸ್ ಕನ್ನಡಕ್ಕೆ ಹೊಸ ಭರವಸೆಯನ್ನು ಮೂಡಿದೆ. ಒಟ್ಟಾರೆ ಮೊದಲ ವಾರದ ಬಿಗ್ ಬಾಸ್ ಕನ್ನಡ 12 ಸಕ್ಸಸ್ ಆಗಿದೆ. 2ನೇ ಸ್ಥಾನಕ್ಕೆ ಏರಿದ ಬಿಗ್ ಬಾಸ್ ಬಿಗ್ ಬಾಸ್ ಕನ್ನಡ ಸೀಸನ್ 12 ಭರ್ಜರಿ ಯಶಸ್ಸು ಕಲರ್ಸ್ ಕನ್ನಡವನ್ನು ಮೂರನೇ ಸ್ಥಾನದಿಂದ ಎರಡನೇ ಸ್ಥಾನಕ್ಕೇರಿದೆ. 38ನೇ ವೀಕ್ನಲ್ಲಿ 275 ಜಿಆರ್ಪಿ ಇದ್ದ ಚಾನೆಲ್ ರೇಟಿಂಗ್ 211 ಅಂಕಗಳ ಏರಿಕೆ ಮೂಲಕ 486ಕ್ಕೆ ಜಂಪ್ ಆಗಿದೆ. ಈ ಮೂಲಕ ಜೀ ಕನ್ನಡದ ಸಮೀಪದಲ್ಲಿದೆ. ಬಿಗ್ ಬಾಸ್ ಕಲರ್ಸ್ ಕನ್ನಡಕ್ಕೆ ಆರಂಭಿಕ ಗೆಲುವನ್ನು ಕೊಟ್ಟಿದೆ.



