ಕಿರುತೆರೆ ಧಾರಾವಾಹಿಗಳಿಗೆ ಮತ್ತು ಕಿರುತೆರೆ ಕಲಾವಿದರಿಗೆ ಬಹಳ ಬೇಡಿಕೆ ಇದೆ. ಈಗ ಧಾರಾವಾಹಿ ನೋಡದೇ ಇರುವವರು ಯಾರಿದ್ದಾರೆ ಹೇಳಿ. ಹಲವು ವಾಹಿನಿಗಳಲ್ಲಿ ಹಲವು ಧಾರಾವಾಹಿಗಳಲ್ಲಿ ಕಲಾವಿದರು ನಟಿಸುತ್ತಾರೆ. ಆಗಾಗ ಹೊಸ ಕಲಾವಿದರು ಬೆಳಕಿಗೆ ಬರುತ್ತಾರೆ. ಯಶಸ್ಸು ಪಡೆಯುತ್ತಾರೆ. ಆದರೆ ಎಲ್ಲರಿಗೂ ಈ ಯಶಸ್ಸು ಸಿಗೋದಿಲ್ಲ, ಹಾಗೆಯೇ ಎಲ್ಲರ ಬದುಕು ಚೆನ್ನಾಗಿ ಇರೋದಿಲ್ಲ. ಬಣ್ಣದ ಬದುಕು ಅಂದಕೂಡಲೇ ನಾವೆಲ್ಲರೂ ಸಹ ಅವರು ಸುಖದ ಸುಪ್ಪತ್ತಿಗೆಯಲ್ಲಿ ಇರುತ್ತಾರೆ. ಅವರ ಬದುಕು ತುಂಬಾ ಚೆನ್ನಾಗಿರುತ್ತದೆ ಎಂದುಕೊಳ್ಳುತ್ತೇವೆ. ಆದರೆ ಅಲ್ಲಿರುವ ಕಷ್ಟಗಳು, ತೊಂದರೆಗಳು ಅವರಿಗೆ ಮಾತ್ರ ಗೊತ್ತಿರುತ್ತದೆ. ಇದನ್ನು ದೂರದಿಂದ ನೋಡೋ ನಾವು ಅರ್ಥ ಮಾಡಿಕೊಳ್ಳೋದಕ್ಕೆ ಆಗೋದಿಲ್ಲ. ಅಲ್ಲಿನ ಕರಾಳ ಕಥೆಗಳನ್ನು ಕೇಳಿದಾಗ ಆಶ್ಚರ್ಯಾ ಪಡುತ್ತೇವೆ. ಇಂದು ಅಂಥದ್ದೇ ಒಂದು ವಿಷಯ ತಿಳಿಸುತ್ತೇವೆ ನಿಮಗೆ…ಪೂರ್ತಿಯಾಗಿ ಓದಿ..
ಕಿರುತೆರೆಯಲ್ಲಿ ಬಹಳ ಫೇಮಸ್ ಆಗಿ, ಜನರಿಗೆ ತುಂಬಾ ಇಷ್ಟ ಆದವರಲ್ಲಿ ನಟಿ ನಯನಾ ನಾಗರಾಜ್ ಅವರು ಸಹ ಒಬ್ಬರು. ಪಾಪಾ ಪಾಂಡು ಧಾರಾವಾಹಿ ಕಲರ್ಸ್ ಸೂಪರ್ ವಾಹಿನಿಯಲ್ಲಿ ಮತ್ತೆ ಶುರುವಾದಾಗ, ಶ್ರೀಮತಿಯ ಸೊಸೆ ಪಾತ್ರದಲ್ಲ ನಟಿಸಿದರು ನಯನಾ ನಾಗರಾಜ್. ಇವರ ಅಭಿನಯ ಕಾಮಿಡಿ ಪಾತ್ರದಲ್ಲಿ ತುಂಬಾ ಚೆನ್ನಾಗಿ ಮೂಡಿಬಂದಿತ್ತು. ಶಾಲಿನಿ ಅವರಿಗೆ ಒಳ್ಳೆಯ ರೀತಿಯಲ್ಲಿ ಸ್ಪಂದಿಸುತ್ತಾ ಜೊತೆಗೆ ಕಾಂಪಿಟೇಶನ್ ರೀತಿಯಲ್ಲೂ ತುಂಬಾ ಚೆನ್ನಾಗಿ ಅಭಿನಯಿಸುತ್ತಿದ್ದರು ನಯನಾ. ಬಳಿಕ ಇವರು ಕಾಣಿಸಿಕೊಂಡಿದ್ದು ಗಿಣಿರಾಮ ಧಾರಾವಾಹಿಯ ಮಹತಿ ಪಾತ್ರದಲ್ಲಿ. ಈ ಪಾತ್ರದ ಬಗ್ಗೆ ವಿಶೇಷಾವಾಗಿ ಹೇಳುವುದೇ ಬೇಡ. ನಯನಾ ಅವರು ಮಹತಿ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ಧರು. ಇವರ ಪಾತ್ರಕ್ಕೆ, ಗಿಣಿರಾಮ ಧಾರಾವಾಹಿಗೆ ಸಿಕ್ಕಾಪಟ್ಟೆ ಬೇಡಿಕೆ ಇತ್ತು.

ಮಹತಿಯ ಖಡಕ್ ಪಾತ್ರ, ದಿಟ್ಟತನ, ಶಿವ ಮತ್ತು ಮಹತಿಯ ಪ್ರೀತಿ ಇದೆಲ್ಲವೂ ಯಾರಿಗೆ ತಾನೇ ಇಷ್ಟ ಆಗುತ್ತಿರಲಿಲ್ಲ ಹೇಳಿ.. ಇಷ್ಟೆಲ್ಲಾ ಜನಪ್ರಿಯತೆ ಪಡೆದುಕೊಂಡಿದ್ದ ನಯನಾ ಅವರು ಗಿಣಿರಾಮ ಧಾರಾವಾಹಿ ಮುಗಿದು ಒಂದು ವರ್ಷಕ್ಕಿಂತ ಹೆಚ್ಚಿನ ಸಮಯ ಆಗಿದ್ದರು ಸಹ ಇನ್ಯಾವುದೇ ಹೊಸ ಧಾರಾವಾಹಿಯಲ್ಲಿ ಕಾಣಿಸಿಕೊಂಡಿಲ್ಲ. ಇದ್ದಕ್ಕಿದ್ದಂತೆ ಇವರು ಧಾರಾವಾಹಿ ಇಂದ ದೂರವಾಗಿದ್ದು ಯಾಕೆ ಎನ್ನುವ ಪ್ರಶ್ನೆ ಜನರಲ್ಲಿ ಕಾಣಿಸಿಕೊಂಡಿತ್ತು. ಹಾಗೆಯೇ ಹೆಚ್ಚು ದಿವಸಗಳ ಕಾಲ ಇವರು ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳದೇ ಹೋದರೆ, ಇವರನ್ನು ಜನರ ಮರೆತುಬಿಡಬಹುದು ಎನ್ನುವ ಒಂದು ವಿಷಯ ಸಹ ಇದೆ. ಇವರ ಅಭಿಮಾನಿಗಳಲ್ಲಿ ಹಾಗೂ ಕೆಲವು ಜನರಲ್ಲಿ ಒಂದು ವಿಷಯ ಕಾಡುತ್ತಲೇ ಇದೆ. ಇದಕ್ಕೆಲ್ಲಾ ಖುದ್ದು ನಯನಾ ಅವರೇ ಉತ್ತರ ಕೊಟ್ಟಿದ್ದಾರೆ. ಇತ್ತಿಚೆಗೆ ಒಂದು ಸಂದರ್ಶನದಲ್ಲಿ ಪಾಲ್ಗೊಂಡಿರುವ ನಯನಾ ಅವರು ಜನರ ಎಲ್ಲಾ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.
ಹೊರಗಡೆ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳದ ನಯನಾ ಅವರು ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದು, ತಾವು ಕಿರುತೆರೆ ಇಂದ ದೂರ ಇರೋದು ಯಾಕೆ.. ನಿಜಕ್ಕೂ ಆಗಿದ್ದೇನು, ಮತ್ತೆ ಯಾಕೆ ಧಾರಾವಾಹಿಯಲ್ಲಿ ನಟಿಸಿಲ್ಲ? ಈ ವಿಷಯವನ್ನು ರಿವೀಲ್ ಮಾಡಿದ್ದಾರೆ. ನಯನಾ ಅವರ ಮಾತುಗಳನ್ನು ಕೇಳಿದರೆ ಯಾರಿಗೆ ಆದರೂ ಆಶ್ಚರ್ಯ ಆಗುವುದಂತೂ ಖಂಡಿತ. ಅಷ್ಟಕ್ಕೂ ಆಗಿದ್ದೇನು ಎಂದು ನೋಡುವುದಾದರೆ.. ಧಾರಾವಾಹಿಯಲ್ಲಿ ನಟಿಸುವಾಗ ಸೆಟ್ ನಲ್ಲಿದ್ದ ಒಬ್ಬ ವ್ಯಕ್ತಿಯಿಂದ ನಯನಾ ಅವರಿಗೆ ಮಾನಸಿಕವಾಗಿ ತುಂಬಾ ತೊಂದರೆ ಆಗುತ್ತಿತ್ತಂತೆ, ಇದನ್ನು ಸಹಿಸಲು ಸಾಧ್ಯವಾಗದೆ ಚಾನೆಲ್ ನವರಿಗೆ ಈ ಬಗ್ಗೆ ದೂರು ನೀಡಿದರಂತೆ ನಯನಾ. ಬಳಿಕ ಚಾನೆಲ್ ನವರು ಈ ಬಗ್ಗೆ ಏನನ್ನೂ ಮಾಡಿಲ್ಲ. ಆದರೆ ಇವರಿಗೆ ಮಾನಸಿಕವಾಗಿ ತೊಂದರೆ ಕೊಡುವುದು ಹೆಚ್ಚಾಗುತ್ತಲೇ ಹೋಯಿತು.

ಕೊನೆಗೆ ನಯನಾ ಅವರು ತಾವು ಧಾರಾವಾಹಿ ಇಂದ ಹೊರಗಡೆ ಬರುವುದಾಗಿ ಗಟ್ಟಿ ನಿರ್ಧಾರ ಮಾಡಿದರು, ಆ ವೇಳೆಗೆ ಧಾರಾವಾಹಿಯನ್ನು ಸಹ ಮುಕ್ತಾಯಗೊಳಿಸಲಾಯಿತು. ಆದರೆ ಧಾರಾವಾಹಿ ಮುಗಿಸಿದ್ದರಿಂದ ತಮಗೆ ಕೋಟ್ಯಾಂತರ ರೂಪಾಯಿ ಹಣ ನಷ್ಟವಾಗಿದೆ ಎಂದು ನಯನಾ ಅವರ ಮೇಲೆ ದೂರು ಕೊಡಲಾಯಿತು, ಈ ಕಾರಣಕ್ಕೆ ನಯನಾ ಅವರನ್ನು ಧಾರಾವಾಹಿಗಳಲ್ಲಿ ನಟಿಸಬಾರದು ಎಂದು ಅವರನ್ನು ಕಿರುತೆರೆ ಇಂದ ಬ್ಯಾನ್ ಮಾಡಲಾಗಿದೆಯಂತೆ. ನಂಬುವುದಕ್ಕೆ ಕಷ್ಟ ಅನ್ನಿಸಿದರು ಸಹ ಇದೇ ಸತ್ಯ. ಬಣ್ಣದ ಲೋಕದ ಹಿಂದಿನ ಕರಾಳ ಸತ್ಯ ಇದೆ. ಇಲ್ಲಿ ಯಾವುದು ಕೂಡ ಸುಲಭವಲ್ಲ. ಬಹಳ ಕಷ್ಟಗಳು ಇರುತ್ತದೆ. ತನಗೆ ತೊಂದರೆ ಆಗುತ್ತಿದೆ ಎಂದು ಒಬ್ಬ ಹೆಣ್ಣುಮಗಳು ಹೇಳಿಕೊಂಡಾಗ, ಸಹಾಯ ಮಾಡದ ಜನರು ಆಕೆಯನ್ನು ಬ್ಯಾನ್ ಮಾಡಿದರು. ಪ್ರಪಂಚದಲ್ಲಿ ಈಗ ನಡೆಯುತ್ತಿರುವುದೇ ಹೀಗೆ. ಹೆಣ್ಣುಮಕ್ಕಳಿಗೆ ಸೇಫ್ಟಿ ಅನ್ನೋದು ಇಲ್ಲ.

ನಯನಾ ಅವರು ಅಸಲಿ ವಿಷಯ ಏನು ಎಂದು ಶೇರ್ ಮಾಡಿದ ಬಳಿಕ, ಈ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಷ್ಟು ಒಳ್ಳೆ ನಟಿಯನ್ನು ಈ ಕಾರಣಕ್ಕೆ ಬ್ಯಾನ್ ಮಾಡಿದ್ದಾರಾ ಎಂದು ಜನರು ಕೂಡ ಶಾಕ್ ಆಗಿದ್ದಾರೆ. ಕಿರುತೆರೆ ಮತ್ತು ನಟನೆ ಇಂದ ದೂರ ಉಳಿದಿರುವ ನಯನಾ ಅವರು ಈಗ ಏನು ಮಾಡುತ್ತಿದ್ದಾರೆ ಎಂದರೆ.. ಇತ್ತೀಚೆಗೆ ನಯನಾ ಅವರಿಗೆ ಮದುವೆಯಾಯಿತು. ಗಂಡನ ಜೊತೆಗೆ ಖುಷಿಯಾಗಿರುವ ನಯನಾ ಅವರು, ಸಂಗೀತ ಕ್ಷೇತ್ರದಲ್ಲಿ ಮುಂದುವರೆಯುತ್ತಿದ್ದಾರೆ. ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಯನಾ ಅವರು ತಮ್ಮ ಫ್ಯಾನ್ಸ್ ಜೊತೆಗೆ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ನಯನಾ ಅವರನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿರುವುದಂತೂ ಸುಳ್ಳಲ್ಲ.
ಹಳ್ಳಿ ಹುಡುಗಿಯರು, ದೂರದಿಂದ ನೋಡುವ ನಾವುಗಳು ಎಲ್ಲರೂ ಸಹ ಹೊರಗಡೆ ಇಂದ ಸಿನಿಮಾ ಸೀರಿಯಲ್ ಲೋಕ ನೋಡಿ, ನಾವು ಇಲ್ಲಿರಬೇಕು, ಬಣ್ಣದ ಬದುಕು ನಮಗೂ ಬೇಕು, ನಟನೆ ಮಾಡಬೇಕು ಎಂದು ಬಯಸುತ್ತೇವೆ. ಆದರೆ ಅಲ್ಲಿನ ಸತ್ಯಗಳು, ನಿಜಾಂಶಗಳು ಬೇರೆಯೇ ಇರುತ್ತದೆ. ಈ ಪ್ರಪಂಚದಲ್ಲಿ ಇದ್ದು, ಈಜಿಕೊಂಡು ಹೋಗುವುದು ಸುಲಭ ಅಲ್ಲ. ಅದರಲ್ಲೂ ಹೆಣ್ಣುಮಕ್ಕಳಿಗೆ ಸಾವಿರಾರು ರೀತಿಯ ಚಾಲೆಂಜ್ ಗಳು ಬರುತ್ತಲೇ ಇರುತ್ತವೆ. ಅವೆಲ್ಲವನ್ನೂ ಧೈರ್ಯದಿಂದ ಫೇಸ್ ಮಾಡಿ, ನಿಲ್ಲುವವರು ಮಾತ್ರ ಇಲ್ಲಿ ಬದುಕುಳಿಯುತ್ತಾರೆ. ಇಲ್ಲದೇ ಹೋದರೆ ಸೋಲುವ ಪರಿಸ್ಥಿತಿ ಎದುರಾಗುತ್ತದೆ. ಹಾಗಾಗಿ ಬಣ್ಣದ ಲೋಕದ ಆಸೆ ಬಿಟ್ಟು, ನಿಮ್ಮ ಜೀವನ ಕಟ್ಟಿಕೊಳ್ಳಿ.