ಮೊನ್ನೆಯಷ್ಟೇ ನಮ್ಮ ಆರ್ಸಿಬಿ ತಂಡ ಐಪಿಎಲ್ ನಲ್ಲಿ ಕಪ್ ಗೆದ್ದಿತು. 18 ವರ್ಷಗಳ ಕಾಯುವಿಕೆ ನಂತರ ಬಂದ ಈ ಗೆಲುವು ಅಭಿಮಾನಿಗಳಲ್ಲಿ ಅತಿಹೆಚ್ಚು ಉತ್ಸಾಹವನ್ನು ತಂದಿತು. ಮೊನ್ನೆ ಅಹಮದಾಬಾದ್ ನಲ್ಲಿ ಪಂದ್ಯ ನಡೆದು ಕಪ್ ಗೆದ್ದ ನಂತರ, ನಿನ್ನೆ ಇಡೀ ತಂಡ ಬೆಂಗಳೂರಿಗೆ ಬಂದು ಅಭಿಮಾನಿಗಳ ಜೊತೆಗೆ ಸೆಲೆಬ್ರೇಟ್ ಮಾಡುವ ಪ್ಲಾನ್ ಹೊಂದಿತ್ತು. ಓಪನ್ ಬಸ್ ಪರೇಡ್ ಎಲ್ಲವೂ ಪ್ಲಾನ್ ಆಗಿತ್ತು. ಬಳಿಕ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಅಭಿಮಾನಿಗಳ ಜೊತೆಗೆ ಸೆಲೆಬ್ರೇಟ್ ಮಾಡುವ ಪ್ಲಾನ್ ಹೊಂದಿತ್ತು, ಆದರೆ ನಡೆದಿದ್ದೆ ಬೇರೆ. ಆರ್ಸಿಬಿಯ ಇಡೀ ತಂಡ ಬೆಂಗಳೂರಿಗೆ ಬಂದು, ತಾಜ್ ವೆಸ್ಟನ್ಡ್ ಹೋಟೆಲ್ ನಲ್ಲಿ ಇದ್ದು, ಮಧ್ಯಾಹ್ನದ ವೇಳೆಗೆ ವಿಧಾನಸೌಧ ತಲುಪಿತು. ಅಲ್ಲಿ ಸಿಎಂ ಹಾಗೂ ಡಿಸಿಎಂ ಸೇರಿದಂತೆ ಎಲ್ಲರೂ ಆರ್ಸಿಬಿ ತಂಡದ ಆಟಗಾರರಿಗೆ ಸನ್ಮಾನಿಸಿದರು.
ಆದರೆ ಸಂಭ್ರಮದ ಆಚರಣೆಯ ವೇಳೆ ಯಾರೂ ಊಹಿಸದ ದುರಂತ ಕೂಡ ನಡೆದು ಹೋಯಿತು. 12 ಜನ ಪ್ರಾಣ ಕಳೆದುಕೊಂಡರು, 50ಕ್ಕಿಂತ ಹೆಚ್ಚು ಜನರಿಗೆ ಗಾಯಗಳಾಯಿತು. ಪ್ಲಾನ್ ಮಾಡಿದ ಹಾಗೆ ಯಾವುದು ಕೂಡ ನಡೆಯಲಿಲ್ಲ. ಐಪಿಎಲ್ ಗೆದ್ದ ಸಂತೋಷ ಒಂದೇ ಒಂದು ದಿವಸ ಕೂಡ ನೆಮ್ಮದಿಯಾಗಿ ಉಳಿಯಲಿಲ್ಲ. ಈ ನೋವಿನಲ್ಲೇ ಇಡೀ ಆರ್ಸಿಬಿ ತಂಡದ ಆಟಗಾರರು ತಮ್ಮ ತಮ್ಮ ಊರುಗಳಿಗೆ ತಲುಪಿದ್ದಾರೆ. ಬೆಂಗಳೂರಿನಲ್ಲಿ ಈ ಘಟನೆ ಒಂದು ರೀತಿಯಲ್ಲಿ ಎಲ್ಲರಿಗೂ ಉದಾಹರಣೆ ಆಗಿದೆ ಎಂದು ಹೇಳಿದರೂ ಕೂಡ ತಪ್ಪಲ್ಲ. ಘಟನೆಯ ಬಗ್ಗೆ ಪರ ವಿರೋಧ ಚರ್ಚೆಗಳು ಎಲ್ಲವೂ ಕೂಡ ನಡೆಯುತ್ತಲೇ ಇದೆ. ಆದರೆ ಈ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ವಿಷಯ ಭಾರಿ ಟ್ರೆಂಡ್ ಆಗುತ್ತಿದೆ, ಹಾಗೆಯೇ ಚರ್ಚೆಗೂ ಒಳಗಾಗಿದೆ.

ಆ ವಿಷಯ ಮತ್ತೇನು ಅಲ್ಲ, ಬೆಂಗಳೂರಿನ ಆರ್ಸಿಬಿ ತಂಡದ ಓಜಿ ಎಂದೇ ಕರೆಯಲ್ಪಡುವ ವಿಜಯ್ ಮಲ್ಯ ಅವರು ಬರೋಬ್ಬರಿ 9 ವರ್ಷಗಳ ನಂತರ ಪಾಡ್ ಕಾಸ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾಡ್ ಕಾಸ್ಟ್ ವಿಡಿಯೋದಲ್ಲಿ ತಮ್ಮ ಜೀವನದ ಬಗ್ಗೆ ಅನೇಕ ವಿಚಾರಗಳನ್ನು ವಿಜಯ್ ಮಲ್ಯ ಅವರು ತಿಳಿಸಿದ್ದು, ಅನೇಕ ವಿಚಾರಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಜಯ್ ಮಲ್ಯ ಅವರು ಭಾರತ ಬಿಟ್ಟು ಹೋಗಿದ್ದು ಮಾಡಿದ ಸಾಲವನ್ನು ತೀರಿಸಲು ಆಗದೇ ಎಂದು ಎಲ್ಲಾ ಕಡೆ ಚರ್ಚೆ ನಡೆಯುತ್ತಿತ್ತು, ಆ ಎಲ್ಲಾ ಪ್ರಶ್ನೆಗಳಿಗೆ ಖುದ್ದು ವಿಜಯ್ ಮಲ್ಯ ಓಪನ್ ಆಗಿ ಮಾತನಾಡಿದ್ದಾರೆ. ಜನರಲ್ಲಿ ಮೂಡಿದ್ದ ಹಲವು ಪ್ರಶ್ನೆಗಳಿಗೆ, ಎಲ್ಲರೂ ಅಂದುಕೊಂಡಿದ್ದ ವಿಷಯಗಳಿಗೆ ಕ್ಲಾರಿಟಿ ಕೊಡುವುದರ ಜೊತೆಗೆ ಆರ್ಸಿಬಿ ತಂಡ ಹುಟ್ಟಿಕೊಂಡಿದ್ದು ಹೇಗೆ ಎನ್ನುವ ವಿಷಯ ಕೂಡ ತಿಳಿಸಿದ್ದಾರೆ ವಿಜಯ್ ಮಲ್ಯ. ಸಧ್ಯಕ್ಕೆ ಈ ವಿಡಿಯೋಗಳು ಟ್ರೆಂಡ್ ಆಗುತ್ತಿವೆ..
ಮೊದಲಿಗೆ ವಿಜಯ್ ಮಲ್ಯ ಅವರ ಸಾಲದ ವಿಚಾರಕ್ಕೆ ಬರುವುದಾದರೆ, ತಾವು ಯಾರಿಂದಲೂ ಒಂದೇ ಒಂದು ರೂಪಾಯಿ ಸಾಲವನ್ನು ಕೂಡ ಪಡೆದಿಲ್ಲ, ಒಂದು ನಯಾ ಪೈಸೆ ಸಾಲವನ್ನು ಯಾರಿಂದಲೂ ಪಡೆದಿಲ್ಲ ಎನ್ನುತ್ತಾರೆ ವಿಜಯ್ ಮಲ್ಯ. ಕಿಂಗ್ ಫಿಶರ್ ಸಂಸ್ಥೆ ಬ್ಯಾಂಕ್ ಗಳಿಂದ ಸಾಲ ಪಡೆದಿದ್ದು, ತಾವು ಸಾಲ ಮಾಡಿಲ್ಲ ತಾವು ನಿಂತಿದ್ದು ಮಧ್ಯವರ್ತಿಯಾಗಿ, ಗ್ಯಾರೆಂಟಿಯಾಗಿ ಎಂದು ಹೇಳಿದ್ದಾರೆ. ಈ ಮೂಲಕ ತಾವು ಸಾಲ ಪಡೆದಿಲ್ಲ, ತಮ್ಮ ಬಗ್ಗೆ ಜನರು ಅಂದುಕೊಂಡಿದ್ದು, ಮೀಡಿಯಾದವರು ಹೇಳಿದ್ದು ಎಲ್ಲವೂ ಸುಳ್ಳು ಎನ್ನುವುದನ್ನು ತಿಳಿಸಿದ್ದಾರೆ. ಹಾಗೆಯೇ ಆರ್ಸಿಬಿ ತಂಡ ಹುಟ್ಟಿದ್ದು ಹೇಗೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಹೆಸರು ಇಟ್ಟಿದ್ದು ಯಾಕೆ ಎಂದು ಕೂಡ ತಿಳಿಸಿದ್ದಾರೆ. ಇಂಟರೆಸ್ಟಿಂಗ್ ವಿಚಾರಗಳು ಪಾಡ್ ಕಾಸ್ಟ್ ಮೂಲಕ ಹೊರಬಂದಿದೆ.
ವಿಜಯ್ ಮಲ್ಯ ಅವರು ಐಪಿಎಲ್ ಗೆ ಬಂದಿದ್ದು ಹೇಗೆ ಎಂದರೆ, ಲಲಿತ್ ಮೋದಿ ಅವರು ಮೊದಲಿಗೆ ವಿಜಯ್ ಮಲ್ಯ ಅವರಿಗೆ ಕರೆ ಮಾಡಿ, ಐಪಿಎಲ್ ಬಗ್ಗೆ ಹೇಳಿದರಂತೆ, ವಿಜಯ್ ಮಲ್ಯ ಅವರು ಒಂದು ತಂಡವನ್ನು ಖರೀದಿ ಮಾಡಬೇಕು ಎಂದು ಹೇಳಿದಾಗ, ಆ ಐಡಿಯಾ ವಿಜಯ್ ಮಲ್ಯ ಅವರಿಗೆ ಬಹಳ ಇಷ್ಟವಾಗಿತ್ತು. ವಿಜಯ್ ಮಲ್ಯ ಅವರು ಮೂರು ತಂಡಗಳಿಗೋಸ್ಕರ ಬಿಡ್ ಮಾಡಿದರಂತೆ. ಮೂರು ತಂಡಕ್ಕೆ ಬಿಡ್ ಮಾಡಿದಾಗಲೂ ಹೈಯೆಸ್ಟ್ ಬಿಡ್ ಮಾಡಿದ್ದು ತಾವೇ ಎಂದು ಹೇಳಿದ್ದಾರೆ ವಿಜಯ್ ಮಲ್ಯ. ಮುಂಬೈ ತಂಡ ಸ್ವಲ್ಪ ಡಿಫರೆನ್ಸ್ ನಲ್ಲಿ ವಿಜಯ್ ಮಲ್ಯ ಅವರ ಕೈತಪ್ಪಿ ಹೋಗಿತ್ತು, ನಂತರ ಅವರು ಇದೇ ತಂಡ ಬೇಕು ಎಂದು ಆಯ್ಕೆ ಮಾಡಿಕೊಂಡಿದ್ದು ಬೆಂಗಳೂರು ತಂಡವನ್ನು. 18 ವರ್ಷಗಳ ಹಿಂದೆಯೇ ಬೆಂಗಳೂರು ತಂಡವನ್ನು ಖರೀದಿ ಮಾಡಲು ವಿಜಯ್ ಮಲ್ಯ ಅವರು ಖರ್ಚು ಮಾಡಿದ್ದು, $112 ಮಿಲಿಯನ್ ಡಾಲರ್ಸ್. ಈಗಿನ ಮೊತ್ತಕ್ಕೆ 600 ರಿಂದ 700 ಕೋಟಿ ರೂಪಾಯಿ..
ಅಷ್ಟು ಹಣ ಕೊಟ್ಟು ಬೆಂಗಳೂರು ತಂಡವನ್ನು ಖರೀದಿ ಮಾಡಿದ ವಿಜಯ್ ಮಲ್ಯ ಹೆಸರನ್ನು ವಿಶಿಷ್ಟವಾಗಿ ಇಡಬೇಕು ಎಂದು ಬಯಸಿದ್ದರು. ಇವರು ಆವರೆಗು ಖರೀದಿ ಮಾಡಿದ ಬ್ಯುಸಿನೆಸ್ ಗಳ ಪೈಕಿ, ರಾಯಲ್ ಚಾಲೆಂಜರ್ಸ್ ವಿಸ್ಕಿ ಬಹಳ ಪಾಪ್ಯುಲರ್ ಆಗಿತ್ತು, ಕ್ರಿಕೆಟ್ ತಂಡದ ಮೂಲಕ ರಾಯಲ್ ಚಾಲೆಂಜರ್ಸ್ ವಿಸ್ಕಿಯನ್ನು ಕೂಡ ಪ್ರೊಮೋಟ್ ಮಾಡಬೇಕು ಎಂದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ತಮ್ಮ ತಂಡಕ್ಕೆ ಹೆಸರನ್ನು ಇಟ್ಟರು. ಈ ಹೆಸರು ಈಗ ಎಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ ಎಂದು ನಮಗೆಲ್ಲ ಗೊತ್ತೇ ಇದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಹೆಸರು ಬಂದಿದ್ದು, ಆರ್ಸಿಬಿ ಅನ್ನೋ ಬ್ರ್ಯಾಂಡ್ ಹುಟ್ಟಿದ್ದು ಈ ರೀತಿ.. ತಮ್ಮ ವಿಸ್ಕಿ ಬ್ಯುಸಿನೆಸ್ ಅನ್ನು ಬೆಳೆಸುವ ಸಲುವಾಗಿ ಬೆಂಗಳೂರು ಐಪಿಎಲ್ ತಂಡಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಹೆಸರನ್ನು ಇಟ್ಟರು ವಿಜಯ್ ಮಲ್ಯ. ವಿಜಯ್ ಮಲ್ಯ ಅವರು ಆರ್ಸಿಬಿ ಹೆಸರಿನ ಬಗ್ಗೆ ತಿಳಿಸಿದ ಕಥೆ ಇದು.
ಅಂದು ಮೊದಲ ಆಕ್ಷನ್ ನಡೆದಾಗ ಯಂಗ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅವರನ್ನು ಆಯ್ಕೆ ಮಾಡಿದ್ದು ಯಾಕೆ ಎನ್ನುವ ವಿಷಯವನ್ನು ಸಹ ವಿಜಯ್ ಮಲ್ಯ ಅವರು ಪಾಡ್ ಕಾಸ್ಟ್ ನಲ್ಲಿ ತಿಳಿಸಿದ್ದು, ಐಪಿಎಲ್ ಆಕ್ಷನ್ ಗಿಂತ ಕೆಲ ದಿನಗಳ ಮೊದಲು ವಿರಾಟ್ ಕೊಹ್ಲಿ ಅವರು ಅಂಡರ್ 19 ವರ್ಲ್ಡ್ ಕಪ್ ಆಡಿದಾಗ, ಅವರ ಆಟದ ಶೈಲಿ ಮತ್ತು ಟ್ಯಾಲೆಂಟ್ ನೋಡಿ ವಿಜಯ್ ಮಲ್ಯ ಅವರಿಗೆ ಬಹಳ ಇಂಪ್ರೆಸ್ ಆಗಿತ್ತಂತೆ. ಆ ಕಾರಣಕ್ಕೆ ವಿರಾಟ್ ಅವರನ್ನು ಆಯ್ಕೆ ಮಾಡಿದರಂತೆ. 18 ವರ್ಷಗಳ ನಂತರ ಕೂಡ ವಿರಾಟ್ ಅವರು ಇನ್ನು ತಂಡದಲ್ಲೇ ಇರುವುದು ಬಹಳ ಸಂತೋಷ ಆಗುತ್ತದೆ, ಕಪ್ ಗೆದ್ದಿರೋದು ಇನ್ನು ಹೆಚ್ಚು ಖುಷಿ ಇದೆ ಎಂದು ವಿಜಯ್ ಮಲ್ಯ ಅವರು ಪಾಡ್ ಕಾಸ್ಟ್ ನಲ್ಲಿ ಹೇಳಿದ್ದಾರೆ.



