ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ಹಠಾತ್ ನಿಧನದಿಂದ ಇಡೀ ಸ್ಯಾಂಡಲ್ ವುಡ್ ಶಾಕ್ ಗೆ ಒಳಗಾಗಿದೆ. ಜೊತೆಗೆ ಶೋಕ ಸಾಗರದಲ್ಲಿ ಮುಳುಗಿದೆ.. ಥಾಲ್ಯಾಂಡ್ ಪ್ರವಾಸ ಹೋಗಿದ್ದ ವೇಳೆ ಬ್ಯಾಂಕಾಕ್ನಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಅಂತ್ಯಕ್ರಿಯೆ ಎಲ್ಲಿ ಮಾಡ್ತಾರೆ ಅನ್ನೋ ಪ್ರಶ್ನೆ ಇತ್ತು. ಆತಂಕ ಇತ್ತು.. ವಿಜಯ್ ರಾಘವೇಂದ್ರ ಪರಿಸ್ಥಿತಿ ಹೇಗಿರತ್ತಪ್ಪಾ ಅನ್ನೋ ನೋವು ಸ್ಯಾಂಡಲ್ ವುಡ್ ಮಾತ್ರ ಅಲ್ಲ ಇಡೀ ಅಭಿಮಾನಿ ಬಳಗದಲ್ಲಿ ಇದೆ..ಅದ್ರ ಜೊತೆ ಜೊತೆಗೆ ಪಾರ್ಥಿವ ಶರೀರವನ್ನು ಥಾಯ್ಲೆಂಡ್ ಇಂದ ಹೇಗೆ ತರುವುದು ಅನ್ನೋ ಭಯ ಇತ್ತು..

ಕೊನೆಗೂ ಈ ಎಲ್ಲಾ ಭಯಕ್ಕು ಈಗ ಒಂದು ಅಂತ್ಯ ಸಿಕ್ಕಿದೆ.. ಸ್ಪಂದನ ಪಾರ್ಥಿವ ಶರೀರ ಇವತ್ತು ರಾತ್ರಿ ಬರಲಿದೆ ಅನ್ನೋ ಮಾಹಿತಿ ಸಿಕ್ಕಿದೆ. ಇನ್ನೂ ಸ್ಪಂದನ ಮೊನ್ನೆ ಮೃತಪಟ್ಟಿದ್ದಾರೆ. ಮೃತ ಪಟ್ಟ ತಕ್ಷಣ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಹೀಗಾಗಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು.. ಸದ್ಯ ಈಗ ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ಮೃತ ದೇಹ ಬೆಂಗಳೂರಿಗೆ ತರಲಾಗುತ್ತಿದೆ ಅಂತ ಮಾಹಿತಿ ಸಿಕ್ಕಿದೆ.. ಈ ವಿಚಾರದ ಬಗ್ಗೆ ಸ್ಪಂದನ ಚಿಕ್ಕಪ್ಪ ಹರಿಪ್ರಸಾದ್ ಮಾಹಿತಿ ನೀಡಿದ್ದಾರೆ.

ಮೊನ್ನೆ ಮೃತಪಟ್ಟ ಸ್ಪಂದನ ದೇಹದ ಮರಣೋತ್ತರ ಪರೀಕ್ಷೆ ಮುಗಿದಿದೆ.ಥಾಯ್ಲಂಡ್ ದೇಶದ ಎಲ್ಲಾ ವಿಧಿವಿಧಾನ ಮುಗಿದು ಇಂದು ಸಂಜೆ ಮೃತ ದೇಹವನ್ನ ಬೆಂಗಳೂರಿಗೆ ತರಲಾಗುತ್ತೆ. ರಾತ್ರಿ 11. 30 ರ ಸುಮಾರಿಗೆ ಮನೆ ಬಳಿ ಮೃತದೇಹ ತರಲಾಗುತ್ತೆ. ನಾಳೆ ಮಧ್ಯಾಹ್ನದವರೆಗೂ ಮನೆ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿ ಕೊಳ್ಳಲಾಗಿದೆ. ಬಳಿಕ ಶ್ರೀರಾಮಪುರದ ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತೆ ಅಂತ ಮಾಹಿತಿ ನೀಡಿದ್ದಾರೆ..
ಇನ್ನೂ ವಿಜಯ್ ರಾಘವೇಂದ್ರ ಮನೆ ಬಳಿ ಕೂಡ ನೀರವ ಮೌನ ಆವರಿಸಿದೆ… ಜೊತೆಗೆ ಮಲ್ಲೇಶ್ವರ ಅಲ್ಲಿರುವ ಶಿವರಾಮ್ ಮನೆಯಲ್ಲಿ ಕೂಡ ಸೂತಕದ ಛಾಯೆ ಇದ್ದು ಕುಟುಂಬಸ್ಥರ ಸಂತಸ ಕಿತ್ತು ಕೊಂಡಿದೆ.. ಮಾಜಿ ಸಚಿವ ವಿ ಸೋಮಣ್ಣ ಕೂಡ ಈ ಘಟನೆ ಬಗ್ಗೆ ವಿಷಾದ ವ್ಯಕ್ತ ಪಡಿಸಿದ್ದು ಬಹಳ ಗದ್ಗದಿತರಾದರು.ಶಿವರಾಮ್ ತರ ಕ್ರಿಯಾಶೀಲ ವ್ಯಕ್ತಿಯನ್ನ ನಾನೆಲ್ಲೂ ನೋಡಿಲ್ಲಾ. ಈ ಘಟನೆ ಅನಿರೀಕ್ಷಿತವಾಗಿ ನಡೆದಿದೆ. ಮಲ್ಲೇಶ್ವರದ ಪ್ರಸಿದ್ಧ ಕಾಡು ಮಲ್ಲೇಶ್ವರ ದೇವಸ್ಥಾನಕ್ಕೆ ಶಿವರಾಮ್ ಹರಿಪ್ರಸಾದ್ ಕೊಡುಗೆ ತುಂಬಾ ಇದೆ. ಅದ್ರ ಜೊತೆಗೆ ವಿಜಯ್ ರಾಘವೇಂದ್ರ ತಂದೆ ಚಿನ್ನೇಗೌಡರ ಹಾಗೂ ನನ್ನ ಒಡನಾಟ ತುಂಬಾ ಚೆನ್ನಾಗಿದೆ.
ಬಹಳ ಒಳ್ಳೆಯ ವ್ಯಕ್ತಿ, ಮನುಷ್ಯನಿಗೆ ಯಾವುದು ಶಾಶ್ವತ ಅಲ್ಲ. ಸಹೋದರಿ ಸ್ಪಂದನಾಳ ಆತ್ಮಕ್ಕೆ ಶಾಂತಿ ದೊರೆಯಲಿ, ಚಿನ್ನೇಗೌಡ್ರಿಗೆ ಬಿಕೆ ಶಿವರಾಮ್ ಅವ್ರಿಗೆ, ರಾಘವೇಂದ್ರನಿಗೆ ಈ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಅಂತ ಮಾಜಿ ಸಚಿವ ವಿ ಸೋಮಣ್ಣ ಸಂತಾಪ ವ್ಯಕ್ತಪಡಿಸಿದ್ದಾರೆ. ಇನ್ನು ಬ್ಯಾಂಕಾಕ್ನಲ್ಲಿ ಒಂದಷ್ಟು ಕಾನೂನಾತ್ಮಕ ಪ್ರಕ್ರಿಯೆಗಳು ನಡೆಯುತ್ತಿವೆ. ಈಗಾಗಲೇ ಸ್ಪಂದನಾ ಅವರ ಮರಣೋತ್ತರ ಪರೀಕ್ಷೆ ನಡೆದಿದೆ. ಬಾಕಿ ಉಳಿದಿರುವ ಪ್ರಕ್ರಿಯೆಗಳು ಇಂದು ಮಧ್ಯಾಹ್ನದ ಒಳಗೆ ಮುಗಿಯುವ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ..