ರಾಜಕಾರಣಿ ಅಥವಾ ಶಾಸಕರು ಜಬರ್ದಸ್ಥಾಗಿ ವಾಹನಗಳಲ್ಲಿ ಓಡಾಡುವುದು, ಭಾಷಣ ಮಾಡುವುದು ಇತ್ಯಾದಿಗಳನ್ನೆಲ್ಲ ನೀವು ನೋಡಿರಬಹುದು. ಆದರೆ ಇಲ್ಲೊಬ್ಬ ಕಾಂಗ್ರೆಸ್ ಶಾಸಕ ಮಹಿಳೆಯೊಬ್ಬರ ಮೊಣಕಾಲು ಆಪರೇಷನ್ ಮಾಡಿ ಭಾರೀ ಮೆಚ್ವುಗೆ ಗಳಿಸಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿದ್ದು, ಇದೀಗ ಕುಣಿಗಲ್ ಕ್ಷೇತ್ರದ ಶಾಸಕರಾಗಿರುವ ಡಾ.ಎಚ್.ಡಿ ರಂಗನಾಥ್ ಅವರೇ ಈ ಆಪರೇಷನ್ ನಡೆಸಿದವರು.

ಕುಣಿಗಲ್ ತಾಲೂಕಿನ ಕುಂದೂರು ನಿವಾಸಿಯಾದ ಆಶಾ ಎಂಬ ಮಹಿಳೆಯ ಮೊಣಕಾಲಿನ ಕೀಲು ಕೆಲ ವರ್ಷಗಳ ಹಿಂದೆ ಸ್ಥಾನ ಪಲ್ಲಟಗೊಂಡಿತ್ತು. ಈ ಮಧ್ಯೆ ವೈದ್ಯರು ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿದ್ದರು. ಆದರೆ ಮತ್ತೆ ಮೊಣಕಾಲಿ ನೋವು ಕಾಣಿಸಿಕೊಂಡಾಗ, ಖಾಸಗಿ ಆಸ್ಪತ್ರೆಗಳಲ್ಲಿ ಆಪರೇಷನ್ ನಡೆಸಲು 4-5 ಲಕ್ಷ ಖರ್ಚಾಗಲಿದೆ ಎಂಬುದು ಆಶಾ ಅವರಿಗೆ ತಿಳಿಯಿತು. ಆದರಡ ಬಡತನದಿಂದಾಗಿ ಅಷ್ಟೊಂದು ಹಣ ಹೊಂದಿಸಲಾಗದ ಮಹಿಳೆ ಕ್ಷೇತ್ರದ ಶಾಸಕರನ್ನು ಭೇಟಿ ಮಾಡಿ ಅಳಲು ತೋಡಿಕೊಂಡಿದ್ದಾರೆ.
ಆಶಾ ಅವರು ಕ್ಷೇತ್ರದ ಶಾಸಕ ಡಾ.ಎಚ್.ಡಿ.ರಂಗನಾಥ್ ಅವರನ್ನು ಭೇಟಿಯಾಗಿ ಸಮಸ್ಯೆ ಹೇಳಿಕೊಂಡಾಗ ಅವರು ಹಣದ ನೆರವು ನೀಡುವ ಬದಲು ತಾವೇ ಆಪರೇಷನ್ ಮಾಡುವ ಭರವಸೆ ನೀಡಿದರು. ಮಹಿಳೆಗೆ ನೀಡಿದ ಮಾತಿನಂತೆ ಶಾಸಕರು ಆಕೆಯನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ತಾವೇ ಆಪರೇಷನ್ ನಡೆಸಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮಹಿಳೆ ಇದೀ ಚೇತರಿಸಿಕೊಂಡಿದ್ದು, ಶಾಸಕರ ನೆರವಿಗೆ ಧನ್ಯವಾದ ತಿಳಿಸಿದ್ದಾಳೆ. ಜೊತೆಗೆ ಶಾಸಕರ ಈ ಮಾನವೀಯ ನಡೆಗೆ ಸಾರ್ವಜನಿಕ ವಲಯದಿಂದ ಭಾರೀ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.
ತಮ್ಮ ಕ್ಷೇತ್ರದ ಮಹಿಳೆಯೊಬ್ಬರಿಗೆ ಮೊಣಕಾಲಿನ ಆಪರೇಷನ್ ನಡೆಸಿ ಸುದ್ದಿಯಾಗಿರುವವರು ಕುಣಿಗಲ್ ಕ್ಷೇತ್ರದ ಶಾಸಕ ಡಾ.ಎಚ್.ಡಿ.ರಂಗನಾಥ್ ಅವರು ರಾಜಕೀಯಕ್ಕೆ ಬರುವ ಮೊದಲು ವೈದ್ಯರಾಗಿದ್ದರು. ನಂತರ 2018ರಲ್ಲಿ ಚುನಾವಣೆಯಲ್ಲಿ ಗೆದ್ದಿದ್ದರು, ಇದೀಗ ಮತ್ತೆ ಚುನಾವಣೆಗೆ ನಿಂತು ಶಾಸಕರಾಗಿದ್ದು ಇದೀಗ ಸುದ್ದಿಯಲ್ಲಿದ್ದಾರೆ.



