ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸೀರೀಸ್ ನ ಮೊದಲೆರಡು ಮ್ಯಾಚ್ ಗಳಲ್ಲಿ ಟೀಮ್ ಇಂಡಿಯಾ ಸೋತಿದೆ . ಶಾರ್ಟ್ ಕ್ರಿಕೆಟ್ನಲ್ಲಿ ಸ್ಟ್ರಾಂಗ್ ಟೀಮ್ ಆಗಿ ಗುರುತಿಸಿಕೊಂಡಿರುವ ಭಾರತ ತಂಡವು ಕೆರಿಬಿಯನ್ ನಲ್ಲಿ ಎಡವುತ್ತಿದೆ. ಅದರಲ್ಲೂ ಮೊದಲ ಎರಡು ಪಂದ್ಯಗಳಲ್ಲಿ ಭಾರತೀಯ ಬ್ಯಾಟ್ಸ್ ಮ್ಯಾನ್ ಗಳು ಕೈಕೊಟ್ಟಿದ್ದರು. ಇದಕ್ಕೆ ಸಾಕ್ಷಿಯೇ 2 ಮ್ಯಾಚ್ ಗಳಲ್ಲೂ ಭಾರತದ ಬ್ಯಾಟ್ಸ್ಮನ್ಗಳು ಗಳಿಸಿರುವ ರನ್ಸ್ ಗಳು . ಮೊದಲ ಟಿ20 ಪಂದ್ಯದಲ್ಲಿ 145 ರನ್ಗಳಿಸಿ 4 ರನ್ಗಳಿಂದ ಸೋತಿದ್ದ ಭಾರತ , 2ನೇ ಪಂದ್ಯದಲ್ಲಿ ಗಳಿಸಿದ್ದು ಜಸ್ಟ್ 152 ರನ್ಗಳು. ಅಂದರೆ ಬೆಸ್ಟ್ ಬ್ಯಾಟ್ಸ್ ಮ್ಯಾನ್ ಎನಿಸಿಕೊಂಡಿರುವ ಬ್ಯಾಟರ್ಗಳಿದ್ದರೂ ಉತ್ತಮ ಟೋಟಲ್ ಗಳಿಸುವಲ್ಲಿ ಟೀಮ್ ಇಂಡಿಯಾ ಸೋತಿದೆ .

ಇದಕ್ಕೆ ಒಂದು ಕಾರಣ ಒಳ್ಳೆ ಓಪನಿಂಗ್ ಕೊಡದೆ ಇರುವುದು . ಟೀಮ್ ಇಂಡಿಯಾ ಪರ ಓಪನ್ ಮಾಡುವ ಇಶಾನ್ ಕಿಶನ್ ಹಾಗೂ ಶುಭ್ಮನ್ ಗಿಲ್ ತಂಡಕ್ಕೆ ಒಳ್ಳೆ ಓಪನಿಂಗ್ ಮಾಡುವಲ್ಲಿಫೇಲ್ ಆಗುತ್ತಿದ್ದಾರೆ. ಇದಕ್ಕೆ ಸಾಕ್ಷಿಯೇ ಇಬ್ಬರಿಬ್ಬರ ಜೊತೆಯಾಟದ ಸ್ಟಾಟ್ಸ್ , ಅಂದರೆ ಲಾಸ್ಟ್ 8 ಇನಿಂಗ್ಸ್ಗಳಲ್ಲಿ ಗಿಲ್ ಹಾಗೂ ಇಶಾನ್ ಮೊದಲ ವಿಕೆಟ್ಗೆ ಮಿನಿಮಂ 30 ರನ್ಗಳ ಪಾರ್ಟ್ನರ್ ಶಿಪ್ ಮಾಡಿಲ್ಲ . 27, 12, 3, 10, 17, 7, 5, 16…ಇದು ಇಶಾನ್ ಕಿಶನ್ ಹಾಗೂ ಶುಭ್ಮನ್ ಗಿಲ್ ಅವರ ಕೊನೆಯ 8 ಟಿ20 ಇನಿಂಗ್ಸ್ಗಳ ಪಾರ್ಟ್ನರ್ ಶಿಪ್ .

ಅಂದರೆ ಪವರ್ಪ್ಲೇನಲ್ಲೇ ಟೀಮ್ ಇಂಡಿಯಾ ಮೊದಲ ವಿಕೆಟ್ ಹೋಗುತ್ತಿರುವುದು ಕ್ಲಿಯರ್ ಆಗಿದೆ . ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್ 6 ರನ್ಗಳಿಸಿ ಔಟ್ ಆದರೆ , ಶುಭ್ಮನ್ ಗಿಲ್ ಕೇವಲ 3 ರನ್ಗಳಿಸಿ ಔಟ್ ಆದರೂ . ಇನ್ನು 2ನೇ ಟಿ20 ಪಂದ್ಯದಲ್ಲಿ ಶುಭ್ಮನ್ ಗಿಲ್ 7 ರನ್ ಗಳಿಸಿ ಔಟ್ ಆದರೆ , ಇಶಾನ್ ಕಿಶನ್ ಗಳಿಸಿದ್ದು ಜಸ್ಟ್ 27 ರನ್ . ಅಂದರೆ ಪವರ್ಪ್ಲೇನಲ್ಲಿ ಅಟ್ಯಾಕ್ ಮಾಡುವುದರಲ್ಲಿ ಭಾರತದ ಇಬ್ಬರು ಓಪನರ್ಸ್ ವಿಫಲರಾಗುತ್ತಿದ್ದಾರೆ.
ಅಷ್ಟೇ ಅಲ್ಲದೆ ಇಬ್ಬರು ಕೂಡ ಬೇಗನೆ ಔಟ್ ಆಗ್ತಾ ಇರೋದು ಭಾರತ ತಂಡದ ಚಿಂತೆಯನ್ನು ಹೆಚ್ಚಿಸಿದೆ. ಅಟ್ಲಿಸ್ಟ್ ಮೂರನೇ ಟಿ20 ಪಂದ್ಯದಲ್ಲಾದರೂ ಇಶಾನ್ ಹಾಗೂ ಗಿಲ್ ಟೀಮ್ ಇಂಡಿಯಾಗೆ ಅದ್ಬುತ ಓಪನಿಂಗ್ ಕೊಡ್ತಾರಾ ನೋಡಬೇಕಿದೆ. ಮೂರನೇ ಟಿ20 ಪಂದ್ಯ ಮಂಗಳವಾರ ಗಯಾನಾದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆದ್ದರೆ ಸೀರೀಸ್ ಕೆರಿಬಿಯನ್ನರ ಕೈ ಸೇರಲಿದೆ . ಹೀಗಾಗಿ ಈ ಪಂದ್ಯವು ಭಾರತ ತಂಡಕ್ಕೆ ಡು ಆರ್ ಡೈ ಮ್ಯಾಚ್ ಆಗಿದೆ .



