ಆರ್ ಸಿಬಿಗೆ ವನವಾಸ ಅಂತ್ಯಗೊಂಡಿದೆ. ಸುಮಾರು 18 ವರ್ಗಳಿಂದಲೂ ಕಪ್ ಗಾಗಿ ಸೆಣಸಾಟ ಮಾಡುತ್ತಾ ಬಂದ್ರೂ 17 ಬಾರಿ ದಂಡಯಾತ್ರೆಯಲ್ಲಿ ಆರ್ ಸಿಬಿ ಫೇಲ್ ಆಗಿತ್ತು.
ಇದ್ರಿಂದ ಪ್ರತಿ ಭಾರಿ ಅಭಿಮಾನಿಗಳಲ್ಲಿ ನಿರಾಸೆ ಆಗ್ತಾ ಇದ್ರು ಆಶಾಭಾವನೆ ಹಾಗೆಯೇ ಇತ್ತು.
ಪ್ರತಿ ಭಾರಿಯೂ ಈ ಸಲ ಕಪ್ ನಮ್ದೇ ಘೋಷಣೆಯೇ ಆರ್ ಸಿಬಿ ಪ್ಯಾನ್ಸ್ ಗೆ ಆಶಾಕಿರಣವಾಗಿತ್ತು. ಆದ್ರೇ ಈ ಬಾರಿ ತಂಡದ ಸಮೂಹಿಕ ಹೋರಾಟದಿಂದ ಆರ್ಸಿಬಿಗೆ ಒಲಿದಿದೆ ವಿಜಯಮಾಲೆ.
ದೇಶದಾದ್ಯಂತ ಇರುವ ಆರ್ ಸಿಬಿ ಅಭಿಮಾನಿಗಳಿಗೆ ನಿನ್ನೆ ಮರೆಯಲಾಗದ ಕ್ಷಣ.
ಆಟದ ಮೇಲೆ ಹಿಡಿತ ಸಾಧಿಸತೊಡಗಿದ್ರು. ಇನ್ನು ಆರ್ಸಿಬಿ ಅವರು ವಿನ್ ಆದಾ ಕೂಡಲೇ ಪಟಾಕಿಗಳ ಸರಮಾಲೆ, ಅಭಿಮಾನಿಗಳ ಕೇಕ್ ಕಟಿಂಗ್, ಬೈಕ್ ರೈಡ್ ಸೇರಿ ಇಡೀ ಕರನಾಡು ಸಂಭ್ರಮ ಪಟ್ಟರು. ಈ ಗೆಲುವಿನ ಕ್ಷಣ ಹೇಗಿತ್ತು ಅಂದರೆ ವಿರಾಟ್ ಕೊಹ್ಲಿ ಕಣ್ಣೀರಾಕುವ ಮೂಲಕ 18 ವರ್ಷದ ವನವಾಸಕ್ಕೆ ದರ್ಪಣ ಬಿಟ್ಟಂಗಾಯ್ತು.
ಇದರ ಮಧ್ಯೆ ಗೆಲುವಿನ ವಿಜಯಮಾಲೆ ಹಾಕಿಕೊಳ್ಳುವ ಮೂಲಕ ಪ್ರಶಸ್ತಿ ಗೆಲ್ಲುವ ಮೂಲಕ ಚೋಕರ್ಸ್ ಎಂಬ ಹಣೆಪಟ್ಟಿಯನ್ನ ಅಹಮದಾಬಾದ್ ನ ಮೈದಾನದಲ್ಲೇ ಕಿತ್ತೆಸೆದು ಬಂದಿದೆ ಆರ್ ಸಿಬಿ. ಸದ್ಯ ಲಾಯಲಿಟಿ ಅಂದರೆ ಏನು ಅನ್ನೊದನ್ನ ಕೊಹ್ಲಿ ತೋರಿಸಿದ್ರೆ, ಅಷ್ಟೇ ಲಾಯಲಿಟಿ ಅಭಿಮಾನವನ್ನ ಕನ್ನಡಿಗರು ಕೊಹ್ಲಿ ಮೇಲೆ ಹಾಗೂ ಆರ್ ಸಿಬಿ ಮೇಲೆ ತೋರಿಸಿದರು. ಇದೇ ಕೊಹ್ಲಿಯನ್ನ ಭಾವುಕತೆಗೆ ತಳ್ಳಿದ್ದು. ಅಭಿಮಾನಿಗಳ ಶಿಳ್ಳೆ, ಚಪ್ಪಾಳೆಗೆ ಕಣ್ಣು ಒದ್ದೆ ಮಾಡಿಕೊಂಡ ಕೊಹ್ಲಿ ನಾನು ಗದ್ದಿದ್ದೇನೆ ಅನ್ನೋದನ್ನ ತೋರಿಸಿದರು.
ಇನ್ನು ಪಂದ್ಯ ಗೆದ್ದ ಬಳಿಕ ಮಾತನಾಡಿದ ಅವರು, ನಾನು ಇದಕ್ಕಾಗಿ 18 ವರ್ಷ ಕಾದಿದ್ದೇನೆ. ನಾನು ಇಂದು ಮಗುವಾಗಿ ನಿದ್ರೆ ಮಾಡ್ತೀನಿ. ಕನ್ನಡಿಗರು ಹಾಗೂ ಅಭಿಮಾನಿಗಳ ಈ ಪ್ರೀತಿಗೆ ಎಂದಿಗೂ ನಾನು ಚಿರರುಣಿ. ಇದಕ್ಕಾಗಿ ಎಷ್ಟೋ ರಾತ್ರಿ ನಿದ್ದೆ ಇಲ್ಲ. ನನ್ನ ಟೀಂ ಶ್ರಮ ಇಂದು ಕಪ್ ಗೆಲ್ಲುವಂತೆ ಮಾಡಿದೆ. ಕೊನೆಗೂ ನಾವು ಕಪ್ ಗೆದ್ದಿದ್ದೇವೆ. ಇಂದೊಂದು ಭಾವುಕ ಕ್ಷಣ. ಹಾಗಾಗಿಯೇ ನಂಗೆ ಕಣ್ಣಲ್ಲಿ ನೀರು ಬಂದಿದ್ದು ಎಂದಿದ್ದಾರೆ.
ಇನ್ನು ನಿವೃತ್ತಿ ಬಗ್ಗೆಯೂ ಮಾತನಾಡಿರುವ ಅವರು, ನಿವೃತ್ತಿಗೆ ಇನ್ನೂ ಸಮಯವಿದೆ. ಅದಕ್ಕೂ ಮೊದಲು ನನ್ನಲ್ಲಿರುವ ಸಂಪೂರ್ಣ ಆಟ ಆಡಲು ಭಯಸುತ್ತೇನೆ. ಕೊನೆಗೂ ನನ್ನ ಮಡಿಲಿಗೆ ಕಪ್ ಕೊಟ್ಟಿದ್ದಕ್ಕೆ ಆ ದೇವರಿಗೆ ಧನ್ಯವಾದ ಅರ್ಪಿಸುತ್ತೇನೆ. ನಾನು ಹಾಗೂ ನನ್ನ ಆತ್ಮ ಎಂದಿಗೂ ಬೆಂಗಳೂರಿಗೆಯೇ. ನಾನು ಕೊನೆಯ ವರೆಗೂ ಇದೇ ತಂಡಕ್ಕೆ ಆಡುತ್ತೇನೆ ಎಂದು ಹೇಳೋ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.



