ನಮ್ಮ ಆರ್ಸಿಬಿ ತಂಡ 18 ವರ್ಷಗಳ ನಂತರ ಕೊನೆಗೂ ಐಪಿಎಲ್ ನಲ್ಲಿ ಕಪ್ ಗೆದ್ದು, ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ. ಇದು 18 ವರ್ಷಗಳ ಕನಸು, ಶ್ರಮ, ದೃಢತೆ, ತಾಳ್ಮೆ ಎಲ್ಲದರ ಪರಿಶ್ರಮ. ಐಪಿಎಲ್ ಶುರುವಾಗಿ, ವಿಜಯ್ ಮಲ್ಯ ಅವರು ಒಂದು ತಂಡ ಕಟ್ಟಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಹೆಸರಿಟ್ಟ ಸಮಯದಿಂದ ಈ ತಂಡದ ಜೊತೆಗೆ ಇರುವುದು ಕಿಂಗ್ ಕೊಹ್ಲಿ. ಅಂದು ಯುವ ಹುಡುಗನಾಗಿದ್ದ ಕಿಂಗ್ ಕೊಹ್ಲಿ ಇಂದು 18 ವರ್ಷಗಳ ನಂತರ ಐಪಿಎಲ್ ಗೆದ್ದಿದ್ದಾರೆ. ಇದು ವಿರಾಟ್ ಕೊಹ್ಲಿ, ಎಬಿಡಿ, ಕ್ರಿಸ್ ಗೇಯ್ಲ್, ಅನಿಲ್ ಕುಂಬ್ಳೆ ಹೀಗೆ ಅನೇಕ ಆಟಗಾರರ ಕನಸು. ನಿನ್ನೆಯ ಪಂದ್ಯ ಬರೀ ಗೆಲುವಲ್ಲ, ಐತಿಹಾಸಿಕ ಗೆಲುವು. ಇಡೀ ಕರ್ನಾಟಕ ಈ ಗೆಲುವಿಗಾಗಿ, 18 ವರ್ಷಗಳಿಂದ ಕಾದು ಕುಳಿತಿತ್ತು. ಕೊನೆಗೂ ಆ ಕನಸು ನನಸಾಗಿದೆ. 18 ಸೀಸನ್ ಗಳ ಬಳಿಕ ಆರ್ಸಿಬಿ ಕಪ್ ಗೆದ್ದಿದೆ.

ಇದು 18ನೇ ಸೀಸನ್, ವಿರಾಟ್ ಕೊಹ್ಲಿ ಅವರ ಜೆರ್ಸಿ ನಂಬರ್ 18, ಜೂನ್ 3, 2025 ಈ ನಂಬರ್ ಗಳನ್ನು ಕೂಡಿದರೆ 18 ಬರುತ್ತದೆ.. ಹೀಗೆ ಅಭಿಮಾನಿಗಳು ಸಾಕಷ್ಟು ಕ್ಯಾಲ್ಕ್ಯುಲೇಶನ್ ಗಳನ್ನು ಹಾಕಿಕೊಂಡಿದ್ದರು. ಎಲ್ಲರೂ ಈ ಒಂದು ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದರು. ಆ ಕ್ಷಣ ನಿನ್ನೆ ರಾತ್ರಿ ಸಂಭವಿಸಿತು. ಗೆಲುವು ಖಚಿತವಾಗುತ್ತಿದ್ದ ಹಾಗೆ ವಿರಾಟ್ ಕೊಹ್ಲಿ ಅವರು ಕಣ್ಣೀರು ಹಾಕಿದ್ದು, ಮಗುವಿನಂತೆ ಇಡೀ ತಂಡದ ಜೊತೆಗೆ ಸೇರಿ ಸೆಲೆಬ್ರೇಟ್ ಮಾಡಿದ್ದು, ಇದೆಲ್ಲವೂ ಎಂಥವರನ್ನೂ ಭಾವುಕರನ್ನಾಗಿ ಮಾಡಿತು. ಎಬಿಡಿ ಮತ್ತು ಕ್ರಿಸ್ ಗೇಯ್ಲ್ ತಂಡದ ಜೊತೆಗಿದ್ದು, ಪೋಡಿಯಮ್ ಮೇಲೆ ನಿಂತು ಎಲ್ಲರ ಜೊತೆ ಕಪ್ ಸ್ವೀಕರಿಸಿದ ಆ ಕ್ಷಣ ಅವಿಸ್ಮರಣೀಯ. ಆರ್ಸಿಬಿ ತಂಡದ ಬಳಿ ಕಪ್ ಇಲ್ಲ ಎನ್ನುವ ಕೊರಗು ಎರಡನೇ ಸಾರಿ ಕೊನೆಯಾಗಿದೆ.
ನಮ್ಮ ತಂಡದ ಎರಡನೇ ಕಪ್ ಇದು. ಕಳೆದ ವರ್ಷ ವುಮನ್ಸ್ ಪ್ರೀಮಿಯರ್ ಲೀಗ್ ನಲ್ಲಿ ಆರ್ಸಿಬಿ ತಂಡ ಮಹಾಲಕ್ಷ್ಮಿಯರು ಒಂದು ಕಪ್ ಅನ್ನು ಗೆದ್ದುಕೊಟ್ಟರು, ಇಂದು ಆರ್ಸಿಬಿ ಹುಡುಗರು ತಮ್ಮ ತಂಡಕ್ಕಾಗಿ ಎರಡನೇ ಕಪ್ ಅನ್ನು ಗೆದ್ದಿದ್ದಾರೆ. ಈ ವರ್ಷ ಆರ್ಸಿಬಿ ಮ್ಯಾನೇಜ್ಮೆಂಟ್ ಖರೀದಿ ಮಾಡಿದ ಆಟಗಾರರು, ಆಂಡಿ ಫ್ಲವರ್ ಮತ್ತು ಡಿಕೆ ಅವರ ಕೋಚಿಂಗ್ ಎಲ್ಲವೂ ಅದ್ಭುತವಾಗಿ ಒಗ್ಗೂಡಿತು. ಸೀಸನ್ ಶುರುವಿನಲ್ಲೇ ಈ ಸಲ ಕಪ್ ನಮ್ಮದೇ ಎನ್ನುವ ಉತ್ಸಾಹ ಇದ್ದಿದ್ದಂತೂ ನಿಜ, ಆದರೆ ಹೆಚ್ಚಿನ ನಿರೀಕ್ಷೆಯನ್ನು ಯಾರು ಕೂಡ ಇಟ್ಟುಕೊಂಡಿರಲಿಲ್ಲ. ಈ ಬಾರಿ ಆರ್ಸಿಬಿ ತಂಡ ಇದ್ದಿದ್ದು ಕೂಡ ಅದೇ ರೀತಿ, ಹೆಚ್ಚು ನಿರೀಕ್ಷೆ ಇಲ್ಲದೆಯೇ ಒಂದೊಂದೇ ಪಂದ್ಯವನ್ನು ಗೆಲ್ಲುತ್ತಾ ಹೋಗೋಣ ಎಂದು, ಒಂದೊಂದು ಪಂದ್ಯವನ್ನು ಗೆಲ್ಲುತ್ತಾ ಬಂದರೆ. ಕೊನೆಗೆ ಕಪ್ ಅನ್ನು ಗೆದ್ದರು. ನಿನ್ನೆ ಆರ್ಸಿಬಿ ಗೆದ್ದ ನಂತರ ಇಡೀ ಕರ್ನಾಟಕ ಸಂಭ್ರಮಿಸಿದೆ.

ಕರ್ನಾಟಕವಷ್ಟೇ ಅಲ್ಲ, ಪ್ರಪಂಚದ ಎಲ್ಲೆಡೆ ಇರುವ ಆರ್ಸಿಬಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಇಡೀ ಬೆಂಗಳೂರಿನಲ್ಲಿ ನಿನ್ನೆ ದೀಪಾವಳಿ ಹಬ್ಬ ನಡೆಯಿತು ಎಂದರೆ ತಪ್ಪಲ್ಲ. ಭುವನೇಶ್ವರ್ ಕುಮಾರ್, ಕೃನಾಲ್ ಪಾಂಡ್ಯ, ಸುಯಶ್, ಟಿಮ್ ಡೇವಿಡ್, ಫಿಲ್ ಸಾಲ್ಟ್ ಹೀಗೆ ಬಲಿಷ್ಠ ತಂಡ ಕೊನೆಗೂ ಬೆಂಗಳೂರಿಗೆ ಕಪ್ ಗೆದ್ದು ಕೊಟ್ಟಿದೆ. ನಿನ್ನೆಯ ಪಂದ್ಯ ನಡೆದಿದ್ದು ಅಹಮದಾಬಾದ್ ನಲ್ಲಿ, 1 ಲಕ್ಷಕ್ಕಿಂತ ಹೆಚ್ಚು ಜನರು ಸೇರಿದ್ದ ಸ್ಟೇಡಿಯಂ ನಲ್ಲಿ ಆರ್ಸಿಬಿ ಕೂಗು ಹೆಚ್ಚಿತ್ತು, ನಿನ್ನೆ ಗೆದ್ದ ಬಳಿಕ ಇಂದು ಆರ್ಸಿಬಿ ತಂಡ ಬೆಂಗಳೂರಿಗೆ ಬಂದು ಕನ್ನಡಿಗರ ಜೊತೆಗೆ ಸೆಲೆಬ್ರೇಟ್ ಮಾಡಲಿದೆ. ವಿಜಯಯಾತ್ರೆ ಇಂದು ಬೆಂಗಳೂರಿನಲ್ಲಿ ನಡೆಯಲಿದೆ. ಇಂದು ಅರ್ಧ ದಿವಸ ಸೆಲೆಬ್ರೇಷನ್ ಗಾಗಿಯೇ ಮೀಸಲು ಇಡಲಾಗಿದೆ. ಇಂದು ಮಧ್ಯಾಹ್ನ 1 ಗಂಟೆಗೆ ಆರ್ಸಿಬಿ ತಂಡ ವಿಶೇಷ ವಿಮಾನದ ಮೂಲಕ ಹೆಚ್.ಎ.ಎಲ್ ಏರ್ಪೋರ್ಟ್ ಗೆ ಬರಲಿದೆ.
ಬಳಿಕ ತಾಜ್ ವೆಸ್ಟನ್ಡ್ ಹೋಟೆಲ್ ನಲ್ಲಿ ಒಂದಷ್ಟು ಕಾಲ ವಿಶ್ರಾಂತಿ ಪಡೆದು, ಮಧ್ಯಾಹ್ನ 3 ಗಂಟೆಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದೆ. 3:30 ಗೆ ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೂ ಓಪನ್ ಬಸ್ ನಲ್ಲಿ ಸವಾರಿ ನಡೆಯಲಿದೆ. ಇಂದು ಸ್ಟೇಡಿಯಂ ಒಳಗೆ ಅಭಿಮಾನಿಗಳಿಗೆ ಉಚಿತ ಎಂಟ್ರಿ ಇರಲಿದ್ದು, ಚಿನ್ನಸ್ವಾಮಿಯಲ್ಲಿ ಅಭಿಮಾನಿಗಳ ಜೊತೆಗೆ ಸೆಲೆಬ್ರೇಟ್ ಮಾಡಲಿದ್ದಾರೆ ಆರ್ಸಿಬಿ ಹುಲಿಗಳು. ಇದಕ್ಕಾಗಿ ಪ್ರತಿಯೊಬ್ಬ ಆರ್ಸಿಬಿ ಅಭಿಮಾನಿ ಕೂಡ ಕಾಯುತ್ತಿದ್ದಾನೆ. ಇವತ್ತು ಎಲ್ಲಾ ಟೆಕ್ಕಿಗಳು ಮತ್ತು ಕೆಲಸ ಮಾಡುತ್ತಿರುವವರು ಹೊಸದೊಂದು ನಿರ್ಧಾರ ಮಾಡಿದ್ದು, ಅರ್ಧ ದಿವಸ ಮಾತ್ರ ಕೆಲಸ ಮಾಡಿ, ಇನ್ನರ್ಧ ದಿವಸ ಆರ್ಸಿಬಿ ಜೊತೆಗೆ ಸೆಲೆಬ್ರೇಟ್ ಮಾಡಬೇಕು ಎಂದು ನಿರ್ಧಾರ ಮಾಡಿದ್ದಾರೆ..
ಇದು ಐತಿಹಾಸಿಕ ದಿವಸ, ಐತಿಹಾಸಿಕ ಸೆಲೆಬ್ರೇಷನ್ ನಡೆಯಲಿದೆ, ಅರ್ಧ ದಿವಸದ ಸಂಬಳ ಕಟ್ ಆದರೂ ಪರವಾಗಿಲ್ಲ, ನಾವು ಕೆಲಸ ಮಾಡೋದು ಅರ್ಧ ದಿವಸ ಮಾತ್ರ, ಇನ್ನರ್ಧ ದಿವಸ ವಿಧಾನಸೌಧದಿಂದ ಸೆಲೆಬ್ರೇಷನ್ ನಲ್ಲಿ ಪಾಲ್ಗೊಳ್ಳುವುದಕ್ಕೆ ಹೋಗುತ್ತೇವೆ ಎಂದು ಎಲ್ಲಾ ಟೆಕ್ಕಿಗಳು ನಿರ್ಧಾರ ಮಾಡಿದ್ದಾರೆ. ಆರ್ಸಿಬಿ ತಂಡದ ಕ್ರೇಜ್, ಕಪ್ ಗೆದ್ದಿರುವ ಸಂತೋಷ ಅಷ್ಟರ ಮಟ್ಟಗೆ ಇದೆ. ಇಂದು ವಿಜಯಯಾತ್ರೆಯಲ್ಲಿ ಜನ ಜಂಗುಳಿ ಇರುವುದು ಖಚಿತ, ಆರ್ಸಿಬಿ ತಂಡವನ್ನ ನೋಡಲು, ಕಪ್ ಅನ್ನು ನೋಡಲು ಅದೆಷ್ಟು ಲಕ್ಷ ಅಭಿಮಾನಿಗಳು ಲಗ್ಗೆ ಇಡುತ್ತಾರೋ ಗೊತ್ತಿಲ್ಲ. ಆರ್ಸಿಬಿ ತಂಡ ಬೆಂಗಳೂರಿಗೆ ಬರಲಿ ಎಂದೇ ಅಭಿಮಾನಿಗಳು ಕಾಯುತ್ತಿದ್ದಾರೆ. ವಿರಾಟ್ ಅವರು ನಿನ್ನೆಯೇ ಅಭಿಮಾನಿಗಳ ಜೊತೆಗೆ ಸೆಲೆಬ್ರೇಟ್ ಮಾಡಬೇಕು ಎಂದು ಹೇಳುತ್ತಿದ್ದರು. ಆ ಕ್ಷಣಕ್ಕೆ ಇನ್ನುಳಿದಿರುವುದು ಕೆಲವೇ ಕ್ಷಣಗಳು ಮಾತ್ರ.
ಟೆಕ್ಕಿಗಳ ಈ ನಿರ್ಧಾರಕ್ಕೆ ಎಲ್ಲರೂ ಸಹ ಬೆಂಬಲ ಕೊಡುತ್ತಿದ್ದ, ಕಂಪನಿಗಳು ಒಪ್ಪಿ, ಎಂಪ್ಲಾಯಿಗಳ ಆಸೆಯನ್ನು ನೆರವೇರಿಸುತ್ತಾ ಎಂದು ಕಾದು ನೋಡಬೇಕಿದೆ. ಆರ್ಸಿಬಿ ವಿಜಯಯಾತ್ರೆ ಜಿಯೋ ನಲ್ಲಿ ಲೈವ್ ಸ್ಟ್ರೀಮಿಂಗ್ ಸಹ ಆಗಲಿದ್ದು, ಆರ್ಸಿಬಿ ಅಭಿಮಾನಿಗಳು ಈ ದಿನವನ್ನು ಖಂಡಿತವಾಗಿ ಮರೆಯಲು ಸಾಧ್ಯವಿಲ್ಲ. ವಿಜಯಯಾತ್ರೆ ಇನ್ನೇನು ಕೆಲವೇ ಗಂಟೆಗಳಲ್ಲಿ ಶುರುವಾಗಲಿದೆ.



