ಈ ಬಾರಿಯ ಬಿಗ್ ಬಾಸ್ ವಿಶೇಷತೆ ಬಗ್ಗೆ ನಾವು ಹೊಸದಾಗಿ ಹೇಳಬೇಕಾಗೆ ಇಲ್ಲ. ಈ ಸೀಸನ್ ಶುರುವಿನಲ್ಲಿಯೇ ಬಹಳ ಹೈಪ್ ಪಡೆದುಕೊಂಡಿತ್ತು.ಏಕೆಂದರೆ ಈ ಬಾರಿಯ ದೊಡ್ಡ ಟ್ವಿಸಿ.ಈ ಬಾರಿ ಎಲ್ಲಾ ಸಿಸನ್ ಗಳಿಗಿಂತಲು ಬಹಳ ವಿಭಿನ್ನವಾಗಿರುವುದು ಎಲ್ಲಾ ಪ್ರೇಕ್ಷಕರನ್ನು ಸೆಳೆದಿದೆ ಎಂದರೆ ತಪ್ಪಾಗಲಾರದು.ಈ ಬಾರಿ ಸ್ಲರ್ದಿಗಳೇ ಎಲ್ಲರನ್ನು ಸೆಳೆದಿದ್ದಾರೆ.ಈ ಸೀಸನ್ ಶುರುವಾಗಿ ಈಗಾಗಲೇ 6ನೇ ವಾರಕ್ಕೆ ಕಾಲಿಟ್ಟಿದೆ.ಈ ಆರು ವಾರಕ್ಕೆ ಈ ಮನೆ ಸಾಕಷ್ಟು ಏರಿಳಿತಗಳನ್ನು ಕಂಡಿದೆ.ಈ ಮನೆಯಲ್ಲಿ ಮನೋರಂಜನೆ ಗಿಂತ ಜಗಳಗಳೇ ಹೆಚ್ ಹೆಚ್ಚಾಗಿದೆ. ಈಗ ಬಿಗ್ ಬಾಸ್ ಸೀಸನ್ 9ರ ಮನೆಯಿಂದ “ಕಿರಣ್ ,ಐಶ್ವರ್ಯ ಪಿಸೆ,ನಾವಜ್,ದರ್ಶ ಚಂದ್ರಪ್ಪ ಮಯೂರಿ ಹಾಗೂ ನೇಹಾ ಗೌಡ” ಹೊರಬಿದ್ದಿದ್ದಾರೆ.ಈ ಮನೆ ಜನ ಕಡಿಮೆಯಾಗುತ್ತಾ ಹೊಂದಾಣಿಕೆ ಕೊಡ ಕಡಿಮೆಯಾಗಿದೆ.ಈ ಮನೆಯಲ್ಲಿನ ಸ್ಪರ್ದಿಗಳಿಗೆ ಈ ವೇದಿಕೆಯ ಬೆಲೆ ತಿಳಿದಿದ್ದರೂ ಆ ವೇದಿಕೆಯನ್ನು ಸದ್ಬಳಕೆ ಮಾಡಿಕೊಳ್ಳದೆ ದಿನ ತೂಗಿಸುವಲ್ಲಿ ತಮ್ಮ ದೊಡ್ಡ ಮನೆಯ ದಿನಗಳನ್ನು ಕಳೆಯುತ್ತಿದ್ದಾರೆ.

ಈ ಮನೆಯಲ್ಲಿ ಏರಿ ಅಂದರೆ ಪೇರಿ ಎನ್ನುವವರೆ ಹೆಚ್ಚು ಹಾಗಾಗಿ ಈ ಮನೆಯಲ್ಲಿ ಮನೋರಂಜನೆ ಎನ್ನುವ ವಿಚಾರಕ್ಕೆ ಬಂದರೆ ಹಾಸ್ಯದ ಬದಲಾಗಿ ಜಗಳಗಳಿಂದಲೇ ಹೆಚ್ಚು ಮನೋರಂಜನೆ ನೀಡುತ್ತಿದ್ದಾರೆ. ಜಗಳ ಹೆಸರ ಸಮಾನಾರ್ಥಕ ಪದಗಳು ಈ ದೊಡ್ಡ ಮನೆಯಲ್ಲಿ ಎಂದರೆ ಅದು “ಆರ್ಯವರ್ಧನ್, ಪ್ರಶಾಂತ್ ಹಾಗೂ ರೂಪೇಶ್ ರಾಜಣ್ಣ”.ಮನೆಯಲ್ಲಿ ಇರುವವರನ್ನು ಚರ್ಚಿಸಿ ಒಂದು ದಡಕ್ಕೆ ತಂದರೆ ಈ ಮೂವರನ್ನು ಒಂದು ಹಂತಕ್ಕೆ ತರುವ ವರೆಗೂ ಇಡೀ ಮನೆ ದೊಡ್ಡ ವ್ಯೂಹವನ್ನು ಬೇಧಿಸಿಕೊಂಡು ಬಂದಂತೆ.
ಅದ್ರಲ್ಲೂ ಆರ್ಯವರ್ಧನ್ ಅವರು ಎಲ್ಲಾ ವಿಚಾರಕ್ಕೂ ನಂಬರ್ ಅನ್ನು ಅನುಸರಿಸಿ ಚಿಂತಿಸಿ ಉತ್ತರ ನೀಡುವವರು. ಇವ್ರು ಹೇಳಿದ್ದು ಮಾತ್ರ ಅಕ್ಷರ ಸಹ ಸತ್ಯ “ನಂಬರ್ ಅಂದ್ರೆ ಇವ್ರು ಇವ್ರು ಅಂದ್ರೆ ನಂಬರ್”. ಪ್ರತಿ ವಿಚಾರಕ್ಕೂ ನಂಬರ್ ಮೂಲಕವೇ ಉತ್ತರ ನೀಡುತ್ತಾರೆ. ಹೀಗೆ ಮಾತನಾಡುತ್ತ “ದಿವ್ಯಾ ಉರುಡುಗ” ಅವರ ಬಗ್ಗೆ ಹೇಳುತ್ತಾ ನಿನಗೆ 8 ನೆ ತಾರಿಕಿನವರು ಆಗಿ ಬರುವುದಿಲ್ಲ ಎನ್ನುತ್ತಾರೆ. ಆಗ ದಿವ್ಯಾ ನನಗೆ ಇರುವ ಎಲ್ಲಾ ಸ್ನೇಹಿತರು ಕೂಡ 8 ನೆ ತಾರಿಕಿನಲ್ಲಿ ಹುಟ್ಟಿದವರೇ ಅದ್ರಲ್ಲೂ ಈ ಮನೆಯಲ್ಲಿ ಪರಿಚಿತರಾದ ‘ಅವಿ’ ಅವರು ಕೂಡ ಇದೇ ಡೇಟ್ ನವರು ಎಂದರು.
ಆಗ ಗುರೂಜಿ ನಿನಗೆ ಸ್ನೇಹಿತರಾಗಲು ಈ ದಿನಾಂಕದವರು ಆಗಿ ಬರುತ್ತಾರೆ. ಆದರೆ ಇದೇ ಡೇಟ್ ನವರು ಲೈಫ್ ಪಾರ್ಟ್ನರ್ ಆಗಲು ಸಾಧ್ಯವಿಲ್ಲ. ಹಾಗೇನಾದರೂ ಮದುವೆಯಾದರು ವಿ*ಚ್ಛೇ*ದನ ಪಡೆದುಕೊಳ್ಳುತ್ತೀರಾ ಎಂದರು. ಮದುವೆ ಎನ್ನಡಿದಿದ್ದರೂ “ಅರವಿಂದ್ ಹಾಗೂ ದಿವ್ಯಾ” ಅವರು ಪ್ರೀತಿಯಲ್ಲಿ ಇರುವುದು ಎಲ್ಲರಿಗೂ ತಿಳಿದೇ ಇದೆ.ಹೀಗೆ ಹೇಳಿದ್ದನ್ನು ನೋಡಿ ತಟ್ಟನ್ನೇ ದಿವ್ಯಾ ಯಪ್ಪಾ ಈ ಆಟದಲ್ಲಿ ನಾ ನಿಲ್ಲ ನಾನು ಬರುತ್ತೇನೆ ಎಂದು ಹೊರನಡೆಯುತ್ತಾರೆ.
ಅಲ್ಲಿಯೇ ಇದ್ದ “ರಾಕೇಶ್” ಅವರಿಗೂ ಕೂಡ ನೀನು 45 ಆದ ನಂತರ ಒಬ್ಬಂಟಿ ಜೀವನ ನಡೆಸುತ್ತಿಯಾ ಯಾರೂ ಕೂಡ ಹೆಚ್ಚು ಕಾಲ ನಿನ್ನೊಟ್ಟಿಗೆ ಇರಲು ಸಾಧ್ಯವಿಲ್ಲಾ ಎಂದು ಹೇಳುತ್ತಾರೆ. ಆಗ ಖುಷಿಯಿಂದ ರಾಕೇಶ್ ಅಡಿಗ ಯಪ್ಪಾ ನಾನು 45ರ ನಂತರ ನೆಮ್ಮದಿಯ ಜೀವನ ನಡೆಸುತ್ತಿನಾ ಎಂದರು.ಹೀಗೆ ತಮ್ಮ ನಂಬರ್ ಮೂಲಕ ಕೆಲವೊಮ್ಮೆ ಕೋಪ ಬರುವಂತೆ ನಡೆದುಕೊಂಡ್ರು ಕೆಲವೊಮ್ಮೆ ಅಷ್ಟೇ ಮನೋರಂಜನೆ ನೀಡುತ್ತಾರೆ ಆರ್ಯವರ್ಧನ್ ಗುರೂಜಿ.