ನಟ ದರ್ಶನ್ ತೂಗುದೀಪ ಅವರು ಈ ವರ್ಷ ಬಹಳ ಕಷ್ಟಪಟ್ಟಿದ್ದಾರೆ. ತಮ್ಮ ಗೆಳತಿ ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಸ್ವಾಮಿ ಎನ್ನುವ ವ್ಯಕ್ತಿ ಕೆಟ್ಟದಾಗಿ ಮೆಸೇಜ್ ಮಾಡಿದ್ದ ಎನ್ನುವ ಕಾರಣಕ್ಕೆ ದರ್ಶನ್ ಅವರು ಆತನನ್ನು ಬೆಂಗಳೂರಿಗೆ ಕರೆಸಿ, ನಂತರ ಏನೆಲ್ಲಾ ನಡೆಯಿತು ಎನ್ನುವ ವಿಷಯ ಗೊತ್ತೇ ಇದೆ. ದರ್ಶನ್ ಅವರ ಈ ಕೇಸ್ ತೀವ್ರವಾದ ಚರ್ಚೆಗೆ ಕಾರಣವಾಯಿತು. ದರ್ಶನ್ ಅವರು ಜೈಲು ಸೇರುವ ಪರಿಸ್ಥಿತಿ ಎದುರಾಯಿತು. 6 ತಿಂಗಳುಗಳ ಕಾಲ ಒಳಗಿದ್ದ ದರ್ಶನ್ ಅವರಿಗೆ ಈಗಷ್ಟೇ ಜಾ*ಮೀನು ಸಿಕ್ಕಿದೆ. ಹಾಗೆಯೇ ಆಸ್ಪತ್ರೆಯಿಂದ ಇಂದ ಕೂಡ ಈಗಷ್ಟೇ ಬಿಡುಗಡೆ ಆಗಿದ್ದಾರೆ. ಇದರ ಬೆನ್ನಲ್ಲೇ ರೇಣುಕಾಸ್ವಾಮಿ ಕುಟುಂಬಕ್ಕೆ ದೇಣಿಗೆ ಕೊಡಬೇಕು ಎನ್ನುವ ವಿಷಯ ಚರ್ಚೆ ಆಗುತ್ತಿದೆ.

ನಟ ದರ್ಶನ್ ಮತ್ತು ಅವರ ಜೊತೆಗಿದ್ದ ಜನರಿಂದ ಆ ವ್ಯಕ್ತಿಯ ಜೀವವೇ ಹೋಯಿತು. ಈಗ ಏನೇ ಮಾಡಿದರು ಸಹ ಆ ವ್ಯಕ್ತಿ ವಾಪಸ್ ಬರುವುದಿಲ್ಲ. ಈ ಕಾರಣಕ್ಕೇ ದರ್ಶನ್ ಅವರು 6 ತಿಂಗಳ ಕಾಲ ಜೈಲಿನಲ್ಲಿ ಕಷ್ಟ ಅನುಭವಿಸಿದ್ದಾರೆ. ಇವರಿಗೆ ಮಾನಸಿಕವಾಗಿ ಸಹ ಬಹಳ ಹಿಂಸೆ ಆಗಿದೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಒಂದಷ್ಟು ದಿವಸ, ಅಲ್ಲಿ ಸಮಸ್ಯೆಯಾದ ನಂತರ ಬಳ್ಳಾರಿಯ ಸೆಂಟ್ರಲ್ ಜೈಲ್ ನಲ್ಲಿ ಒಂದಷ್ಟು ತಿಂಗಳು.. ಇಷ್ಟು ದಿವಸಗಳ ಕಾಲ ಜೈಲಿನಲ್ಲಿದ್ದ ದರ್ಶನ್ ಅವರಿಗೆ ಒಂದೂವರೆ ತಿಂಗಳ ಹಿಂದೆ ಆರೋಗ್ಯದ ಸಮಸ್ಯೆ ಇದ್ದ ಕಾರಣ ಮಧ್ಯಂತರ ಜಾಮೀನು ಸಿಕ್ಕಿತು.
ದರ್ಶನ್ ಅವರಿಗೆ ಬೆನ್ನು ನೋವಿದೆ, ಸರ್ಜರಿ ಮಾಡಿಸಬೇಕು ಇಲ್ಲದೇ ಹೋದರೆ ಪಾರ್ಶ್ವವಾಯು ಆಗುತ್ತದೆ ಎಂದು ವೈದ್ಯರು ಹೇಳಿದ ಕಾರಣ, ದರ್ಶನ್ ಅವರಿಗೆ ಮಧ್ಯಂತರ ಜಾ*ಮೀನು ಕೊಡಲಾಯಿತು. ಹೊರಗೆ ಬಂದಮೇಲೆ ದರ್ಶನ್ ಅವರು ಇನ್ನು ಸರ್ಜರಿ ಮಾಡಿಸಿಲ್ಲ, ಬಿಪಿ ವೇರಿಯೇಷನ್ ಇದ್ದ ಕಾರಣ, ಸರ್ಜರಿ ಆಗಿಲ್ಲ ಎನ್ನಲಾಗಿತ್ತು. ಆದರೆ ಇಷ್ಟು ದಿವಸಗಳ ಕಾಲ ನಟ ದರ್ಶನ್ ಅವರು ಬಿಜಿಎಸ್ ಆಸ್ಪತ್ರೆಯಲ್ಲೇ ಇದ್ದರು. ಇಂದು ಅವರಿಗೆ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಅವರ ಮನೆಗೆ ದರ್ಶನ್ ಅವರು ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಈಗ ರೇಣುಕಾಸ್ವಾಮಿ ವಿಚಾರದ ಕುರಿತಾಗಿ ಹೊಸ ಮಾತು ಕೇಳಿ ಬರುತ್ತಿದೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ರೇಣುಕಾಸ್ವಾಮಿ ಕುಟುಂಬಕ್ಕೆ ಆಗಿರುವ ನಷ್ಟವನ್ನು ಭರಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ದರ್ಶನ್ ಅವರ ಅಭಿಮಾನಿಗಳು ಒಂದು ಪ್ರಯತ್ನ ಮಾಡಿ, ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ಸಹಾಯ ಮಾಡುವ ಪಣ ತೊಟ್ಟಿದ್ದಾರೆ. ರೇಣುಕಾಸ್ವಾಮಿ ಸ್ವಾಮಿ ಕುಟುಂಬಕ್ಕೆ 1 ಲಕ್ಷ ಹಣ ಸಹಾಯ ಮಾಡುತ್ತೇವೆ ಎನ್ನುತ್ತಿದ್ದಾರೆ ಡಿಬಾಸ್ ಫ್ಯಾನ್ಸ್. ಅದು ಹೇಗೆ ಎನ್ನುವುದಕ್ಕೆ ಸಹ ಅವರಲ್ಲಿ ಪ್ಲಾನ್ ಇದೆ. ದರ್ಶನ್ ಅವರಿಗೆ ಇಡೀ ರಾಜ್ಯದಲ್ಲಿ ಅತಿದೊಡ್ಡ ಅಭಿಮಾನಿ ಬಳಗ ಇದೆ. ಫ್ಯಾನ್ಸ್ ಯಾವತ್ತೂ ಕೂಡ ದರ್ಶನ್ ಅವರ ಕೈಬಿಟ್ಟಿಲ್ಲ. ರಾಜ್ಯದ ಎಲ್ಲೆಡೆ ಇರುವ ದರ್ಶನ್ ಅವರ ಕೋಟ್ಯಾಂತರ ಅಭಿಮಾನಿಗಳು, ಒಬ್ಬೊಬ್ಬರು ಒಂದೊಂದು ರೂಪಾಯಿ ಕೊಟ್ಟರು ಸಾಕು, 1 ಕೋಟಿ ಆಗುತ್ತದೆ, ಆ ಹಣವನ್ನ ರೇಣುಕಾಸ್ವಾಮಿ ಕುಟುಂಬಕ್ಕೆ ಕೊಡುತ್ತಿವಿ ಅಂತಿದ್ದಾರೆ ಫ್ಯಾನ್ಸ್.

ಹೌದು, ತಾವೆಲ್ಲರೂ ಸೇರಿ 1 ಕೋಟಿ ಹಣವನ್ನು ಕಲೆಕ್ಟ್ ಮಾಡಿ, ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ನೀಡಿ, ಇನ್ನೊಂದು ಸಾರಿ ನಮ್ಮ ಡಿಬಾಸ್ ನ ಅರೆ*ಸ್ಟ್ ಮಾಡುವ ಹಾಗಿಲ್ಲ, ಕೇಸ್ ಅನ್ನು ಪೂರ್ತಿಯಾಗಿ ವಾಪಸ್ ಪಡೆಯಬೇಕು ಎಂದು ಷರತ್ತು ಹಾಕುತ್ತಾರಂತೆ. ಈ ಒಂದು ವಿಚಾರ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ದರ್ಶನ್ ಅವರ ಫ್ಯಾನ್ಸ್ ತಮ್ಮ ಡಿಬಾಸ್ ಅನ್ನು ಉಳಿಸಿಕೊಳ್ಳಲು, ಏನು ಬೇಕಾದರೂ ಮಾಡೋದಕ್ಕೆ ತಯಾರಾಗಿದ್ದಾರೆ. ಆದರೆ ದರ್ಶನ್ ಅವರು ಸಧ್ಯಕ್ಕೆ ಸೈಲೆಂಟ್ ಆಗಿದ್ದು, ಈ ಬಗ್ಗೆ ಯಾವ ಪ್ರತಿಕ್ರಿಯೆ ಕೊಡುತ್ತಾರೆ? ಈ ಕೇಸ್ ಇಲ್ಲಿಗೆ ನಿಲ್ಲುತ್ತಾ ಎಂದು ಕಾದು ನೋಡಬೇಕಿದೆ.



